ಶತ್ರುಗಳ ಮನೆಗೇ ನುಗ್ಗಿ ಹೊಡೆವ ಧೀರರು
1990 ಜನವರಿಯಲ್ಲಿ ಕಾಶ್ಮೀರ ಕಣಿವೆಯಲ್ಲಿ ಒಂದು ಫರ್ಮಾನು ಹೊರಟಿತು. ಎಲ್ಲಾ ಮಸೀದಿಗಳಲ್ಲಿ ಈ ಆದೇಶದವನ್ನು ಕಠಿಣವಾಗಿ ಪಾಲಿಸಲೇ ಬೇಕು ಎಂಬ ಎಚ್ಚರಿಕೆಯೊಂದಿಗೆ ಹೊರಡಿಸಿದ ಈ ಕಠೋರ ಆಘ್ನೆ ಏನೆಂದರೆ....ಕಣಿವೆಯ ಎಲ್ಲಾ ಹಿಂದುಗಳನ್ನು ಇಸ್ಲಾಮಿಗೆ ಮತಾಂತರಿಸಬೇಕು,ಒಪ್ಪದಿದ್ದರೆ ಓಡಿಸಿಬಿಡಬೇಕು ಇಲ್ಲವೇ ಕೊಂದು ಬಿಡಬೇಕು.
ಎಂತಹ ಅಸಹನೀಯ ಸನ್ನಿವೇಶ..ಎಷ್ಟು ವಿಪರ್ಯಾಸ. ಕಶ್ಯಪ ಮುನಿ ಶೃಷ್ಟಿಸಿದ ಕಾಶ್ಮೀರದಲ್ಲಿ, ಅದೂ ಪಂಡಿತರಿಗೇ ಎಂದು ವಿಷೇಶವಾಗಿ ಮೀಸಲಿಟ್ಟು ಅವರನ್ನು ರಕ್ಷಿಸಿ ಬೆಳಸಿದ ಈ ಪುಣ್ಯ ಕ್ಷೇತ್ರದಲ್ಲಿ ನೂರಾರು ಕಾಶ್ಮೀರಿ ಪಂಡಿತರ ಮಾರಣ ಹೋಮ ನಡೆದು ಹೋಯಿತು. ಸುಮಾರು ಒಂದು ಲಕ್ಷ ಪಂಡಿತರು ಈ ದುಷ್ಕರ್ತ್ತ್ಯವನ್ನು ಸಹಿಸಲಾಗದೆ ತಲತಲಾಂತರಗಳಿಂದ ನೆಲಸಿದ್ದ ಕಾಶ್ಮೀರ ವನ್ನು ತೊರೆಯಬೇಕಾಯಿತು.
ಇತಿಹಾಸದಲ್ಲಿ ಸತತವಾಗಿ ಈ ರೀತಿಯ ಜಾತಿಯಾಧಾರಿತ ಮಾರಣಹೋಮ ನಡದಿದ್ದೆಂದರೆ ಯಹೂದಿಗಳ ಮೇಲೆ. ಹೀಗೆ ಅವರ ಮೇಲೆ ದೌರ್ಜನ್ಯ ನಡೆಯುತ್ತಿದ್ದಾಗ ಯಾರೂ ಅವರ ಸಹಾಯಕ್ಕೆ ಮುನ್ನುಗ್ಗಲಿಲ್ಲ. ಅವರಿಗೆ ತಮ್ಮದೇ ಆದ ದೇಶವೆನ್ನುವುದೇ ಇರಲಿಲ್ಲ. ಅವರ ದೇಶ ಇಸ್ರೇಲ್ ಅಸ್ಥಿತ್ವಕ್ಕೆ ಬಂದದ್ದು 1948ರಲ್ಲಿ. ಅಷ್ಟರಲ್ಲಾಗಲೇ ಸುಮಾರು 60 ಲಕ್ಷ ಯಹೂದಿಗಳನ್ನು ಜರ್ಮನಿಯಲ್ಲಿ ಮತ್ತು ಜರ್ಮನಿಯ ಆಡಳಿತಕ್ಕೊಳಪಟ್ಟ ಇತರೆ ಯೂರೋಪಿನ ದೇಶಗಳಲ್ಲಿ ಕೊಲ್ಲಲಾಯಿತು. 1948 ರಲ್ಲಿ ಇಸ್ರೇಲಿಗೆ ಬಂದ ಯಹೂದಿಗಳು ಸೇಡಿನಿಂದ ಕುದಿಯುತ್ತಿದ್ದ ಎರಡನೇ ತಲೆಮಾರು.
