Thursday, October 27, 2016

ನಿಗೂಢನ ಕಥನ

ನಿಗೂಢನ ಕಥನ

1989 ರ ಏಪ್ರಿಲ್ ತಿಂಗಳು. ಅಮೃತಸರದ ಸ್ವರ್ಣ ಮಂದಿರ ಮತ್ತೊಮ್ಮೆ ಭಯೋತ್ಪಾದಕರ ಅಧೀನವಾಗಿ ಹೋಗಿಬಿಡುತ್ತದೆ. ಇವರದು ಖಾಲಿಸ್ತಾನಕ್ಕಾಗಿ ಹೋರಾಟನಡೆಸುತ್ತಿದ್ದ ಉಗ್ರಗಾಮಿಗಳ ಗುಂಪು. ಇವರ ಚಟುವಟಿಕೆಗಳಿಗೆಲ್ಲಾ ಸ್ವರ್ಣಮಂದಿರವೇ ಮುಖ್ಯಾಲಯ. ಸೈಕಲ್ ರಿಕ್ಷಾ ಚಾಲಕನೊಬ್ಬ ಅನುಮಾನಾಸ್ಪದವಾಗಿ ಓಡಾಡಿಕೊಂಡಿದ್ದರಿಂದ ಉಗ್ರಗಾಮಿಗಳು ಅವನನ್ನು ಮಂದಿರದೊಳಗೆ ಕರೆದುಕೊಂಡು ಹೋಗಿ ವಿಚಾರಣೆಗೆ ಒಳಪಡಿಸುತ್ತಾರೆ. ಆಗ ಗೊತ್ತಾಗುತ್ತದೆ ಇವನೊಬ್ಬ ಪಾಕೀಸ್ತಾನಿ ISI ಏಜೆಂಟ್ ಎಂದು. ನಾನು ನಿಮಗೆ ಸಹಾಯಮಾಡಬಲ್ಲೆ ಎಂಬ ಆಶ್ವಾಸನೆ ಸಿಕ್ಕನಂತರ ಅವನನ್ನು ಸ್ವರ್ಣ ಮಂದಿರದ ಆವರಣದಲ್ಲೆಲ್ಲಾ ಮುಕ್ತವಾಗಿ ಓಡಾಡಲು ಬಿಡುತ್ತಾರೆ. ಕೆಲವೇ ದಿನಗಳಲ್ಲಿ ಉಗ್ರಗಾಮಿಗಳ ಆಪ್ತನಾಗಿಬಿಡುತ್ತಾನೆ. ಆದರೆ ಮೇ ತಿಂಗಳ 9 ನೇ ತಾರಿಕು NSG ಯವರು ನಡೆಸಿದ ಒಂದು ಬೃಹತ್ ಕಾರ್ಯಾಚರಣೆಯಲ್ಲಿ ಈ ಉಗ್ರಗಳನ್ನು ಸೆದೆಬಡಿದು ಸ್ವರ್ಣಮಂದಿರವನ್ನು ಮುಕ್ತಗೊಳಿಸಲಾಗುತ್ತದೆ. ಈ ಆಪರೇಶನ್ ಬ್ಲ್ಯಾಕ್ ಥಂಡರ್ ಹೆಸರಿನ ಕಾರ್ಯಾಚರಣೆ ನಡೆಯುತ್ತಿರುವಾಗ 'ಪಾಕೀಸ್ತಾನಿ ISI ಏಜೆಂಟು' ವೈರಲೆಸ್ ಸೆಟ್ಟಿನ ಮೂಲಕ NSG ಕಮಾಂಡೋಗಳಿಗೆ ಮಂದಿರದೊಳಗೆ ಹೇಗೆ ಎಲ್ಲಿಗೆ ಬರಬೇಕೆಂಬ ಮಾರ್ಗದರ್ಶನ ಮಾಡುತ್ತಿರುತ್ತಾರೆ. ಅಸಲಿಗೆ ಇವರು ಭಾರತದ ಬೇಹುಗಾರಿಕೆ ಇಲಾಖೆಯ ಪೋಲಿಸ್ ಆಫಿಸರ್ ಎನ್ನುವುದು ಕೊನೆಯವರೆಗೂ ಗೊತ್ತಾಗುವುದಿಲ್ಲ. ಉಗ್ರರಿಗೇ ಚಳ್ಳೆಹಣ್ಣು ತಿನ್ನಿಸಿದ ಈ ಚಾಣಾಕ್ಷನಿಗೆ ಭಾರತ ಸರಕಾರ 'ಕೀರ್ತಿ ಚಕ್ರ ' ಪ್ರಶಸ್ತಿಕೊಟ್ಟು ಗೌರವಿಸುತ್ತದೆ.

ಇವರಾರು ಗೊತ್ತೇ?

ಈಗ ಫ್ಯಾಶನಬಲ್ ಆಗಿರುವ ಪದ ಎಂದರೆ Surgical Strike. 11 ಜೂನ್ 2015 ನಲ್ಲೂ ಇಂತಹದೊಂದು ಕಾರ್ಯಾಚರಣೆ ಮಣಿಪುರ ಮತ್ತು ಮ್ಯಾನ್ಮಾರ್ ಬಾರ್ಡರಿನಲ್ಲಿ ನಡೆದಿದ್ದ ಸಂಗತಿ ಈಗ ಪಾಕೀಸ್ತಾನದಲ್ಲಿ ನಡೆದಷ್ಟು ಪ್ರಸದ್ದಿಯಾಗಲಿಲ್ಲ. ಸುಮಾರು 70 ಜನ ಭಾರತೀಯ ಕಮಾಂಡೋಗಳು ಮ್ಯಾನ್ಮಾರಿನ ಒಳಗೆ ನುಗ್ಗಿ ನಡೆಸಿದ ಈ ಕಾರ್ಯಾಚರಣೆಯಲ್ಲಿ 38 ನಾಗಾ ಗೊರಿಲ್ಲಾಗಳನ್ನು ಕೊಂದು ಅವರ ಉಗ್ರ ಚಟುವಟಿಕೆಗಳನ್ನು ಕೊನೆಗೊಳಿಸಲಾಯಿತು. ಆಗಲೂ ಈ 'ಕೀರ್ತಿ ಚಕ್ರಧಾರಿ' ಅಧಿಕಾರಿಯ ನಿರ್ದೇಶನದಲ್ಲಿ ಈ ಕಾರ್ಯಕ್ರಮ ನಡೆಯಿತು.

ಯಾರಿರಬಹುದು ಈತ?

ಇವರು ಏಳು ವರ್ಷ ವಿವಿಧ ವೇಶಧಾರಿಯಾಗಿ ಪಾಕೀಸ್ತಾನದಲ್ಲಿ ನೆಲಸುತ್ತಾರೆ. ಬ್ರಾಹ್ಮಣರಾಗಿ ಹುಟ್ಟಿದ ಇವರು ಮುಸ್ಲೀಮರಂತೆ ಉದ್ದನೆ ಗಡ್ಡ ಬಿಟ್ಟುಕೊಂಡು ಪಾಕಿಸ್ತನದ ಮಸೀದಿಗಳಲ್ಲಿ ನಮಾಜು ಮಾಡುತ್ತಾರೆ. ಈ ಅವಧಿಯಲ್ಲೇ ದಾವೂದ್ ಇಬ್ರಾಹಿಮ್ ನನ್ನು ಬೇಟೆಯಾಡುವ ಪ್ಲಾನು ಸ್ವಲ್ಪದರಲ್ಲೇ ಮಿಸ್ಸಾಗುತ್ತದೆ.  ತುಂಬಿದ ಕೊಡ ತುಳುಕಲ್ವಂತೆ ಹಾಗೆ ಮಾಧ್ಯಮಗಳಲ್ಲಿ ಹೆಚ್ಚು ಕಾಣಿಸಿಕೊಳ್ಳದೆ,ಸುತ್ತಲು ನಡೆಯುತ್ತಿರುವುದನ್ನೆಲ್ಲಾ ಹದ್ದಿನ ಕಣ್ಣುಗಳಿಂದ ಗಮನಿಸುತ್ತಾ ,ಚಿಕ್ಕ ಚಿಕ್ಕ ಮಾಹಿತಿಯನ್ನೂ ಕಲೆಹಾಕುತ್ತಾ ಸದಾ ತಮ್ಮ ಕೆಲಸದಲ್ಲೇ ತಲ್ಲೀನರಾಗಿರುವ ಒಬ್ಬ ದಕ್ಷ ಅಧಿಕಾರಿ ಇವರು.
1968 ನಲ್ಲಿ IPS ಗೆ ಸೇರ್ಪಡೆಯಾದ ಇವರು ಇಂಡಿಯಾದ ಜೇಮ್ಸ್ ಬಾಂಡ್ ಎಂದೇ ಬೇಹುಗಾರಿಕೆಯ ವಲಯದಲ್ಲಿ ಪ್ರಸಿದ್ದಿಯಾಗಿದ್ದಾರೆ.
80 ರ ದಶಕದಲ್ಲಿ ಮಿಜೋರಾಮ್ ಇನ್ನೇನು ಭಾರತದಿಂದ ಬೇರ್ಪಟ್ಟೇ ಬಿಟ್ಟಿತು ಎನ್ನುವಷ್ಟು ಮಟ್ಟಿಗೆ ಬಂಡಾಯವೆದ್ದಿತು. ಆಗ ಇವರು ಭೂಗತರಾಗಿ ಮಿಜೋ಼ ಬಂಡಾಯಕೋರರ ಜೊತೆ ಒಡನಾಟ ಬೆಳಸಿಕೊಂಡು ಒಬ್ಬಬ್ಬರನ್ನೇ ಬಂಡಾಯದಿಂದ ಹಿಮ್ಮೇಟ್ಟಿಬರುವಂತೆ ಮಾಡಿದರು.
ಇತ್ತೀಚಿಗೆ ನಡೆದ ಪಾಕಿಸ್ತಾನದ ಉಗ್ರರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಇವರ Brain child ಅಂತೆ...

ಯಾರಿವರು?

ದೇವರಹಳ್ಳಿಯ ಹಾಗಲಕಾಯಿ ಮತ್ತು ದುಬೈ ಏರ್ಪೋರ್ಟು

ದೇವರಹಳ್ಳಿಯ ಹಾಗಲಕಾಯಿ ಮತ್ತು ದುಬೈ ಏರ್ಪೋರ್ಟು

         ನಮ್ಮೂರು ಗಂಗೂರು ಮತ್ತು ಚೆನ್ನಗಿರಿಯ ನಡುವೆ ದೇವರಹಳ್ಳಿ ಒಂದು ಹಳ್ಳಿ. ಹಳ್ಳಿ ಸಣ್ಣದಾದರೂ ಅಲ್ಲಿಯ ಬೆಟ್ಟದ ಮೇಲಿನ ರಂಗನಾಥ ದೇವಸ್ತಾನ ಮತ್ತು ಅಲ್ಲಿ ನಡೆಯುತ್ತಿದ್ದ ಜಾತ್ರೆ ಮೊದಲಿಂದಲೂ ಹೆಸರುವಾಸಿ. ಆ ಜಾತ್ರೆ ಬೇಸಿಗೆ ರಜೆಯ ಸಮಯದಲ್ಲಿ ನಡೆಯುತ್ತಿದ್ದರಿಂದ ನಾವು ಚಿಕ್ಕವರಾಗಿದ್ದಲೂ ರಾತ್ರಿಯ ಬೆಳದಿಂಗಳಿನಲ್ಲಿ ನಡೆದು ಕೊಂಡು ಹೋಗುತ್ತಿದ್ದೆವು. ಈಗಲೂ ದೇವರಹಳ್ಳಿಯನ್ನು ಹಾದು ಹೋಗುವಾಗ ಆ ಜಾತ್ರೆಯ ನೆನಪಾಗುತ್ತದೆ.
      ದೇವರಹಳ್ಳಿಯ ಇನ್ನೊಂದು ವಿಷೇಶತೆಯೆಂದರೆ ಅಲ್ಲಿಯ ತರಕಾರಿ ಬೆಳವಣಿಗೆ.  ನಮ್ಮ ಹಳ್ಳಿಯೂ ಸೇರಿದಂತೆ ಇತರೆ ಸುತ್ತ ಮುತ್ತಲ ಹಳ್ಳಿಗಳಲ್ಲಿ ಜೊಳ, ರಾಗಿಯಂತಹ ಸಾಂಪ್ರದಾಯಕವಾದ ಬೆಳೆಗಳನ್ನು ಬೆಳೆದರೆ ,ದೇವರಹಳ್ಳಿಯಲ್ಲಿ ತರಕಾರಿ ಬೆಳೆಯುವ ಒಂದು ವೈವಿಧ್ಯತೆ ಮೊದಲಿಂದಲೂ ಇತ್ತು. ಇನ್ನೂ ಒಂದು ವಿಷೇಶವೆಂದರೆ ಇದರಲ್ಲೆಲ್ಲಾ ಹಳ್ಳಿಯ ಹೆಂಗಸರದೇ ಮೇಲುಗೈ. ಸಾಯಂಕಲದವರೆಗೂ ಹೊಲದಲ್ಲಿ ಕೆಲಸ ಮಾಡಿ ಬೆಳ್ಳಂಬೆಳಗ್ಗೇನೆ ತರಕಾರಿಗಳನ್ನು ಕಿತ್ತು ಬುಟ್ಟಿ ತುಂಬಿಸಿಕೊಂಡು ಸುತ್ತಲಿನ ಹಳ್ಳಿಗಳಿಗೆ ಹೋಗಿ ಮಾರಾಟ ಮಾಡಿಕೊಂಡು ಮಧ್ಯಾಹ್ನದಷ್ಟೊತ್ತಿಗೆ ಹಿಂತಿರುಗುತ್ತಿದ್ದರು.  ಇಲ್ಲಿಯ ಸೊಪ್ಪು ,ಬದನೇಕಾಯಿ ಮತ್ತು ಹಾಗಲಕಾಯಿಗಳು ಕ್ರಮೇಣ ಪ್ರಸಿದ್ದಿ ಪಡೆದು ದಾವಣಗೆರೆ ಮತ್ತು ಶಿವಮೊಗ್ಗದ ಮಾರುಕಟ್ಟೆಗಳನ್ನೂ ತಲುಪಿದವು. ಇದೇ ಪರಂಪರೆ ಮುಂದುವರೆದು ಈಗ ಅದು ಎಲ್ಲಿಯ ಮಟ್ಟಿಗೆ ತಲುಪಿದೆಯೆಂಬುದರ ನನಗಾದ ಆಶ್ಚರ್ಯವನ್ನು ಈಗ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. 
      
      ಈಗ ಒಂದು ವಾರದ ಕೆಳಗೆ ಬೆಂಗಳೂರಿನಿಂದ ದುಬೈ ಫ್ಲೈಟ್ ಮಾಡುವಾಗ ನನಗೆ ಒಂದು ಆಶ್ಚರ್ಯ ಕಾದಿತ್ತು.
      ಸುಮಾರು ಮೂರು ಟನ್ನುಗಳಷ್ಟು ಹಾಗಲಕಾಯಿಗಳನ್ನು ವಿಮಾನದಲ್ಲಿ ಲೋಡು ಮಾಡಿದ್ದರು. ಸುಮ್ಮನೆ ಕುತೂಹಲದಿಂದ ಕೇಳಿದೆ ಇದು ಎಲ್ಲಿಂದ ಬರುತ್ತದೆ ಅದಕ್ಕೆ ಸಿಕ್ಕ ಉತ್ತರದಿಂದ ಆಶ್ಚರ್ಯದ ಜೊತೆ ಹೆಮ್ಮಯೂ ಆಯಿತು, ಏಕೆಂದರೆ ಆ ಹಾಗಲಕಾಯಿಗಳು ದೇವರಹಳ್ಳಿಯಿಂದ ಬರುತ್ತದಂತೆ!
      ರಾತ್ರಿ ಸುಮಾರು ಒಂದು ಘಂಟೆಗೆ ದೇವರಹಳ್ಳಿಯ ಆ ತರಕಾರಿ ಹೊಲಗಳಲ್ಲಿ ಜನ ಜಾತ್ರೆಯೇ ನೆರದಿರುತ್ತದಂತೆ ತರಕಾರಿಗಳನ್ನು ಕಿತ್ತು ಟ್ರಕ್ಕುಗಳಲ್ಲಿ ಲೋಡು ಮಾಡಲು. ಅಲ್ಲಿಂದ ಹೊರಟ ಟ್ರಕ್ಕು ಬೆಳಗ್ಗೆ ಐದು ಗಂಟೆಗೆ ಬೆಂಗಳೂರಿನ ಏರ್ಪೋರ್ಟನ್ನು ತಲುಪಿ ನಂತರ ಬೆಳಗ್ಗೆ ಏಳು ಘಂಟೆಯ ಸಮಯಕ್ಕೆ ಹೊರಡುವ ಇಂಡಿಗೊ ವಿಮಾನದಲ್ಲಿ ಲೋಡು ಮಾಡಲಾಗುತ್ತದೆ. ಸುಮಾರು ನಾಲ್ಕು ಘಂಟೆಗಳ ನಂತರ ಈ ತರಕಾರಿಗಳು ದುಬೈ ಮಾರುಕಟ್ಟೆಯಲ್ಲಿ ಲಭ್ಯ...ಅಧ್ಭುತ!
      ಇದೇ ಅಧ್ಭುತದ ಜೊತೆ ಇನ್ನೂ ಒಂದು ಅಧ್ಭುತದ ಬಗ್ಗೆ ಹೇಳುತ್ತೇನೆ...ಅದೇ ದುಬೈನ ಏರ್ಪೋರ್ಟು .

    ದುಬೈ ಎನ್ನುವ ಮಾಯಾ ನಗರ, ಕುರುಡರು ಆನೆ ಮುಟ್ಟಿದಂತೆ ಅವರವರ ಆಶಯ,ಆಸಕ್ತಿ ಮತ್ತು ಅನುಭವಕ್ಕೆ ತಕ್ಕಂತೆ ಗೋಚರಿಸುತ್ತದೆ.  ಕೆಲವರಿಗೆ ಅಲ್ಲಿಯ ಗಗನ ಚುಂಬಿ ಕಟ್ಟಡಗಳ ನೆನಪಾದರೆ ಮತ್ತೆ ಕೆಲವರಿಗೆವರಿಗೆ ಇಲ್ಲಿಯ ಝಗಝಗಿಸುವ ಶಾಪ್ಪಿಂಗ್ ಮಾಲುಗಳ ಚಿತ್ರಣ ಮೂಡಿಬರಹುದು,ಇನ್ನೂ ಕೆಲವರಿಗೆ ಅಲ್ಲಿಯ ಉಚ್ಚಮಟ್ಟದ ಮೂಲಭೂತ ಸೌಕರ್ಯಗಳಿಗೆ ಬೆರಗಾಗಿರಬಹುದು.
   ಹಾಗೆ ನೊಡಿದರೆ ದುಬೈನ ತೈಲಸಂಪನ್ಮೂಲ ಇತರೆ ಕೊಲ್ಲಿ ರಾಷ್ಟ್ರಗಳಿಗೆ ಹೋಲಿಸಿದರೆ ಕಡಿಮೆಯೇ ಇದೆ, ಆದರೆ ಅಲ್ಲಿಯ ಅಧ್ಭುತ ಸೌಕರ್ಯಗಳಿಂದಾಗಿ ವಿಶ್ವದ ಬಹುತೇಕ ದೇಶದ ವ್ಯವಹಾರಗಳು ಇಲ್ಲಿಯೇ ಕೇಂದ್ರೀಕೃತವಾಗಿರುತ್ತದೆ. ಪ್ರಪಂಚದಲ್ಲಿ ಅತ್ಯಂತ ಬ್ಯುಸಿ ಏರ್ಪೋರ್ಟು ಎಂಬ ಬಿರುದು ಪಡೆದು,ಅಲ್ಲಿಯ ಮೂಲಭೂತ ಸೌಕರ್ಯಗಳಲ್ಲಿ ಕಿರೀಟಪ್ರಾಯವಾಗಿ ಮೆರೆಯುತ್ತಿದೆ ದುಬೈ ಏರ್ಪೋರ್ಟು.
   ಅಸಲಿಗೆ ಬೆಂಗಳೂರಿನಲ್ಲಿ ಏರ್ಪೋರ್ಟು ಶುರುವಾದಾಗ ದುಬೈನ ಹೆಸರೇ ಪ್ರಪಂಚಕ್ಕೆ ಗೊತ್ತಿರಲಿಲ್ಲ. ಮರಳುಗಾಡಿನಲ್ಲಿ ಏರ್ಪೋರ್ಟು? ಉಹುಂ...ಸಾಧ್ಯವೇಇಲ್ಲ.  ಆದರೆ ಈಗ ಬೆಂಗಳೂರಿನ ಏರ್ಪೋರ್ಟಿಗಿಂತ ನಾಲ್ಕೈದು ಪಟ್ಟು ದೊಡ್ಡ ಏರ್ಪೋರ್ಟನ್ನು ಹೇಗೆ ನಿರ್ಮಿಸಲು ಸಾಧ್ಯವಾಯಿತು ಎನ್ನುವುದೇ ಒಂದು ರೋಚಕ ಅಧ್ಯಯನ.
   ಅಂತಹ ಬಿಸಿಲು ನಾಡನ್ನು ಪ್ರವಾಸಿ ಕೇಂದ್ರವಾಗಿ, ಪ್ರಪಂಚವೇ ಕಂಡರಿಯದ ವಾಣಿಜ್ಯ ಕೇಂದ್ರವಾಗಿ ಪರಿವರ್ತಸಬೇಕೆಂಬ ಕನಸು ಹೊತ್ತ ಅಲ್ಲಿನ ದೊರೆ ಮಾಡಿದ ಮೊಟ್ಟ ಮೊದಲ ಕೆಲಸವೆಂದರೆ ತೈಲ ಸಂಪನ್ಮೂಲಗಳಿಂದ ಬಂದ ಆದಾಯವನ್ನು ಅಲ್ಲಿಯ ಮೂಲಭೂತಸೌಕರ್ಯಗಳನ್ನು ಸೃಷ್ಟಿಸುವುದರಲ್ಲಿ ವಿನಿಯೋಗಿಸಿದ್ದು.
        ಸುಮಾರು 7200 ಎಕರೆಯಷ್ಟು ವಿಶಾಲ ಮರುಭೂಮಿಯನ್ನು ಜಗತ್ತಿನ ಅತಿದೊಡ್ಡ ವಿಮಾನ ನಿಲ್ದಾಣಗಳಲ್ಲಿ ಒಂದು ಎನಿಸಿಕೊಂಡಿರುವ ಈ ಏರ್ಪೋರ್ಟನ್ನು ನಿರ್ಮಿಸಿದ ಕೀರ್ತಿ ದುಬೈನ ದೊರೆ ರಶೀದ್ ಬಿನ್ ಸಯೀದ್ ಅಲ್ ಮಕ್ತೂಮ್ ರವರಿಗೆ ಸಲ್ಲುತ್ತದೆ.
    1960 ರಲ್ಲಿ ಒಂದು ಪ್ರಯೋಗದೋಪಾದಿಯಲ್ಲಿ ಗಟ್ಟಿ ಮರಳಿನಲ್ಲಿ ಸುಮಾರು 6೦೦೦ ಅಡಿ ಉದ್ದದ  ರನ್ವೇಯೊಂದನನ್ನು ನಿರ್ಮಾಣಗೊಳಿಸಲಾಯಿತು.   ಅದೇ ಸಮಯದಲ್ಲಿ ಪ್ರಪಂಚದ ಇತರೆ ರಾಷ್ಟ್ರಗಳು ಕೊಲ್ಲಿ ಪ್ರಾಂತದ ತ್ತೈಲಸಂಪನ್ಮೂಲ ಸಂಬಂದಿತ ಉದ್ಯಮದ ಕಡೆಗೆ ಆಕರ್ಷಿತರಾಗಿ ನಾಮುಂದು ತಾಮುಂದು ಎಂದು ಕೊಲ್ಲಿಯ ಕಡೆಗೆ ದೌಡಾಯಿಸತೊಡಗಿದರು.
      ದುಬೈಯನ್ನು ಒಂದು ಜಾಗತಿಕ ಮಟ್ಟದ ವ್ಯವಹಾರ ಕೇಂದ್ರವಾಗಿ ಅಭಿವೃದ್ಧಿ ಗೊಳಿಸಬೇಕೆಂದರೆ,ಅಮೆರಿಕ, ಯೂರೊಪ್,ಆಸ್ಟ್ರೇಲಿಯಾ ಮತ್ತು ಏಷಿಯಾದ ದೇಶದ ಹೂಡಿಕೆದಾರರನ್ನು ತನ್ನೆಡೆಗೆ ಆಕರ್ಷಿಸಲು ಇರುವ ಒಂದೇ ಮಾರ್ಗವೆಂದರೆ,ಒಂದು ಸುಸಜ್ಜಿತ ಆಧುನಿಕ,ದೊಡ್ಡ ಜೆಟ್ ವಿಮಾನಗಳಿಗೆ ಅನುಕೂಲ ಕರವಾಗುವ ವಿಮಾನ ನಿಲ್ದಾಣದ ನಿರ್ಮಾಣವಾಗಲೇಬೇಕು ಎನಿಸಿತು ದುಬೈನ ದೊರೆಗೆ.
ಅದರಂತೆ ಹಂತ ‌ಹಂತವಾಗಿ ವಿಮಾನ ನಿಲ್ದಾಣದ ಆಧುನೀಕರಣ ಭರದಿಂದ ನಡೆಯತೊಡಗಿತು.
     
      ವಿಮಾನಯಾನಕ್ಕೆ ಬೇಕಾದ ಇಂಧನ ತುಂಬಾ ಅಗ್ಗವಾಗಿ ಕೊಲ್ಲಿರಾಷ್ಟ್ರಗಳಲ್ಲಿ ಸಿಗುತ್ತಾದರಿಂದ ಹೆಚ್ಚು ಹೆಚ್ಚು ವಿಮಾನಗಳು ಇಂಧನ ತುಂಬಿಸಲೆಂದೇ ದುಬೈಗೆ ಬರಲಾರಂಬಿಸಿದವು.  ಅಷ್ಟೇ ರಭಸದಿಂದ ವಿಮಾನ
ನಿಲ್ದಾಣದ ವಿಸ್ತರಣೆಯಾಗತೊಡಗಿತು.
80ರ ದಶಕದ ಅಂತ್ಯದಲ್ಲಿ ಸೊವಿಯತ್ ಯೂನಿಯನ್ ವಿಭಜನೆಯಾದದ್ದು ವಿಮಾನ ಯಾನಕ್ಕೆ ವರದಾನವಾಯಿತು. ಅಷ್ಟು ಹೊತ್ತಿಗಾಗಲೇ ದುಬೈ ಏರ್ಪೋಟ್ ದೂರಯಾನದ ದೊಡ್ಡ ಜೆಟ್ ವಿಮಾನಗಳ ಆಗಮನಕ್ಕೆ ಸಜ್ಜಾಗಿನಿಂತಿತ್ತು.
        ದುಬೈ ವಿಶ್ವಮಟ್ಟದ ವಾಣಿಜ್ಯ ಹಾಗೂ ಉದ್ಯಮ ಕೇಂದ್ರವಾಗಿ ಬೆಳೆಯುತ್ತಿದ್ದಂತೆ ಜಗತ್ತಿನ ಎಲ್ಲೆಡೆಯಿಂದ ಎಂಜಿನಿಯರ್ಗಳು,ಕುಶಲಕರ್ಮಿಗಳು,
ಪೈಲಟ್ಗಳು,ಡ್ರೈವರ್ಗಳು,ಗಗನಸಖಿಯರು,ಮೆಕ್ಯಾನ್ನಿಕ್ಗಳುಲೋಡರ್ಗಳು ಬರಲಾರಂಬಿಸಿದರು. ಎಲ್ಲಾ ವರ್ಗಗಳ ಎಲ್ಲಾ ವಿಭಾಗದ ಬಾಗಿಲುಗಳು ಬಂದವರನ್ನು ಆದರದಿಂದ ಬರಮಾಡಿಕೊಂಡವು.           ಯೂರೋಪಿಯನ್ನರು,ಭಾರತೀಯರು,ಆಫ್ರಿಕಾದವರು,ಚೈನೀಸ್,ಜಪಾನೀಯರು,ಪಾಕಿಸ್ತಾನಿಗಳು..

    ವಸುದೈವ ಕುಟುಂಬಕಂ...ನೋಡಬೇಕು ಎನಿಸಿದರೆ ದುಬೈ ಏರ್ಪೋರ್ಟಿಗೆ ಹೋಗಿ ನೋಡಿ. ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ದೇಶಗಳ 90 ಸಾವಿರ ಜನಗಳಿಗೆ ದುಬೈ ಏರ್ಪೋಟ್ ಉದ್ಯೋಗ ಕಲ್ಪಿಸಿಕೊಟ್ಟಿದೆ.
         ಪ್ರತಿದಿನ ಎರಡು ಲಕ್ಷಕ್ಕೂ ಹೆಚ್ಚಿನ ಪ್ರಯಾಣಿಕರು ಹೊಕ್ಕುಹೋಗುತ್ತಾರೆ!!
ಪ್ರತಿದಿನ ಒಂದು ಸಾವಿರಕ್ಕೂ ಹೆಚ್ಚಿನ ವಿಮಾನಗಳ ಟೇಕಾಫ್/ಲ್ಯಾಂಡಿಂಗ್ ಆಗುತ್ತದೆ. ಇಲ್ಲಿರುವ  ಎರಡು ರನ್ವೆಗಳಲ್ಲಿ ಒಂದನ್ನು ವಿಮಾನಗಳನ್ನು ಇಳಿಸಲು ಮತ್ತೊಂದು ಟೇಕ್ ಆಫ್ ಮಾಡಲು ಬಳಸಲಾಗುತ್ತದೆ.
       ದುಬೈನಲ್ಲಿ ಕೊತ್ತಂಬರಿಸೊಪ್ಪು ಸಹ ಬೆಳೆ ಯುವುದಿಲ್ಲ! ತರಕಾರಿ, ಹಣ್ಣು,ಹೂವು ಎಲ್ಲವೂ ಹೊರಗಿನಿಂದ ವಿಶೇಷವಾಗಿ ಭಾರತದಿಂದ ಬರಬೇಕು ಮತ್ತು ಬಂದ ಕೂಡಲೇ ತ್ವರಿತವಾಗಿ ವಿಲೇವಾರಿ ಮಾಡುವ ವ್ಯವಸ್ಥೆಗಾಗಿ ವಿಶೇಷವಾದ
ಟರ್ಮಿನಲ್ ನಿರ್ಮಾಣಗೊಂಡಿದೆ.
       ವಾಯುಯಾನ ಕಂಪನಿಗಳು ಲಾಭಗಳಿಸುವುದು ಏರೋಪ್ಲೇನುಗಳು ಹಾರಾಡುತ್ತಿರುವಾಗ,ನೆಲದ ಮೇಲೆ ಇದ್ದಾಗ ಅಲ್ಲ!ಆದ್ದರಿಂದಲೇ ಕನಿಷ್ಟ ಸಮಯದಲ್ಲಿ ಪ್ರಯಾಣಿಕರ ಆಗಮನ ನಿರ್ಗಮನ,
ತಾಂತ್ರಿಕ ಪರೀಕ್ಷೆ, ಸುರಕ್ಷಾ ತಪಾಸಣೆ,ಪೈಲೆಟ್ ಗಗನಸಖಿಯರ ಬದಲಾವಣೆ ಎಲ್ಲಾ ಅತಿಶೀಘ್ರವಾಗಿ ನಡೆಯಬೇಕು. ದುಬೈನಂತ ವಿಶಾಲವಾದ ಏರ್ಪೋಟ್ನಲ್ಲಿ ಇದು ಎಷ್ಟು ವ್ಯವಸ್ಥಿತವಾಗಿ ನಡೆಯತ್ತದ ಎಂದರೆ ಸುಮಾರು 180-200 ಪ್ರಯಾಣಿಕರನ್ನು ಹೊತ್ತು ತರುವ ವಿಮಾನಗಳು ಬರೀ 20  ನಿಮಿಷಗಳಲ್ಲಿ ಹೊರಡಲು ರೆಡಿ!
    ನಮಗಂತೂ ದುಬೈಗೆ ಹೋಗುವುದೆಂದರೆ ತಿರುಪತಿಗೆ ಹೋಗಿಬಂದ ಹಾಗೆ,ಏಕೆಂದರೆ ಕೆಲವು ಸಲ ಲ್ಯಾಂಡಿಗ್ ಮಾಡಲು queue ನಲ್ಲಿ ನಮ್ಮದು ಹದಿನೆಂಟನೇ ಏರೋಪ್ಲೇನಾಗರುತ್ತದೆ! ಅಲ್ಲಿಗೆ ಹೋಗುವ ಮೊದಲು ಒಂದು ಮಟ್ಟದ ಕಾತುರ..ಈ ಸಲ ಹೇಗಿರಬಹುದು ಎಂದು. ಅಲ್ಲಿಂದ ಬಂದ ಮೇಲೆ,ಇಂತಹ ಅಧ್ಭುತದಲ್ಲಿ ನಾನೂ ಪಾಲ್ಗೊಂಡೆನೆಂಬ ಒಂದು ಧನ್ಯತಾ ಭಾವ.
        ದೂರದೃಷ್ಟಿಯುಳ್ಳ ದಕ್ಷ ಆಡಳಿತ ಒಂದಿದ್ದರೆ ಮರಳುಗಾಡನ್ನೂ ಸ್ವರ್ಗದೋಪಾದಿಯಾಗಿ ಬದಲಾಯಿಸಬಹುದು ಎನ್ನುವ ನಂಬಿಕೆಗೆ ದುಬೈನೇ ಸಾಕ್ಷಿ.