ಅಸಲಿಗೆ ಇಸ್ರೇಲೆಂದರೆ ಎಷ್ಟಿದೆ? ಬೆಂಗಳೂರಿನಿಂದ ದಾವಣಗೆರೆಯಷ್ಟು, ಕರ್ನಾಟಕದ ಮೂರನೇ ಒಂದು ಭಾಗ! ಆದರೆ ಅದನ್ನು ಸುತ್ತುವರೆದಿರುವ ಏಳು ಮುಸ್ಲಿಂ ದೇಶಗಳಿಗೆ ಇಸ್ರೇಲ್ ಎಂದರೆ ಸಿಂಹಸ್ವಪ್ನ. ವಿಶ್ವದಲ್ಲೇ ಅತ್ಯಂತ ಸಾಹಸಿ ದೇಶ. ಇಲ್ಲಿರುವ ಅತ್ಯಾಧುನಿಕ ಯುಧ್ಧ ವಿಮಾನಗಳು,ಯುಧ್ಧ ಸಾಮಗ್ರಿಗಳು ಭಾರತದಲ್ಲಿಯೂ ಇಲ್ಲ. ಹಾಗಾದರೆ ಇವರ ಭೂಸೇನೆ,ವಾಯುಸೇನೆ ಅಷ್ಟು ದೊಡ್ಡದೇ? ಉಹುಂ ಇಲ್ಲವೇ ಇಲ್ಲ.. ಯಾಕೆಂದರೆ ಇಲ್ಲಿರುವ ಪ್ರತಿಯೊಬ್ಬ ಪ್ರಜೆಯು ಸೈನಿಕ. ಡಾಕ್ಟರಿರಲಿ,ಇಂಜಿನಿಯರ್,ಲಾಯರ್,ಕ್ಲರ್ಕ್,ಕ್ಷೌರಿಕ ಎಲ್ಲರಿಗೂ ತಮ್ಮ ಮೂಲ ಕಸುಬಿನ ಜೊತೆ ಮಿಲಿಟರಿ ತರಬೇತಿ ಕಡ್ಡಾಯ. ಅವಶ್ಯಕತೆಯಿದ್ದಾಗ ಅವರಿಗೊಂದು ರಹಸ್ಯ ಸಂದೇಶದ ಮೂಲಕ ಇಂತಹ ಸ್ಥಳಕ್ಕೆ ಬರಬೇಕೆಂಬ ಆದೇಶ ಸಿಗುತ್ತದೆ. ಅಲ್ಲಿಂದ ಅವರಿಗೆ ಕೊಟ್ಟ ಕಾರ್ಯಾಚರಣೆ ಮುಗಿಯುವತನಕ ಅವರು ಸೈನಿಕ,ಅದು ಮುಗಿದ ಮೇಲೆ ವಾಪಸ್ ತಮ್ಮ ತಮ್ಮ ಕಸುಬಿಗೆ.
80 ರ ದಶಕದಲ್ಲಿ ಇರಾಕಿನ ಐಲು ದೊರೆ ಸದ್ದಾಂ ಹುಸೇನ್,ಇಸ್ರೇಲಿನ ಕಿರಿಕಿರಿಯನ್ನು ಸಹಿಸಲಾಗದೆ ಒಂದು ಹುಚ್ಚು ಸಾಹಸಕ್ಕೆ ಕೈ ಹಾಕುತ್ತಾನೆ. ಫ್ರಾನ್ಸ್ ದೇಶದಿಂದ ಅಣುಬಾಂಬು ತಯಾರಿಸುವ ಒಂದು atomic reactor ಖರೀದಿಸುತ್ತಾನೆ. ಬಾಗ್ದಾದ್ ನ ಹೊರವಲಯದಲ್ಲಿ ಈ ರಿಯಾಕ್ಟರನ್ನು ಸ್ಥಾಪಿಸುವ ಕಾರ್ಯ ಭರದಿಂದ ಸಾಗುತ್ತದೆ. ಯಹೂದಿಗಳೇ ಇನ್ನೊಂದು ಮಾರಣ ಹೋಮಕ್ಕೆ ಸಿದ್ದರಾಗಿರಿ..ಒಂದೊಂದು ಅಣು ಬಾಂಬು 50000 ಇಸ್ರೇಲಿಯರನ್ನು ಕೊಲ್ಲುವ ಸಾಮರ್ಥ್ಯವಿದೆ ಎಂದು ವಿಶ್ವವಲಯಗಳಲ್ಲಿ ಕೊಚ್ಚಿಕೊಳ್ಳಲು ಶುರು ಮಾಡುತ್ತಾನೆ. ಇಸ್ರೇಲ್, ಫ್ರಾನ್ಸ್ ದೇಶಕ್ಕೆ ಮನವಿ ಮಾಡಿಕೊಳ್ಳುತ್ತದೆ,ದಯವಿಟ್ಟು ಈ ರಿಯಾಕ್ಟ್ರನ್ನು ಮಾರಬೇಡಿ ಎಂದು. ಆದರೆ ಈ ಗುಳ್ಳೇನರಿಯಂತ ಯೂರೋಪಿನ ದೇಶಗಳನ್ನು ನಂಬಲಾಗದೆಂದು ಮನವರಿತುಕೊಂಡು ತನ್ನ ತಯಾರಿಯನ್ನು ನಡೆಸ ತೊಡಗಿತು.
ಅಂದಿನ ಇಸ್ರೇಲಿನ ಪ್ರಧಾನಿ ಮತ್ತು ವಾಯುಸೇನೆಯ ಅಧ್ಯಕ್ಷ,ಇವರಿಬ್ಬರಿಗೇ ಮಾತ್ರ ಗೊತ್ತಿರುವ ಒಂದು ರಣ ತಂತ್ರ ನಿರ್ಮಿತವಾಗುತ್ತದೆ. ಅದರ ಪ್ರಕಾರ ಅಲ್ಲಿ ಇರಾಕಿನಲ್ಲಿ ನಿರ್ಮಾಣವಾಗಿರುವ ರಿಯಾಕ್ಟರಿನ ಒಂದು ಅದೇ ಸೈಜಿ಼ನ ಮಾದರಿಯನ್ನು ಸಿನಾಯಿ ಮರು ಭೂಮಿಯಲ್ಲಿ ನಿರ್ಮಿಸಲಾಗುತ್ತದೆ. ಯಧ್ಧವಿಮಾನದ ಹಾರಾಟದಲ್ಲಿ ಅತಿ ಕುಶಲತೆಯನ್ನು ಪಡೆದ ಸುಮಾರು 20 ಪೈಲಟ್ಟುಗಳನ್ನು ಈ ತರಬೇತಿಗೆ ನಿಯಮಿಸಲಾಗುತ್ತದೆ. ಎಂಟು F-16 ಮತ್ತು ಆರು F-15 ವಿಮಾನಗಳನ್ನು ಈ "ಆಪರೇಶನ್ ಒಪೇರ"ದಲ್ಲಿ ಬಳಸಲಾಗುತ್ತದೆ. ಪೈಲಟ್ಗಳಿಗೆ ಎಷ್ಟು ಬೇಕೊ ಅಷ್ಟು ವಿಷಯವನ್ನು ಮಾತ್ರ ತಿಳಿಸಿರುತ್ತಾರೆ. ಒಂದು ಗೋಲಾಕಾರವಾಗಿ ಕಾಣುವ ಈ target ಮೇಲಷ್ಟೇ ಬಾಂಬುಗಳನ್ನು ಬೀಳಿಸಬೇಕು. ಪ್ರತಿಯೊಬ್ಬ ಪೈಲಟ್ ಅವರಿಗೆ ಗುರುತು ಹಾಕಿಕೊಟ್ಟ ಜಾಗಕ್ಕೆ ಮಾತ್ರ ಬಾಂಬ್ ಹಾಕ ಬೇಕು. ಭೂಮಿಯಿಂದ ನೂರು ಅಡಿ ಮೇಲೆ ಅದೂ 1200 ಕಿಮೀ ವೇಗದಲ್ಲಿ ಸರಿ ಸುಮಾರು ಒಂದೂವರೆ ಘಂಟೆ ವಿಮಾನಹಾರಿಸುವುದು ಸಾಮಾನ್ಯದ ವಿಷಯವಲ್ಲ. ಅದರಲ್ಲೂ ಇನ್ನು ಹೆಚ್ಚಿನ ಅಪಾಯಕಾರಿ ವಿಷಯವೆಂದರೆ ಇರಾಕಿನ ಈ target ತಲುಪಲು ಈ ಹದಿನಾಲ್ಕು ವಿಮಾನಗಳು ಇಸ್ರೇಲಿನ ಬದ್ದ ವೈರಿಗಳಾದ ಜೋರ್ಡನ್,ಸೌದಿ ಅರೇಬಿಯ ಮತ್ತು ಇರಾಕ್ ದೇಶಗಳ ಮೇಲೆ ಹಾರಿ ಹೋಗಬೇಕು. ವಿಮಾನಗಳು ರಾಡಾರ್ಗಳಿಗೆ ಕಾಣಿಸಿಕೊಳ್ಳಬಾರದೆಂದರೆ ಹೀಗೇ ಭೂಮಿಯನ್ನು ತಬ್ಬಿಕೊಂಡು ಹೋಗಬೇಕು. ಅದರ ತರಬೇತಿಯೂ ನಿರಂತರವಾಗಿ ನಡೆಯುತ್ತದೆ.