ಸೊಬಗಿನ ಶ್ರೀಲಂಕಾ

ಸೊಬಗಿನ ಶ್ರೀಲಂಕಾ
                ಶ್ರೀಲಂಕಾದೊಂದಿಗೆ  ನನಗೆ ವಾಯುಪಡೆಯ ದಿನಗಳಿಂದಲೂ ತುಂಬಾ ಗಾಢವಾದ ನಂಟು.  ಆಂತರಿಕ ಕಲಹದಿಂದ ಜನ ಮನಗಳು ಜರ್ಜರಿತವಾದ ಸಮಯವದು. ಭಾರತೀಯ ಶಾಂತಿ ಪಡೆಯ ಅಂಗವಾಗಿ ನಡೆದ ಕಾರ್ಯಾಚರಣೆಯಲ್ಲಿ ಶ್ರೀಲಂಕಾಕ್ಕೆ ಹೋಗಿ ಬರುವುದು ನಿರಂತರವಾಗಿ ನಡೆಯುತ್ತಿತ್ತು.  ಅಂತಹ ಆತಂಕದ ಸಮಯದಲ್ಲೂ ಅಲ್ಲಿಯ ಪ್ರಕೃತಿ ಸೌಂದರ್ಯಕ್ಕೆ ಮಾರು ಹೋಗಿದ್ದಂತೂ ನಿಜ.  ಹೀಗೆ ಹಲವಾರು ವರುಷಗಳ ನಂತರ ಕೈಗೊಂಡ ಪ್ರವಾಸದಲ್ಲಿ ಆದ ಹೊಸ ಅನುಭವ ಏನೆಂದರೆ ಅಲ್ಲಿಯ ಜನಗಳ ಸ್ನೇಹ, ಸೌಹಾರ್ದತೆ ಮತ್ತು ಅತಿಥಿ ಸತ್ಕಾರ.  ಎಲ್ಲಿ ಹೋದರೂ "ಆಯಿಭುವನ್" ಎಂದು ನಗು ಮುಖದ ಸ್ವಾಗತವೆ ಒಂದು ರಾಷ್ಟ್ರೀಯ ಸಂಕೇತವೆಂಬಂತೆ ಕಂಡಿತು.  ಪ್ರವಾಸದ ಸಮಯದಲ್ಲಿ ಹೋಟೆಲುಗಳಿಂದ ದೂರವಿದ್ದು ಹೋಮ್ ಸ್ಟೇ (ಮನೆ ತಂಗು) ಗಳಲ್ಲಿ ಉಳಿಯುವುದರಿಂದ ಅಲ್ಲಿನ ಜನಗಳ ಪರಿಚಯಕ್ಕೆ ಅನುಕೂಲವಾಗಬಹುದೆಂಬ ಉದ್ದೇಶದಿಂದ ಹೋಮ್ ಸ್ಟೇ ಯಲ್ಲೇ ಮುಂಗಡವಾಗಿ ವಸತಿಯನ್ನು ಕಾಯ್ದಿರಿಸಿದೆವು.
ಬೆಂಗಳೂರಿನಿಂದ 'ಮಿಹಿನ್ ಲಂಕಾ'ದ ವಿಮಾನದಲ್ಲಿ ಒಂದೂವರೆ ಘಂಟೆಯ ಯಾನದ ನಂತರ ಕೊಲಂಬೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಚುಮು ಚುಮು ಬೆಳಗಿನ ಜಾವಕ್ಕೆ ತಲುಪಿದೆವು. ಭಾರತೀಯ ಪ್ರಜೆಗಳಿಗೆ ಶ್ರೀಲಂಕಾದ ವೀಸಾ ಅಲ್ಲಿ ತಲುಪಿದ ಮೇಲೆ ಪಡೆಯುವ ಸೌಲಭ್ಯವಿದೆ ಮತ್ತು ಸುಲಭವಾಗಿ ಸಿಗುತ್ತದೆ.
ನಿಗದಿಪಡಿಸಿದಂತೆ ಕೊಲಂಬೊದಿಂದ ಕ್ಯಾಂಡೀ ನಗರಕ್ಕೆ ಕಾರಿನಲ್ಲಿ ಪ್ರಯಾಣ ಬೆಳೆಸಿದೆವು.  ಮಾರ್ಗ ಮಧ್ಯದಲ್ಲಿ ಒಂದು ಕಡೆ ನಿಲ್ಲಿಸಿ ಅಲ್ಲಿನ ಶೈಲಿಯ ಉಪಹಾರವನ್ನು ಸವಿದೆವು. ಅಲ್ಲಿಯ ತಿಂಡಿಯ ವೈಶಿಷ್ಟ್ಯವೆನೆಂದರೆ ನಮ್ಮ ಕಡೆಯ ಶಾವಿಗೆಗೆ ಹೋಲುವ 'ಸ್ಟ್ರಿಂಗ್ ಹಾಪರ್ಸ್' ಮತ್ತು ನಿರ್ ದೋಸೆಗೆ ಹೋಲುವ 'ಹಾಪರ್ಸ್'.  ಹೊಟೇಲಿನಲ್ಲಿ ಈ ಎರಡು ಖಾದ್ಯಗಳನ್ನು ಮೀನಿನ ಸಾರು ಮತ್ತು ಕೋಳಿ ಸಾರುಗಳ ಜೊತೆಗೆ ಸವಿಯುವುದನ್ನು ನೋಡಿ ಅಚ್ಚರಿ ಆಯಿತು.
ಕ್ಯಾಂಡೀ ನಗರವನ್ನು ಶ್ರೀಲಂಕಾದ ಸಾಂಸ್ಕೃತಿಕ ನಗರಿ ಎಂದು ಕರೆಯುತ್ತಾರೆ.  ನಗರದ ಪ್ರಮುಖ ಸ್ಥಳಗಳಲ್ಲಿ ಕಂಗೊಳಿಸುವ ಬುದ್ಧನ ಪ್ರತಿಮೆಗಳು, ಅಲ್ಲಲ್ಲಿ ಕಾಣಿಸುವ ದೇವಾಲಯಗಳು ದಟ್ಟವಾಗಿ ಆವರಿಸಿಕೊಂಡಿರುವ ಊದಿನ ಕಡ್ಡಿಗಳ ಸುವಾಸನೆ, ತಾವರೆ ಹೂಗಳ ರಾಶಿ, ಭಕ್ತಾದಿಗಳ ಪ್ರಾರ್ಥನೆ ಇವೆಲ್ಲದರ ಸಮ್ಮಿಲನದಿಂದ ನೋಡುಗರಲ್ಲಿ ಭಕ್ತಿಯ ಭಾವ ಸಹಜವಾಗಿಯೇ ಉಧ್ಭವಿಸುತ್ತದೆ, ಇಲ್ಲಿ ಅತ್ಯಂತ ಪ್ರಸಿದ್ಧವಾದ "ಶ್ರೀದಳದ ಮಲಿಗಾವ" ಬೌದ್ಧ ಮಂದಿರ ಅರೆಮನೆಯ ಆವರಣಲ್ಲಿದೆ. ಇದರ ಇತಿಹಾಸವೆನೆಂದರೆ ಗೌತಮ ಬುದ್ಧನ ಪರಿನಿರ್ವಾಣದ ನಂತರ ಅವರ ಒಂದು ಹಲ್ಲನ್ನು ಕಳಿಂಗ ದೇಶದಿಂದ ಶ್ರೀ ಲಂಕಾಕ್ಕೆ ಕೊಂಡೊಯ್ಯಲಾಯಿತಂತೆ. ಈ ಹಲ್ಲನ್ನು ಬಂಗಾರದ ಸ್ತೂಪದಲ್ಲಿ ಇಟ್ಟು ಈಗಲೂ ನಿಯಮಿತವಾಗಿ ಅದಕ್ಕೆ ಪೂಜೆಯನ್ನು ಸಲ್ಲಿಸಲಾಗುತ್ತದೆ.
ಶ್ರೀಲಂಕಾದಲ್ಲಿ 'ಹೋಮ್ ಸ್ಟೇ' ವ್ಯವಸ್ತೆ ತುಂಬಾ ಪ್ರಚಲಿತವಾಗಿರುವ ಮತ್ತು ಪ್ರವಾಸಿಗರಿಗೆ ಅನುಕೂಲವಾದ ಆಯ್ಕೆ.  ಕ್ಯಾಂಡೀಯಲ್ಲಿ ನಾವು ಸಹ ಧಮ್ಮಿಕ ಭಂಡರನಾಯಿಕೆ ಎನ್ನುವವರ ಮನೆಯಲ್ಲಿ ಅವರ ಮನೆಯ ಸದಸ್ಯರಂತೆ ಉಳಿದುಕೊಂಡಿದ್ದೆವು. ನಮಗೆ ಪ್ರತ್ಯೇಕವಾಗಿ ಒಂದು ರೂಮಿನ ವ್ಯವಸ್ತೆ ಮಾಡಿದ್ದರೂ ಸಹಾ ಕೆಲವೇ ಸಮಯದಲ್ಲಿ ಇಡೀ ಮನೆಯೇ ನಮ್ಮದೆನಿಸುವಂತಹ ಆತ್ಮೀಯತೆ ಬೆಳೆದು ಬಿಟ್ಟಿತು. ಅಲ್ಲಿ ತಂಗಿದ ಎರೆಡು ದಿನಗಳ ಊಟೋಪಚಾರ ಮತ್ತು ಆದರಾಥಿತ್ಯಗಳಂತೂ ಒಂದು ಆಹ್ಲಾದಕರ ಅನುಭವ.
ನಮ್ಮ ಮುಂದಿನ ಪ್ರಯಾಣ ಸಮುದ್ರ ಮಟ್ಟದಿಂದ ಸುಮಾರು 6300 ಅಡಿಗಳಷ್ಟು ಎತ್ತರದ "ನುವರ ಎಲಿಯ" ಎನ್ನುವ ಶಿಖರ ಶ್ರೇಣಿಯಲ್ಲಿದ್ದ ತಂಗುದಾಣ. ಎಲ್ಲೆಲ್ಲಿ ನೋಡಿದರೂ ಹಸಿರು ಚಾದರವನ್ನು ಹೊದ್ದು ಕೊಂಡು ಬಿಮ್ಮನೆ ಬೀಗುತ್ತಿರುವ ಚಹಾ ತೋಟಗಳು,  ಇಲ್ಲಿ ಬೆಳೆದು ಸಂಸ್ಕರಿಸುವ ಚಹಾ ಪ್ರಪಂಚದ ಶ್ರೇಷ್ಟ ಚಹಾಗಳಲ್ಲಿ ಒಂದು ಎನಿಸಿ ಕೊಂಡಿದೆ. ಈ ಅಚ್ಚ ಹಸಿರಿನ ಬೆಟ್ಟಗಳ ನಡುವೆ ಹಾಲಿನ ಹೊಳೆಯಂತೆ ಹರಿಯುವ ಹಲವಾರು ನಿರ್ಮಲ ಜಲಪಾತಗಳು, ನಿರಂತರವಾಗಿ ಚಲಿಸುವ ಮೋಡಗಳು ಇಲ್ಲಿಯ ಪ್ರಕೃತಿಯ ಮೆರಗಿಗೆ ಪುಟ ಕೊಡುತ್ತವೆ.  ಪ್ರಕೃತಿ ದತ್ತ ಶಬ್ಧಗಳನ್ನು ಬಿಟ್ಟರೆ ಎಲ್ಲಾ ಕಡೆ ಪ್ರಶಾಂತ ವಾತಾವರಣ. ಇಲ್ಲಿಯ ಸೂರ್ಯೋದಯ ಮತ್ತು ಸೂರ್ಯಾಸ್ತಗಳನ್ನು ವೀಕ್ಷಿಸುವುದೇ ಒಂದು ವಿಸ್ಮಯಕಾರಿ ಅನುಭವ. ನುವಾರ ಎಲಿಯಾದಲ್ಲಿಯೂ ಸಹ ನಾವು ಹೋಮ್ ಸ್ಟೇ ನಲ್ಲಿಯೇ ಉಳಿದುಕೊಂಡೆವು. ಅಲ್ಲಿಯ ಪ್ರಕೃತಿಗೆ ತಕ್ಕ ಹಾಗೆಯೇ ಅದರ ಹೆಸರೂ ಕೂಡ "ಮಿಸ್ಟೀ ಹಿಲ್ಸ್" ಎಂದಿತ್ತು.  ಅವರಂತೂ ಇಡೀ ಮನೆಯನ್ನೇ ನಮಗೆ ಬಿಟ್ಟು ಕೊಟ್ಟಿದ್ದರು. ಊಟ ತಿಂಡಿಗಳ ಸಮಯಕ್ಕೆ ಮಾತ್ರ ಇಬ್ಬರು ಪರಿಚಾರಕರು ಬಂದು ಅಡುಗೆ ಮಾಡಿ ಬಿಸಿ ಊಟ ಬಡಿಸುತ್ತಿದ್ದರು.  ಅಲ್ಲಿಯ ಅತಿಥಿ ಸತ್ಕಾರ ಕೂಡ ಅವಿಸ್ಮರಣೀಯ.
  ನುವರ ಏಲಿಯಾದಿಂದ ಸುಮಾರು 5 ಕಿ. ಮೀ. ದೂರದಲ್ಲಿ ಸೀತಾ ಎಲೀಯ ಎನ್ನುವ ಒಂದು ಚಿಕ್ಕ ಹಳ್ಳಿಯಲ್ಲಿ ಸೀತಾ ದೇವಿಯ ದೇವಸ್ಥಾನವೂ ಇದೆ. ಇಡೀ ಪ್ರಪಂಚದಲ್ಲಿ ಇದೊಂದೇ ಸೀತಾ ದೇವಿಯ ದೇವಸ್ಥಾನ ಎನ್ನುವ ವಿಶೇಷತೆಯಿಂದಾಗಿ ಇದು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಅದರ ಸುತ್ತಲೂ ಇರುವ ಸುಮಾರು 5 ಚದರ ಕಿ. ಮೀ. ಗಳ 'ಹಕ್ಕಲಗ' ಉಧ್ಯಾನವನ ರಾಮಾಯಣದ 'ಅಶೋಕ ವನವಂತೆ'!    ಸರಿ ಅಂತೂ ನಾಲ್ಕು ದಿನಗಳು ಗಿರಿ ವನಗಳ ನಡುವೆ ಕಳೆದ ಆಹ್ಲಾದಕರ ಅನುಭವದೊಂದಿಗೆ  ಮರಳುವ ಸಮಯ ಬಂದೇ ಬಿಟ್ಟಿತು.  ಈ ಭಾಗದ ಪ್ರಯಾಣ ಕೂಡ ಒಂದು ಮರೆಯಲಾಗದ ಅನುಭವವಾಗುತ್ತದೆಂಬ ಅರಿವೇ ನಮಗಿರಲಿಲ್ಲ.
ನುವರ ಏಲಿಯಾದ ಹತ್ತಿರದ ರೈಲು ನಿಲ್ದಾಣದಿಂದ ಕೊಲಂಬೊ ನಗರಕ್ಕೆ ಒಂದು ವಿಶೇಷವಾದ ರೈಲು ಸಂಚಾರದ ವ್ಯವಸ್ಥೆ ಇದೆ.  ವಿದೇಶಿ ಪ್ರವಾಸಿಗರಿಗೆಂದೇ ವಿನ್ಯಾಸಗೊಳಿಸಿರುವ ಈ ರೈಲಿನ ಕೊನೆಯ ಬೋಗಿಯನ್ನು 'ವೀಕ್ಷಣಾ ಬೋಗಿ' ಎಂದು ಕರೆಯುತ್ತಾರೆ. ಇಡೀ ಬೋಗಿಯು ಒಂದು ಗಾಜಿನ ಟ್ಯೂಬಿನಂತೆ ಕಾಣುತ್ತದೆ. ಮಂದಗತಿಯಲ್ಲಿ ಚಲಿಸುವ ಈ ರೈಲು ಚಹಾ ತೋಟಗಳನ್ನು ಸುತ್ತುವರೆಯುತ್ತಾ, ಜಲಪಾತಗಳನ್ನು ಸವರಿಕೊಳ್ಳುತ್ತಾ, ಮೋಡಗಳೊಂದಿಗೆ ಮಾತಾಡುತ್ತಾ, ಆಗಾಗ ಸುರಂಗಗಳನ್ನು ಸೀಳಿಕೊಳ್ಳುತ್ತಾ ಸಾಗುತ್ತಿರುವ ಈ ರೈಲಿನಲ್ಲಿ ಕೂತುಕೊಂಡು ಇಲ್ಲವೇ ಮಲಗಿಕೊಂಡು ಪ್ರತೀ ನಿಮಿಷಕ್ಕೂ ಬದಲಾಗುತ್ತಿರುವ  ಆ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸುವುದೇ ಒಂದು ರೋಮಾಂಚನದ ಅದ್ಭುತ ಅನುಭವ.
ಶ್ರೀಲಂಕಾ ಪ್ರವಾಸಿಗರು ಈ ಕೆಳಗಿನ ಸಂಗತಿಗಳನ್ನು ಗಮನಿಸಬೇಕು.
ಶ್ರೀಲಂಕಾ ಜನಗಳ ಸ್ನೇಹ ಸೌಹಾರ್ದತೆಗಳ ಪರಿಚಯವಾಗ ಬೇಕು ಎಂದರೆ ಹೋಮ್ ಸ್ಟೇ ಅತ್ಯುತ್ತಮ ಆಯ್ಕೆ.  ಇದರಲ್ಲೂ ಕೂಡ ಕಾಸಿದ್ದಷ್ಟು ಕಜ್ಜಾಯ ಎನ್ನುವ ಹಾಗೆ ಎಲ್ಲ ವರ್ಗಗಳ ಆಯ್ಕೆಯೂ ಇದೆ.
   ಇಲ್ಲಿಯ ಪ್ರಕೃತಿಯ ಸೌಂದರ್ಯವನ್ನು ಸವಿಯಲು ಮತ್ತು ವಿಶ್ರಮಿಸಲು ಸಮಯದ ನಮ್ಯತೆ (flexibility) ಇರಲಿ.
  ಒಂದು ಕಡೆಯ ರೈಲು ಪ್ರಯಾಣವಂತೂ ಕಡ್ಡಾಯವಾಗಿ ನಿಮ್ಮ ಪ್ರೋಗ್ರಾಮಿನಲ್ಲಿ ಇರಲಿ.


    

Journey to Switzerland


Journey to Switzerland

      Our journey to Switzerland commenced from the train station near Disneyland Paris in a high speed train, TGV was the French acronym for this luxury Euro Rail.
     It was an impeccably maintained vehicle , comfortable seats with a table in the center for a cosy family seating.
      A restaurant car was  attached to our compartment. There were mobile charging points provided to each seat. Big glass panels provided unhindered view from elbow level to the roof,  as the train glided through the most scenic landscapes of France. Endless stretches of green fields interspersed with bright yellow mustard fields resembled a  huge colourful painting, the picture was complete with hordes of healthy bovines grazing lazily in the green fields. We passed through some patches of light rains and the misty meadows which added a certain romantic feel to the journey. It was an undulated  countryside which presented varied topography with every passing moment. The distant villages barley consisting of twenty-twenty five houses with inverted   V shaped roofed houses with smoking chimneys, appeared right out of a nursery rhyme books. The bigger villages had a tall sharp structure which probably was the village  church. The whole place looked so peaceful and placid. The villages were spread far and wide and the lush landscape looked glorious. The four hours long pleasant journey brought us to the town called Basel, which is the entry point to switzerland. We crossed over from the French exit point and entered Swiss entry point. The  plan was to stay for four days In Switzerland and the itinerary involved extensive travel across the Switzerland, so accordingly we bought  Swiss railway passess which permitted us for unlimited railway travel at half the actual fare and with our daughter traveling free and that was indeed a good deal.
       Our next destination was city called Interlaken which was  two hours train journey by the Swiss Railway  This train journey was even more scenic,a classic Swiss topography which heralded that we are now nearing the grand Alpine of Switzerland !
We selected to stay in Interlaken town because of its convenient location at the base of the Swiss Alps mountain ranges, makes the travel to Alps easy.
         Interlaken is a charming city situated between two lakes and hence the name. It is a Tourist centric city with numerous hotels ,restaurants and some chic shopping malls. There are two Train stations,Interlaken West and Interlaken Ost, separated by a kilometer or so and the town lies between the two stations. Interlaken Ost is also a major train junction connecting most part of the Swiss cities through a wide network of railways.
The city jealously guards its ethnic identity and the old world charm. The city has barely about five thousand locals,mainly senior citizens most of them remain indoors. The wooden houses looked so pretty  with beautiful carvings, decorative windows and doors. All the houses had well manicured lawns surrounding the dwellings. There were no walls or gates but the gardens were beautiful with colorful eye-catching flowers, highlighting an excellent aesthetic sense of the Swiss people. Some of these houses were converted into Restaurants and Pizzerias.
Next day we visited mountain Jungfrau which is the highest part of the Europe. The train station at an altitude of twelve thousand feet is considered to be the one of the highest railway stations in the world. The trains consisting only three or four compartments designed to negotiate a steep climb gradient through the Alp's difficult terrain. This ride was definitely one of the most breathtaking train journeys ever and what an amazing view of landscape one gets to experience through this two hours of train ride.
Jungfrau is an underground train station and it is more than a hundred years old! Through a complex network of tunnels and elevators 'Top of Europe' building is connected which houses a mountain viewing platform from where one can venture into thick snow and if weather is clear can get a stunning view of the adjoining mountain peaks.
There is also an ice palace which is carved out of ice and once entered inside it transports you to a spectacular new world. There are statues of various cartoon characters, personalities,events etc all carved out of ice.
  Returning back to Interlaken was also equally exhilarating experience. Although there were three changes of train but one must compliment the Swiss train system, it works with Swiss clockwork precision!