ಜೂನ್ 7,1981, ಅಂದು ಭಾನುವಾರ ಸಂಜೆ "ಒಸಿರಾಕ್ ರೈಡ್"ನ ಕಾರ್ಯಾಚರಣೆ ಶುರುವಾಗುತ್ತದೆ. ಭಾನುವಾರ ಎಲ್ಲಾ ಕಡೆ ಒಂದು ವಿಶ್ರಾಮದ ವಾತಾವರಣವಿರುವುದರಿಂದ ಈ ದಿನವನ್ನು ಆಯ್ಕೆ ಮಾಡಲಾಗುತ್ತದೆ ಮತ್ತು ಒಂದೂವರೆಗಂಟೆಗಳ ಹಾರಾಟದ ನಂತರ ಇರಾಕನ್ನು ತಲುಪಿದಾಗ ಅಲ್ಲಿಯ ಸೈನಿಕರ ಶಿಫ್ಟ್ ಬದಲಾಯಿಸುವ ಸಮಯ,ಮಾತು ಕಥೆಯ ಸಮಯ , ಈ ಯುಧ್ಧ ವಿಮಾನಗಳನ್ನು ರಡಾರಿನಲ್ಲಿ ಕಂಡರೂ ಕೂಡಲೇ ಅವರು ಪ್ರತಿಕ್ರಿಯಿಸುವ ಮುನ್ನವೇ ತಮ್ಮಕೆಲಸ ಮುಗಿಸಿ ಬಿಡುವ ಒಂದು ಸಂಕ್ಷಿಪ್ತವಾದ ಪ್ಲಾನ್ ಮಾಡಿರುತ್ತಾರೆ ಒಂದೊಂದು ವಿಮಾನವೂ ಸುಮಾರು ಎರಡು ಟನ್ ಗಳಷ್ಟು ಬಾಂಬುಗಳನ್ನು ಹೊತ್ತುಕೊಂಡಿದೆ. ಈ ಎಲ್ಲಾ ವಿಮಾನಗಳನ್ನು ಗಡಿಪ್ರದೇಶದ ಒಂದು ರಹಸ್ಯ ವಾಯುನೆಲೆಗೆ ಸಾಗಿಸಲಾಗುತ್ತದೆ. ಎಷ್ಟು ಸಾಧ್ಯವೋ ಅಷ್ಟು ಇಂಧನವನ್ನು ತುಂಬಲಾಗುತ್ತದೆ. ನಾಲ್ಕು ನಾಲ್ಕು ಗುಂಪಿನ ಯುಧ್ಧ ವಿಮಾನಗಳ formation ಸಾಯಂಕಾಲದ ಸಮಯಕ್ಕೆ ಅಲ್ಲಿಂದ ನಿರ್ಗಮಿಸಬೇಕು.