ಗೋವಿನಂತಹ ಗೋವಿಂದಣ್ಣ

ಗೋವಿನಂತಹ ಗೋವಿಂದಣ್ಣ
ಇತ್ತೀಚೆಗೆ ನಮ್ಮೆಲ್ಲರನ್ನು ಅಗಲಿದ  ಸಮಸ್ತ ಕನ್ನಡಿಗರ ಅಚ್ಚು ಮೆಚ್ಚಿನ, "ಮಲೆನಾಡ ಗಾಂಧಿ" ಎಂದೇ ಪ್ರಸಿದ್ಧವಾಗಿರುವ ಶ್ರೀಮಾನ್ ಗೋವಿಂದೇ ಗೌಡರ ಸಂಗ ಸಾನಿಧ್ಯದಲ್ಲಿ ಅರವತ್ತರ ದಶಕದಲ್ಲಿ ಕಳೆದ ಕೆಲವು ಅವಿಸ್ಮರಣೀಯ ದಿನಗಳನ್ನು ನಿಮ್ಮೊಡನೆ ಹಂಚಿಕೊಳ್ಳುವುದು ನನ್ನ ಸೌಭಾಗ್ಯ ಎಂದು ತಿಳಿಯುತ್ತೇನೆ.
1960 ರಿಂದ 1965ರ ಆರು ವರ್ಷಗಳ ಸುಧೀರ್ಘ ಅವಧಿಯಲ್ಲಿ  ಶಿವಮೊಗ್ಗ ಜಿಲ್ಲೆಯ ಕೊಪ್ಪದ ಸಮೀಪದ ಗುಣವಂತೆಯಲ್ಲಿ ನಾನು ಪ್ರಾರ್ಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿ ಕಾರ್ಯವಹಿಸುವ ಮಹದಾವಕಾಶ ನನ್ನದಾಗಿತ್ತು.  ಆಗ ಶ್ರೀಯುತ ಗೋವಿಂದೇ ಗೌಡರು ಕೊಪ್ಪ ಮತ್ತು ಗುಣವಂತೆ ಮಧ್ಯದ ಒಂದು ಪುಟ್ಟ ಹಳ್ಳಿಯಲ್ಲಿ ವಾಸಿಸುತ್ತಿದ್ದರು.
ಅವರು ವಾಸಿಸುತ್ತಿದ್ದು ಒಂದು ಪುಟ್ಟ ಹಳ್ಳಿಯಾದರೂ ಅವರ ಸರಳತೆ ಮತ್ತು ಸಹೃದಯತೆಯ ಜೀವನ ಇಡೀ ಮಲೆನಾಡು ಪ್ರದೇಶಕ್ಕೆ ಮಾದರಿಯಾಗಿತ್ತು.  ಹಿರಿ ಕಿರಿಯರೆಲ್ಲರೂ ಅವರನ್ನು ಪ್ರೀತಿ ಮತ್ತು ಆದರದಿಂದ "ಗೋವಿಂದಣ್ಣ, ಗೋವಿಂದಣ್ಣ"  ಎಂದು ಕರೆಯುತ್ತಿದ್ದರು ಅಷ್ಟೊತ್ತಿಗಾಗಲೇ ಅವರು ತಮ್ಮ ಸರಳತೆ ಮತ್ತು ಪ್ರಾಮಾಣಿಕತೆಯಿಂದ ಜಿಲ್ಲಾ ಮಟ್ಟದ ರಾಜಕೀಯದಲ್ಲಿ ಹಿರಿಮೆಯ ಸ್ಥಾನವನ್ನು ಪಡೆದಿದ್ದರು.  ಅವರ ಪ್ರೋತ್ಸಾಹದಿಂದ ಹುರಿದುಂಬಿಸಲ್ಪಟ್ಟ ನನ್ನ ಕನಸುಗಳು ಸಹ ಗರಿಗೆದರಿಕೊಂಡು ಸ್ವಚ್ಛಂದ ಬಾನಲ್ಲಿ ಹಾರಾಡ ತೊಡಗಿದವು. ಅವರ ಮಾರ್ಗದರ್ಶನ ಮತ್ತು ಸತ್ಸಂಗದಲ್ಲಿ ನಡೆದ ಕೆಲವು ಘಟನೆಗಳು ನನ್ನ ಬಾಳಿನ ಈ ಮುಸ್ಸಂಜೆಯಲ್ಲೂ ನೆನಪಿಸಿಕೊಂಡರೆ ಮೈ ಮನಗಳು ಪುಳಕಗೊಳ್ಳುತ್ತವೆ.
ಮಳೆಯಲ್ಲಿಯೇ ಪ್ರತ್ಯಕ್ಷವಾದ ಗೋವಿಂದಣ್ಣ
1962ರ ಸ್ವತಂತ್ರ ದಿನಾಚರಣೆಗೆ ಮುಖ್ಯ ಅತಿಥಿಯಾಗಿ ಬರಲು ಗೋವಿಂದಣ್ಣನವರು ಸಮ್ಮತಿಸಿದ್ದರು. ಆದರೆ ಅಂದು ಬೆಳಗಿನಿಂದಲೇ ಧೋ ಎಂದು ಮಳೆ ಸುರಿಯುತ್ತಿತ್ತು. ಮಲೆನಾಡಿನ ಮಳೆ ಎಂದರೆ ಕೇಳ ಬೇಕೇ. ನಿರಂತರವಾಗಿ ಸುರಿಯುತ್ತಿತ್ತು.  ಆಗ ಗುಣವಂತೆಗೆ ಯಾವ ತರಹದ ವಾಹನ ಸೌಕರ್ಯವೂ ಇರಲಿಲ್ಲ. ಇನ್ನೂ ಮುಖ್ಯ ಅತಿಥಿಗಳು ಬರುವುದಂತೂ ಸಾಧ್ಯವೇ ಇಲ್ಲ ಎಂಬ ನಿರಾಸೆ ನಮ್ಮೆಲ್ಲರನ್ನು ದಟ್ಟವಾಗಿ ಆವರಿಸಿತ್ತು. ಆದರೆ ಸರಿಯಾಗಿ ನಿರ್ಧಾರಿತ ಸಮಯಕ್ಕೆ ರೇನ್ ಕೋಟ್ ಮತ್ತು ಮೊಣಕಾಲೆತ್ತರದವರೆಗೆ ಧರಿಸಿದ ಗಂ ಬೂಟುಗಳೊಡನೆ ಗೋವಿಂದಣ್ಣ ಗುಣವಂತೆ ದಿಬ್ಬದ ಮೇಲೆ ಪ್ರತ್ಯಕ್ಷವಾಗೆ ಬಿಟ್ಟರು.  ಮಂಕಾಗಿ ಕುಳಿತಿದ್ದ ನಮ್ಮೆಲ್ಲರ ಮುಖದಲ್ಲಿ ಸಂತಸದ ಕಾರಂಜಿ ಚಿಮ್ಮಿತು. ಆಮೇಲಿನ ಸಮಾರಂಭವಂತೂ ಹರ್ಷೋಲ್ಲಾಸದೊಂದಿಗೆ ನಡೆಯಿತು.
ನಾಟಕ ಪಾತ್ರಧಾರಿ ಗೋವಿಂದಣ್ಣ.
ಗೋವಿಂದೇ ಗೌಡರು ತಮ್ಮ ಮನೆಯ ಮುಂದೆ ಒಂದು ಪುಟಾಣಿ ಕಿರಾಣಿ ಅಂಗಡಿಯನ್ನು ನಡೆಸುತ್ತಿದ್ದರು.  ಮುಖ್ಯವಾಗಿ ಆ ಅಂಗಡಿಗೆ ಬರುತ್ತಿದ್ದ ಗಿರಾಕಿಗಳೆಂದರೆ ಅಲ್ಲಿನ ಸುತ್ತಮುತ್ತಲಿನ ಕಾಫಿ ಎಸ್ಟೇಟುಗಳಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಆಳುಗಳು ಸುಮಾರು ನಾಲ್ಕು ಗಂಟೆಯಷ್ಟೊತ್ತಿಗೆ ಇವರ ಅಂಗಡಿಗೆ ಬರುತ್ತಿದ್ದವರಿಗೆ ಇವರೇ ಖುದ್ದಾಗಿ ಅವರಿಗೆ ಬೇಕಾದ ದಿನಸಿಗಳನ್ನು ಅಳೆದು ತೂಗಿ ಕೊಡುತ್ತಿದ್ದರು.  ನಿಜವಾಗಿ ಹೇಳಬೇಕೆಂದರೆ ಅವರು ಆ ಕಿರಾಣಿ ಅಂಗಡಿ ನಡೆಸುತ್ತಿದ್ದುದೇ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿಗಾಳಿಗೋಸ್ಕರ.  ಅದೇ ಸಮಯಕ್ಕೆ ಸರಿಯಾಗಿ ನಾನು ಸಹ ಗುಣವಂತೆಯಿಂದ ಬಂದು ಇವರ ಜೊತೆ ಕೆಲ ಸಮಯ ಕಳೆಯುತ್ತಿದ್ದೆ. ಇದಂತೂ ನನ್ನ ಸ್ಮೃತಿಪಟಲದಲ್ಲಿ ಅಚ್ಚಳಿಯದ ಸಂಗತಿ.
                  ಹೀಗಿರುವಾಗ ಒಂದು ಸಂಜೆ ಗೋವಿಂದಣ್ಣನವರ ಜೊತೆ ಏಕೆ ಒಂದು ಸಾಮಾಜಿಕ ಸಂದೇಶವಿರುವ ನಾಟಕವನ್ನು ರಚಿಸಿ ಪ್ರದರ್ಶಿಸಬಾರದು ಎಂಬ ವಿಚಾರದ ಬಗ್ಗೆ ಚರ್ಚಿಸಿದೆ. ಅದರಲ್ಲಿ ಬರುವ ಒಬ್ಬ ಆದರ್ಶವಾದಿ ರಾಜಕೀಯ ವ್ಯಕ್ತಿಯ ಪಾತ್ರವನ್ನು ಸ್ವತಃ ಗೋವಿಂದಣ್ಣನವರೇ ಮಾಡಲು ಒಪ್ಪಿಕೊಂಡರು ಮತ್ತು ನಿಯಮಿತವಾಗಿ ನಾಟಕಾಭ್ಯಾಸಕ್ಕೆ ಪ್ರತಿ ಸಂಜೆ ಬರುತ್ತಿದ್ದರು. ಅವರ ದೈನಂದಿನ ಉಡುಗೆಯಾದ ಖಾದಿ ಪೈಜಾಮ ಮತ್ತು ಖಾದಿ ಶರ್ಟು ನಾಟಕದ ತೊಡುಗೆಯಾಗಿತ್ತು. ಅವರ ನಿಸ್ವಾರ್ಥ ಸಮಾಜ ಸೇವೆ ಹಾಗೂ ಸರಳ ಜೀವನವನ್ನು ಪ್ರತಿ ಪಾದಿಸುತ್ತಿದ್ದ ನಾಟಕದ ಪಾತ್ರಕ್ಕೆ ಜೀವ ತುಂಬಲು ಅವರಿಗೆ ಹೆಚ್ಚಿನ ಶ್ರಮ ಪಡುವ ಅವಶ್ಯಕತೆ ಇರಲಿಲ್ಲ, ಏಕೆಂದರೆ ಅದೇ ಅವರ ಸಹಜ ಜೀವನವಾಗಿತ್ತು. ಕೊಪ್ಪದ ಆಸುಪಾಸಿನ ಮಲೆನಾಡಿನಲ್ಲಿ ಈ ನಾಟಕವಂತೂ ಭರ್ಜರಿ ಯಶಸ್ಸು ಗಳಿಸಿತು. ಈ ನಾಟಕದ " ಕಥೆ, ಸಂಭಾಷಣೆ ಮತ್ತು ನಿರ್ದೇಶನ ಶ್ರಿನಿವಾಸಯ್ಯ" ನಾನು ಹೆಮ್ಮೆಯಿಂದ ಬೀಗಿದೆ.
ಧಿಡೀರ್ ಎಂದು ಪ್ರತ್ಯಕ್ಷವಾದ ಕಡಿದಾಳ್ ಮಂಜಪ್ಪನವರು.
ಮಲೆನಾಡ ಗರ್ಭದಲ್ಲಿ ಗೋವಿಂದಣ್ಣನವರ ಮಾರ್ಗದರ್ಶನದಲ್ಲಿ ಕಳೆದ ಆ ದಿನಗಳಂತೂ ನನ್ನ ಜೀವನದ ಮಹತ್ತರ ತಿರುವನ್ನು ಪಡೆದು ಕೊಂಡ ಸಮಯ ಎಂದರೆ ಅತಿಶಯೋಕ್ತಿಯಾಗಲಾರದು. ಗೋವಿಂದಣ್ಣನವರ ನಿಸ್ವಾರ್ಥ ಸೇವೆ ಹಾಗೂ ಕ್ರಿಯಾಶೀಲತೆಯಿಂದಾಗಿ ಕೊಪ್ಪದ ಆಸುಪಾಸಿನ ಪ್ರದೇಶಗಳಲ್ಲಿ ಅಭಿವೃದ್ಧಿಯ ಸಂಕೇತವು ಎಲ್ಲೆಲ್ಲೂ ಕಾಣ ತೊಡಗಿದವು. ನಮ್ಮ ಶಾಲೆಯು ಹಿರಿದಾಗುತ್ತಾ ಹೋಗುತ್ತಿತ್ತು. ಅಲ್ಲಿಗೆ ಪೋಸ್ಟ್ ಆಫೀಸು ಸಹ ಬಂತು ಮತ್ತು ಗೋವಿಂದಣ್ಣನವರ ಆದೇಶದಂತೆ ನಾನೇ ಅದರ ಪೋಸ್ಟ್ ಮಾಸ್ಟರ್ ಕಾರ್ಯವನ್ನೂ ವಹಿಸಿಕೊಂಡೆ.  ಅಂತು ಇಂತು ಗುಣವಂತೆಯ ಶಾಲೆ ಕೊಪ್ಪ ತಾಲೂಕಿನಲ್ಲೇ ಪ್ರಸಿದ್ಧಿ ಪಡೆದು ಕೊಂಡಿತು. ನನ್ನ ಮತ್ತು ಗೋವಿಂದಣ್ಣನವರ ಬೆಸುಗೆ ಇನ್ನೂ ಬಲವಾಯಿತು. ಹೀಗಿರುವಾಗ ಒಮ್ಮೆ ಶ್ರೀಮಾನ್ ಕಡಿದಾಳ್ ಮಂಜಪ್ಪ ಅಂದಿನ ನಮ್ಮ ರಾಜ್ಯದ ಮುಖ್ಯಮಂತ್ರಿ ಕೊಪ್ಪದ ಪ್ರವಾಸಿ ಮಂದಿರದಲ್ಲಿ ತಂಗಿದ್ದಾರೆ ಎಂಬ ವಿಷಯ ಗೊತ್ತಾಯಿತು. ನನ್ನ ಮತ್ತು ಗೋವಿಂದಣ್ಣನ ನಿಯಮಿತ ಸಂಜೆ ಭೇಟಿಯಲ್ಲಿ ನಾನು ಈ ವಿಷಯವನ್ನು ಪ್ರಸ್ತಾಪಿಸಿದೆ.  ನಮ್ಮ ಮುಖ್ಯಮಂತ್ರಿಯವರು ಇಷ್ಟು ಹತ್ತಿರವಿರುವಾಗ ಏಕೆ ನಮ್ಮ ಗುಣವಂತೆಯ ಶಾಲೆಗೆ ಭೇಟಿ ನೀಡಬಾರದು ಎಂಬ ವಿಷಯದ ಬಗ್ಗೆ ನಾವಿಬ್ಬರೂ ಚರ್ಚಿಸಿದೆವು. ಅದಕ್ಕೆ ಕೂಡಲೇ ಸ್ಪಂದಿಸಿದ ಗೋವಿಂದಣ್ಣ ಕಗ್ಗತ್ತಲಿನ ರಾತ್ರಿಯಲ್ಲೇ ಕೊಪ್ಪದ ಪ್ರವಾಸಿ ಮಂದಿರಕ್ಕೆ ನಡೆದು ಕೊಂಡು ಹೋಗಿ ಮರುದಿನದ ಕಾರ್ಯಕ್ರಮಕ್ಕೆ  ಒಪ್ಪಿಸಿದರು. ನಮ್ಮೆಲ್ಲರ ಆಶ್ಚರ್ಯಭರಿತ ಕಣ್ಗಳ ಮುಂದೇ ಮುಖ್ಯ ಮಂತ್ರಿ ಶ್ರೀಮಾನ್ ಕಡಿದಾಳ್ ಮಂಜಪ್ಪನವರ ಸನ್ಮಾನ ಸಮಾರಂಭವು ನಡೆದೇ ಹೋಯಿತು, ಇಂತಹ ಮಹಾನ್ ವ್ಯಕ್ತಿತ್ವ ನಮ್ಮೆಲ್ಲರ ನಡುವೆ ಅತಿ ಸಾಮಾನ್ಯ ವ್ಯಕ್ತಿಯಂತೆ ನಡೆದುಕೊಂಡು  ಅವರಿಗಿಂತ ನಾವೇ ಉತ್ತಮರು ಎಂಬಂತೆ ನಮ್ಮನ್ನು ನಡೆಸಿಕೊಂಡು ಆಳಿದ ವ್ಯಕ್ತಿಗೆ ಸಹಸ್ರ ನಮನಗಳು.
"ಜೈ ಹಿಂದ್, ಜೈ ಕರ್ನಾಟಕ"
 ಬದನ ಗೋಡು ಶ್ರಿನಿವಾಸಯ್ಯ (ಬ ವೆಂ ಶ್ರಿ).
ನಿವೃತ್ತ ಶಿಕ್ಷಕರು,
ರಂಗಸಿರಿ,
 ಚೆನ್ನಗಿರಿ(),  ದಾವಣಗೆರೆ.






ವಿಯೆಟ್ನಾಮ್ ಡೈರೀಸ್

ವಿಯೆಟ್ನಾಮ್ ಡೈರೀಸ್, ದಿನ-1

     ಲೀಮ್ ,ಆ ಮರ್ಸಿಡೀಸ್ ಕಾರಿನ ಚಾಲಕಿ, ಇಪ್ಪತ್ತರ ಹರೆಯದ ನಗುಮೊಗದ ‌ಹುಡುಗಿ. ಹೋಚಿಮಿನ್ ಸಿಟಿಯ ಏರ್ರ್ಪೋರ್ಟಿನಿಂದ ನಗರದ ಮಧ್ಯಭಾಗದಲ್ಲಿರುವ ಸೋಫಿಟೆಲ್ ಹೋಟಲಿಗೆ ನಮ್ಮನ್ನು ತಲುಪಿಸಿದ ಮತ್ತು ವಿಯಟ್ನಾಮಿ ಭಾಷೆಯಲ್ಲಿ ಹಲ್ಲೋ....'ಮಿ ಚೌ'  ಎನ್ನುವ ಇವರ ಭಾಷಾ ಪರಿಚಯ ಮಾಡಿಕೊಟ್ಟ ಮೊದಲ ವಿಯೆಟ್ನಾಮಿ. ಸುಮಾರು ನಲವತ್ತು ನಿಮಿಷಗಳ ಡ್ರೈವಿಂಗ್ನಲ್ಲಿ ಕನಿಷ್ಟ ಅಂದರೆ ಹತ್ತು ಕಡೆಯಾದರೂ ಟ್ರಾಫಿಕ್ ಸಿಗ್ನಲ್ನಲ್ಲಿ ಒಂದೆರಡು ನಿಮಿಷಗಳ ನಿಲುಗಡೆ ಇತ್ತು. ಹೀಗೆ ಕಾರು ನಿಂತಾಗ ಹಿಂತಿರುಗಿ ನಮ್ಮ ಮಗಳ ಹತ್ತಿರ ಮಾತು ಕಥೆಗೆ ಶುರು ಹಚ್ಚಿಕೊಳ್ಳುತ್ತಿದ್ದಳು.   ಇಂಗ್ಲೀಷಿನಲ್ಲಿ ಸ್ವಲ್ಪ ಎಡರು ತೊಡರಾದರೂ ಸಹ ..ನಾಚಿಕೊಳ್ಳುತ್ತಲೇ ನಮ್ಮ ಜೊತೆ ಮಾತಾಡುತ್ತಿದ್ದಳು....ನಿನ್ನ ಕಣ್ಣುಗಳು ತುಂಬಾ ಸುಂದರವಾಗಿವೆ ಎಂಬ ಶ್ಲಾಘನೆಯನ್ನು ನಮ್ಮ ಮಗಳಿಗೆ ಹೇಳುವ  ಪ್ರಾಮಾಣಿಕವಾದ ಹೃದಯವಂತಿಕೆಯನ್ನೂ ತೋರಿದಳು.
  ಏರ್ಪೋರ್ಟಿನಲ್ಲಿ 200 ಡಾಲರ್ಗಳನ್ನು ಇಲ್ಲಿಯ ಡಾಂಗ್ ಗಳಾಗಿ ಪರಿವರ್ತಿಸಿದ ಮೇಲೆ ಸಿಕ್ಕಿದ್ದು ಬರೋಬ್ಬರಿ ನಲವತ್ತುವರೆ ಲಕ್ಷ...ಅಂದ್ರೆ ನಮ್ಮ ನೂರು ರೂಪಾಯಿ ಇಲ್ಲಿಯ ಇಲ್ಲಿ ಮೂರುಸಾವಿರ ಡಾಂಗ್! ಏರ್ಪೋರ್ಟಿನಿಂದ ಹೋಟಲಿಗೆ ಇಪ್ಪತ್ತುಸಾವಿರ ಡಾಂಗ್,ಅಸಲಿಗೆ ಬೆಂಗಳೂರಿಗಿಂತ ಅಗ್ಗ ರೂಪಾಯಿಯ ಲೆಕ್ಕದಲ್ಲಿ.
  ಸುರಕ್ಷಿತವಾಗಿ ಹೋಟೆಲು ತಲುಪಿಸಿದ ಲೀಮ್ ಗೆ ಧನ್ಯವಾದಗಳನ್ನು ಹೇಳುವಾಗ ಅವಳ ಮೊಬೈಲು ನಂಬರ್ ಕೊಟ್ಟು ,ಕಾರಿನ ಅವಶ್ಯಕತೆ ಇದ್ದರೆ ಕರೆಮಾಡಿ ಎಂದು ಹೇಳಿದಳು.
  ಹೋಚಿಮಿನ್ ಸಿಟಿ ದಕ್ಷಿಣ ವಿಯೆಟ್ನಾಮಿನ ಅತಿದೊಡ್ಡ ಸಿಟಿ. ಹಲವಾರು ದಶಕಗಳ ಚೀನ ಮತ್ತು ರಷ್ಯದ ಕಮ್ಯನಿಷ್ಟರು ಉತ್ತರದಿಂದ ಮತ್ತು  ಫ್ರೆಂಚ್ ಹಾಗು ಅಮೆರಿಕದ ಬಂಡವಾಳಶಾ‌ಹಿಗಳು ದಕ್ಷಿಣದಿಂದ ನಡೆಸಿದ ಸೈಧ್ಧಾಂತಿಕ ಯುಧ್ಧದ ರಣಭೂಮಿ. ಕೆಲ ಸಮಯ ಅಮೆರಿಕ ದರ್ಬಾರು ನಡೆಸಿದರೆ,ಕೆಲ ಸಮಯ ಫ್ರಾನ್ಸಿನ ಅಧಿಕಾರ. ಅಂತೂ 75 ರ ದಶಕದಲ್ಲಿ ಉತ್ತರ, ದಕ್ಷಿಣ ವಿಯಟ್ನಾಮುಗಳು ಒಂದಾಗಿ ಅಮೆರಿಕದಿಂದ ಮುಕ್ತಿ ಪಡೆದವು. ಅಷ್ಟೊತ್ತಿಗಾಗಲೇ ಸುಮಾರು 58 ಸಾವಿರ ಅಮೆರಿಕನ್ನರು ಪ್ರಾಣತ್ಯಾಗ ಮಾಡಿದ್ದರು. ಯಾವ ಪುರುಷಾರ್ತಕಕ್ಕಾಗಿ,ಯಾವ ದೇಶದ ಉಳಿವಿಗಾಗಿ ಇಷ್ಟೊಂದು ಜನರ ಜೀವಗಳು ನಾಶವಾದವು ಎನ್ನುವ ಕಹಿ ನೆನಪು ಈಗಲೂ ಅಮೆರಿಕಾದ ಅಹಂಗೆ ಮುಳ್ಳಾಗಿರುವ ವಿಷಯ. ಈ ಎರಡು ಅಂದಿನ ಪ್ರಭಲ ಶಕ್ತಿಗಳ ನಡುವೆ ಸಿಲುಕಿದ ಲಕ್ಷಾಂತರ ವಿಯಟ್ನಾಮಿಗಳ ಮಾರಣಹೋಮವೂ ನಡೆಯಿತು.

    ಈಗಿನ ಸಂಪಧ್ಭರಿತ ವಿಯಟ್ನಾಂ ಅದಲ್ಲವನ್ನೂ ಮರೆತು ಮುನ್ನುಗ್ಗತ್ತಿದೆ. ಇನ್ನೊಂದು ಗಮನಸೆಳೆಯುವ ಅಂಶವೆಂದರೆ ಎಲ್ಲಾ ವಾಣಿಜ್ಯ ಚಟುವಟಿಕೆಗಳಲ್ಲಿ ಮಹಿಳೆಯರದೇ ಮೇಲುಗೈ.   
     ಇಲ್ಲಿಯ ಐತಿಹಾಸಿಕ ‘ಬೆನ್ಥಾನ್ ‘ಮಾರ್ಕೆಟ್ಟಿನಲ್ಲಂತೂ ಇವರ ಮಾರಾಟದ ಕುಶಲತೆ ನೋಡಿ ಅನುಭವಿಸಬೇಕು!
ಅಲ್ಲಿ ತುಂಬ ಸೆಕೆ ಇದ್ದುದರಿಂದ ನಿಲುವಂಗಿಗಳನ್ನು ಧರಿಸಲು ಸಾಧ್ಯವಿರಲಿಲ್ಲ, ಆದ್ದರಿಂದ ತುಂಡು ಬಟ್ಟೆಗಳನ್ನು ಧರಿಸಿದ್ದರು. ಇದರಿಂದಾಗಿ ಖರೀದಿದಾರರ ಜೊತೆಗೆ, ನೋಡುಗರ ಜಾತ್ರೆಯೂ ನೆರೆದಿತ್ತು. ಅವರಂತೂ ಮೈಗೆ ತಾಕಿಕೊಂಡೇ ಮಾತನಾಡಿಸುತ್ತಿದ್ದರು. ಇದರಿಂದಾಗಿ ಸಣ್ಣ ಸಣ್ಣ ವಸ್ತುಗಳ ಖರೀದಿಗೂ ತುಂಬಾ ಸಮಯ ಹಿಡಿಯುತ್ತಿತ್ತು! ಆದರೆ ಇವರ ಜೊತೆ ಜೋರಾಗೇ ಚೌಕಾಸಿ ಮಾಡಬೇಕು. ಕೋಳಿಮೊಟ್ಟೆಯ ಸಿಪ್ಪೆಯ ಪೀಸುಗಳನ್ನು ಉಪಯೋಗಿಸಿಕೊಂಡು ತಯಾರಿಸುವ ಚಿತ್ರಕಲೆ ಇಲ್ಲಿಯ ವಿಷೇಶತೆ. ವಿಷೇಶ ವಿನ್ಯಾಸದ ಉಡುಪುಗಳೂ ಸಹ ಇಲ್ಲಿಯ ಆಕರ್ಷಣೆ.

  2 ಸೆಪ್ಟಂಬರ್ 1975 ರಂದು ಉತ್ತರ ಮತ್ತು ದಕ್ಷಿಣ ವಿಯೆಟ್ನಾಮ್ಗಳು ಒಂದಾಗಿ ಸ್ವತಂತ್ರವಾದವು. ಕೈಗಾರಿಕಾ ಪ್ರಗತಿಯ ಪ್ರಾರಂಭವಾಯಿತು. ಹೇರಳವಾದ ತೈಲ ಸಂಪನ್ಮೂಲಗಳ ಸಂಸ್ಕರಣ ಶುರುವಾಯಿತು. ಕಾಫಿ ಮತ್ತು ಭತ್ತ ಇಲ್ಲಿಯ ಮಖ್ಯ ಬೆಳೆಗಳಾದರೆ, ಮೀನುಗಾರಿಕೆಯಿಂದ ಹೇರಳ ಉತ್ಪನ್ನ ಬರಲಾರಂಬಿಸಿತು. ಇಲ್ಲಿಯ ಸಾಂಪ್ರದಾಯಕ ವ್ಯವಸಾಯವಾದ ಮರದ ಪೀಠೋಪಕರಣಗಳು ವಿಶ್ವದೆಲ್ಲೆಡೆ ಪ್ರಸಿದ್ದಿಯಾದವು. ಇಲ್ಲಿಯ ಉತ್ಕ್ರುಷ್ಟ ದರ್ಜೆಯ ಬಟ್ಟೆಗಳು ಇಷ್ಟೊಂದು ಅಗ್ಗವಾಗಿ ಭಾರತದಲ್ಲೆಲ್ಲೂ ಸಿಗುವುದಿಲ್ಲ. ಪ್ರತಿಯೊಂದು ಮನೆಯ ಮುಂದೆ ಒಂದು ಅಂಗಡಿಯಿರುತ್ತದೆ. ಅದು ಇಲ್ಲಿ ಯಥೇಚ್ಚವಾಗಿ ಬೆಳೆಯುವ ಹಣ್ಣಿನ ಅಂಗಡಿ ಗಳಾಗಿರಬಹುದು,ರೆಸ್ಟೋರೆಂಟುಗಳಾಗಿರಬಹುದು, ಇಲ್ಲಿರುವ ಲಕ್ಷಾಂತರ ಸ್ಕೂಟರ್ಗಳಿಗೆ ಸಂಬಂದಿಸಿದ ಸರ್ವೀಸಿಂಗ್  ಸೆಂಟರುಗಳಿರಬಹುದು, ಹೆಲ್ಮೆಟ್ ಅಂಗಡಿಗಳಿರಬಹುದು,ಡೀಲರ್ಗಳಿರಬಹುದು, ಏನಾದರೂ ಸರಿ ,ಮುಂದೆ ಒಂದು ಅಂಗಡಿ ಹಿಂದೆ ಮನೆ. ನಮ್ಮಲ್ಲಿರುವ ಹಾಗೆ ಮನೆಗಳು ಒಂದುಕಡೆ ಹಾಗೂ ವಾಣಿಜ್ಯ ವಹಿವಾಟುಗಳು ಒಂದುಕಡೆ ಎನ್ನುವ ಪದ್ದತಿ ಇಲ್ಲಿಲ್ಲ.
  ಇಲ್ಲಿ ದೊರಕುವ ಹೇರಳವಾಗಿ ಸಿಗುವ ಹಣ್ಣುಗಳ ಬಗ್ಗೆ ಮತ್ತು ಸ್ವಲ್ಪ ಮುದ್ದೆಯಂತಾದರೂ ಸರಿ ,ಅನ್ನ ಮಾತ್ರ ಎಲ್ಲಾ ಸಮಯದಲ್ಲೂ ಸಿಗುತ್ತದ ಎಂಬ ಭರವಸೆ ಇದ್ದುದರಿಂದೆ ಊಟದಬಗ್ಗೆ ಹೆಚ್ಚು ತಲೆ ಕೆಡಸಿಕೊಳ್ಳಲಿಲ್ಲ, ಆದರೂ ಚಟ್ನಿಪುಡಿ, ಉಪ್ಪಿನಕಾಯಿ ,ಗೊಜ್ಜುಗಳನ್ನು ಮಾತ್ರ ತಪ್ಪದೇ ಪ್ಯಾಕಿಂಗ್ ಮಾಡಿಕೊಂಡು ಬಂದಿದ್ದೆವು.   ಈ ಹೋಟಲಿನ ತಿಂಡಿಯಂತೂ ಅಧ್ಭುತ,ನಮ್ಮಕಡೆಯಲ್ಲಿ ಮಲೆನಾಡಿಗಷ್ಟೇ ಸೀಮಿತವಾದ ಅಕ್ಕಿ ನುಚ್ಚಿನ ಗಂಜಿಯೂ ಸಿಗುತ್ತದೆ, ಆದರೆ ಉಪ್ಪಿನಕಾಯಿಯನ್ನು ಸ್ವಲ್ಪ ಹುಷಾರಾಗಿ ನೋಡಿಕೊಳ್ಳಬೇಕು...ಎಲ್ಲಾ ತರಹದ ಹುಳ ಹುಪ್ಪಡಿಗಳ ಉಪ್ಪಿನಕಾಯಿಗಳನ್ನು ಸಾಲಾಗಿ ಪೇರಿಸುರುತ್ತಾರೆ. "ಫೋ" ಎನ್ನುವ ನೂಡಲ್ಸು ಮತ್ತು ತರಕಾರಿಗಳ ಮಿಶ್ರಿತ ಸೂಪ್ ಮಾದರಿಯ ಆಹಾರವೇ ಇಲ್ಲಿಯ ರಾಷ್ಟ್ರೀಯ ಖಾದ್ಯ! ಇದರ ಜೊತೆ ಯಾವ ತರಹದ ಮೀನು, ಚಿಕನ್ನುಗಳ ಕಾಂಬಿನೇಷನ್ ಅವರವರ ರುಚಿಗೆ ತಕ್ಕಂತೆ. ಮೊದಲ ದಿನವೇ ಇದರ ರುಚಿಗೆ ಮರುಳಾದೆವು. ವಿಯಟ್ನಾಮಿಗಳಿಗೆ ಬಿಸಿಬಿಸಿ "ಫೋ" ಸವಿಯಲು ಹೊತ್ತು ಗೊತ್ತು ಏನೂ ಬೇಡ,ಯಾವಾಗಾದರೂ ಸರಿ.


ವಿಯಟ್ನಾಮ್ ಡೈರೀಸ್, ದಿನ -2

ಸೈಗೋನ್ ಎಂದು ಕರೆಯಲಾಗುತ್ತಿದ್ದ ಈ ಸಿಟಿಯನ್ನು
2 ಜುಲೈ 1976 ನಲ್ಲಿ ಸ್ವತಂತ್ರ ಹೋರಾಟದ ಮುಖಂಡ ಶ್ರೀ ಹೊ ಚಿ ಮಿನ್ಹ ಅವರಿಗೆ ಗೌರವ ಸೂಚಿಸಲು ಹೊಚಿಮಿನ್ಹ ಸಿಟಿ ಎಂದು ನಾಮಕರಣ ಮಾಡಲಾಗುತ್ತದೆ. ಸ್ವತಂತ್ರ ಹೋರಾಟದ ಈ ರುವಾರಿ ಇಲ್ಲಿಯ ಮಹಾತ್ಮಗಾಂಧಿಯೂ ಮತ್ತು ಸುಭಾಷ್ ಚಂದ್ರ ಬೋಸ್ ಆಗಿ ನಿರಂತರವಾಗಿ ಹೋರಟ ನಡೆಸಿದ ಫಲ, ಸ್ವಾತಂತ್ರ ಮತ್ತು ಸೈದ್ದಾಂತಿಕವಾಗಿ ಹೋಳು ಮಾಡಿದ್ದ ಎರಡು ದೇಶಗಳು ಒಂದಾದವು.

ಅಮೆರಿಕ ಸೋತ ಏಕೈಕ ಯುಧ್ಧ ವಿಯೆಟ್ನಾಮಿನಲ್ಲಿ. ಇವರ ಗೊರಿಲ್ಲಾ ಶೈಲಿಯ,ಅದರಲ್ಲೂ ರಾತ್ರಿ ಸಮಯದಲ್ಲಿ ಮಾಡುತ್ತಿದ್ದ  ಆಕ್ರಮಣದಿಂದ ಕಕ್ಕಾಬಿಕ್ಕಿಯಾಗಿ ಹೋಗುತ್ತಿದ್ದರು ಅಮೆರಿಕನ್ನರು. ಇವರು ಎಲ್ಲಿಂದ ಬರುತ್ತಾರೆ,ಹಗಲು ಹೊತ್ತು ಎಲ್ಲಿರುತ್ತಾರೆ ಎನ್ನವ ಕಿಂಚಿತ್ತೂ ಮಾಹಿತಿ ಸಿಗುತ್ತಿರಲಿಲ್ಲ. ಇದಕ್ಕೆಂದೇ ಈ ಚಾಣಾಕ್ಷ ವಿಯಟ್ನಾಮಿಗಳು ಸುಮಾರು 200 ಚದರ ಕಿಮೀ ನಷ್ಟು ದಟ್ಟ ಕಾಡಿನಲ್ಲಿ ಸುರಂಗದ ಜಾಲವನ್ನೇ ಸೃಷ್ಟಿಸಿಕೊಂಡಿದ್ದರು. "ಕು ಚಿ" ಎನ್ನುವ ಈ ಪ್ರದೇಶವನ್ನು  ವಿಯಟ್ನಾಮಿನ ಒಂದು ಪ್ರವಾಸಿಗರ ಆಕರ್ಷಣೆಯಾಗಿ ಸೃಷ್ಟಿಸಲಾಗಿದೆ. ಈಗಲೂ ದಟ್ಟ ಕಾಡೇ ಇದೆ. ಕೆಲವು ಸುರಂಗಗಳಲ್ಲಿ ನಾವೂ ತೆವಳಿಕೊಂಡು, ಉಸಿರುಗಟ್ಟುವವರೆಗೂ ಇದ್ದು ಉಸ್ಸಪ್ಪಾ ಎನ್ನುತ್ತ ಹೊರಗೆ ಬಂದೆವು. ವಿಯಟ್ನಾಮಿ ಗೋರಿಲ್ಲಾಗಳು ಹಗಲೆಲ್ಲಾ ಈ ಬಿಲಗಳಲ್ಲಿದ್ದು,ರಾತ್ರಿ ಹೊರಗೆ ಬಂದು,ಕೆಲವರು ದಾಳಿ ಮಾಡಲು ಹೋದರೆ ಇನ್ನು ಕೆಲವರು ಹೊಲ ಗದ್ದೆಗಳಲ್ಲಿ ಕೆಲಸಕ್ಕೆ ಹೋಗುತ್ತಿದ್ದರಂತೆ. ಇನ್ನು ಕೆಲವರು ಪಕ್ಕದ ಲಾವೋಸ್ನಿಂದ ದವಸ ಧಾನ್ಯಗಳನ್ನು ತಂದು ಈ ಬಿಲಗಳಲ್ಲಿ ತುಂಬಿಸಿಡುತ್ತಿದ್ದರಂತೆ. ಅಲ್ಲಿಯೇ ಒಂದು ಸಾಮೂಹಿಕ ಅಡುಗೆ ಮನೆಯನ್ನು ನಿರ್ಮಿಸಿ,ಅದರ ಹೊಗೆಯನ್ನು ಚದುರಿಸಲು ನೆಲಮಾಳಿಗೆಯಲ್ಲೇ ವಿವಿಧ ದಿಕ್ಕುಗಳಲ್ಲಿ ಹರಿಸಲು ಮಾಡಿಕೊಂಡ ವ್ಯವಸ್ಥೆಯನ್ನು ತೋರಿಸಲು ದಿನವಿಡೀ ಹೊಗೆಯಾಡುವ ಹಾಗೆ ಮಾಡಿರುತ್ತಾರೆ. ಒಂದಕ್ಕೊಂದು ಬಿಲಗಳಿಗೆ ನೆಲದೊಳಗೇ ಸುರಂಗದ ಮೂಲಕ ಸಂಪರ್ಕ ಕಲ್ಪಿಸಿ ಒಂದು ಆಸ್ಪತ್ರೆಯ ವ್ಯವಸ್ಥೆಯೂ ಸೇರಿದಂತೆ ಒಂದು ಸಂಪೂರ್ಣ ಸಿಟಿಯನ್ನೇ ಸೃಷ್ಟಿಮಾಡದ್ದ ಕುರುಹು ಈಗಲೂ ಇದೆ. ಇಲ್ಲಿ ಮದುವೆಗಳೂ ನಡೆದಿದ್ದವಂತೆ!. ಇವರ ಈ ಕ್ಲಿಷ್ಟಕರವಾದ ಸುರಂಗದ ಜಾಲವನ್ನು ಅರ್ಥಮಾಡಿ ಕೊಳ್ಳಲು ಅಮೆರಿಕನ್ನರು ಹರಸಾಹಸ ಪಡುತ್ತಾರೆ. B-52 ಎನ್ನುವ ಬಾಂಬರ್ ಏರೋಪ್ಲೇನಿನಿಂದ ಬಾಂಬುಗಳ ದಾಳಿ ನೆಡೆಸುತ್ತಾರೆ. ಈ ಬಾಂಬಿನ ದಾಳಿಯಲ್ಲಿ ಹತ್ತಾರು ವಿಮಾನಗಳನ್ನು ಕಳೆದು ಕೊಳ್ಳುತ್ತಾರೆ ಆದರೆ ವಿಯೆಟ್ನಾಮಿಗಳ ಸಾಹಸ ಪೃವೃತ್ತಿ ಕಿಂಚಿತ್ತೂ ಕುಂದಲಿಲ್ಲ. ಈ ಬಿಲಗಳ ಪ್ರವೇಶ ದ್ವಾರ ಎಷ್ಟು ಚಿಕ್ಕದೆಂದರೆ ಧಢೂತಿ ಅಮೆರಿಕನ್ನರು ಒಳಗೆ ಹೋಗುವುದು ದುಸ್ಸಾಹಸದ ಮಾತು. ಹಾಗೇ ಕೆಲವರು ಪ್ರಯತ್ನಿಸಿದವರು ಅವರು ಹರಡಿದ್ದ ಜಾಲದಲ್ಲಿ ಸಿಕ್ಕಿ ಹಾಕಿಕೊಂಡು ಪ್ರಾಣವನ್ನೇ ಕಳೆದು ಕೊಂಡರು. ಗ್ರೆನೇಡುಗಳನ್ನು ಎಸೆದರು, ಹೊಗೆ ತುಂಬಿದರು...ಒಳಗಿನವರು ಜಪ್ಪಯ್ಯ ಎನಲಿಲ್ಲ.
       ಸುಮಾರು ನಾಲ್ಕುಗಂಟೆಗಳ ಈ ಟೂರನ್ನು ಮುಗಿಸಿಕೊಂಡು ಬರುವಾಗ ವಿಯಟ್ನಾಮಿಗಳ ಈ ಸಾಹಸ ಪೃವೃತ್ತಿ ಕಣ್ಣಿಗೆ ಕಟ್ಟಿ ಬಂತು.
      
ಈ ಯುಧ್ಧದಿಂದ ಅಮೆರಿಕನ್ನರಿಗೆ ಸಿಕ್ಕಿದ್ದೇನು?
ನಾವೊಂದು ಪ್ರಬಲವಾದ ದೇಶ ಎನ್ನುವ ಅಹಂಕಾರ ಮುರಿದು ಬಿತ್ತು. ನಿಕ್ಸನ್ ಮಾಡಿದ ಕುತಂತ್ರದ ರಾಜಕಾರಣದಿಂದ ಜನ ಕೆರಳಿ ಹೋದರು. ಹತಾಶಗೊಂಡ ಅಮೆರಿಕದ ಯುವಜನ ದಂಗೆಯ ಪ್ರವೃತ್ತಿಗಿಳಿದು ಬಿಟ್ಟರು. ಹಿಪ್ಪಿಗಳ, ಮಾದಕ ವ್ಯಸನಿಗಳ, ರಾಕ್ ಸಂಗೀತದ, ಯುಧ್ಧವಿರೋದಿ ಸಿನೇಮಾಗಳ ಯುಗವೇ ಶುರುವಾಯಿತು. ಮಾಡಬಾರದ್ದು ಮಾಡಿದ್ರೆ ಆಗಬಾರದ್ದು ಆಗುತ್ತದೆ ಎನ್ನುವುದು ಇದಕ್ಕೇ.....


ವಿಯೆಟ್ನಾಮ್ ಡೈರೀಸ್,  ದಿನ-3

       ಸಿಟಿಯಲ್ಲಿ ಕಾಣುವ ಸಿರಿತನವೇನೊ ವಿಯಟ್ನಾಮಿನ ಪ್ರಗತಿಯನ್ನು ಸಾರಿ ಹೇಳುತ್ತಿದೆ, ಆದರೆ ಇಲ್ಲಿಯ ಹಳ್ಳಿಗಳನ್ನು ನೋಡೋಣ ಎಂದು ಮರುದಿನ ಸೋಫಿಟಲ್ ಹೋಟಲಿನ ಅಧ್ಭುತವಾದ ಉಪಹಾರದ ನಂತರ ಹೊರಟೆವು. ಮಿಕಾಂಗ್ ನದಿಯು ಸಮುದ್ರ ಸೇರುವ ಮುಖಜ ಭೂಮಿಯಕಡೆ ನಮ್ಮ ಪ್ರಯಾಣ. ಸುಮಾರು ಎರಡು ಗಂಟೆಯ ವಿಯಟ್ನಾಮಿನ ದಿವ್ಯ ದರ್ಶನ.
       ಇಲ್ಲಿನವರು ಧರಿಸುವ ಬಿಳಿ ಶಂಕಾಕಾರದ ಟೋಪಿಯನ್ನು 'ನೂನ್ ಲಾ' ಎಂದು ಹೇಳುತ್ತಾರೆ. ಬಿಸಿಲು ಮತ್ತು ಮಳೆಯಿಂದ ರಕ್ಷಣೆ ಕೊಡುವ ಈ ಶಿರಸ್ತ್ರಾಣ ಅವರ ಒಂದು ರಾಷ್ಟೀಯ ಸಂಕೇತವೂ ಹೌದು. ಹಸಿರು ಭತ್ತದ ಗದ್ದೆಗಳಲ್ಲಿ ಈ ನೂನ್ ಲಾ ಧರಿಸಿದ ರೈತರು ಕೆಲಸ ಮಾಡುವ ಚಿತ್ರಣ ನಯನ ಮನೋಹರ. ಇಲ್ಲಿಯ ಹಿಂಗಾರು ಮಳೆಯ ಬಿರುಸಿನ ಅನುಭವವೂ ಆಯಿತು. ಅಷ್ಟು ಜೋರಾಗಿ ಮಳೆ ಬರುತ್ತಿದೆ ಸ್ವಲ್ಪ ನಿಲ್ಲಿಸಿಕೊಂಡು ಹೋಗೋಣವೆಂದುದಕ್ಕೆ ನಮ್ಮ ಚಾಲಕ ಹಗುರವಾಗಿ ನಕ್ಕು,ಡ್ರೈವಿಂಗ್ನಲ್ಲಿ ನಿರತರಾದರು. ನಿರಂತರವಾಗಿ ನಡೆಯುವ ಮಳೆ ಬಿಸಿಲಿನ ಜೂಟಾಟದಲ್ಲಿ ಇಲ್ಲಿ ಏನೂ ನಿಲ್ಲುವುದಿಲ್ಲ....ದೋಣಿ ಸಾಗಿ ಮುಂದೆ ಹೋಗುತ್ತಿರುತ್ತದೆ.
ಮೀಕಾಂಗ್ ತಲುಪಿದ ನಮ್ಮ ಮುಂದಿನ ಪ್ರಯಾಣವೂ ದೋಣಿಯಲ್ಲೇ.
ಟಿಬೆಟ್ಟಿನಲ್ಲಿ ಹುಟ್ಟಿ ಆರು ದೇಶಗಳ ದಾಹವನ್ನು ತಣಿಸಿ,ಸುಮಾರು 4800 ಕಿಮೀಗಳ ಪ್ರವಾಸವನ್ನು ಮುಗಿಸಿ ದಕ್ಷಿಣ ವಿಯಟ್ನಾಮಿನಲ್ಲಿ ಸಮುದ್ರದಲ್ಲಿ ವಿಲೀನಗೊಳ್ಳುತ್ತದೆ...ಮೀಕಾಂಗ್ ನದಿ. ಒಂದು ತಟದಿಂದ ಇನ್ನೊಂದು ತಟಕ್ಕೆ ಸುಮಾರು ಮೂರು ಕಿಮೀಗಳ ಅಂತರ. ಮಧ್ಯ ಕೆಲವು ಜನಭರಿತ ಚಿಕ್ಕ ಚಿಕ್ಕ ದ್ವೀಪಗಳು. ಮೊದಲನೆ ಅಂತಹ ಒಂದು ದ್ವೀಪದಲ್ಲಿ ಸಮೃಧ್ಧವಾದ ಜೇನುಗಾರಿಕೆ. ಹೋದ ಕೂಡಲೇ ಜೇನುತಪ್ಪದ ಸಮಾರಾಧನೆ. ಜೇನು ಹಚ್ಚಿದ ಶುಂಟಿ,ಬಾಳೆಹಣ್ಣುಗಳು ಮತ್ತು ಶೇಂಗಾ ಮಿಟಾಯಿಗಳ ಸೇವನೆಯಾದ ಮೇಲೆ ಅಲ್ಲಿಯ ಬಡಕಟ್ಟು ಜನಾಂಗದ ಕಲಾವಿದರ ಸಂಗೀತ. ಅಲ್ಲಿಂದ ಹೊರಟು ಇನ್ನೊಂದು ದ್ವೀಪದ ಪರಿಚಯ. ಇಲ್ಲಿ ಹೆಂಗಸರೇ ನಡೆಸುವ ಉದ್ದನೆಯ ಬೋಟುಗಳಲ್ಲಿ ಆ ದ್ವೀಪದ ಒಳಗೇ ಇರುವ ಚಾನಲ್ಲುಗಳಂತೆ ಕಾಣುವ,ಇಕ್ಕೆಲಗಳಲ್ಲೂ ದಟ್ಟವಾಗಿ ಬೆಳದಿರುವ ತೆಂಗಿನ ಮರಗಳ ಮಧ್ಯ ಸುರಂಗದಂತೆ ಕಾಣುವ ಕಿರುದಾದ ನೀರ್ದಾರಿ. ಈ ಅನುಭವವಂತೂ ಅಧ್ಭುತವಾಗಿತ್ತು.
ಇದೊಂದು ಒಳ್ಳೆಯ ಪ್ರವಾಸ ಸ್ನೇಹಿ ದೇಶ. ಕೆಲವೊಮ್ಮೆ ಭಾಷೆಯ ತೊಡರಾಗಬಹುದಾದರೂ ಜನರು ಮಾತ್ರ ಸರಳ ಮತ್ತು ನಿರಂಹಕಾರಿಗಳು. ವಸತಿ ಮತ್ತು ಪ್ರಯಾಣದ ಖರ್ಚೂ ಸಹ ಕಡಿಮೇನೆ,ಇತರ ಈಶಾನ್ಯ ಏಶ್ಯಾ ದೇಶಗಳಿಗೆ ಹೋಲಿಸಿದರೆ. ಇಲ್ಲಿ ಪ್ರಕೃತಿ ಸೌಂದರ್ಯದ ಭರಪೂರ ಭಂಡಾರವೇ ಇದೆ. ಅನುಭವಿಸಲು ಸಮಯ ಮತ್ತು ಸಂಯಮವಿರಬೇಕಷ್ಟೆ. 

Vietnam Voyage

Vietnam Voyage

Liem, a chirpy young lady was the driver of the Mercedes car we hired from the airport to the hotel in Ho chi Minh city.
During the forty minutes of drive through the city, we stopped at a dozen traffic signals. At these junctions Liem was trying to strike a conversation with my daughter. A bit shy, may be because of her broken English but extremely friendly person.  She kept saying to Sunidhi that she has beautiful eyes. On reaching the hotel,she gave her card and said we can call her anytime for our travel needs. Meeting the first Vietnamese on our weeklong visit to Vietnam turned out to be a pleasant interaction.

           Some more pleasantries were exchanged during our check in at Sofitel hotel. This magnificent hotel is situated in the heart of the city. The front desk staff were cheerful and efficient. From  our room in the sixteenth floor the view of the city was amazing. The first thing we noticed was endless line of scooters and mopeds. On a straight road they looked quite a disciplined riders , but at the crossroads the scene appeared quite chaotic. Just then it started drizzling.  The scooters started to edge towards the road and stopped,pulled out a rain cape,most of them yellow,as if by a convention,and they rode on. Apparently it is a very common thing here and nothing seems  slow down or stop because of rains.
          
      Ho chi Minh city is named after the legendary Vietnamese leader Mr Ho chi Minh. It is the biggest city in Vietnam. For decades Vietnam was the battle field between communist in the North,supported by China and Soviet and in the South supported by America and France. Ravaged,splintered and demolished by the futile ideologies the native Vietnamese died in millions. Even Americans lost more than 58 thousands of its soldiers and civilians.  The whole misadventure looks such egocentric,barbaric act now in the hindsight.

     The Ho chi Minh city looks now, that it has put behind all that ghastly memories and marching ahead to prosperity. The infrastructure is of world-class. Economy is based on abundance of off shore oil, traditional wood industries, rice,coffee and small and medium industries.
  It is one of the most tourist friendly nation,not withstanding the limitations of language people are friendly. The stay and travel is cheaper compared to other southeast Asian countries. Women are visible in all activities of commerce. The famous Ben Than market is entirely managed by women. It is  a sight to behold , the colours on display, the variety of items on sale. The outer ring of shops are owned by the government departments. The handicrafts and textiles are the major commodities here. There is no bargaining here.  The inner ring of shops are owned by private traders. If you are good with bargaining skills,then only deal with them.
  The national dish is 'pho' which is essentially noodle soup with ones choice of anything under the sun....veggies, seafood, chicken and the works. It is served scalding hot and eaten anytime of the day.
  The drive around the countryside is even more beautiful. People in their signature headgear called ‘Noon la'..a conical shaped hat is ubiquitous all across Vietnam. The sight of farmers wearing such hats working in lush green Paddy fields is straight out of a huge canvas.
  Mekong River which originates in Bhutan plateau and flows through six countries covering nearly 4800 kms, joins South China Sea in the southern most part of Vietnam which is just about two hours drive from the city. The drive and the subsequent boat rides are memorable experiences.
  There are some tiny inhabited islands in the Delta region which are a big draw with the tourist population. Fish farms,crocadile farms,honey bee farms and with a huge floating market all connected by the boats only,does a roaring business,mostly managed by the women folk. Just half an boat ride, one reaches Cambodia from here.
  During intense fighting with the American forces, the Guerilla arm of Vietnamese built a huge, complicated network of underground tunnels to hide during the day and come out at night to fight,to tend to their farms or to replenish their supplies. These legendary tunnels are now a big tourist attractions. Hidden very cleverly in lush jungles,these tunnels catered for rest, recuperation, plan the next attack, train the young ones. Even weddings were conducted in these hideouts!
  America's desperation reached its nadir because of these tunnels. They were simply clueless. The strategic B- 52 bombers were deployed to smoke out the fighters but without avail. No wonder this war is known as the only war that America lost.
  The guide who was conducting a group of American tourists was making extra effort to rub it on to them with a mischievous glee on his face!
  Since our travel was confined to southern part of the Vietnam, in and around the beautiful city of HCMC, what we experienced was just a part of what it holds in abundance to keen travellers. 

ಎಂಟೆಬ್ಬೆಯ ಸಾಹಸಗಾಥೆ

ಎಂಟೆಬ್ಬೆಯ ಸಾಹಸಗಾಥೆ

"ಎಂಟೆಬ್ಬೆ" ಎನ್ನುವ ಒಂದು ವಿಚಿತ್ರವಾದ ಹೆಸರು,ಈಗಲೂ ವಿಶ್ವದಾದ್ಯಂತ ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ಹುಟ್ಟು ಹಾಕುತ್ತದೆ. ಬರೊಬ್ಬರಿ ನಲವತ್ತು ವರ್ಷಗಳ ಹಿಂದೆ ನಡೆದ, ಒಂದು ಊಹೆಗೂ ಮೀರಿದ ಸಾಹಸಗಾಥೆ ಅನೇಕ ಚಲನಚಿತ್ರಗಳಿಗೆ,ಪುಸ್ತಕಗಳಿಗೆ ಮತ್ತು ಚರ್ಚೆಗೆ ಎಡೆಮಾಡಿಕೊಟ್ಟಿದೆ. ಭಾರತವೂ ಸೇರಿದಂತೆ ಹಲವಾರು ಮಿಲಿಟರಿ ತರಬೇತಿ ಕೇಂದ್ರಗಳಲ್ಲಿ ಇದು ಪಾಠದ ವಿಷಯವೂ ಆಗಿದೆ.
ಏನು ಅಂತದ್ದು ನಡೆಯಿತು ಅಲ್ಲಿ. ಅಸಲಿಗೆ ಎಂಟೆಬ್ಬೆ ಎಂದರೆ ಏನು ಮತ್ತು ಎಲ್ಲಿದೆ ಎಂಬ ಹಲವಾರು ಪ್ರಶ್ನೆಗಳಿಗೆ ಈಗ ಸುಲಭವಾಗಿ ಗೂಗಲ್ಲಿನಲ್ಲಿ ಹಾಗು ಅಂತರ್ಜಾಲದ ಇತರೆ ವೆಬ್ ತಾಣಗಳಲ್ಲಿ ಸಿಗುತ್ತದೆ.
  ಆದರೆ 27 ಜೂನ್ 1976 ರಂದು ಇಸ್ರೇಲಿನ ಮಂತ್ರಿಮಂಡಲ 'ಎಂಟೆಬ್ಬೆ'ಎನ್ನುವ ಹೆಸರಿನಿಂದ ಕಕ್ಕಾಬಿಕ್ಕಿಯಾಗಿ, ವಿಶ್ವಭೂಪಟದಲ್ಲಿ ಹುಡುಕತೊಡಗಿದರು. ಅಂತೂ ಸಿಕ್ಕಿತು. ಮಧ್ಯ ಆಫ್ರಿಕದ ಉಗಾಂಡದಲ್ಲಿನ ಒಂದು ಏರ್ಪೊರ್ಟು. ಏರ್ ಫ್ರಾನ್ಸ್ ವಾಯುಯಾನದ ಒಂದು ವಿಮಾನ ಇಸ್ರೇಲಿನಿಂದ ಪ್ಯಾರಿಸ್ಸಿಗೆ ಹೋಗುವ ಮಾರ್ಗ ಮಧ್ಯದಲ್ಲಿ, ಪಾಲೆಸ್ಟೈನಿನ ಉಗ್ರರಿಂದ ಅಪಹರಿಸಲ್ಪಟ್ಟು,ಸುಮಾರು 250 ಜನ ಪ್ರಯಾಣಿಕರು ಮತ್ತು ವಿಮಾನದ ಸಿಬ್ಬಂದಿಯೊಂದಿಗೆ ಈ ಏರ್ರ್ಪೋರ್ಟಿಗೆ ಬಂದಿಳಿಯಿತು.  ಇದರಲ್ಲಿ ನೂರಕ್ಕೂ ಹೆಚ್ಚು ಇಸ್ರೇಲಿ ಪ್ರಯಾಣಿಕರಿದ್ದರು.  ಇಸ್ರೇಲಿನಿಂದ ಎಂಟೆಬ್ಬೆಗೆ  ಬರೊಬ್ಬರಿ 38೦೦ ಕಿಮೀಗಳ ದೂರ! ಎಲ್ಲಾ ಬಿಟ್ಟು ಇಷ್ಟುದೂರದ ಆಫ್ರಿಕಾದ ಏರ್ರ್ಪೋರ್ಟಿಗೆ ಯಾಕೆ ಅಪಹರಿಸಿಕೊಂಡರೆಂಬುದು ಸ್ವಲ್ಪ ಸಮಯದಲ್ಲೇ ಇಸ್ರೇಲಿಗೆ ತನ್ನ ಗುಪ್ತಚರ ಅಂಗ 'ಮೊಸ್ಸಾದ್' ನಿಂದ ತಿಳಿಯಿತು. ಅಲ್ಲಾಗಲೇ ಕಾಯುತ್ತಿದ್ದ ಇನ್ನೂ ನಾಲ್ಕು ಉಗ್ರರು ಇವರ ಜೊತೆ ಸೇರಿಕೊಂಡರು. ಇದರಲ್ಲಿ ಉಗಾಂಡದ ಐಲು ಸರ್ವಾಧಿಕಾರಿ ಇದಿ ಅಮಿನ್ ಮೇಲ್ನೋಟಕ್ಕೆ ಮಧ್ಯವರ್ತಿಯಂತೆ ಕಂಡರೂ, ಇದು ಅವನಿಂದಲೇ ರಚಿತವಾದ ಒಂದು ಪೂರ್ವ ನಿಯೋಜಿತ ಸಂಚು ಎಂದು ಇಸ್ರೇಲಿಗೆ ಮನದಟ್ಟಾಯಿತು. ಎಂಟೆಬ್ಬೆಯಲ್ಲಿ ಪ್ರಯಾಣಿಕರನ್ನು ಎರಡು ಗುಂಪು ಮಾಡಲಾಯಿತು. ಒಂದು ಗುಂಪು ಇಸ್ರೇಲಿಯರು ಮತ್ತೊಂದು ಗುಂಪು ಇತರರು. ಈ ಇತರರ ಗುಂಪನ್ನು ಮರುದಿನ ಇನ್ನೊಂದು ವಿಮಾನದಲ್ಲಿ ಪ್ಯಾರಿಸ್ಸಿಗೆ ಕಳುಹಿಸಲಾಯ್ತು. ಆಗ ಅರಿವಾಯ್ತು ಇವರ ಉದ್ದೇಶವೇನು ಎಂದು. ಇಸ್ರೇಲಿನಲ್ಲಿರುವ  ಸುಮಾರು ಐವತ್ತು ಜನ ಪ್ಯಾಲಸ್ತ್ತೇನಿ ಉಗ್ರರನ್ನು ಇನ್ನು ಮೂರು ದಿನಗಳೊಳಗೆ ಬಿಡುಗಡೆ ಮಾಡದಿದ್ದರೆ ಇಸ್ರೇಲಿಗಳನ್ನು ಹಂತ ಹಂತವಾಗಿ ಕೊಲ್ಲಲಾಗುವುದೆಂಬ ಬೆದರಿಕೆಯನ್ನು ಇಸ್ರೇಲಿಗೆ ತಲುಪಿಸಲಾಯ್ತು.
  ಇನ್ನು ಮೂರು ದಿನಗಳಲ್ಲಿ ಏನು ಮಾಡಲು ಸಾಧ್ಯ?  ಅಮೆರಿಕದ ಮುಖಾಂತರ ಈಜಿಪ್ಟಿನ ರಾಷ್ಟ್ರಾಧ್ಯಕ್ಷ ಅನ್ವರ್ ಸಾದತ್ ರವರ ಮುಖಾಂತರ ಹೇಳಿಸಿ ನೋಡಿದರು. ಉಹುಂ...ಜಪ್ಪಯ್ಯ ಎನ್ನಲಿಲ್ಲ. ಬೇಕಾದರೆ ಇನ್ನು ಎರಡು ದಿನಗಳ ಗಡವು ಕೊಡುತ್ತೇವೆ ಅಷ್ಟೆ, ಅಂತಿಮ ನಿರ್ಧಾರ ಏನು ಎಂಬುದನ್ನು ನಿರ್ಧರಿಸಲು ಇಸ್ರೇಲಿನ ಕ್ಯಾಬಿನೆಟ್ ದಿನ ರಾತ್ರಿ ಎನ್ನದೆ ಸಭೆ ನಡೆಸಿತು. ಅಂದಿನ ಇಸ್ರೇಲಿನ ಪ್ರಧಾನ ಮಂತ್ರಿಗಳು ಜೈಲಿನಲ್ಲಿರುವ ಪ್ಯಾಲಸ್ತೇನಿ ಉಗ್ರರನ್ನು ಬಿಡುಗಡೆ ಮಾಡುವುದೇ ಸೂಕ್ತ ಎಂದರೆ ಅದಕ್ಕೆ ರಕ್ಷಣಾಮಂತ್ರಿ ಆಕ್ಷೇಪವೆತ್ತಿದರು. ಒಂದು ಸಲ ನಾವು ಬಗ್ಗಿದರೆ ಇದೇ ತಂತ್ರ ಮುಂದುವರೆಯಬಹುದು ಎನ್ನುವ ಶಂಕೆ. ಆದರೆ ಎಲ್ಲರಿಗೂ ಈ ಕ್ರೂರಿ,ಮುಂಗೋಪಿ ,ಈದಿ ಅಮೀನನ ಪರಿಚಯ ಚೆನ್ನಾಗೇ ಗೊತ್ತಿತ್ತು,ಅದಕ್ಕೇ ಏನಾದರೊಂದು ನಿರ್ಧಾರ ತೆಗೆದು ಕೊಳ್ಳುವುದು ಒಳ್ಳೆಯದು, ಇಲ್ಲ ಅಂದರೆ  ಎಂಟೆಬ್ಬೆಯಲ್ಲಿರುವ ಇಸ್ರೇಲಿಯರ ಪ್ರಾಣಕ್ಕೆ ಅಪಾಯ ಖಚಿತ.
  ಈದಿ ಅಮೀನನ ವ್ಯಕ್ತಿತ್ವವೇ ಹಾಗೆ. ಇವನ ಬಗ್ಗೆ ಬರೆಯುವಾಗ ಕ್ರೌರ್ಯ ಮತ್ತು ಕಾಮಿಡಿ ಜೊತೆ ಜೊತೆಯಾಗಿ ಸಾಗುತ್ತವೆ. ಉಗಾಂಡದ 'ಕಕ್ವ' ಎನ್ನುವ ಪಂಗಡದಲ್ಲಿ ಹುಟ್ಟಿದ್ದೇ ಮೊದಲ ಕಾಮಿಡಿ! ನಾಲ್ಕನೇ ತರಗತಿಯಲ್ಲಿ ಫೇಲಾದ ಮೇಲೆ ಅಂದು ಉಗಾಂಡವನ್ನಾಳುತ್ತಿದ್ದ ಬ್ರಿಟಿಷ್ ಸೇನೆಯಲ್ಲಿ ಅಡುಗೆ ಸಹಾಯಕನಾಗಿ ಸೇರಿಕೊಳ್ಳುತ್ತಾನೆ. ಸೈನ್ಯಕ್ಕೆ ಹೇಳಿಮಾಡಿಸಿದ ಮೈಕಟ್ಟು,ಅಗಾಧವಾದ ಶಕ್ತಿ ಮತ್ತು ಹುಮ್ಮಸ್ಸು.  ಇವನ ಕ್ರೌರ ಪ್ರವೃತ್ತಿಯನ್ನು ಬರ್ಮ,ಸೊಮಾಲಿಯ ಮತ್ತು ಕೆನ್ಯಾದಲ್ಲಿ ನಡೆದ ಯುಧ್ಧದಲ್ಲಿ ಗಮನಿಸಿದ ಅಧಿಕಾರಿಗಳು ಕೆಲವೇ ವರ್ಷಗಳಲ್ಲಿ ಉಗಾಂಡ ಸೈನ್ಯದಲ್ಲಿ ಆಫೀಸರ್ ದರ್ಜೆಗೆ ಬಡ್ತಿ ಕೊಟ್ಟುಬಿಡುತ್ತಾರೆ. 1962 ನಲ್ಲಿ ಬ್ರಿಟಿಷರು ಉಗಾಂಡಕ್ಕೆ ಸ್ವಾತಂತ್ರ ಕೊಟ್ಟು ಹೋದಮೇಲೆ ಈದಿ ಅಮೀನ್ ತನಗೆ ಬೇಕೆನಿಸಿದ ಪಟ್ಟ ಕಟ್ಟಿಕೊಳ್ಳುತ್ತಾನೆ. ಅಂದಿನ ಉಗಾಂಡದ ಅಧ್ಯಕ್ಷ ಮಿಲ್ಟನ್ ಒಬೋಟ್ ಖಾಸಾ ದೋಸ್ತ್ ಆಗಿಬಿಡುತ್ತಾನೆ. ಇಬ್ಬರೂ ಸೇರಿಕೊಂಡು ಇನ್ನಿಲ್ಲದ ಹಾಗೆ ಕೊಳ್ಳೇಹೊಡೆಯತ್ತಾರೆ. 1971ರಲ್ಲಿ ಒಬೋಟ್ ನನ್ನೇ ಓಡಿಸಿ ತಾನೇ ಅಧ್ಯಕ್ಷನಾಗುತ್ತಾನೆ. ಭಾರತೀಯರು ಸೇರಿದಂತೆ ಸುಮಾರು 50 ಸಾವಿರ ಶ್ರೀಮಂತರ ಆಸ್ತಿಯನ್ನೆಲ್ಲಾ ಮಟ್ಟಗೋಲು ಹಾಕಿಕೊಂಡು ಅವರನ್ನು ದೇಶ ಬಿಟ್ಟು ಓಡಿಸುತ್ತಾನೆ. ತನಗೆ ತಾನೇ ಡಾಕ್ಟರೇಟ್,ಫೀಲ್ಡ್ ಮಾರ್ಶಲ್ ಪದವಿಯನ್ನು ಕೊಟ್ಟುಕಳ್ಳುತ್ತಾನೆ. ತನ್ನ ಯೂನಿಫಾರಮ್ಮನ್ನು ನಾನಾ ವಿಧದ ಪದಕಗಳಿಂದ ಅಲಂಕರಿಸಿಕೊಳ್ಳುತ್ತಾನೆ. ಇಂತಹ ಹಿಂಸಾಪ್ರವೃತ್ತಿಯ ಮೃಗವನ್ನು ಮಾಧ್ಯಮದವರು ಪೈಪೋಟಿಗೆ ಬಿದ್ದು ವೈಭವೀಕರಿಸುತ್ತಾರೆ. ಇದರಿಂದ ಇನ್ನಷ್ಟು ಹುರುಪುಗೊಂಡು ಇನ್ನಿಲ್ಲದ ಹೀನ ಕೃತ್ಯಗಳಿಗಿಳಿದು ಬಿಡುತ್ತಾನೆ. ಒಂದು ವರದಿಯ ಪ್ರಕಾರ ,ಇವನೊಬ್ಬ ನರಮಾಂಸ ಭಕ್ಷಕ,ತನಗಿರುವ ಹಲವಾರು ಹೆಂಡತಿಯರಲ್ಲಿ ಒಬ್ಬಳ ಅಂಗಾಂಗಗಳನ್ನೇ ತಿಂದುಬಿಟ್ಟಿದ್ದನಂತೆ,ರಾಕ್ಷಸ.