ಪೈಲಟ್ಗಳಿಗೆ ಒಂದು ಗಂಟೆಯ ಸಮಯವಿದೆ. ಯಾರಿಗಾದರೂ ಈ ಕೊನೆಯ ಗಳಿಗೆಯಲ್ಲಿ ತಾವು ಕೈಗಳ್ಳುತ್ತಿರುವ mission ನಲ್ಲಿ ಏನಾದರೂ ಸಂದೇಹವಿದ್ದರೆ..ಏಕೆಂದರೆ ಮುಂದಿನ ಮೂರು ನಾಲ್ಕು ತಾಸು ಸಂಪೂರ್ಣ ನಿಶಬ್ದ! Complete radio silence. ಎಲ್ಲರೂ ಶಾಂತವಾಗೇ ಇರುತ್ತಾರೆ ಮತ್ತು ತಮ್ಮೊಳಗೇ ಆತ್ಮಾವಲೊಕನ ಮಾಡಿಕೊಳ್ಳತ್ತಾರೆ. ಏನೇ ಆಗಲಿ ಇಸ್ರೇಲಿಗಳ ಮೇಲೆ ಇನ್ನೊಂದು ಮಾರಣಹೋಮವಾಗಲು ಬಿಡಬಾರದು.
ಜೋರ್ಡಾನಿನ ದೊರೆಗಾದ ಆಘಾತ
ಇಸ್ರೇಲಿನ ಯಹೂದಿಗಳಾಗಲೀ ಅಥವಾ ಕಾಶ್ಮೀರದ ಪಂಡಿತರಾಗಲಿ, ಏಕೆ ಈ ದ್ವೇಷಕ್ಕೆ ತುತ್ತಾಗುತ್ತಾರೆ,ಏಕೆ ಅವರ ವಂಶವನ್ನೇ ನಿರ್ನಾಮ ಮಾಡುವ ಹುನ್ನಾರ ನಡೆಯುತ್ತದೆ. ಇದಕ್ಕೆ ಒಂದು ಕಾರಣವನ್ನು ಕೊಡಲು ಸಾಧ್ಯವಿಲ್ಲ, ಹಲವಾರು ಐತಿಹಾಸಿಕ ಮತ್ತು ಸಾಂಧರ್ಬಿಕ ವೈಚಾರಿಕ ಕಾರಣಗಳ ಸರಮಾಲೆಯೇ ಹರಿದು ಬರುತ್ತದೆ.
ಕಾಶ್ಮೀರಿ ಪಂಡಿತರ ವಿಷಯಕ್ಕೆ ಬರೋಣ. ಇವರಲ್ಲಿ. ಎರಡು ಪಂಗಡಗಳಿತ್ತು,ಒಂದು ಪಂಗಡ 'ಬಲಮಾಸಿ' ಇನ್ನೊಂದು ಪಂಗಡ 'ಮಲಮಾಸಿ' ಎಂದು. ಈ ಮಲಮಾಸಿಗಳು ಮಾತ್ರ ಯಾವ ಮುಸ್ಲೀಮರ ಆಕ್ರಮಣಕ್ಕೂ ಹೆದರದೆ ಕಾಶ್ಮೀರದಲ್ಲೇ ಉಳಿದುಕೊಂಡುಬಿಟ್ಟರು. ಬಲಮಾಸಿಗಳು ವಲಸೆ ಹೋಗಿ ಪುನಃ ಅನುಕೂಲ ಪರಿಸ್ಥಿತಿ ಉಂಟಾದಾಗ ಕಾಶ್ಮೀರಕ್ಕೆ ಮರಳಿದರು. ಹೀಗೆ ಮರಳಿಬಂದ ಬಲಮಾಸಿಗಳು ವ್ಯಾಪಾರದ ಕಡೆಗೆ ಒಲವು ಬೆಳೆದು ಬಹಳ ಯಶಸ್ವಿ ಹಾಗು ಶ್ರೀಮಂತ ವರ್ತಕರಾದರು.
ಮಲಮಾಸಿಗಳು ವಂಶಪಾರಂಪರ್ಯವಾಗಿ ಬಂದ ವಿದ್ಯಾರ್ಜನೆ, ಶಿವಾರಾಧನೆ ಮತ್ತು ಪೂಜೆ ಪುನಸ್ಕಾರಗಳಲ್ಲಿ ನಿರತರಾದರು. ಅಕ್ಬರನ ಕಾಲವೊಂದನ್ನು ಬಿಟ್ಟರೆ ಕಾಶ್ಮೀರಿ ಪಂಡಿತರು ಮಸ್ಲೀಮರ ದೌರ್ಜನ್ಯವನ್ನು ಸದಾ ಎದರಿಸುತ್ತಲೇ ಇದ್ದರು. ಇವರ ಶ್ರೀಮಂತಿಕೆ,ಆಚಾರ ವಿಚಾರಗಳು,ವಿದ್ಯಾ ಫ್ರೌಡತೆ ಮತ್ತು ದೈವೀಭಕ್ತಿಯ ಪ್ರಖರತೆ ಮುಸ್ಲೀಮರ ಕಣ್ಣು ಕುಕ್ಕುತ್ತಿತ್ತು.