        1972 ರ ವರೆಗು ಈದಿ ಅಮಿನ್ ಇಸ್ರೇಲಿನ ಜೊತೆ ಸ್ನೇಹದಿಂದಲೇ ಇರುತ್ತಾನೆ. ಉಗಾಂಡದಲ್ಲಿ ಬಹುತೇಕ ಕಟ್ಟಡಗಳನ್ನು ಇಸ್ರೇಲಿ ಕಂಟ್ರಾಕ್ಟರ್ಗಳೇ ಕಟ್ಟುತ್ತಾರೆ. ಆದರೆ ಇವನ ದುರಾಸೆಗೆ ಮಿತಿ ಇರುವುದಿಲ್ಲ,ನನಗೆ ನಿಮ್ಮ ಜೆಟ್ ವಿಮಾನ ಬೇಕು,ಹಣದ ಸಹಾಯ ಬೇಕು ಎಂದು ದುಂಬಾಲು ಬೀಳುತ್ತಾನೆ. ಇಸ್ರೇಲು ನಿರಾಕರಿಸುತ್ತದೆ. ಆಗ ನೋಡಿ ಇಸ್ರೇಲಿನ ವಿರುದ್ದ ಯಾವ ಪರಿ ತಿರುಗಿ ಬೀಳುತ್ತಾನೆಂದರೆ ,ಇಸ್ರೇಲಿನಿಂದ ಪ್ಯಾರಿಸ್ಸಿಗೆ ಪ್ರಯಾಣಿಸುತ್ತಿದ ಏರ್ ಫ್ರಾನ್ಸ್  ವಿಮಾನ ಅಪಹರಣವಾಗಿ ,ಇವನ ದೇಶಕ್ಕೆ ಬರುವ ಹಾಗೆ ಪ್ಲಾನು ಹಾಕಿ,ಅದರಲ್ಲಿ ಪ್ಯಾಲಿಸ್ತೇನ್ ಮತ್ತು ಜರ್ಮನ್ ಉಗ್ರರನ್ನು ಸೇರಿಸಿಕೊಳ್ಳುತ್ತಾನೆ. ಈ ಒಂದು ಹಿನ್ನಲೆ ಇದ್ದುದರಿಂದ ಇಸ್ರೇಲಿನಲ್ಲಿ ಚಡಪಡಿಕೆ ಶುರುವಾಗುತ್ತದೆ.
        ಸುಮಾರು 3800 ಕಿಮೀ ದೂರದಲ್ಲಿರುವ ಎಂಟ್ಟೆಬ್ಬೆಯಲ್ಲಿ ಮಿಲಟರಿ ಕಾರ್ಯಾಚರಣೆಯನ್ನು ಮಾಡುವುದಾದರೂ ಹೇಗೆ? ಅಲ್ಲಿಗೆ ತಲುಪಲು ಸುಮಾರು 7-8 ಗಂಟೆಗಳ ವಿಮಾನಯಾನ. ಆಕ್ರಮಣ ತಂಡದಲ್ಲಿ ಎಷ್ಟು ಜನರಿರಬೇಕು. ಅಲ್ಲಿಯ ಕಾರ್ಯಾಚರಣೆ ಮುಗಿದಮೇಲೆ ವಾಪಸಾಗಲು ವಿಮಾನದ ಇಂಧನದ ಏರ್ಪಾಡು ಹೇಗೆ?
        ಇದನ್ನೆಲ್ಲಾ ಸಂಭಾಳಿಸುವ ತಂಡದ ನಾಯಕ ಯಾರು,ಎಂಬೆಲ್ಲಾ ವಿಚಾರಗಳನ್ನು ಕೂಲಂಕುಷವಾಗಿ ಪರಿಶೀಲಿಸಲು ಹಲವಾರು ಗಂಟೆಗಳ ಮೀಟಿಂಗ್ ನಡೆಯುತ್ತದೆ. ಈ ಪ್ರಕ್ರಿಯೆಗೆ ಒಂದು ತ್ವರಿತ ಚಾಲನೆ ನೀಡಲು   ಲೆ. ಕರ್ನಲ್ ಜೊನಾತನ್ ನಿತ್ಯಾನ್ಯೆಹು ಎಂಬ ನುರಿತ ಸಾಹಸಿಯನ್ನು ಆಯ್ಕೆ ಮಾಡಲಾಗುತ್ತದೆ. "ಆಪರೇಷನ್ ಥಂಡರ್ ಬೋಲ್ಟ್" ನ ಅಧ್ಯಾಯ ಶುರು.
        ಈ ತಂಡದಲ್ಲಿ ಕರ್ನಲ್ ಜೊನಾತನ್ ರ ತಮ್ಮನೂ ಇರುತ್ತಾರೆ. ಆದರೆ ಈ ತರಹದ ರಿಸ್ಕೀ ಕಾರ್ಯಾಚರಣೆಯಲ್ಲಿ ಒಂದೇ ಕುಟುಂಬದ ಎರಡು ಸದಸ್ಯರು ಬೇಡ ಎಂದು ನಿರ್ಧರಿಸಲಾಗುತ್ತದೆ. ಮನಸ್ಸಿಲ್ಲದ ಮನಸ್ಸಿನಿಂದ ತಮ್ಮ , ಬೆಂಜಮಿನ್ ನೆತನ್ಯಾಹು ಈ ಕಾರ್ಯಾಚರಣೆಯಿಂದ ಹೊರಗುಳಿಯತ್ತಾರೆ. ಅವರೆ ಇಂದಿನ ಇಸ್ರೇಲಿನ ಪ್ರಧಾನಿ!


ಉಗಾಂಡದೆಡೆ ಉಡಾಣ

        1948ರಲ್ಲಿ ಜನ್ಮಪಡೆದು,ಹುಟ್ಟಿನಿಂದಲೂ ಭಯೋತ್ಪಾದನೆಯನ್ನು ನಿರಂತರವಾಗಿ ಹೆದರಿಸುತ್ತಿರುವ ಇಸ್ರೇಲ್ ಹೇಗೆ ನಿಭಾಯಿಸುತ್ತದೆ ಈ ಪೀಡೆಯನ್ನು?
    ಸಿಂಪಲ್, ಭಯೋತ್ಪಾದನೆಯ ಫ್ಯಾಕ್ಟರಿಗೆ ನುಗ್ಗಿ ,ಉತ್ಪಾದನೆಯ ಹಂತದಲ್ಲೇ ಬಗ್ಗುಬಡಿಯುವುದು. ಈ ಹಿಂದೆ ಇರಾಕಿನ ಒಸಿರಾಕ್ ಅಣುಸ್ಥಾವರದ ಬಗ್ಗೆ ಒದಿದ್ದು ನೆನಪಿರಬಹುದು. ಇನ್ನೇನು ಹತ್ತು ದಿನಗಳಲ್ಲಿ ಅಣುಬಾಂಬು ತಯಾರಿಸುವ ಸಾಮರ್ಥ್ಯವನ್ನು ಇರಾಕ್ ಪಡೆದೇ ಬಿಡ್ತು ಎನ್ನೊಷ್ಟು ಹೊತ್ತಿಗೆ , ರಾಜಾರೋಷವಾಗಿ ಆ ಅಣುಸ್ಥಾವರವನ್ನು ಸಣ್ಣ ಸಣ್ಣ ಪೀಸುಗಳಾಗಿ ಮಾಡಿದರು. ಅರಬರೂ ಸೇರಿದಂತೆ ಹಲವಾರು ದೇಶಗಳು ಲಬೋ ಲಬೋ ಎಂದು ಬಾಯಿಬಡಿದು ಕೊಂಡರು. ಅವರು ಅದರ ಬಗ್ಗೆ ಏನಾದರೂ ತಲೆಕೆಡಿಸಿ ಕೊಂಡರಾ? ಇಲ್ಲ.
    ಇದು ಇಸ್ರೇಲಿನ ಸ್ಪೆಷಾಲಿಟಿ. ಅವರು ಒಂದು ಸಲ ತಮ್ಮ ಕಾರ್ಯಾಚರಣೆಯ ಬಗ್ಗೆ ನಿರ್ಧಾರ ತೆಗೆದುಕೊಂಡರೆಂದರೆ ಮುಗಿಯಿತು. ಬೇರೆದೇಶಗಳ, ಅಮೆರಿಕಾದ ಅಥವಾ ವಿಶ್ವಸಂಸ್ಥೆಯ ಅಭಿಪ್ರಾಯಗಳ ಬಗ್ಗೆ ತಲೆಕೆಡಿಸಿ ಕೊಳ್ಳುವುದೇ ಇಲ್ಲ.
  ಇನ್ನೊಂದು ಇಸ್ರೇಲಿಯರ ವೈಶಿಷ್ಟ್ಯವೆಂದರೆ ತಮ್ಮ ದೇಶದ ಬಗ್ಗೆ ಇರುವ ಗಾಢವಾದ ಅಭಿಮಾನ,ಗೌರವ. ಪರಸ್ಪರರಲ್ಲಿರುವ ಭಾಂಧವ್ಯ,ಅಚಲವಾದ ವಿಶ್ವಾಸ,ಇವೇ ಅವರನ್ನು ವಿಶ್ವದಲ್ಲಿ ವಿಷೇಶ ಸ್ಥಾನದಲ್ಲಿಟ್ಟಿರುವುದು. ಇದಕ್ಕಾಗೇ ಅವರನ್ನು ಅಭಿಮಾನಿಸುವುದು ಮತ್ತು
ಇದಕ್ಕಾಗಿಯೆ ಅವರನ್ನು ದ್ವೇಷಿಸುವುದು ಕೂಡ.

       ಈದಿ ಅಮೀನನ ಉಗಾಂಡದ ಎಂಟೆಬ್ಬೆಯಲ್ಲಿ ಒತ್ತೆಯಾಳುಗಳಾಗಿ ಸಿಲುಕಿಕೊಂಡಿರುವ ಸುಮಾರು ನೂರು ಜನ ಇಸ್ರೇಲಿಯರನ್ನು ಬಿಡುಗಡೆ ಮಾಡಲು ಕುಳಿತಿದ್ದ ತುರ್ತು ಸಭೆಯಲ್ಲಿ ಎರಡು ಗುಂಪುಗಳು ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ಪರ ವಿರೋದದ ವಾದ ಮಾಡುತ್ತಿರುವಾಗಲೇ, ರಕ್ಷಣಾ ಮಂತ್ರಿ ಮಿಲಿಟರಿಗೆ  ಕಣ್ಣು ಮಿಟುಕಿಸಿ..Go ahead ಎಂದೇ ಬಿಟ್ಟರು.
      ಜೊನಾತನ್ ನ್ಯೇಟನ್ನಾಹುವಿನ ಮುಖಂಡತ್ವದಲ್ಲಿ ತಯಾರಿಗಳು ಭರದಿಂದ ನಡೆಯಲು ಶುರುವಾಯಿತು. ಎಂಟೆಬ್ಬೆಯ ಏರ್ಪೋರ್ಟಿನ ಕಟ್ಟಡಗಳನ್ನು ಕೆಲವೇ ವರ್ಷಗಳಹಿಂದೆ ಕಟ್ಟಿದ ಕಂಟ್ರಾಕ್ಟರು ಇಸ್ರೇಲಿ! ಕೆಲವೇ ಗಂಟೆಗಳಲ್ಲಿ ಅವರಲ್ಲಿದ್ದ ನಕಾಶೆಯ ಸಹಾಯದಿಂದ ಒಂದು ಮಾದರಿಯನ್ನ ಮರಳಿನಲ್ಲಿ ಕಟ್ಟೇಬಿಟ್ಟರು. ಆಕ್ರಮಣದ ಕಮಾಂಡೊ ದಳಕ್ಕೆ ಉಂಗಾಡದ ಸೇನೆಯ ಮಾದರಿಯ ಡ್ರೆಸ್ಸನ್ನು ರಾತ್ರೊರಾತ್ರಿ ಹೊಲೆಯಲಾಯಿತು.  
         ಗುಪ್ತಚರ ಮಾಹಿತಿಯ ಪ್ರಕಾರ  ಈದಿ ಅಮಿನನ ಕಪ್ಪು ಬಣ್ಣದ ಮರ್ಸಿಡೀಸ್ ಕಾರಿನಂತಹದೇ ಒಂದು ಕಾರು ಮತ್ತು ಅಲ್ಲಿಯ ಮಿಲಿಟರಿಯವರು ಉಪಯೋಗಿಸುವ ಮಾದರಿಯ ಮೂರು ವಾಹನಗಳು,ಒಟ್ಟು ನಾಲ್ಕು ವಾಹನಗಳನ್ನು ಮೊದಲನೆ C-130  ಹರ್ಕ್ಯುಲಿಸ್ ಏರೋಪ್ಲೇನಿನಲ್ಲಿ ಲೋಡ್ ಮಾಡಲಾಯಿತು. ವಿದೇಶಕ್ಕೆ ಹೋದ ಈದಿ ಅಮಿನ್ ಮರಳಿ ಬರುತ್ತಿದ್ದಾನೆನ್ನವ ನಾಟಕದ ರಂಗತಾಲೀಮಿನ ರಚನೆಯಾಯ್ತು.  ಕಮಾಂಡೊ ಕಾರ್ಯಾಚರಣೆಯ ತಾಲೀಮಿನಲ್ಲಿ ನಿಮಿಷ ನಿಮಿಷಕ್ಕೂ ನಡೆಯಬಹುದಾದ ಘಟನೆಗಳ ಬಗ್ಗೆ ಊಹಿಸಿ,ಯೋಚಿಸಿ,ಪರಾಂಬರಿಸಿ,ಚರ್ಚಿಸಿ ತರಬೇತಿಯಲ್ಲಿ ಅಳವಡಿಸಿಕೊಂಡರು. ಈ ಹೆಜ್ಜೆ ಯಡವಟ್ಟಾದರೆ ಅದಕ್ಕೆ ಪರ್ಯಾಯವೇನು ಎಂಬುದೆಲ್ಲಾ ಪರಿಗಣಿಸಲಾಯಿತು. ಈ ಕಾರ್ಯಾಚರಣೆಯ ಬುನಾದಿ ...ಅನಿರೀಕ್ಷಿತತೆ, ಅಲ್ಲಿರುವವರು ಬರೀ ಅರಬ್ ವಿಮಾನ ಅಪಹರಣಕಾರೇ ಅಲ್ಲ ಉಗಾಂಡದ ಸೈನಿಕರೂ ಆಸುಪಾಸಿನಲ್ಲಿದ್ದಾರೆಂದು ತಿಳಿದು ಬಂತು. ಪಿಸ್ತೊಲುಗಳಿಗೆ ಸೈಲೆನ್ಸರ್ ಅಳವಡಿಸಲಾಗಿತ್ತು. ಬಂದೂಕಿನ ಫೈರಿಂಗ್ ಕೊನೆಯಹಂತದ ಆಕ್ರಮಣಕ್ಕೆ ಮಾತ್ರ.
  ಮೊದಲಿಂದಲೂ ಅವರು ಉಗಾಂಡದ ಸೈನಿಕರಂತೇ ವರ್ತಿಸಬೇಕು..ಅಪಹರಣಕಾರರನ್ನು ಸೆರೆ ಹಿಡಿಯುವವರೆಗೂ ಅಥವಾ ನಿಷ್ಕ್ರಿಯೆ ಗೊಳಿಸುವವರೆಗು. ಅಲ್ಲಿಗೆ ಹೋಗುತ್ತಿರುವುದು ನಮ್ಮ ಇಸ್ರೇಲಿಯರನ್ನು ಉಳಿಸುವುದಕ್ಕೆ ಉಂಗಾಡ ಸೈನ್ಯದ ಜೊತೆ ಯುಧ್ಧ ಮಾಡುವುದಕ್ಕಲ್ಲ ಎಂಬುದನ್ನೂ ಎಲ್ಲರಿಗೂ ಮನವರಿಕೆಯಾಗುವಂತೆ ರಿಹರ್ಸಲ್ ನಡೆಸಲಾಯಿತು.
    ಎಂಟೆಬ್ಬೆಗೆ ಹೊರಡಲು ತಯಾರಾಗಿದ್ದ ಒಟ್ಟು ನಾಲ್ಕು C-130 ಹರ್ಕ್ಯುಲಿಸ್ ಎಲ್ಲಾ ಪೈಲಟ್ಗಳಿಗೆ ನಡುರಾತ್ರಿಯ ಕಗ್ಗತ್ತಿನಲ್ಲಿ ಯಾವ ಬೆಳಕಿನ ಸಹಾಯವಿಲ್ಲದೆ ಭೂಸ್ಪರ್ಶ ಮಾಡುವ ತರಬೇತಿಯನ್ನು ಕೊಡಲಾಯಿತು. ನಡುರಾತ್ರಿಯ ನಿಷಬ್ದದಲ್ಲಿ  ನಾಲ್ಕು ಏರೋಪ್ಲೇನುಗಳ  ಶಬ್ದವನ್ನು ಕಡಿಮೆ ಮಾಡಲು ಏರ್ಪೋರ್ಟು ಹತ್ತಿರವಾಗತ್ತಿದ್ದಂತೆ ಎರಡು ಎಂಜಿನ್ನುಗಳನ್ನು ನಿಷ್ಕ್ರಿಯಗೊಳಿಸುವ ಪ್ರಯೋಗವನ್ನೂ ನಡೆಸಲಾಯಿತು. ನಾಲ್ಕನೇ ವಿಮಾನದಲ್ಲಿ ಒಂದು ಚಿಕ್ಕ ಆಸ್ಪತ್ರೆಯಂತಹ ವ್ಯವಸ್ಥೆಯನ್ನು ಬಿಟ್ಟರೆ ಒತ್ತೆಯಾಳುಗಳಾಗಿದ್ದ ಇಸ್ರೇಲಿಯರನ್ನು ಕರೆದುಕೊಂಡು ಬರಲು ಖಾಲಿಯಾಗೇ ಇಡಲಾಯಿತು.
    ಎಂಟೆಬ್ಬೆಯಲ್ಲಿ ಈಗಾಗಲೇ ಆರು ದಿನಗಳ ನರಕಯಾತನೆಯನ್ನು ಅನುಭವಿಸಿದ್ದ ಇಸ್ರೇಲಿಯರು ಅವರಿಗಾಗಿ ಕಾದಿರಿಸಿದ್ದ ನಾಲ್ಕನೇ ಏರೋಪ್ಲೇನಿನಲ್ಲಿ ...ಎಲ್ಲರೂ ಬಂದರೇ?
    3 ಜುಲೈ 1976, ಎಂಟೆಬ್ಬೆಯ ಕಾರ್ಯಾಚರಣೆಯಲ್ಲಿ ಭಾಗವಹಿಸುವ ಎಲ್ಲಾ ಕಮಾಂಡೋಗಳು, ಪೈಲಟ್ಗಳು,ಎಂಜಿನಿಯರ್ಗಳು, ವೈರ್ಲೆಸ್,ವೈದ್ಯಕೀಯ ಸಿಬ್ಬಂದಿ ಎಲ್ಲರನ್ನೂ ಜಮಾಯಿಸಿ ಅಂತಿಮವಾಗಿ ಕರ್ನಲ್ ನೆತನ್ಯಾಹುರ ನೇತೃತ್ವದಲ್ಲಿ ತಾಲೀಮು ನಡೆಸಲಾಗುತ್ತದೆ. ಇಲ್ಲಿ ಒಂದು ಚಿಕ್ಕ ವಿವಾದವೆದ್ದು ಬಿಡುತ್ತದೆ. ಅದೇನೆಂದರೆ ಮೊದಲನೇ ಗೇಟಿನಲ್ಲಿರಬಹುದಾದ ಉಗಾಂಡದ ಗಾರ್ಡುಗಳನ್ನು ಹೇಗೆ ನಿಭಾಯಿಸುವುದು? ಅವರನ್ನು ಬರೀ ನಿಷ್ಕ್ರಿಯಗೊಳಿಸಬೇಕೇ ಅಥವಾ ಮುಗಿಸಿಬಿಡಬೇಕೇ ಈ ವಿವಾದ ನಿಖರವಾಗಿ ಬಗೆಹರಿಯುವುದಿಲ್ಲ. ಸರಿ ಅಲ್ಲೇ ನೋಡೋಣ ಎಂದು ಬಿಡುತ್ತಾರೆ ಕಮಾಂಡೊಗಳ ಮುಖಂಡ.
     ಇದೊಂದನ್ನು ಬಗೆಹರಿಸಿಕೊಂಡಿದ್ದರೆ?
    
    ಮಿಲಿಟರಿ ಕಾರ್ಯಾಚರಣೆಯಲ್ಲಿ ಕೆಲವು ಸಣ್ಣ ಸಾಂಧರ್ಭಿಕ ನಿರ್ಧಾರಗಳೂ ಎಷ್ಟು ಪ್ರಾಮುಖ್ಯತೆ ಪಡೆಯುತ್ತವೆಯಲ್ಲವೇ?
    ಮಧ್ಯಾಹ್ನ 2.30. ಇಸ್ರೇಲ್ ಕ್ಯಾಬಿನೆಟ್ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ಇನ್ನೂ ಯಾವ ನಿರ್ಣಯವನ್ನೂ ತೆಗೆದುಕೊಂಡಿಲ್ಲ!!
    ಎಂಟುಗಂಟೆಗಳ ವಾಯುಯಾನದ ನಂತರ ಮಧ್ಯರಾತ್ರಿಯ ಕಾರ್ಯಾಚರಣೆಯನ್ನು ಮಾಡಲು ಎಂಟೆಬ್ಬೆಯನ್ನು ತಲುಪಬೇಕೆಂದರೆ ಸಂಜೆ ನಾಲ್ಕರ ಆಸುಪಾಸಿಗೆ ಈ ವಿಮಾನಗಳು ಇಸ್ರೇಲಿನಿಂದ ನಿರ್ಗಮಿಸಲೇ ಬೇಕು...ಆದರೆ ಈ ಕಾರ್ಯಾಚರಣೆಗೆ ಇನ್ನು ಅಧಿಕೃತವಾಗಿ ಪರವಾನಗಿಯೇ ದೊರೆತಿಲ್ಲ. ಎಂತಹ ವಿಪರ್ಯಾಸ.
    ಇನ್ನೊಂದು ಆತಂಕದ ಸಮಾಚಾರವೂ ಇಸ್ರೇಲಿನ ಗುಪ್ತಚರ ಇಲಾಖೆ 'ಮೊಸ್ಸಾದ್'ನಿಂದ ಬರುತ್ತದೆ. ಅದೆಂದರೆ, ಮೌರಿಶಿಯಸ್ ದೇಶದ ಪ್ರವಾಸ ಮುಗಿಸಿಕೊಂಡು ಈದಿ ಅಮೀನ್ ಆ ರಾತ್ರಿ ಉಗಾಂಡಕ್ಕೆ ಮರಳುತ್ತಿದ್ದಾನೆ. ಆ ಕ್ರೂರ ಮುಂಗೋಪಿ ಇಸ್ರೇಲ್ ಇನ್ನೂ ಪ್ರತಿಕ್ರಯಿಸಿಲ್ಲ ಎಂದು ತಿಳಿದರೆ ಏನು ಮಾಡುತ್ತಾನೊ?
    ಈ ಸಂಧರ್ಭದಲ್ಲಿ ಮಿಲಿಟರಿ ಅಧಿಕಾರಿಗಳು ಸಾಧಕ ಭಾದಕಗಳನ್ನು ಚರ್ಚಿಸಿ ಒಂದು ನಿರ್ಧಾರಕ್ಕೆ ಬರುತ್ತಾರೆ.
    ನಾವಂತೂ ಹೊರಡುತ್ತೇವೆ, ನಾಲ್ಕು ಗಂಟೆಗಳ ವಿಮಾನಯಾದನಂತರ ಒಂದು  "Point of no return" ತಲುಪುವುದರೊಳಗೆ ಕ್ಯಾಬಿನೆಟ್ಟಿನ ಅನುಮೋದನೆ ದೊರೆತರೆ ಮುಂದುವರೆಯುತ್ತೇವೆ ಇಲ್ಲದಿದ್ದರೆ ಮರಳಿಬರುತ್ತೇವೆ. ಅದಕ್ಕೆ ರಕ್ಷಣಾಮಂತ್ರಿಯವರು ಒಪ್ಪುತ್ತಾರೆ.
    ಆಪರೇಷನ್ ಥಂಡರ್ ಬೋಲ್ಟ್ ಗಗನಕ್ಕೇರುತ್ತದೆ...ಅದರ ಜೊತೆಗೇ  ಇಸ್ರೇಲಿನ ಭವಿಷ್ಯಕೂಡ.
      