ಯಹೂದಿಗಳದೂ ಇದೇ ಪಾಡು. ಇವರೂ ವಲಸಿಗರೇ. ಇವರೂ ಸಹ ಆಚಾರ ವಿಚಾರವಂತರು. ವಿದ್ಯಾರ್ಜನೆಗೆ ಇವರಲ್ಲಿ ತುಂಬಾ ಮಹತ್ತ್ವಕೊಡುತ್ತಾರೆ. ಒಂದು ಸಮಯದಲ್ಲಿ ಯೂರೋಪಿನ ಬಹುಮಟ್ಟದ ವ್ಯವಹಾರ ಅದೂ ಚಿನ್ನ ವಜ್ರಗಳ ವ್ಯಾಪಾರ ಇವರ ಕೈಯಲ್ಲಿತ್ತು. ಇವರ ಯಶಸ್ಸೇ ಇವರಿಗೆ ಮುಳುವಾಯಿತು.
ಇದೆಲ್ಲದರ ಹಿನ್ನಲೆಯಲ್ಲಿ ಆ ಕ್ರೂರಿ ಹಿಟ್ಲರ್ ಲಕ್ಷಾಂತರ ಯಹೂದಿಗಳ ನರಮೇಧ ನಡೆಸುತ್ತಾನೆ.
ಈಗ ವಿಶ್ವವನ್ನೇ ನಿಬ್ಬರಿಗಾಗಿಸಿದ "ಒಸಿರಾಕ್ ರೈಡ್"ಗೆ
ಬರೋಣ. ಹೀಗೇ ಆತ್ಮಾವಲೋಕನ ಮಾಡುತ್ತಿದ್ದ ಪೈಲಟ್ಗಳ ಮುಖಂಡ ಕಮಾಂಡರ್ ಜೀ಼ವ್ ರಜ಼್ ಬಹಳ ದೈವೀಭಕ್ತ. ನಾಝಿಗಳ ನರಮೇಧದಲ್ಲಿ ಸತ್ತು ಹೋದ ಅಜ್ಜನಿಗೆ ಮನಸ್ಸಿನಲ್ಲೇ ನಮನ ಸಲ್ಲಿಸಿ 'ಅಜ್ಜಾ ಇದು ನಿನಗೆ'ಎಂದು ಎದ್ದು ವಿಮಾನದ ಕಡೆ ತೆರಳುತ್ತಾನೆ,ಇನ್ನುಳಿದ ಪೈಲಟ್ಟುಗಳೂ ತಮ್ಮ ಕಮಾಂಡರನ್ನೇ ಹಿಂಬಾಲಿಸುತ್ತಾರೆ. ಹದಿನಾಲ್ಕು ಜೆಟ್ ವಿಮಾನಗಳ ಕಿವಿಗಡಚಿಕ್ಕುವ ಶಬ್ದ ಇಸ್ರೇಲಿನ ಆ ರಹಸ್ಯವಾಯು ನೆಲೆಯನ್ನಾವರಿಸುತ್ತದೆ. ತ್ವರಿತ ಗತಿಯಿಂದ ಹಾರಾಟಕ್ಕೆ ಸಿಧ್ಧವಾಗುತ್ತವೆ. ಅಂತಿಮವಾಗಿ ವಿಮಾನದ ಪರಿಶೀಲನೆ ನಡೆಸಿ ಶಿಸ್ತಿನ ಒಂದು ಸಲ್ಯೂಟ್ ಹೊಡೆದ ಇಂಜಿನಿಯರುಗಳು ಗದ್ಗದರಾಗುತ್ತಾರೆ..ಎಲ್ಲರೂ ಮರಳಿಬರುತ್ತಾರಾ?