ಮರಳಿ ಮನೆಗೆ

          ಇಸ್ರೇಲಿನ ದಾಳಿಗಳ ಯಶಸ್ಸಿನ ರಹಸ್ಯ ಅವರ ಅದ್ವಿತೀಯ ಬೇಹುಗಾರಿಕೆಯ ಜಾಲ.  ಪ್ರಪಂಚದ ಮೂಲೆ ಮೂಲೆಗಳಲ್ಲೂ ಇವರು ಹರಡಿ ಕೊಂಡಿದ್ದಾರೆ.
ಅರಬ್ ದೇಶಗಳಲ್ಲಿ,ಆಫ್ರಿಕಾದಲ್ಲಿ,ಅಮೆರಿಕಾದಲ್ಲಿ ಎಲ್ಲೆಲ್ಲೂ. ಹೋಟೆಲುಗಳಲ್ಲಿ ವೈಟರುಗಳಾಗಿ, ಟೈಲರುಗಳಾಗಿ,ಮೋಚಿಗಳಾಗಿ,ಯಾವ ಕೆಲಸವಾದರೂ ಸರಿ,ಮೈಯೆಲ್ಲಾ ಕಣ್ಣಾಗಿಸಿ ಮಾಹಿತಿ ಕಲೆ ಮಾಡಿ ಇಸ್ರೇಲಿಗೆ ತಲುಪಿಸುವುದೇ ಇವರ ಮುಖ್ಯ ಉದ್ದೇಶ. ಕೆಲವು ಸಲ 'ಟಾರ್ಗೆಟ್' ಗಳನ್ನು ನಿಷ್ಕ್ರಿಯಗೊಳಿಸುವುದನ್ನೂ ಸಹ ಲೀಲಾಜಾಲವಾಗಿ ಮಾಡಿ ಮುಗಿಸಿ ಬಿಡುತ್ತಾರೆ! ಇವರ ಮಾನಸಿಕ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದು ಸುಲಭದ ಮಾತಲ್ಲ. ಚಾಣಾಕ್ಷರು,ನಿರ್ದಯಿಗಳು,ಏಕಾಂಗಿಗಳು ಆದರೆ ತಮ್ಮ ದೇಶದ ಬಗ್ಗೆ ಇರುವ ಅಚಲ ಅಭಿಮಾನವೇ ಇವರಿಗಿರುವ ಸ್ಪೂರ್ತಿ.
    ಎಂಟೆಬ್ಬೆಯಕಾರ್ಯಾಚರಣೆಯಲ್ಲಿ ಇವರು ನಿರಂತರವಾಗಿ ಕಳುಹಿಸುತ್ತಿದ್ದ ಮಾಹಿತಿಯಾಧಾರದ ಮೇಲೇ ಎಲ್ಲವೂ ನಿರ್ಭರವಾಗಿತ್ತು. ಇಸ್ರೇಲಿ ಒತ್ತೆಯಾಳುಗಳನ್ನು ಎಲ್ಲಿಟ್ಟಿದ್ದಾರೆ, ಅಪಹರಣಕಾರು ಎಷ್ಟು ಜನರಿದ್ದಾರೆ,ಅವರ ವಿವರಣೆ. ಏರ್ಪೋರ್ಟಿನ ವಿವರಣೆ,ಎಷ್ಟು ಬಾಗಿಲುಗಳಿವೆ,ಎಷ್ಟು ಮೆಟ್ಟಿಲುಗಳಿವೆ, ಈ ಸಣ್ಣ ಸಣ್ಣ ವಿವರಗಳೂ ತುಂಬ ಮಹತ್ವದ ವಿಷಯ. ಇನ್ನೊಂದು ಕಡೆಗಣಿಸಲಾಗದ ವಿಷಯವೆಂದರೆ ಯಹೂದಿಗಳು ಮಾರವಾಡಿಗಳ ತರಹ, ಚಿನ್ನ,ಬೆಳ್ಳಿ,ವಜ್ರಗಳ ವ್ಯಾಪಾರ ಇವರಿಗೆ ಅನುವಂಶೀಯವಾಗಿ ಬಂದ ಬಳುವಳಿ, ಹಾಗಾಗಿ ಅಫ್ರಿಕಾದ ದೇಶಗಳಲ್ಲಿ ಇವರ ಪ್ರಭಲತೆಯನ್ನು ಅಲ್ಲಿಯ ಸರಕಾರವೂ ಒಪ್ಪಿಕೊಳ್ಳುತ್ತದೆ. ಎಂಟೆಬ್ಬೆಯ ಕಾರ್ಯಾಚರಣೆಯಲ್ಲಿ ಇದೊಂದು ಮಹತ್ತರ ಅಂಶ.
    ಈ ಶ್ರೀಮಂತ ಇಸ್ರೇಲಿಯರ ವರ್ಚಸ್ಸಿನಿಂದಾಗಿ ಉಗಾಂಡದ ಪಕ್ಕದ ದೇಶ ಕೆನ್ಯಾ , ಇಸ್ರೇಲಿ ಸೈನ್ಯದ ಕಾರ್ಯಾಚರಣೆಗೆ ಸಹಾಯ ಮಾಡಲು ಒಪ್ಪಿಕೊಂಡಿತು. ಅದರಂತೆ ಸೈನ್ಯದ ಉನ್ನತ ಅಧಿಕಾರಿಗಳು ಬೋಯಿಂಗ್ 707 ವಿಮಾನದಲ್ಲಿ ಬಂದಿಳಿದುಬಿಟ್ಟರು. ಪ್ಲಾನಿನ ಪ್ರಕಾರ ಇಸ್ರೇಲಿನಿಂದ ಹರ್ಕ್ಯುಲಿಸ್ ಉಗಾಂಡಕ್ಕೆ ತಲುಪುವವಷ್ಟು ಹೊತ್ತಿಗೆ ವಿಮಾನದಲ್ಲಿ ಸ್ವಲ್ಪವೇ ಇಂಧನ ಉಳಿದು ಕೊಂಡಿರುತ್ತದೆ. ಎಂಟೆಬ್ಬಯ ಕಾರ್ಯಾಚರಣೆ ಮುಗಿಸಿ ಅಲ್ಲಿಂದ ಕೆನ್ಯಾದ ನೈರೋಬಿಯಲ್ಲಿಳಿದು ಇಂಧನ ತುಂಬಿಸಿಕೊಂಡು ಇಸ್ರೇಲಿಗೆ ಮರುಳುವುದೆಂದು ಒಪ್ಪಂದವಾಯಿತು.
    ನಾಲ್ಕು ಹರ್ಕ್ಯುಲಿಸ್ ವಿಮಾನಗಳು ಶತ್ರುದೇಶದ ರಡಾರುಗಳಿಂದ ಕಣ್ತಪ್ಪಿಸಿ ಉಗಾಂಡ ತಲುಪುವಷ್ಟರಲ್ಲಿ ಮಧ್ಯರಾತ್ರಿಯ ಹನ್ನೆರಡು ಗಂಟೆ. ಮೊದಲನೆಯ ವಿಮಾನ ಭೂಸ್ಪರ್ಶ ಮಾಡಿ ರನ್ ವೇಯ ಕೊನೆಯನ್ನು ತಲುಪಿತು. ಪ್ಲೇನು ಇನ್ನೂ ಚಲಿಸುತ್ತಿದ್ದಾಗಲೇ ಕೆಲವು ಕಮಾಂಡೊಗಳು ಹೊರಗೆ ಧುಮಿಕಿ ರನ್ ವೇಯ ಇಕ್ಕೆಲಗಳಲಲ್ಲಿ ಬೆಳಕಿನ ಬೀಕನ್ನುಗಳನ್ನು ಇಟ್ಟು ಕೊಳ್ಳುತ್ತಾ ಹೋದರು. ಇದರಿಂದ ಇತರೆ ಮೂರು ವಿಮಾನಗಳು ಸುಸೂತ್ರವಾಗಿ ಭೂಸ್ಪರ್ಶ ಮಾಡಿದವು. ವಿಮಾನದಿಂದ ಭರ್ ಭರ್ರೆನ್ನುತ್ತಾ ಕಮಾಂಡೋಗಳು ಕಾರುಗಳನ್ನು ಡ್ರೈವ್ ಮಾಡಿಕೊಂಡು ಗೇಟಿನ ಕಡೆ ದೌಡಾಯಿಸಿದರು. ಎಲ್ಲವೂ ರಿಹರ್ಸಲ್ ಮಾಡಿದಂತೇ ನಡೆಯುತ್ತಿತ್ತು.
    ಗೇಟಿನಲ್ಲಿದ್ದ ಇಬ್ಬರು ಗಾರ್ಡುಗಳು ನಿರೀಕ್ಷಿಸಿದಂತೆ 'stop'ಎಂದು ಗುಡುಗಿದರು, ಅದು ಅವರ procedure.  ಈದಿ ಅಮೀನೇ ಇರಬಹುದೆಂದು ಗೇಟಿಗೆ ಹಾಕಿದ್ದ ಅಡ್ಡಕಂಬಿಯನ್ನು ಇನ್ನೇನು ಎತ್ತ ಬೇಕು ಅನ್ನುವಷ್ಟರಲ್ಲಿ ಹತ್ತಿರಕ್ಕೆ ಸಲ್ಯೂಟ್ ಮಾಡಲು ಬಂದ ಗಾರ್ಡ ಕಣ್ಣುಕಿರಿದಾಗಿಸಿ ಮುಂದಿನ ಸೀಟಿನಲ್ಲಿದ್ದ ವ್ಯಕ್ತಿಯನ್ನು ಅನುಮಾಸ್ಪದವಾಗಿ ನೋಡುತ್ತಲೇ ಟ್ರಿಗರಿನ ಕಡೆ  ಕೈ ಚಲಿಸಲು  ಶುರುವಾಯ್ತು.  ಇನ್ನು  ತಡಮಾಡಿದರೆ ಶೂಟ್ ಮಾಡಿಬಿಡುತ್ತಾರೆಂದು ,ಸೈಲೆನ್ಸರ್ ಅಡವಳಿಸಿದ ಪಿಸ್ತೊಲಿನಿಂದ ಕ್ಷಣಾರ್ದದಲ್ಲಿ ನೆಲಕ್ಕುರಿಳಿಸಿಬಿಟ್ಟರು ಕರ್ನಲ್ ನೆತನ್ಯಾಹು. ಆದರೆ ಅವರಿಬ್ಬರೂ ಸತ್ತಿರಲಿಲ್ಲ . ಇದನ್ನು ಗಮನಿಸಿದ ಹಿಂದಿನಿಂದ ಬಂದ ಕಮಾಂಡೊ, ಹೀಗೆ ಇವರನ್ನು ಬಿಟ್ಟರೆ ಎಚ್ಚರವಾದಮೇಲೆ ಹಿಂದಿನಿಂದ ಆಕ್ರಮಣ ಮಾಡುವ ಸಾಧ್ಯತೆ ಇರುತ್ತದೆ ಎಂದು ,ಬಂದೂಕಿನಿಂದ ಡಮಾರ್ ಎಂದು ಗುಂಡು ಹಾರಿಸಿ ಮುಗಿಸೇಬಿಟ್ಟ.
    ಇಡೀ ಕಾರ್ಯಾಚರಣೆಯ ಮೂಲಮಂತ್ರವಾಗಿದ್ದ "Surprise Element" ಅನಿರೀಕ್ಷತತೆಯ ತಂತ್ರ ,ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೂ ಈ ಗೌಪ್ಯತೆಯನ್ನು ಆದಷ್ಟು ಕಾಪಾಡಿಕೊಂಡಿರಬೇಕಾದ ನಿಯಮ ಅಲ್ಲಿಗೆ ಮುಗಿದೇಬಿಟ್ಟಿತು. ಆಸುಪಾಸಿನಲ್ಲಿದ್ದ ಉಗಾಂಡದ ಸೈನಿಕರು ಗಾಬರಿಗೊಂಡು ಹಿಗ್ಗಾ ಮುಗ್ಗಾ ಫೈರಿಂಗ್ ಮಾಡತೊಡಗಿದರು. ಒಳಗಿದ್ದ ಒತ್ತೆಯಾಳುಗಳು ಈ ಟೆರರಿಸ್ಟುಗಳೇ ಗುಂಡು ಹಾರಿಸುತ್ತಿದ್ದಾರೆ ಇನ್ನೇನು ನಮ್ಮ ಕಥೆ ಮುಗಿದಹಾಗೇ ಎಂದು ಗಾಬರಿಗೊಂಡರು. ಈಗೇನು ಮಾಡುವುದು ಎನ್ನುವ ಅನಿಶ್ಚಿತೆ ಕಮಾಂಡೋಗಳಲ್ಲೂ ಉಂಟಾಯಿತು. ಇಂತಹ ಪರಿಸ್ಥಿತಿಯನ್ನು ಹಲವಾರು ಬಾರಿ ಅನುಭವಿಸಿದ್ದ ಕರ್ನಲ್ ನೆತನ್ಯಾಹು ತ್ವರಿತವಾಗಿ ರಣತಂತ್ರವನ್ನು ಬದಲಿಸಿದರು. ಮೊದಲನೇ ಕಮಾಂಡೊ ಪಡೆಯನ್ನು ಒತ್ತೆಯಾಳುಗಳಿದ್ದ ಕಡೆ ದೌಡಾಯಿಸಿದರು. ಎರಡನೇ ಪಡೆಯನ್ನು ಉಂಗಾಂಡದ ಸೈನಿಕರನ್ನು ಹಿಮ್ಮೆಟ್ಟಲು ಆದೇಶಿಸಿದರು. ಇದನ್ನೆಲ್ಲಾ ಮುಂದೆನಿಂತು ಆದೇಶಿಸುವ ಸಮಯದಲ್ಲೇ ATC tower ನ ಮೇಲಿದ್ದ ಒಬ್ಬ ಉಗಾಂಡದ ಸೈನಿಕ ಇವರ ಮೇಲೆ ಗುಂಡು ಹಾರಿಸೇ ಬಿಟ್ಟ. ಕುಸಿದು ಬಿದ್ದ ನೇತನ್ಯಾಹು. ಕಾಮಾಂಡೋಪಡೆಗಳಲ್ಲಿ ಆಹಾಕಾರ ಉಂಟಾಯಿತು. ನಮ್ಮ ಕಮಾಂಡಿಂಗ್ ಆಫೀಸರ್ಗೆ ಗುಂಡೇಟು ಬಿತ್ತು....ಅದರಲ್ಲೇ ಸಾವರಿಸಿಕೊಂಡು ಅಪಹರಣಕಾರರನ್ನು ಮೊದಲು ಮುಗಿಸಿಬಿಡಿ ಎಂದು ಆದೇಶಿಸಿದರು. ಕಮಾಂಡೋಗಳು ಇನ್ನಿಲ್ಲದ ರೋಷದಿಂದ ಅಪಹರಣಕಾರರನ್ನು ಅಟ್ಟಾಡಿಸಿಕೊಂಡು ಗುಂಡಿಕ್ಕಿ ಕೊಂದು ಬಿಟ್ಟರು. ಒತ್ತೆಯಾಳುಗಳಿಗೆ ಇಸ್ರೇಲಿ ಮಾತೃಭಾಷೆಯಲ್ಲಿ 'ನಾವು ಇಸ್ರೇಲಿ ಸೈನಿಕರು ನಿಮ್ಮನ್ನು ಕರೆದು ಕೊಂಡು ಹೋಗಲು ಬಂದಿದ್ದೇವೆ' ಎಂದು ಕೂಗಿ ಹೇಳಿದಾಗಲಂತೂ ಇದೇನಿದು ಪವಾಡ...ಪವಾಡ  ಎಂದರು ಒಕ್ಕೊರಲಿನಿಂದ. ಉಳಿದ ಇಬ್ಬರು ಅರಬ್ ಆತಂಕವಾದಿಗಳು ಅವಿತಿದ್ದ ಬಾತ್ ರೂಮಿನಲ್ಲೇ ಅವರನ್ನು ಛಿದ್ರಗೊಳಿಸಿದರು.
    ಅದೇ ಸಮಯಕ್ಕೆ ನಾಲ್ಕನೇ ಹರ್ಕ್ಯುಲಿಸ್ ಏರೋಪ್ಲೇನು ಒತ್ತಯಾಳುಗಳಿದ್ದ ಕಟ್ಟಡದ ಸಮೀಪವೇ ಬಂದಿತು. ತ್ವರಿತವಾಗಿ ಎಲ್ಲರನ್ನು ಅದರಲ್ಲಿ ಕೂರಿಸಿ ಕೆಲವೇ ನಿಮಿಷಗಳಲ್ಲಿ ಎಂಟೆಬ್ಬೆಯಿಂದ ಹೊರಟೇ ಬಿಟ್ಟಿತು. ಸುಮಾರು 45 ಉಗಾಂಡದ ಸೈನಿಕರು ಹತರಾದರು. ನಿಧಾನವಾಗಿ ಗುಂಡಿನ ಶಬ್ದಗಳು ಆಗೊಂದು ಈಗೊಂದು ಕೇಳಿ ಬರುತ್ತಿತ್ತು. ಕರ್ನಲ್ ನೆತನ್ಯಾಹುವನ್ನು ಇಸ್ರೇಲಿ ಡಾಕ್ಟರುಗಳು ತಮ್ಮ ಸುಪರ್ದಿಗೆ ತೆಗೆದು ಕೊಂಡು ಅವರನ್ನು ಉಳಿಸಲು ಇನ್ನಿಲ್ಲದ ಪ್ರಯತ್ನಮಾಡತೊಡಗಿದರು. ಆದರೆ ನೆತ್ತರು ತುಂಬಾ ಹರಿದಿತ್ತು.
    ಕಾರ್ಯಾಚರಣೆಯನ್ನು ಮುಗಿಸಿದ ಮೂರು ಹರ್ಕ್ಯುಲಸ್ ವಿಮಾನಗಳು ಕೆನ್ಯದ ನೈರೋಬಿಯ ಕಡೆ ಹೊರಟವು. ನಾಲ್ಕನೆಯ ವಿಮಾನದಲ್ಲಿದ್ದ ಕಮಾಂಡೋಗಳಿಗೆ ಇನ್ನೊಂದು ಅಂತಿಮ task ಉಳಿದಿತ್ತು. ಇನ್ನೇನು ಕೆಲವೇ ಸಮಯದಲ್ಲಿ ಈದಿ ಅಮೀನನಿಗೆ ವಿಷಯತಿಳಿದು ಅವಮಾನದಿಂದ ಕುದ್ದು ಹೋಗುತ್ತಾನೆ. ಸೇಡು ತೀರಿಸಿ ಕೊಳ್ಳಲು ಯುಧ್ಧ ವಿಮಾನಗಳನ್ನು ಇಸ್ರೇಲಿ ಪ್ಲೇನುಗಳ ಮೇಲೆ ಆಕ್ರಮಣಕ್ಕೆ ಆದೇಶಿಸ ಬಹುದು. ಕೆಲವೇ ನಿಮಿಷಗಳಲ್ಲಿ ಎಂಟಬ್ಬೆಯಲ್ಲಿದ್ದ ಎಲ್ಲಾ ಹನ್ನೊಂದು ಯುಧ್ಧವಿಮಾನಗಳನ್ನು ನೆಲಸಮ ಮಾಡಿ ಅವರೂ ಅಲ್ಲಿಂದ ನಿರ್ಗಮಿಸುತ್ತಾರೆ.
    ಈದಿ ಅಮೀನನಿಗೆ ಅನ್ನಿಸಿರಬಹುದು... ಬೀದಿಲಿ ಹೋಗ್ತಿದ್ದ ಮಾರಿನ ಮನಿಗ್ಯಾಕ್ ಕರಕಂಡು ಬಂದೆ. ಸುಖಾಸುಮ್ಮನೆ ಹನ್ನೊಂದು ಯುಧ್ಧ ವಿಮಾನಗಳನ್ನ ಕಳೊಕೊಂಡೆ, 45 ಸೈನಿಕರನ್ನು ಕಳೊಕೊಂಡೆ ಅಂತರಾಷ್ಟ್ರವಲಯದಲ್ಲಿ ಮಂಗನಾದೆ....
    ಎಂಟು ಗಂಟೆಯ ಪ್ರಯಾಣದ ನಂತರ ,ಎಂಟು ದಿನಗಳ ನರಕಯಾತನೆಯನಂತರ 103 ಇಸ್ರೇಲಿಯರು ಮರಳಿ ಮನೆಗೆ ಬಂದರು.
    ಜಗತ್ತೇ ನಿಬ್ಬರಗಾಗಿ ಈ  ನಂಬಲಸಾಧ್ಯವಾದ ಸಾಹಸಗಾಥೆಗೆ ಸಲ್ಯೂಟ್ ಹೊಡೆಯಿತು. ಆದರೆ ಇಸ್ರೇಲಿಗರು ತಮ್ಮನ್ನಗಲಿದ ಗಂಡೆದೆಯ ವೀರ ಕರ್ನಲ್ ಜೋನಾತನ್ ನೆತನ್ಯಾಹುವುನ ಬಲಿದಾನದ ಬೆಲೆಯನ್ನು ಎಂದೂ ಮರೆತಿಲ್ಲ.

ಮರಳಿ ಮನೆಗೆ

ಮರಳಿ ಮನೆಗೆ

          ಇಸ್ರೇಲಿನ ದಾಳಿಗಳ ಯಶಸ್ಸಿನ ರಹಸ್ಯ ಅವರ ಅದ್ವಿತೀಯ ಬೇಹುಗಾರಿಕೆಯ ಜಾಲ.  ಪ್ರಪಂಚದ ಮೂಲೆ ಮೂಲೆಗಳಲ್ಲೂ ಇವರು ಹರಡಿ ಕೊಂಡಿದ್ದಾರೆ.
ಅರಬ್ ದೇಶಗಳಲ್ಲಿ,ಆಫ್ರಿಕಾದಲ್ಲಿ,ಅಮೆರಿಕಾದಲ್ಲಿ ಎಲ್ಲೆಲ್ಲೂ. ಹೋಟೆಲುಗಳಲ್ಲಿ ವೈಟರುಗಳಾಗಿ, ಟೈಲರುಗಳಾಗಿ,ಮೋಚಿಗಳಾಗಿ,ಯಾವ ಕೆಲಸವಾದರೂ ಸರಿ,ಮೈಯೆಲ್ಲಾ ಕಣ್ಣಾಗಿಸಿ ಮಾಹಿತಿ ಕಲೆ ಮಾಡಿ ಇಸ್ರೇಲಿಗೆ ತಲುಪಿಸುವುದೇ ಇವರ ಮುಖ್ಯ ಉದ್ದೇಶ. ಕೆಲವು ಸಲ 'ಟಾರ್ಗೆಟ್' ಗಳನ್ನು ನಿಷ್ಕ್ರಿಯಗೊಳಿಸುವುದನ್ನೂ ಸಹ ಲೀಲಾಜಾಲವಾಗಿ ಮಾಡಿ ಮುಗಿಸಿ ಬಿಡುತ್ತಾರೆ! ಇವರ ಮಾನಸಿಕ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದು ಸುಲಭದ ಮಾತಲ್ಲ. ಚಾಣಾಕ್ಷರು,ನಿರ್ದಯಿಗಳು,ಏಕಾಂಗಿಗಳು ಆದರೆ ತಮ್ಮ ದೇಶದ ಬಗ್ಗೆ ಇರುವ ಅಚಲ ಅಭಿಮಾನವೇ ಇವರಿಗಿರುವ ಸ್ಪೂರ್ತಿ.
    ಎಂಟೆಬ್ಬೆಯಕಾರ್ಯಾಚರಣೆಯಲ್ಲಿ ಇವರು ನಿರಂತರವಾಗಿ ಕಳುಹಿಸುತ್ತಿದ್ದ ಮಾಹಿತಿಯಾಧಾರದ ಮೇಲೇ ಎಲ್ಲವೂ ನಿರ್ಭರವಾಗಿತ್ತು. ಇಸ್ರೇಲಿ ಒತ್ತೆಯಾಳುಗಳನ್ನು ಎಲ್ಲಿಟ್ಟಿದ್ದಾರೆ, ಅಪಹರಣಕಾರು ಎಷ್ಟು ಜನರಿದ್ದಾರೆ,ಅವರ ವಿವರಣೆ. ಏರ್ಪೋರ್ಟಿನ ವಿವರಣೆ,ಎಷ್ಟು ಬಾಗಿಲುಗಳಿವೆ,ಎಷ್ಟು ಮೆಟ್ಟಿಲುಗಳಿವೆ, ಈ ಸಣ್ಣ ಸಣ್ಣ ವಿವರಗಳೂ ತುಂಬ ಮಹತ್ವದ ವಿಷಯ. ಇನ್ನೊಂದು ಕಡೆಗಣಿಸಲಾಗದ ವಿಷಯವೆಂದರೆ ಯಹೂದಿಗಳು ಮಾರವಾಡಿಗಳ ತರಹ, ಚಿನ್ನ,ಬೆಳ್ಳಿ,ವಜ್ರಗಳ ವ್ಯಾಪಾರ ಇವರಿಗೆ ಅನುವಂಶೀಯವಾಗಿ ಬಂದ ಬಳುವಳಿ, ಹಾಗಾಗಿ ಅಫ್ರಿಕಾದ ದೇಶಗಳಲ್ಲಿ ಇವರ ಪ್ರಭಲತೆಯನ್ನು ಅಲ್ಲಿಯ ಸರಕಾರವೂ ಒಪ್ಪಿಕೊಳ್ಳುತ್ತದೆ. ಎಂಟೆಬ್ಬೆಯ ಕಾರ್ಯಾಚರಣೆಯಲ್ಲಿ ಇದೊಂದು ಮಹತ್ತರ ಅಂಶ.
    ಈ ಶ್ರೀಮಂತ ಇಸ್ರೇಲಿಯರ ವರ್ಚಸ್ಸಿನಿಂದಾಗಿ ಉಗಾಂಡದ ಪಕ್ಕದ ದೇಶ ಕೆನ್ಯಾ , ಇಸ್ರೇಲಿ ಸೈನ್ಯದ ಕಾರ್ಯಾಚರಣೆಗೆ ಸಹಾಯ ಮಾಡಲು ಒಪ್ಪಿಕೊಂಡಿತು. ಅದರಂತೆ ಸೈನ್ಯದ ಉನ್ನತ ಅಧಿಕಾರಿಗಳು ಬೋಯಿಂಗ್ 707 ವಿಮಾನದಲ್ಲಿ ಬಂದಿಳಿದುಬಿಟ್ಟರು. ಪ್ಲಾನಿನ ಪ್ರಕಾರ ಇಸ್ರೇಲಿನಿಂದ ಹರ್ಕ್ಯುಲಿಸ್ ಉಗಾಂಡಕ್ಕೆ ತಲುಪುವವಷ್ಟು ಹೊತ್ತಿಗೆ ವಿಮಾನದಲ್ಲಿ ಸ್ವಲ್ಪವೇ ಇಂಧನ ಉಳಿದು ಕೊಂಡಿರುತ್ತದೆ. ಎಂಟೆಬ್ಬಯ ಕಾರ್ಯಾಚರಣೆ ಮುಗಿಸಿ ಅಲ್ಲಿಂದ ಕೆನ್ಯಾದ ನೈರೋಬಿಯಲ್ಲಿಳಿದು ಇಂಧನ ತುಂಬಿಸಿಕೊಂಡು ಇಸ್ರೇಲಿಗೆ ಮರುಳುವುದೆಂದು ಒಪ್ಪಂದವಾಯಿತು.
    ನಾಲ್ಕು ಹರ್ಕ್ಯುಲಿಸ್ ವಿಮಾನಗಳು ಶತ್ರುದೇಶದ ರಡಾರುಗಳಿಂದ ಕಣ್ತಪ್ಪಿಸಿ ಉಗಾಂಡ ತಲುಪುವಷ್ಟರಲ್ಲಿ ಮಧ್ಯರಾತ್ರಿಯ ಹನ್ನೆರಡು ಗಂಟೆ. ಮೊದಲನೆಯ ವಿಮಾನ ಭೂಸ್ಪರ್ಶ ಮಾಡಿ ರನ್ ವೇಯ ಕೊನೆಯನ್ನು ತಲುಪಿತು. ಪ್ಲೇನು ಇನ್ನೂ ಚಲಿಸುತ್ತಿದ್ದಾಗಲೇ ಕೆಲವು ಕಮಾಂಡೊಗಳು ಹೊರಗೆ ಧುಮಿಕಿ ರನ್ ವೇಯ ಇಕ್ಕೆಲಗಳಲಲ್ಲಿ ಬೆಳಕಿನ ಬೀಕನ್ನುಗಳನ್ನು ಇಟ್ಟು ಕೊಳ್ಳುತ್ತಾ ಹೋದರು. ಇದರಿಂದ ಇತರೆ ಮೂರು ವಿಮಾನಗಳು ಸುಸೂತ್ರವಾಗಿ ಭೂಸ್ಪರ್ಶ ಮಾಡಿದವು. ವಿಮಾನದಿಂದ ಭರ್ ಭರ್ರೆನ್ನುತ್ತಾ ಕಮಾಂಡೋಗಳು ಕಾರುಗಳನ್ನು ಡ್ರೈವ್ ಮಾಡಿಕೊಂಡು ಗೇಟಿನ ಕಡೆ ದೌಡಾಯಿಸಿದರು. ಎಲ್ಲವೂ ರಿಹರ್ಸಲ್ ಮಾಡಿದಂತೇ ನಡೆಯುತ್ತಿತ್ತು.
    ಗೇಟಿನಲ್ಲಿದ್ದ ಇಬ್ಬರು ಗಾರ್ಡುಗಳು ನಿರೀಕ್ಷಿಸಿದಂತೆ 'stop'ಎಂದು ಗುಡುಗಿದರು, ಅದು ಅವರ procedure.  ಈದಿ ಅಮೀನೇ ಇರಬಹುದೆಂದು ಗೇಟಿಗೆ ಹಾಕಿದ್ದ ಅಡ್ಡಕಂಬಿಯನ್ನು ಇನ್ನೇನು ಎತ್ತ ಬೇಕು ಅನ್ನುವಷ್ಟರಲ್ಲಿ ಹತ್ತಿರಕ್ಕೆ ಸಲ್ಯೂಟ್ ಮಾಡಲು ಬಂದ ಗಾರ್ಡ ಕಣ್ಣುಕಿರಿದಾಗಿಸಿ ಮುಂದಿನ ಸೀಟಿನಲ್ಲಿದ್ದ ವ್ಯಕ್ತಿಯನ್ನು ಅನುಮಾಸ್ಪದವಾಗಿ ನೋಡುತ್ತಲೇ ಟ್ರಿಗರಿನ ಕಡೆ  ಕೈ ಚಲಿಸಲು  ಶುರುವಾಯ್ತು.  ಇನ್ನು  ತಡಮಾಡಿದರೆ ಶೂಟ್ ಮಾಡಿಬಿಡುತ್ತಾರೆಂದು ,ಸೈಲೆನ್ಸರ್ ಅಡವಳಿಸಿದ ಪಿಸ್ತೊಲಿನಿಂದ ಕ್ಷಣಾರ್ದದಲ್ಲಿ ನೆಲಕ್ಕುರಿಳಿಸಿಬಿಟ್ಟರು ಕರ್ನಲ್ ನೆತನ್ಯಾಹು. ಆದರೆ ಅವರಿಬ್ಬರೂ ಸತ್ತಿರಲಿಲ್ಲ . ಇದನ್ನು ಗಮನಿಸಿದ ಹಿಂದಿನಿಂದ ಬಂದ ಕಮಾಂಡೊ, ಹೀಗೆ ಇವರನ್ನು ಬಿಟ್ಟರೆ ಎಚ್ಚರವಾದಮೇಲೆ ಹಿಂದಿನಿಂದ ಆಕ್ರಮಣ ಮಾಡುವ ಸಾಧ್ಯತೆ ಇರುತ್ತದೆ ಎಂದು ,ಬಂದೂಕಿನಿಂದ ಡಮಾರ್ ಎಂದು ಗುಂಡು ಹಾರಿಸಿ ಮುಗಿಸೇಬಿಟ್ಟ.
    ಇಡೀ ಕಾರ್ಯಾಚರಣೆಯ ಮೂಲಮಂತ್ರವಾಗಿದ್ದ "Surprise Element" ಅನಿರೀಕ್ಷತತೆಯ ತಂತ್ರ ,ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೂ ಈ ಗೌಪ್ಯತೆಯನ್ನು ಆದಷ್ಟು ಕಾಪಾಡಿಕೊಂಡಿರಬೇಕಾದ ನಿಯಮ ಅಲ್ಲಿಗೆ ಮುಗಿದೇಬಿಟ್ಟಿತು. ಆಸುಪಾಸಿನಲ್ಲಿದ್ದ ಉಗಾಂಡದ ಸೈನಿಕರು ಗಾಬರಿಗೊಂಡು ಹಿಗ್ಗಾ ಮುಗ್ಗಾ ಫೈರಿಂಗ್ ಮಾಡತೊಡಗಿದರು. ಒಳಗಿದ್ದ ಒತ್ತೆಯಾಳುಗಳು ಈ ಟೆರರಿಸ್ಟುಗಳೇ ಗುಂಡು ಹಾರಿಸುತ್ತಿದ್ದಾರೆ ಇನ್ನೇನು ನಮ್ಮ ಕಥೆ ಮುಗಿದಹಾಗೇ ಎಂದು ಗಾಬರಿಗೊಂಡರು. ಈಗೇನು ಮಾಡುವುದು ಎನ್ನುವ ಅನಿಶ್ಚಿತೆ ಕಮಾಂಡೋಗಳಲ್ಲೂ ಉಂಟಾಯಿತು. ಇಂತಹ ಪರಿಸ್ಥಿತಿಯನ್ನು ಹಲವಾರು ಬಾರಿ ಅನುಭವಿಸಿದ್ದ ಕರ್ನಲ್ ನೆತನ್ಯಾಹು ತ್ವರಿತವಾಗಿ ರಣತಂತ್ರವನ್ನು ಬದಲಿಸಿದರು. ಮೊದಲನೇ ಕಮಾಂಡೊ ಪಡೆಯನ್ನು ಒತ್ತೆಯಾಳುಗಳಿದ್ದ ಕಡೆ ದೌಡಾಯಿಸಿದರು. ಎರಡನೇ ಪಡೆಯನ್ನು ಉಂಗಾಂಡದ ಸೈನಿಕರನ್ನು ಹಿಮ್ಮೆಟ್ಟಲು ಆದೇಶಿಸಿದರು. ಇದನ್ನೆಲ್ಲಾ ಮುಂದೆನಿಂತು ಆದೇಶಿಸುವ ಸಮಯದಲ್ಲೇ ATC tower ನ ಮೇಲಿದ್ದ ಒಬ್ಬ ಉಗಾಂಡದ ಸೈನಿಕ ಇವರ ಮೇಲೆ ಗುಂಡು ಹಾರಿಸೇ ಬಿಟ್ಟ. ಕುಸಿದು ಬಿದ್ದ ನೇತನ್ಯಾಹು. ಕಾಮಾಂಡೋಪಡೆಗಳಲ್ಲಿ ಆಹಾಕಾರ ಉಂಟಾಯಿತು. ನಮ್ಮ ಕಮಾಂಡಿಂಗ್ ಆಫೀಸರ್ಗೆ ಗುಂಡೇಟು ಬಿತ್ತು....ಅದರಲ್ಲೇ ಸಾವರಿಸಿಕೊಂಡು ಅಪಹರಣಕಾರರನ್ನು ಮೊದಲು ಮುಗಿಸಿಬಿಡಿ ಎಂದು ಆದೇಶಿಸಿದರು. ಕಮಾಂಡೋಗಳು ಇನ್ನಿಲ್ಲದ ರೋಷದಿಂದ ಅಪಹರಣಕಾರರನ್ನು ಅಟ್ಟಾಡಿಸಿಕೊಂಡು ಗುಂಡಿಕ್ಕಿ ಕೊಂದು ಬಿಟ್ಟರು. ಒತ್ತೆಯಾಳುಗಳಿಗೆ ಇಸ್ರೇಲಿ ಮಾತೃಭಾಷೆಯಲ್ಲಿ 'ನಾವು ಇಸ್ರೇಲಿ ಸೈನಿಕರು ನಿಮ್ಮನ್ನು ಕರೆದು ಕೊಂಡು ಹೋಗಲು ಬಂದಿದ್ದೇವೆ' ಎಂದು ಕೂಗಿ ಹೇಳಿದಾಗಲಂತೂ ಇದೇನಿದು ಪವಾಡ...ಪವಾಡ  ಎಂದರು ಒಕ್ಕೊರಲಿನಿಂದ. ಉಳಿದ ಇಬ್ಬರು ಅರಬ್ ಆತಂಕವಾದಿಗಳು ಅವಿತಿದ್ದ ಬಾತ್ ರೂಮಿನಲ್ಲೇ ಅವರನ್ನು ಛಿದ್ರಗೊಳಿಸಿದರು.
    ಅದೇ ಸಮಯಕ್ಕೆ ನಾಲ್ಕನೇ ಹರ್ಕ್ಯುಲಿಸ್ ಏರೋಪ್ಲೇನು ಒತ್ತಯಾಳುಗಳಿದ್ದ ಕಟ್ಟಡದ ಸಮೀಪವೇ ಬಂದಿತು. ತ್ವರಿತವಾಗಿ ಎಲ್ಲರನ್ನು ಅದರಲ್ಲಿ ಕೂರಿಸಿ ಕೆಲವೇ ನಿಮಿಷಗಳಲ್ಲಿ ಎಂಟೆಬ್ಬೆಯಿಂದ ಹೊರಟೇ ಬಿಟ್ಟಿತು. ಸುಮಾರು 45 ಉಗಾಂಡದ ಸೈನಿಕರು ಹತರಾದರು. ನಿಧಾನವಾಗಿ ಗುಂಡಿನ ಶಬ್ದಗಳು ಆಗೊಂದು ಈಗೊಂದು ಕೇಳಿ ಬರುತ್ತಿತ್ತು. ಕರ್ನಲ್ ನೆತನ್ಯಾಹುವನ್ನು ಇಸ್ರೇಲಿ ಡಾಕ್ಟರುಗಳು ತಮ್ಮ ಸುಪರ್ದಿಗೆ ತೆಗೆದು ಕೊಂಡು ಅವರನ್ನು ಉಳಿಸಲು ಇನ್ನಿಲ್ಲದ ಪ್ರಯತ್ನಮಾಡತೊಡಗಿದರು. ಆದರೆ ನೆತ್ತರು ತುಂಬಾ ಹರಿದಿತ್ತು.
    ಕಾರ್ಯಾಚರಣೆಯನ್ನು ಮುಗಿಸಿದ ಮೂರು ಹರ್ಕ್ಯುಲಸ್ ವಿಮಾನಗಳು ಕೆನ್ಯದ ನೈರೋಬಿಯ ಕಡೆ ಹೊರಟವು. ನಾಲ್ಕನೆಯ ವಿಮಾನದಲ್ಲಿದ್ದ ಕಮಾಂಡೋಗಳಿಗೆ ಇನ್ನೊಂದು ಅಂತಿಮ task ಉಳಿದಿತ್ತು. ಇನ್ನೇನು ಕೆಲವೇ ಸಮಯದಲ್ಲಿ ಈದಿ ಅಮೀನನಿಗೆ ವಿಷಯತಿಳಿದು ಅವಮಾನದಿಂದ ಕುದ್ದು ಹೋಗುತ್ತಾನೆ. ಸೇಡು ತೀರಿಸಿ ಕೊಳ್ಳಲು ಯುಧ್ಧ ವಿಮಾನಗಳನ್ನು ಇಸ್ರೇಲಿ ಪ್ಲೇನುಗಳ ಮೇಲೆ ಆಕ್ರಮಣಕ್ಕೆ ಆದೇಶಿಸ ಬಹುದು. ಕೆಲವೇ ನಿಮಿಷಗಳಲ್ಲಿ ಎಂಟಬ್ಬೆಯಲ್ಲಿದ್ದ ಎಲ್ಲಾ ಹನ್ನೊಂದು ಯುಧ್ಧವಿಮಾನಗಳನ್ನು ನೆಲಸಮ ಮಾಡಿ ಅವರೂ ಅಲ್ಲಿಂದ ನಿರ್ಗಮಿಸುತ್ತಾರೆ.
    ಈದಿ ಅಮೀನನಿಗೆ ಅನ್ನಿಸಿರಬಹುದು... ಬೀದಿಲಿ ಹೋಗ್ತಿದ್ದ ಮಾರಿನ ಮನಿಗ್ಯಾಕ್ ಕರಕಂಡು ಬಂದೆ. ಸುಖಾಸುಮ್ಮನೆ ಹನ್ನೊಂದು ಯುಧ್ಧ ವಿಮಾನಗಳನ್ನ ಕಳೊಕೊಂಡೆ, 45 ಸೈನಿಕರನ್ನು ಕಳೊಕೊಂಡೆ ಅಂತರಾಷ್ಟ್ರವಲಯದಲ್ಲಿ ಮಂಗನಾದೆ....
    ಎಂಟು ಗಂಟೆಯ ಪ್ರಯಾಣದ ನಂತರ ,ಎಂಟು ದಿನಗಳ ನರಕಯಾತನೆಯನಂತರ 103 ಇಸ್ರೇಲಿಯರು ಮರಳಿ ಮನೆಗೆ ಬಂದರು.
    ಜಗತ್ತೇ ನಿಬ್ಬರಗಾಗಿ ಈ  ನಂಬಲಸಾಧ್ಯವಾದ ಸಾಹಸಗಾಥೆಗೆ ಸಲ್ಯೂಟ್ ಹೊಡೆಯಿತು. ಆದರೆ ಇಸ್ರೇಲಿಗರು ತಮ್ಮನ್ನಗಲಿದ ಗಂಡೆದೆಯ ವೀರ ಕರ್ನಲ್ ಜೋನಾತನ್ ನೆತನ್ಯಾಹುವುನ ಬಲಿದಾನದ ಬೆಲೆಯನ್ನು ಎಂದೂ ಮರೆತಿಲ್ಲ.

ಉಗಾಂಡದೆಡೆ ಉಡಾಣ

ಉಗಾಂಡದೆಡೆ ಉಡಾಣ

        1948ರಲ್ಲಿ ಜನ್ಮಪಡೆದು,ಹುಟ್ಟಿನಿಂದಲೂ ಭಯೋತ್ಪಾದನೆಯನ್ನು ನಿರಂತರವಾಗಿ ಹೆದರಿಸುತ್ತಿರುವ ಇಸ್ರೇಲ್ ಹೇಗೆ ನಿಭಾಯಿಸುತ್ತದೆ ಈ ಪೀಡೆಯನ್ನು?
    ಸಿಂಪಲ್, ಭಯೋತ್ಪಾದನೆಯ ಫ್ಯಾಕ್ಟರಿಗೆ ನುಗ್ಗಿ ,ಉತ್ಪಾದನೆಯ ಹಂತದಲ್ಲೇ ಬಗ್ಗುಬಡಿಯುವುದು. ಈ ಹಿಂದೆ ಇರಾಕಿನ ಒಸಿರಾಕ್ ಅಣುಸ್ಥಾವರದ ಬಗ್ಗೆ ಒದಿದ್ದು ನೆನಪಿರಬಹುದು. ಇನ್ನೇನು ಹತ್ತು ದಿನಗಳಲ್ಲಿ ಅಣುಬಾಂಬು ತಯಾರಿಸುವ ಸಾಮರ್ಥ್ಯವನ್ನು ಇರಾಕ್ ಪಡೆದೇ ಬಿಡ್ತು ಎನ್ನೊಷ್ಟು ಹೊತ್ತಿಗೆ , ರಾಜಾರೋಷವಾಗಿ ಆ ಅಣುಸ್ಥಾವರವನ್ನು ಸಣ್ಣ ಸಣ್ಣ ಪೀಸುಗಳಾಗಿ ಮಾಡಿದರು. ಅರಬರೂ ಸೇರಿದಂತೆ ಹಲವಾರು ದೇಶಗಳು ಲಬೋ ಲಬೋ ಎಂದು ಬಾಯಿಬಡಿದು ಕೊಂಡರು. ಅವರು ಅದರ ಬಗ್ಗೆ ಏನಾದರೂ ತಲೆಕೆಡಿಸಿ ಕೊಂಡರಾ? ಇಲ್ಲ.
    ಇದು ಇಸ್ರೇಲಿನ ಸ್ಪೆಷಾಲಿಟಿ. ಅವರು ಒಂದು ಸಲ ತಮ್ಮ ಕಾರ್ಯಾಚರಣೆಯ ಬಗ್ಗೆ ನಿರ್ಧಾರ ತೆಗೆದುಕೊಂಡರೆಂದರೆ ಮುಗಿಯಿತು. ಬೇರೆದೇಶಗಳ, ಅಮೆರಿಕಾದ ಅಥವಾ ವಿಶ್ವಸಂಸ್ಥೆಯ ಅಭಿಪ್ರಾಯಗಳ ಬಗ್ಗೆ ತಲೆಕೆಡಿಸಿ ಕೊಳ್ಳುವುದೇ ಇಲ್ಲ.
  ಇನ್ನೊಂದು ಇಸ್ರೇಲಿಯರ ವೈಶಿಷ್ಟ್ಯವೆಂದರೆ ತಮ್ಮ ದೇಶದ ಬಗ್ಗೆ ಇರುವ ಗಾಢವಾದ ಅಭಿಮಾನ,ಗೌರವ. ಪರಸ್ಪರರಲ್ಲಿರುವ ಭಾಂಧವ್ಯ,ಅಚಲವಾದ ವಿಶ್ವಾಸ,ಇವೇ ಅವರನ್ನು ವಿಶ್ವದಲ್ಲಿ ವಿಷೇಶ ಸ್ಥಾನದಲ್ಲಿಟ್ಟಿರುವುದು. ಇದಕ್ಕಾಗೇ ಅವರನ್ನು ಅಭಿಮಾನಿಸುವುದು ಮತ್ತು
ಇದಕ್ಕಾಗಿಯೆ ಅವರನ್ನು ದ್ವೇಷಿಸುವುದು ಕೂಡ.

       ಈದಿ ಅಮೀನನ ಉಗಾಂಡದ ಎಂಟೆಬ್ಬೆಯಲ್ಲಿ ಒತ್ತೆಯಾಳುಗಳಾಗಿ ಸಿಲುಕಿಕೊಂಡಿರುವ ಸುಮಾರು ನೂರು ಜನ ಇಸ್ರೇಲಿಯರನ್ನು ಬಿಡುಗಡೆ ಮಾಡಲು ಕುಳಿತಿದ್ದ ತುರ್ತು ಸಭೆಯಲ್ಲಿ ಎರಡು ಗುಂಪುಗಳು ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ಪರ ವಿರೋದದ ವಾದ ಮಾಡುತ್ತಿರುವಾಗಲೇ, ರಕ್ಷಣಾ ಮಂತ್ರಿ ಮಿಲಿಟರಿಗೆ  ಕಣ್ಣು ಮಿಟುಕಿಸಿ..Go ahead ಎಂದೇ ಬಿಟ್ಟರು.
      ಜೊನಾತನ್ ನ್ಯೇಟನ್ನಾಹುವಿನ ಮುಖಂಡತ್ವದಲ್ಲಿ ತಯಾರಿಗಳು ಭರದಿಂದ ನಡೆಯಲು ಶುರುವಾಯಿತು. ಎಂಟೆಬ್ಬೆಯ ಏರ್ಪೋರ್ಟಿನ ಕಟ್ಟಡಗಳನ್ನು ಕೆಲವೇ ವರ್ಷಗಳಹಿಂದೆ ಕಟ್ಟಿದ ಕಂಟ್ರಾಕ್ಟರು ಇಸ್ರೇಲಿ! ಕೆಲವೇ ಗಂಟೆಗಳಲ್ಲಿ ಅವರಲ್ಲಿದ್ದ ನಕಾಶೆಯ ಸಹಾಯದಿಂದ ಒಂದು ಮಾದರಿಯನ್ನ ಮರಳಿನಲ್ಲಿ ಕಟ್ಟೇಬಿಟ್ಟರು. ಆಕ್ರಮಣದ ಕಮಾಂಡೊ ದಳಕ್ಕೆ ಉಂಗಾಡದ ಸೇನೆಯ ಮಾದರಿಯ ಡ್ರೆಸ್ಸನ್ನು ರಾತ್ರೊರಾತ್ರಿ ಹೊಲೆಯಲಾಯಿತು.  
         ಗುಪ್ತಚರ ಮಾಹಿತಿಯ ಪ್ರಕಾರ  ಈದಿ ಅಮಿನನ ಕಪ್ಪು ಬಣ್ಣದ ಮರ್ಸಿಡೀಸ್ ಕಾರಿನಂತಹದೇ ಒಂದು ಕಾರು ಮತ್ತು ಅಲ್ಲಿಯ ಮಿಲಿಟರಿಯವರು ಉಪಯೋಗಿಸುವ ಮಾದರಿಯ ಮೂರು ವಾಹನಗಳು,ಒಟ್ಟು ನಾಲ್ಕು ವಾಹನಗಳನ್ನು ಮೊದಲನೆ C-130  ಹರ್ಕ್ಯುಲಿಸ್ ಏರೋಪ್ಲೇನಿನಲ್ಲಿ ಲೋಡ್ ಮಾಡಲಾಯಿತು. ವಿದೇಶಕ್ಕೆ ಹೋದ ಈದಿ ಅಮಿನ್ ಮರಳಿ ಬರುತ್ತಿದ್ದಾನೆನ್ನವ ನಾಟಕದ ರಂಗತಾಲೀಮಿನ ರಚನೆಯಾಯ್ತು.  ಕಮಾಂಡೊ ಕಾರ್ಯಾಚರಣೆಯ ತಾಲೀಮಿನಲ್ಲಿ ನಿಮಿಷ ನಿಮಿಷಕ್ಕೂ ನಡೆಯಬಹುದಾದ ಘಟನೆಗಳ ಬಗ್ಗೆ ಊಹಿಸಿ,ಯೋಚಿಸಿ,ಪರಾಂಬರಿಸಿ,ಚರ್ಚಿಸಿ ತರಬೇತಿಯಲ್ಲಿ ಅಳವಡಿಸಿಕೊಂಡರು. ಈ ಹೆಜ್ಜೆ ಯಡವಟ್ಟಾದರೆ ಅದಕ್ಕೆ ಪರ್ಯಾಯವೇನು ಎಂಬುದೆಲ್ಲಾ ಪರಿಗಣಿಸಲಾಯಿತು. ಈ ಕಾರ್ಯಾಚರಣೆಯ ಬುನಾದಿ ...ಅನಿರೀಕ್ಷಿತತೆ, ಅಲ್ಲಿರುವವರು ಬರೀ ಅರಬ್ ವಿಮಾನ ಅಪಹರಣಕಾರೇ ಅಲ್ಲ ಉಗಾಂಡದ ಸೈನಿಕರೂ ಆಸುಪಾಸಿನಲ್ಲಿದ್ದಾರೆಂದು ತಿಳಿದು ಬಂತು. ಪಿಸ್ತೊಲುಗಳಿಗೆ ಸೈಲೆನ್ಸರ್ ಅಳವಡಿಸಲಾಗಿತ್ತು. ಬಂದೂಕಿನ ಫೈರಿಂಗ್ ಕೊನೆಯಹಂತದ ಆಕ್ರಮಣಕ್ಕೆ ಮಾತ್ರ.
  ಮೊದಲಿಂದಲೂ ಅವರು ಉಗಾಂಡದ ಸೈನಿಕರಂತೇ ವರ್ತಿಸಬೇಕು..ಅಪಹರಣಕಾರರನ್ನು ಸೆರೆ ಹಿಡಿಯುವವರೆಗೂ ಅಥವಾ ನಿಷ್ಕ್ರಿಯೆ ಗೊಳಿಸುವವರೆಗು. ಅಲ್ಲಿಗೆ ಹೋಗುತ್ತಿರುವುದು ನಮ್ಮ ಇಸ್ರೇಲಿಯರನ್ನು ಉಳಿಸುವುದಕ್ಕೆ ಉಂಗಾಡ ಸೈನ್ಯದ ಜೊತೆ ಯುಧ್ಧ ಮಾಡುವುದಕ್ಕಲ್ಲ ಎಂಬುದನ್ನೂ ಎಲ್ಲರಿಗೂ ಮನವರಿಕೆಯಾಗುವಂತೆ ರಿಹರ್ಸಲ್ ನಡೆಸಲಾಯಿತು.
    ಎಂಟೆಬ್ಬೆಗೆ ಹೊರಡಲು ತಯಾರಾಗಿದ್ದ ಒಟ್ಟು ನಾಲ್ಕು C-130 ಹರ್ಕ್ಯುಲಿಸ್ ಎಲ್ಲಾ ಪೈಲಟ್ಗಳಿಗೆ ನಡುರಾತ್ರಿಯ ಕಗ್ಗತ್ತಿನಲ್ಲಿ ಯಾವ ಬೆಳಕಿನ ಸಹಾಯವಿಲ್ಲದೆ ಭೂಸ್ಪರ್ಶ ಮಾಡುವ ತರಬೇತಿಯನ್ನು ಕೊಡಲಾಯಿತು. ನಡುರಾತ್ರಿಯ ನಿಷಬ್ದದಲ್ಲಿ  ನಾಲ್ಕು ಏರೋಪ್ಲೇನುಗಳ  ಶಬ್ದವನ್ನು ಕಡಿಮೆ ಮಾಡಲು ಏರ್ಪೋರ್ಟು ಹತ್ತಿರವಾಗತ್ತಿದ್ದಂತೆ ಎರಡು ಎಂಜಿನ್ನುಗಳನ್ನು ನಿಷ್ಕ್ರಿಯಗೊಳಿಸುವ ಪ್ರಯೋಗವನ್ನೂ ನಡೆಸಲಾಯಿತು. ನಾಲ್ಕನೇ ವಿಮಾನದಲ್ಲಿ ಒಂದು ಚಿಕ್ಕ ಆಸ್ಪತ್ರೆಯಂತಹ ವ್ಯವಸ್ಥೆಯನ್ನು ಬಿಟ್ಟರೆ ಒತ್ತೆಯಾಳುಗಳಾಗಿದ್ದ ಇಸ್ರೇಲಿಯರನ್ನು ಕರೆದುಕೊಂಡು ಬರಲು ಖಾಲಿಯಾಗೇ ಇಡಲಾಯಿತು.
    ಎಂಟೆಬ್ಬೆಯಲ್ಲಿ ಈಗಾಗಲೇ ಆರು ದಿನಗಳ ನರಕಯಾತನೆಯನ್ನು ಅನುಭವಿಸಿದ್ದ ಇಸ್ರೇಲಿಯರು ಅವರಿಗಾಗಿ ಕಾದಿರಿಸಿದ್ದ ನಾಲ್ಕನೇ ಏರೋಪ್ಲೇನಿನಲ್ಲಿ ...ಎಲ್ಲರೂ ಬಂದರೇ?
    3 ಜುಲೈ 1976, ಎಂಟೆಬ್ಬೆಯ ಕಾರ್ಯಾಚರಣೆಯಲ್ಲಿ ಭಾಗವಹಿಸುವ ಎಲ್ಲಾ ಕಮಾಂಡೋಗಳು, ಪೈಲಟ್ಗಳು,ಎಂಜಿನಿಯರ್ಗಳು, ವೈರ್ಲೆಸ್,ವೈದ್ಯಕೀಯ ಸಿಬ್ಬಂದಿ ಎಲ್ಲರನ್ನೂ ಜಮಾಯಿಸಿ ಅಂತಿಮವಾಗಿ ಕರ್ನಲ್ ನೆತನ್ಯಾಹುರ ನೇತೃತ್ವದಲ್ಲಿ ತಾಲೀಮು ನಡೆಸಲಾಗುತ್ತದೆ. ಇಲ್ಲಿ ಒಂದು ಚಿಕ್ಕ ವಿವಾದವೆದ್ದು ಬಿಡುತ್ತದೆ. ಅದೇನೆಂದರೆ ಮೊದಲನೇ ಗೇಟಿನಲ್ಲಿರಬಹುದಾದ ಉಗಾಂಡದ ಗಾರ್ಡುಗಳನ್ನು ಹೇಗೆ ನಿಭಾಯಿಸುವುದು? ಅವರನ್ನು ಬರೀ ನಿಷ್ಕ್ರಿಯಗೊಳಿಸಬೇಕೇ ಅಥವಾ ಮುಗಿಸಿಬಿಡಬೇಕೇ ಈ ವಿವಾದ ನಿಖರವಾಗಿ ಬಗೆಹರಿಯುವುದಿಲ್ಲ. ಸರಿ ಅಲ್ಲೇ ನೋಡೋಣ ಎಂದು ಬಿಡುತ್ತಾರೆ ಕಮಾಂಡೊಗಳ ಮುಖಂಡ.
     ಇದೊಂದನ್ನು ಬಗೆಹರಿಸಿಕೊಂಡಿದ್ದರೆ?
    
    ಮಿಲಿಟರಿ ಕಾರ್ಯಾಚರಣೆಯಲ್ಲಿ ಕೆಲವು ಸಣ್ಣ ಸಾಂಧರ್ಭಿಕ ನಿರ್ಧಾರಗಳೂ ಎಷ್ಟು ಪ್ರಾಮುಖ್ಯತೆ ಪಡೆಯುತ್ತವೆಯಲ್ಲವೇ?
    ಮಧ್ಯಾಹ್ನ 2.30. ಇಸ್ರೇಲ್ ಕ್ಯಾಬಿನೆಟ್ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ಇನ್ನೂ ಯಾವ ನಿರ್ಣಯವನ್ನೂ ತೆಗೆದುಕೊಂಡಿಲ್ಲ!!
    ಎಂಟುಗಂಟೆಗಳ ವಾಯುಯಾನದ ನಂತರ ಮಧ್ಯರಾತ್ರಿಯ ಕಾರ್ಯಾಚರಣೆಯನ್ನು ಮಾಡಲು ಎಂಟೆಬ್ಬೆಯನ್ನು ತಲುಪಬೇಕೆಂದರೆ ಸಂಜೆ ನಾಲ್ಕರ ಆಸುಪಾಸಿಗೆ ಈ ವಿಮಾನಗಳು ಇಸ್ರೇಲಿನಿಂದ ನಿರ್ಗಮಿಸಲೇ ಬೇಕು...ಆದರೆ ಈ ಕಾರ್ಯಾಚರಣೆಗೆ ಇನ್ನು ಅಧಿಕೃತವಾಗಿ ಪರವಾನಗಿಯೇ ದೊರೆತಿಲ್ಲ. ಎಂತಹ ವಿಪರ್ಯಾಸ.
    ಇನ್ನೊಂದು ಆತಂಕದ ಸಮಾಚಾರವೂ ಇಸ್ರೇಲಿನ ಗುಪ್ತಚರ ಇಲಾಖೆ 'ಮೊಸ್ಸಾದ್'ನಿಂದ ಬರುತ್ತದೆ. ಅದೆಂದರೆ, ಮೌರಿಶಿಯಸ್ ದೇಶದ ಪ್ರವಾಸ ಮುಗಿಸಿಕೊಂಡು ಈದಿ ಅಮೀನ್ ಆ ರಾತ್ರಿ ಉಗಾಂಡಕ್ಕೆ ಮರಳುತ್ತಿದ್ದಾನೆ. ಆ ಕ್ರೂರ ಮುಂಗೋಪಿ ಇಸ್ರೇಲ್ ಇನ್ನೂ ಪ್ರತಿಕ್ರಯಿಸಿಲ್ಲ ಎಂದು ತಿಳಿದರೆ ಏನು ಮಾಡುತ್ತಾನೊ?
    ಈ ಸಂಧರ್ಭದಲ್ಲಿ ಮಿಲಿಟರಿ ಅಧಿಕಾರಿಗಳು ಸಾಧಕ ಭಾದಕಗಳನ್ನು ಚರ್ಚಿಸಿ ಒಂದು ನಿರ್ಧಾರಕ್ಕೆ ಬರುತ್ತಾರೆ.
    ನಾವಂತೂ ಹೊರಡುತ್ತೇವೆ, ನಾಲ್ಕು ಗಂಟೆಗಳ ವಿಮಾನಯಾದನಂತರ ಒಂದು  "Point of no return" ತಲುಪುವುದರೊಳಗೆ ಕ್ಯಾಬಿನೆಟ್ಟಿನ ಅನುಮೋದನೆ ದೊರೆತರೆ ಮುಂದುವರೆಯುತ್ತೇವೆ ಇಲ್ಲದಿದ್ದರೆ ಮರಳಿಬರುತ್ತೇವೆ. ಅದಕ್ಕೆ ರಕ್ಷಣಾಮಂತ್ರಿಯವರು ಒಪ್ಪುತ್ತಾರೆ.
    ಆಪರೇಷನ್ ಥಂಡರ್ ಬೋಲ್ಟ್ ಗಗನಕ್ಕೇರುತ್ತದೆ...ಅದರ ಜೊತೆಗೇ  ಇಸ್ರೇಲಿನ ಭವಿಷ್ಯಕೂಡ.
      

ಶತ್ರುಗಳ ಮನೆಗೇ ನುಗ್ಗಿ ಹೊಡೆವ ಧೀರರು

ಶತ್ರುಗಳ ಮನೆಗೇ ನುಗ್ಗಿ ಹೊಡೆವ ಧೀರರು

     1990 ಜನವರಿಯಲ್ಲಿ ಕಾಶ್ಮೀರ ಕಣಿವೆಯಲ್ಲಿ ಒಂದು ಫರ್ಮಾನು ಹೊರಟಿತು. ಎಲ್ಲಾ ಮಸೀದಿಗಳಲ್ಲಿ ಈ ಆದೇಶದವನ್ನು ಕಠಿಣವಾಗಿ ಪಾಲಿಸಲೇ ಬೇಕು ಎಂಬ ಎಚ್ಚರಿಕೆಯೊಂದಿಗೆ  ಹೊರಡಿಸಿದ ಈ ಕಠೋರ ಆಘ್ನೆ ಏನೆಂದರೆ....ಕಣಿವೆಯ ಎಲ್ಲಾ ಹಿಂದುಗಳನ್ನು ಇಸ್ಲಾಮಿಗೆ ಮತಾಂತರಿಸಬೇಕು,ಒಪ್ಪದಿದ್ದರೆ ಓಡಿಸಿಬಿಡಬೇಕು ಇಲ್ಲವೇ ಕೊಂದು ಬಿಡಬೇಕು.
     ಎಂತಹ ಅಸಹನೀಯ ಸನ್ನಿವೇಶ..ಎಷ್ಟು ವಿಪರ್ಯಾಸ. ಕಶ್ಯಪ ಮುನಿ ಶೃಷ್ಟಿಸಿದ ಕಾಶ್ಮೀರದಲ್ಲಿ, ಅದೂ ಪಂಡಿತರಿಗೇ ಎಂದು ವಿಷೇಶವಾಗಿ ಮೀಸಲಿಟ್ಟು ಅವರನ್ನು ರಕ್ಷಿಸಿ ಬೆಳಸಿದ ಈ ಪುಣ್ಯ ಕ್ಷೇತ್ರದಲ್ಲಿ ನೂರಾರು ಕಾಶ್ಮೀರಿ ಪಂಡಿತರ ಮಾರಣ ಹೋಮ ನಡೆದು ಹೋಯಿತು. ಸುಮಾರು ಒಂದು ಲಕ್ಷ ಪಂಡಿತರು ಈ ದುಷ್ಕರ್ತ್ತ್ಯವನ್ನು ಸಹಿಸಲಾಗದೆ ತಲತಲಾಂತರಗಳಿಂದ ನೆಲಸಿದ್ದ ಕಾಶ್ಮೀರ ವನ್ನು ತೊರೆಯಬೇಕಾಯಿತು.
    
     ಇತಿಹಾಸದಲ್ಲಿ ಸತತವಾಗಿ ಈ ರೀತಿಯ ಜಾತಿಯಾಧಾರಿತ ಮಾರಣಹೋಮ ನಡದಿದ್ದೆಂದರೆ ಯಹೂದಿಗಳ ಮೇಲೆ. ಹೀಗೆ ಅವರ ಮೇಲೆ ದೌರ್ಜನ್ಯ ನಡೆಯುತ್ತಿದ್ದಾಗ ಯಾರೂ ಅವರ ಸಹಾಯಕ್ಕೆ ಮುನ್ನುಗ್ಗಲಿಲ್ಲ. ಅವರಿಗೆ ತಮ್ಮದೇ ಆದ ದೇಶವೆನ್ನುವುದೇ ಇರಲಿಲ್ಲ. ಅವರ ದೇಶ ಇಸ್ರೇಲ್ ಅಸ್ಥಿತ್ವಕ್ಕೆ ಬಂದದ್ದು 1948ರಲ್ಲಿ. ಅಷ್ಟರಲ್ಲಾಗಲೇ ಸುಮಾರು 60 ಲಕ್ಷ ಯಹೂದಿಗಳನ್ನು ಜರ್ಮನಿಯಲ್ಲಿ ಮತ್ತು ಜರ್ಮನಿಯ ಆಡಳಿತಕ್ಕೊಳಪಟ್ಟ ಇತರೆ ಯೂರೋಪಿನ ದೇಶಗಳಲ್ಲಿ ಕೊಲ್ಲಲಾಯಿತು. 1948 ರಲ್ಲಿ ಇಸ್ರೇಲಿಗೆ ಬಂದ ಯಹೂದಿಗಳು ಸೇಡಿನಿಂದ ಕುದಿಯುತ್ತಿದ್ದ ಎರಡನೇ ತಲೆಮಾರು.
     ಅಸಲಿಗೆ ಇಸ್ರೇಲೆಂದರೆ ಎಷ್ಟಿದೆ? ಬೆಂಗಳೂರಿನಿಂದ ದಾವಣಗೆರೆಯಷ್ಟು, ಕರ್ನಾಟಕದ ಮೂರನೇ ಒಂದು ಭಾಗ! ಆದರೆ ಅದನ್ನು ಸುತ್ತುವರೆದಿರುವ ಏಳು ಮುಸ್ಲಿಂ ದೇಶಗಳಿಗೆ ಇಸ್ರೇಲ್ ಎಂದರೆ ಸಿಂಹಸ್ವಪ್ನ. ವಿಶ್ವದಲ್ಲೇ ಅತ್ಯಂತ ಸಾಹಸಿ ದೇಶ. ಇಲ್ಲಿರುವ ಅತ್ಯಾಧುನಿಕ ಯುಧ್ಧ ವಿಮಾನಗಳು,ಯುಧ್ಧ ಸಾಮಗ್ರಿಗಳು ಭಾರತದಲ್ಲಿಯೂ ಇಲ್ಲ. ಹಾಗಾದರೆ ಇವರ ಭೂಸೇನೆ,ವಾಯುಸೇನೆ ಅಷ್ಟು ದೊಡ್ಡದೇ? ಉಹುಂ ಇಲ್ಲವೇ ಇಲ್ಲ.. ಯಾಕೆಂದರೆ ಇಲ್ಲಿರುವ ಪ್ರತಿಯೊಬ್ಬ ಪ್ರಜೆಯು ಸೈನಿಕ. ಡಾಕ್ಟರಿರಲಿ,ಇಂಜಿನಿಯರ್,ಲಾಯರ್,ಕ್ಲರ್ಕ್,ಕ್ಷೌರಿಕ ಎಲ್ಲರಿಗೂ ತಮ್ಮ ಮೂಲ ಕಸುಬಿನ ಜೊತೆ ಮಿಲಿಟರಿ ತರಬೇತಿ ಕಡ್ಡಾಯ. ಅವಶ್ಯಕತೆಯಿದ್ದಾಗ ಅವರಿಗೊಂದು ರಹಸ್ಯ ಸಂದೇಶದ ಮೂಲಕ ಇಂತಹ ಸ್ಥಳಕ್ಕೆ ಬರಬೇಕೆಂಬ ಆದೇಶ ಸಿಗುತ್ತದೆ. ಅಲ್ಲಿಂದ ಅವರಿಗೆ ಕೊಟ್ಟ ಕಾರ್ಯಾಚರಣೆ ಮುಗಿಯುವತನಕ ಅವರು ಸೈನಿಕ,ಅದು ಮುಗಿದ ಮೇಲೆ ವಾಪಸ್ ತಮ್ಮ ತಮ್ಮ ಕಸುಬಿಗೆ.
     80 ರ ದಶಕದಲ್ಲಿ ಇರಾಕಿನ ಐಲು ದೊರೆ ಸದ್ದಾಂ ಹುಸೇನ್,ಇಸ್ರೇಲಿನ ಕಿರಿಕಿರಿಯನ್ನು ಸಹಿಸಲಾಗದೆ ಒಂದು ಹುಚ್ಚು ಸಾಹಸಕ್ಕೆ ಕೈ ಹಾಕುತ್ತಾನೆ. ಫ್ರಾನ್ಸ್ ದೇಶದಿಂದ  ಅಣುಬಾಂಬು ತಯಾರಿಸುವ ಒಂದು atomic reactor ಖರೀದಿಸುತ್ತಾನೆ. ಬಾಗ್ದಾದ್ ನ ಹೊರವಲಯದಲ್ಲಿ ಈ ರಿಯಾಕ್ಟರನ್ನು ಸ್ಥಾಪಿಸುವ ಕಾರ್ಯ ಭರದಿಂದ ಸಾಗುತ್ತದೆ. ಯಹೂದಿಗಳೇ ಇನ್ನೊಂದು ಮಾರಣ ಹೋಮಕ್ಕೆ ಸಿದ್ದರಾಗಿರಿ..ಒಂದೊಂದು ಅಣು ಬಾಂಬು 50000 ಇಸ್ರೇಲಿಯರನ್ನು ಕೊಲ್ಲುವ ಸಾಮರ್ಥ್ಯವಿದೆ ಎಂದು ವಿಶ್ವವಲಯಗಳಲ್ಲಿ ಕೊಚ್ಚಿಕೊಳ್ಳಲು ಶುರು ಮಾಡುತ್ತಾನೆ. ಇಸ್ರೇಲ್, ಫ್ರಾನ್ಸ್ ದೇಶಕ್ಕೆ ಮನವಿ ಮಾಡಿಕೊಳ್ಳುತ್ತದೆ,ದಯವಿಟ್ಟು ಈ ರಿಯಾಕ್ಟ್ರನ್ನು ಮಾರಬೇಡಿ ಎಂದು. ಆದರೆ ಈ ಗುಳ್ಳೇನರಿಯಂತ ಯೂರೋಪಿನ ದೇಶಗಳನ್ನು ನಂಬಲಾಗದೆಂದು ಮನವರಿತುಕೊಂಡು ತನ್ನ ತಯಾರಿಯನ್ನು ನಡೆಸ ತೊಡಗಿತು.
     ಅಂದಿನ ಇಸ್ರೇಲಿನ ಪ್ರಧಾನಿ ಮತ್ತು ವಾಯುಸೇನೆಯ ಅಧ್ಯಕ್ಷ,ಇವರಿಬ್ಬರಿಗೇ ಮಾತ್ರ ಗೊತ್ತಿರುವ ಒಂದು ರಣ ತಂತ್ರ ನಿರ್ಮಿತವಾಗುತ್ತದೆ. ಅದರ ಪ್ರಕಾರ ಅಲ್ಲಿ ಇರಾಕಿನಲ್ಲಿ ನಿರ್ಮಾಣವಾಗಿರುವ ರಿಯಾಕ್ಟರಿನ ಒಂದು ಅದೇ ಸೈಜಿ಼ನ ಮಾದರಿಯನ್ನು ಸಿನಾಯಿ ಮರು ಭೂಮಿಯಲ್ಲಿ ನಿರ್ಮಿಸಲಾಗುತ್ತದೆ. ಯಧ್ಧವಿಮಾನದ ಹಾರಾಟದಲ್ಲಿ ಅತಿ ಕುಶಲತೆಯನ್ನು ಪಡೆದ ಸುಮಾರು 20 ಪೈಲಟ್ಟುಗಳನ್ನು ಈ ತರಬೇತಿಗೆ ನಿಯಮಿಸಲಾಗುತ್ತದೆ. ಎಂಟು F-16 ಮತ್ತು ಆರು F-15 ವಿಮಾನಗಳನ್ನು ಈ "ಆಪರೇಶನ್ ಒಪೇರ"ದಲ್ಲಿ ಬಳಸಲಾಗುತ್ತದೆ. ಪೈಲಟ್ಗಳಿಗೆ ಎಷ್ಟು ಬೇಕೊ ಅಷ್ಟು ವಿಷಯವನ್ನು ಮಾತ್ರ ತಿಳಿಸಿರುತ್ತಾರೆ. ಒಂದು ಗೋಲಾಕಾರವಾಗಿ ಕಾಣುವ ಈ target ಮೇಲಷ್ಟೇ ಬಾಂಬುಗಳನ್ನು ಬೀಳಿಸಬೇಕು. ಪ್ರತಿಯೊಬ್ಬ ಪೈಲಟ್ ಅವರಿಗೆ ಗುರುತು ಹಾಕಿಕೊಟ್ಟ ಜಾಗಕ್ಕೆ ಮಾತ್ರ ಬಾಂಬ್ ಹಾಕ ಬೇಕು. ಭೂಮಿಯಿಂದ ನೂರು ಅಡಿ ಮೇಲೆ ಅದೂ 1200 ಕಿಮೀ ವೇಗದಲ್ಲಿ ಸರಿ ಸುಮಾರು ಒಂದೂವರೆ ಘಂಟೆ  ವಿಮಾನಹಾರಿಸುವುದು ಸಾಮಾನ್ಯದ ವಿಷಯವಲ್ಲ.  ಅದರಲ್ಲೂ ಇನ್ನು ಹೆಚ್ಚಿನ ಅಪಾಯಕಾರಿ ವಿಷಯವೆಂದರೆ ಇರಾಕಿನ ಈ target ತಲುಪಲು ಈ ಹದಿನಾಲ್ಕು ವಿಮಾನಗಳು ಇಸ್ರೇಲಿನ ಬದ್ದ ವೈರಿಗಳಾದ ಜೋರ್ಡನ್,ಸೌದಿ ಅರೇಬಿಯ ಮತ್ತು ಇರಾಕ್ ದೇಶಗಳ ಮೇಲೆ ಹಾರಿ ಹೋಗಬೇಕು.  ವಿಮಾನಗಳು ರಾಡಾರ್ಗಳಿಗೆ ಕಾಣಿಸಿಕೊಳ್ಳಬಾರದೆಂದರೆ ಹೀಗೇ ಭೂಮಿಯನ್ನು ತಬ್ಬಿಕೊಂಡು ಹೋಗಬೇಕು. ಅದರ ತರಬೇತಿಯೂ ನಿರಂತರವಾಗಿ ನಡೆಯುತ್ತದೆ.
     ಜೂನ್ 7,1981, ಅಂದು ಭಾನುವಾರ ಸಂಜೆ "ಒಸಿರಾಕ್ ರೈಡ್"ನ ಕಾರ್ಯಾಚರಣೆ ಶುರುವಾಗುತ್ತದೆ. ಭಾನುವಾರ ಎಲ್ಲಾ ಕಡೆ ಒಂದು ವಿಶ್ರಾಮದ ವಾತಾವರಣವಿರುವುದರಿಂದ ಈ ದಿನವನ್ನು ಆಯ್ಕೆ ಮಾಡಲಾಗುತ್ತದೆ ಮತ್ತು ಒಂದೂವರೆಗಂಟೆಗಳ ಹಾರಾಟದ ನಂತರ ಇರಾಕನ್ನು ತಲುಪಿದಾಗ ಅಲ್ಲಿಯ ಸೈನಿಕರ ಶಿಫ್ಟ್ ಬದಲಾಯಿಸುವ ಸಮಯ,ಮಾತು ಕಥೆಯ ಸಮಯ , ಈ ಯುಧ್ಧ ವಿಮಾನಗಳನ್ನು ರಡಾರಿನಲ್ಲಿ ಕಂಡರೂ ಕೂಡಲೇ ಅವರು ಪ್ರತಿಕ್ರಿಯಿಸುವ ಮುನ್ನವೇ ತಮ್ಮಕೆಲಸ ಮುಗಿಸಿ ಬಿಡುವ ಒಂದು  ಸಂಕ್ಷಿಪ್ತವಾದ ಪ್ಲಾನ್ ಮಾಡಿರುತ್ತಾರೆ ಒಂದೊಂದು ವಿಮಾನವೂ ಸುಮಾರು ಎರಡು ಟನ್ ಗಳಷ್ಟು ಬಾಂಬುಗಳನ್ನು ಹೊತ್ತುಕೊಂಡಿದೆ. ಈ ಎಲ್ಲಾ ವಿಮಾನಗಳನ್ನು ಗಡಿಪ್ರದೇಶದ ಒಂದು ರಹಸ್ಯ ವಾಯುನೆಲೆಗೆ ಸಾಗಿಸಲಾಗುತ್ತದೆ. ಎಷ್ಟು ಸಾಧ್ಯವೋ ಅಷ್ಟು ಇಂಧನವನ್ನು ತುಂಬಲಾಗುತ್ತದೆ. ನಾಲ್ಕು ನಾಲ್ಕು ಗುಂಪಿನ ಯುಧ್ಧ ವಿಮಾನಗಳ formation ಸಾಯಂಕಾಲದ ಸಮಯಕ್ಕೆ ಅಲ್ಲಿಂದ ನಿರ್ಗಮಿಸಬೇಕು.
     ಪೈಲಟ್ಗಳಿಗೆ ಒಂದು ಗಂಟೆಯ ಸಮಯವಿದೆ. ಯಾರಿಗಾದರೂ ಈ ಕೊನೆಯ ಗಳಿಗೆಯಲ್ಲಿ ತಾವು ಕೈಗಳ್ಳುತ್ತಿರುವ mission ನಲ್ಲಿ ಏನಾದರೂ ಸಂದೇಹವಿದ್ದರೆ..ಏಕೆಂದರೆ ಮುಂದಿನ ಮೂರು ನಾಲ್ಕು ತಾಸು ಸಂಪೂರ್ಣ ನಿಶಬ್ದ! Complete radio silence. ಎಲ್ಲರೂ ಶಾಂತವಾಗೇ ಇರುತ್ತಾರೆ ಮತ್ತು ತಮ್ಮೊಳಗೇ ಆತ್ಮಾವಲೊಕನ ಮಾಡಿಕೊಳ್ಳತ್ತಾರೆ. ಏನೇ ಆಗಲಿ ಇಸ್ರೇಲಿಗಳ ಮೇಲೆ ಇನ್ನೊಂದು ಮಾರಣಹೋಮವಾಗಲು ಬಿಡಬಾರದು.

   ಜೋರ್ಡಾನಿನ ದೊರೆಗಾದ ಆಘಾತ

    ಇಸ್ರೇಲಿನ ಯಹೂದಿಗಳಾಗಲೀ ಅಥವಾ ಕಾಶ್ಮೀರದ ಪಂಡಿತರಾಗಲಿ, ಏಕೆ ಈ ದ್ವೇಷಕ್ಕೆ ತುತ್ತಾಗುತ್ತಾರೆ,ಏಕೆ ಅವರ ವಂಶವನ್ನೇ ನಿರ್ನಾಮ ಮಾಡುವ ಹುನ್ನಾರ ನಡೆಯುತ್ತದೆ. ಇದಕ್ಕೆ ಒಂದು ಕಾರಣವನ್ನು ಕೊಡಲು ಸಾಧ್ಯವಿಲ್ಲ, ಹಲವಾರು ಐತಿಹಾಸಿಕ ಮತ್ತು ಸಾಂಧರ್ಬಿಕ ವೈಚಾರಿಕ ಕಾರಣಗಳ ಸರಮಾಲೆಯೇ ಹರಿದು ಬರುತ್ತದೆ.
       ಕಾಶ್ಮೀರಿ ಪಂಡಿತರ ವಿಷಯಕ್ಕೆ ಬರೋಣ. ಇವರಲ್ಲಿ. ಎರಡು ಪಂಗಡಗಳಿತ್ತು,ಒಂದು ಪಂಗಡ 'ಬಲಮಾಸಿ' ಇನ್ನೊಂದು ಪಂಗಡ 'ಮಲಮಾಸಿ' ಎಂದು. ಈ ಮಲಮಾಸಿಗಳು ಮಾತ್ರ ಯಾವ ಮುಸ್ಲೀಮರ ಆಕ್ರಮಣಕ್ಕೂ ಹೆದರದೆ ಕಾಶ್ಮೀರದಲ್ಲೇ ಉಳಿದುಕೊಂಡುಬಿಟ್ಟರು. ಬಲಮಾಸಿಗಳು ವಲಸೆ ಹೋಗಿ ಪುನಃ ಅನುಕೂಲ ಪರಿಸ್ಥಿತಿ ಉಂಟಾದಾಗ ಕಾಶ್ಮೀರಕ್ಕೆ ಮರಳಿದರು. ಹೀಗೆ ಮರಳಿಬಂದ ಬಲಮಾಸಿಗಳು ವ್ಯಾಪಾರದ ಕಡೆಗೆ ಒಲವು ಬೆಳೆದು ಬಹಳ ಯಶಸ್ವಿ ಹಾಗು ಶ್ರೀಮಂತ ವರ್ತಕರಾದರು.
       ಮಲಮಾಸಿಗಳು ವಂಶಪಾರಂಪರ್ಯವಾಗಿ ಬಂದ ವಿದ್ಯಾರ್ಜನೆ, ಶಿವಾರಾಧನೆ ಮತ್ತು ಪೂಜೆ ಪುನಸ್ಕಾರಗಳಲ್ಲಿ ನಿರತರಾದರು. ಅಕ್ಬರನ ಕಾಲವೊಂದನ್ನು ಬಿಟ್ಟರೆ ಕಾಶ್ಮೀರಿ ಪಂಡಿತರು ಮಸ್ಲೀಮರ ದೌರ್ಜನ್ಯವನ್ನು ಸದಾ ಎದರಿಸುತ್ತಲೇ ಇದ್ದರು. ಇವರ ಶ್ರೀಮಂತಿಕೆ,ಆಚಾರ ವಿಚಾರಗಳು,ವಿದ್ಯಾ ಫ್ರೌಡತೆ ಮತ್ತು ದೈವೀಭಕ್ತಿಯ ಪ್ರಖರತೆ ಮುಸ್ಲೀಮರ ಕಣ್ಣು ಕುಕ್ಕುತ್ತಿತ್ತು.

   ಯಹೂದಿಗಳದೂ ಇದೇ ಪಾಡು.  ಇವರೂ ವಲಸಿಗರೇ. ಇವರೂ ಸಹ ಆಚಾರ ವಿಚಾರವಂತರು. ವಿದ್ಯಾರ್ಜನೆಗೆ ಇವರಲ್ಲಿ ತುಂಬಾ ಮಹತ್ತ್ವಕೊಡುತ್ತಾರೆ. ಒಂದು ಸಮಯದಲ್ಲಿ ಯೂರೋಪಿನ ಬಹುಮಟ್ಟದ ವ್ಯವಹಾರ ಅದೂ ಚಿನ್ನ ವಜ್ರಗಳ ವ್ಯಾಪಾರ ಇವರ ಕೈಯಲ್ಲಿತ್ತು. ಇವರ ಯಶಸ್ಸೇ ಇವರಿಗೆ ಮುಳುವಾಯಿತು.
   ಇದೆಲ್ಲದರ ಹಿನ್ನಲೆಯಲ್ಲಿ ಆ ಕ್ರೂರಿ ಹಿಟ್ಲರ್ ಲಕ್ಷಾಂತರ ಯಹೂದಿಗಳ ನರಮೇಧ ನಡೆಸುತ್ತಾನೆ.

      ಈಗ ವಿಶ್ವವನ್ನೇ ನಿಬ್ಬರಿಗಾಗಿಸಿದ "ಒಸಿರಾಕ್ ರೈಡ್"ಗೆ
ಬರೋಣ. ಹೀಗೇ ಆತ್ಮಾವಲೋಕನ ಮಾಡುತ್ತಿದ್ದ ಪೈಲಟ್ಗಳ ಮುಖಂಡ ಕಮಾಂಡರ್ ಜೀ಼ವ್ ರಜ಼್ ಬಹಳ ದೈವೀಭಕ್ತ. ನಾಝಿಗಳ ನರಮೇಧದಲ್ಲಿ ಸತ್ತು ಹೋದ ಅಜ್ಜನಿಗೆ ಮನಸ್ಸಿನಲ್ಲೇ ನಮನ ಸಲ್ಲಿಸಿ 'ಅಜ್ಜಾ ಇದು ನಿನಗೆ'ಎಂದು ಎದ್ದು ವಿಮಾನದ ಕಡೆ ತೆರಳುತ್ತಾನೆ,ಇನ್ನುಳಿದ ಪೈಲಟ್ಟುಗಳೂ ತಮ್ಮ ಕಮಾಂಡರನ್ನೇ ಹಿಂಬಾಲಿಸುತ್ತಾರೆ. ಹದಿನಾಲ್ಕು ಜೆಟ್ ವಿಮಾನಗಳ ಕಿವಿಗಡಚಿಕ್ಕುವ ಶಬ್ದ ಇಸ್ರೇಲಿನ ಆ ರಹಸ್ಯವಾಯು ನೆಲೆಯನ್ನಾವರಿಸುತ್ತದೆ. ತ್ವರಿತ ಗತಿಯಿಂದ ಹಾರಾಟಕ್ಕೆ ಸಿಧ್ಧವಾಗುತ್ತವೆ. ಅಂತಿಮವಾಗಿ ವಿಮಾನದ ಪರಿಶೀಲನೆ ನಡೆಸಿ ಶಿಸ್ತಿನ ಒಂದು ಸಲ್ಯೂಟ್ ಹೊಡೆದ ಇಂಜಿನಿಯರುಗಳು ಗದ್ಗದರಾಗುತ್ತಾರೆ..ಎಲ್ಲರೂ ಮರಳಿಬರುತ್ತಾರಾ?
    ಎರಡು ನಿಮಿಷದಲ್ಲೇ ಚಕಚಕನೆ ಡೈಮಂಡ್ ಆಕಾರದ ಫಾರ್ಮೇಶನ್ ನಲ್ಲಿ ಒಂದುಗೂಡಿ ನೆಲದಿಂದ ಬರೀ ನೂರುಅಡಿ ಮೇಲೆ ಒಂದು ಸಾವಿರ ಕಿಮೀ ವೇಗದಲ್ಲಿ ಇಸ್ರೇಲಿ ಆಕಾಶದಿಂದ ಜೋರ್ಡಾನಿನ ಆಕಾಶವನ್ನು ಪ್ರವೇಶಿಸುತ್ತವೆ...ಅಲ್ಲೆ ಕಾದಿರುತ್ತದೆ ಮೊದಲನೆ ಗಂಡಾಂತರ.
ಜೋರ್ಡಾನಿನ ದೊರೆ ತನ್ನ ವೈಭವೋತೇಪ ಹಡಗಿನಲ್ಲಿ ಆ ಭಾನುವಾರ ತನ್ನ ಪರಿವಾರ ಸಮೇತ ಮೋಜಿನಲ್ಲಿ ಮೈಮರೆತಿರುವಾಗ,ಗುಂಡಿಗೆಯನ್ನೇ ಅಲ್ಲಾಡಿಸಿದ ಈ ಜೆಟ್ ವಿಮಾನಗಳು ಎಷ್ಟು ಕೆಳಗೆ ಹಾರುತ್ತಿದ್ದವೆಂದರೆ ಹಡಗಿನಲ್ಲಿದ್ದ ಎಲ್ಲರಿಗೂ ವಿಮಾನದ ಮೇಲಿದ್ದ ಇಸ್ರೇಲಿ ಲಾಂಛನಗಳು ಕಂಡವು. ನನ್ನ ದೇಶದ ಮೇಲೆ ಇಸ್ರೇಲಿ ವಿಮಾನಗಳು....ದೊರೆಗೆ ಶಾಕ್.  ಜಗತ್ತಿನಲ್ಲೇ ಅತ್ಯಾಧುನಿಕ ಯುಧ್ಧ ವಿಮಾನಗಳ ದಂಡು ಈ ಪರಿ ಪೂರ್ವ ದಿಕ್ಕಿನಲ್ಲಿ ಅಂದರೆ ಕೆಲವೇ ನಿಮಿಷಗಳಲ್ಲಿ ಸೌದಿ ಅರೇಬಿಯದ ಕಡೆ....ಆದರೆ ಅಲ್ಲೇಕೆ? ಉಹುಂ...ಇದೇನೊ ದೊಡ್ಡ ಮಟ್ಟದ ದಾಳಿ. ಅನುಮಾನವೇ ಇಲ್ಲ ಇದು ಇರಾಕಿನ ಮೇಲೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ದೊರೆ,ಕೂಡಲೇ ದೊರೆ ಹಡಗಿನ ಸಂಪರ್ಕಾಧಿಕಾರಿಯನ್ನು ಕರೆದು ಇರಾಕಿಗೆ ಎಚ್ಚರದಿಂದಿರುವ ಸಂದೇಶವನ್ನು ತ್ವರಿತವಾಗಿ ಕಳುಹಿಸಲು ಆದೇಶಿಸಿದ.
  
ಎಂಬತ್ತು ‌ಸೆಕೆಂಡುಗಳ ಕಾರ್ಯಾಚರಣೆ

         ಈ ಹದಿನಾಲ್ಕು ಯುಧ್ಧವಿಮಾನಗಳನ್ನು ಒಂದೇ ದೇಹದ ವಿವಿಧ ಅಂಗಗಳಂತೆ ವೇಗವಾಗಿ ಇರಾಕಿನ ದಿಕ್ಕಿನಲ್ಲಿ ಹಾರಿಸುತ್ತಿದ್ದ ಈ  ಪೈಲಟ್ಟುಗಳು ಮಾಡಬೇಕಾದ ಕೆಲಸ ಮಾತ್ರ ವಿಭಿನ್ನ. ಈ ಸರ್ಕಸ್ಸಿನ ಅತಿ ಹಿಂದೆ ಇದ್ದ ಎರಡು F-15 ವಿಮಾನಗಳ ಕೆಲಸವೇನೆಂದರೆ, ಹದ್ದಿನ ಕಣ್ಣಗಳಿಂದ ಸುತ್ತಲಿನ ಆಕಾಶವನ್ನು ಶತ್ರುಗಳ ಯುಧ್ಧವಿಮಾನದ ಚಲನ ವಲನದ ಬಗ್ಗೆ ವೀಕ್ಷಿಸುವುದು. ಹಾಗೇನಾದರೂ ಕಂಡುಬಂದಲ್ಲಿ ಅವುಗಳ ಹಿಂದೆಬಿದ್ದು ಅವುಗಳನ್ನು ನಿಷ್ಕ್ರಿಯೆಗೊಳಿಸುವುದು.
ಇನ್ನೆರಡು ಏರೋಪ್ಲೇನುಗಳ ಕೆಲಸವೆಂದರೆ ರೆಡಾರುಗಳನ್ನು ಮಧ್ಯ ಮಧ್ಯ ಕೆಕ್ಕರು ಬಿಕ್ಕರು ಮಾಡಿಡುವುದು. ಇನ್ನಿಬ್ಬರು ಕೆಳಗಿನಿಂದ ಗನ್ನುಗಳ ಫೈರಿಂಗ್ ಏನಾದರೂ ಶುರುವಾದರೆ ಅವರನ್ನು ನಿಷ್ಕ್ರಿಯೆಗೊಳಿಸುವುದು. ಈ ಚಕ್ರವ್ಯೂಹದ ನಡು ಮಧ್ಯದಲ್ಲಿರುವ ಆರು F-16 ವಿಮಾನಗಳೇ ಆ ಅಣು ಕೇಂದ್ರದ ಮೇಲೆ ಬರೋಬ್ಬರಿ ತಲಾ ಎರಡೆರಡು ಟನ್ ಮಿಸೈಲುಗಳ ಸುರಿಮಳೆ ಮಾಡಬೇಕಾಗಿರುವುದು. ಯುಧ್ಧವಿಮಾನಗಳು ಯಾವಾಗಲೂ ಒಂದು ವಿನ್ಯಾಸದ ಫಾರ್ಮೇಶನ್ ಮಾಡಿಕೊಂಡು ಹಾರುತ್ತವೆ. ಈ ತಂಡ ತರಬೇತಿ ಸಮಯದಲ್ಲಿ ಒಂದು ಹೊಸ ಫಾರ್ಮೇಶನ್ನಿನ ಅವಿಶ್ಕಾರಗೊಳಿಸಿತು. ಈ ವಿನ್ನ್ಯಾಸ ರಡಾರಿನಲ್ಲಿ ನೋಡಿದವರಿಗೆ ಒಂದು ಜಂಬೊಜೆಟ್ಟಿನಂತೆ ಕಾಣುತ್ತಿತ್ತು,ಯುಧ್ಧವಿಮಾನದಂತಲ್ಲ!
     ಈ ತೊಂಬತ್ತು ನಿಮಿಷಗಳ ನಿಶಬ್ದ ವಾಯುಯಾನದಲ್ಲಿ ಹೆಲ್ಮಟ್ಟುಗಳಮೇಲೆ ಬರೆದಿರುವ ಹೆಸರುಗಳನ್ನು ಓದುವಷ್ಟು ಹತ್ತಿರಿದಲ್ಲಿದ್ದರೂ ಮಾತಾಡುವ ಹಾಗಿಲ್ಲ,ಅದಕ್ಕೇ ಆಗಾಗ ಎಲ್ಲಾ ಸರಿ ಇದೆ ಎನ್ನುವಂತೆ ತಲೆಯಾಡಿಸುತ್ತಿದ್ದರು.
     ಎಲ್ಲಾ ...ಸರಿಯಿತ್ತಾ?
     ಕೆಲವೇ ನಿಮಿಷಗಳಲ್ಲಿ ಇರಾಕಿನ ಗಡಿಯನ್ನು ದಾಟಿ, ಬಾಗ್ದಾದ್ ಇನ್ನೇನು ಹದಿನೈದು ಮೈಲುಗಳಿದೆ ಎನ್ನುವಷ್ಟರಲ್ಲಿ ಪ್ಲಾನಿನ ಪ್ರಕಾರ ಎಲ್ಲರೂ ಚದರಿಕೊಂಡು ಒಂದೊಂದು ದಿಕ್ಕಿಗೊಬ್ಬರಂತೆ ಹಾರುತ್ತಾ ಮೇಲೇರತೊಡಗಿದರು. ಆಗ ಕಾಣಿಸಿತು ನೋಡಿ ಅಣು ಕೇಂದ್ರದ ಗೋಪುರ ! ಇಸ್ರೇಲಿಯರ ಸರ್ವನಾಶದ ಅಣುಬಾಂಬಿನ ತವರು. ಮೊದಲು ಡೈವ್ ‌ಹೊಡೆದು ಅಣುಸ್ಥಾವರದ ನಡು ಮಧ್ಯದ ಭಾಗಕ್ಕೆ ಬಾಂಬು ಹಾಕಿದ್ದು ಕಮಾಂಡರ್ ಜೀ಼ವ್ ರಜ಼್ ,ಇನ್ನೊಮ್ಮೆ'ಅಜ್ಜಾ ಇದು ನಿನಗೆ'ಎನ್ನುತ್ತಾ. ಹತ್ತು ಸೆಕೆಂಡಿನ ಅಂತರದಲ್ಲಿ ಇನ್ನೊಂದು...ಮತ್ತೊಂದು,ಹೀಗೆ ಕೇವಲ ಎಂಬತ್ತು ಸೆಕೆಂಡಿನಲ್ಲಿ ಆ ಅಣುಸ್ಥಾವರದ ಅವಷೇಶವೂ ಉಳಿಯದಂತೆ ಈ ಭೂಪಟದಿಂದಲೇ ಶಾಶ್ವತವಾಗಿ ಅಳಿಸಿಹೋಯಿತು ಒಸಿರಾಕ್ ರಿಯಾಕ್ಟರ್.
     ಹಿಂದಿನಿಂದ ಬಂದ ಎರಡು F-15 ವಿಮಾನಗಳು ಒಂದಿಂಚೂ ಬಿಡದೆ ಚಕಚಕನೆ ಫೋಟೊ ತೆಗೆದು ಬಿಟ್ಟವು. ಕೂಡಲೇ ಎಲ್ಲಾ ವಿಮಾನಗಳು ಬರೀ ನಾಲ್ಕು ನಿಮಿಷದಲ್ಲಿ ನಲವತ್ತು ಸಾವಿರ ಅಡಿಯನ್ನು ತಲುಪಿದವು.
     ಅಲ್ಲಿಂದ ಪುನಃ ಮೂರು ಶತ್ರುದೇಶದ ಆಕಾಶವನ್ನು ಸೀಳಿಕೊಂಡು ವಾಪಸ್ ಇಸ್ರೇಲಿಗೆ!. ಸುರಕ್ಷಿತವಾಗಿ ತಲುಪಿದ ಈ ಫಾರ್ಮೇಶನ್ನ ತಂಡದ ನಾಯಕ ಮೌನವನ್ನು ಮುರಿದಿದ್ದು ಯಹೂದಿಗಳ ಪ್ರಾರ್ಥನೆಯೊಂದಿಗೆ,ಆ ಪ್ರಾರ್ಥನೇ ಮುಗಿದನಂತರವೇ ಅವರು ಪೈಲಟ್ಗಳ ಭಾಷೆಯಲ್ಲಿ ಮಾತಾಡಲು ಶುರುಮಾಡಿಕೊಂಡಿದ್ದು.

     ಇಸ್ರೇಲಿನ ಪ್ರಧಾನಿ ಖುಧ್ಧಾಗಿ ಬರುತ್ತಾರೆ ಈ ಗಂಡುಗಲಿಗಳನ್ನು ಭೇಟಿಮಾಡಲು. ಅರ್ಧ ಗಂಟೆಯಲ್ಲೇ ನಡೆದ ಪ್ರೆಸ್ ಮೀಟ್ ನಲ್ಲಿ ಮಾಜಿ ಒಸಿರಾಕ್ನ ಫೋಟೋಗಳನ್ನು ಬಿಡುಗಡೆ ಮಾಡಲಾಗುತ್ತದೆ. ಇಡೀ ಪ್ರಪಂಚವೇ ಬೆಕ್ಕಸ ಬೆರಗಾಗುತ್ತವೆ. ಮಸ್ಲೀಮ್ ದೇಶಗಳು ಅವಮಾನದಿಂದ ಕುದ್ದು ಹೋಗುತ್ತವೆ.
     ಅಮೆರಿಕವೂ ಮೇಲ್ನೋಟಕ್ಕೆ ವಿಶ್ವಸಂಸ್ಥೆಯಲ್ಲಿ ವಿರೋದ ವ್ಯಕ್ತಪಡಿಸುತ್ತದಾದರೂ ಒಳಗೊಳಗೆ ಇಸ್ರೇಲಿಯರಿಗೆ ದೊಡ್ಡ ಥ್ಯಾಂಕ್ಯು ಹೇಳುತ್ತದೆ.
     Fortune favors the brave ಎನ್ನುವಹಾಗೆ,ಜೋರ್ಡಾನಿನ ದೊರೆ ಕಳುಹಿಸಿದ ಎಚ್ಚರಿಕೆಯ ಸಂದೇಶ ಇರಾಕನ್ನು ತಲುಪುವುದೇ ಇಲ್ಲ. ಟನ್ನುಗಟ್ಟಲೇ ಬಾಂಬು ಅಣು ಸ್ಥಾವರದ ಮೇಲೆ ಸುರಿದರೂ ಇರಾಕಿನ ನಾಗರೀಕರಿಗೆ ಕಿಂಚಿತ್ತೂ ಹಾನಿಯಾಗುವುದಿಲ್ಲ. ಎಲ್ಲದಿಕ್ಕಿಂತ ಮುಖ್ಯವಾಗಿ ಇದರ timing..ಇನ್ನು ಹತ್ತು ದಿನಗಳಲ್ಲಿ critical ಆಗಲಿದ್ದ ಈ ಅಣುಸ್ಥಾವರವನ್ನು ನಾಶಮಾಡಿದರೇ ವಿನಃ ಅಲ್ಲಿಯ ನಾಗರೀಕರಿಗೆ ಕಿಂಚಿತ್ತೂ ಹಾನಿಯಾಗದಹಾಗೆ ನೋಡಿಕೊಂಡರು.