ಎರಡು ನಿಮಿಷದಲ್ಲೇ ಚಕಚಕನೆ ಡೈಮಂಡ್ ಆಕಾರದ ಫಾರ್ಮೇಶನ್ ನಲ್ಲಿ ಒಂದುಗೂಡಿ ನೆಲದಿಂದ ಬರೀ ನೂರುಅಡಿ ಮೇಲೆ ಒಂದು ಸಾವಿರ ಕಿಮೀ ವೇಗದಲ್ಲಿ ಇಸ್ರೇಲಿ ಆಕಾಶದಿಂದ ಜೋರ್ಡಾನಿನ ಆಕಾಶವನ್ನು ಪ್ರವೇಶಿಸುತ್ತವೆ...ಅಲ್ಲೆ ಕಾದಿರುತ್ತದೆ ಮೊದಲನೆ ಗಂಡಾಂತರ.
ಜೋರ್ಡಾನಿನ ದೊರೆ ತನ್ನ ವೈಭವೋತೇಪ ಹಡಗಿನಲ್ಲಿ ಆ ಭಾನುವಾರ ತನ್ನ ಪರಿವಾರ ಸಮೇತ ಮೋಜಿನಲ್ಲಿ ಮೈಮರೆತಿರುವಾಗ,ಗುಂಡಿಗೆಯನ್ನೇ ಅಲ್ಲಾಡಿಸಿದ ಈ ಜೆಟ್ ವಿಮಾನಗಳು ಎಷ್ಟು ಕೆಳಗೆ ಹಾರುತ್ತಿದ್ದವೆಂದರೆ ಹಡಗಿನಲ್ಲಿದ್ದ ಎಲ್ಲರಿಗೂ ವಿಮಾನದ ಮೇಲಿದ್ದ ಇಸ್ರೇಲಿ ಲಾಂಛನಗಳು ಕಂಡವು. ನನ್ನ ದೇಶದ ಮೇಲೆ ಇಸ್ರೇಲಿ ವಿಮಾನಗಳು....ದೊರೆಗೆ ಶಾಕ್. ಜಗತ್ತಿನಲ್ಲೇ ಅತ್ಯಾಧುನಿಕ ಯುಧ್ಧ ವಿಮಾನಗಳ ದಂಡು ಈ ಪರಿ ಪೂರ್ವ ದಿಕ್ಕಿನಲ್ಲಿ ಅಂದರೆ ಕೆಲವೇ ನಿಮಿಷಗಳಲ್ಲಿ ಸೌದಿ ಅರೇಬಿಯದ ಕಡೆ....ಆದರೆ ಅಲ್ಲೇಕೆ? ಉಹುಂ...ಇದೇನೊ ದೊಡ್ಡ ಮಟ್ಟದ ದಾಳಿ. ಅನುಮಾನವೇ ಇಲ್ಲ ಇದು ಇರಾಕಿನ ಮೇಲೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ದೊರೆ,ಕೂಡಲೇ ದೊರೆ ಹಡಗಿನ ಸಂಪರ್ಕಾಧಿಕಾರಿಯನ್ನು ಕರೆದು ಇರಾಕಿಗೆ ಎಚ್ಚರದಿಂದಿರುವ ಸಂದೇಶವನ್ನು ತ್ವರಿತವಾಗಿ ಕಳುಹಿಸಲು ಆದೇಶಿಸಿದ.
ಎಂಬತ್ತು ಸೆಕೆಂಡುಗಳ ಕಾರ್ಯಾಚರಣೆ
ಈ ಹದಿನಾಲ್ಕು ಯುಧ್ಧವಿಮಾನಗಳನ್ನು ಒಂದೇ ದೇಹದ ವಿವಿಧ ಅಂಗಗಳಂತೆ ವೇಗವಾಗಿ ಇರಾಕಿನ ದಿಕ್ಕಿನಲ್ಲಿ ಹಾರಿಸುತ್ತಿದ್ದ ಈ ಪೈಲಟ್ಟುಗಳು ಮಾಡಬೇಕಾದ ಕೆಲಸ ಮಾತ್ರ ವಿಭಿನ್ನ. ಈ ಸರ್ಕಸ್ಸಿನ ಅತಿ ಹಿಂದೆ ಇದ್ದ ಎರಡು F-15 ವಿಮಾನಗಳ ಕೆಲಸವೇನೆಂದರೆ, ಹದ್ದಿನ ಕಣ್ಣಗಳಿಂದ ಸುತ್ತಲಿನ ಆಕಾಶವನ್ನು ಶತ್ರುಗಳ ಯುಧ್ಧವಿಮಾನದ ಚಲನ ವಲನದ ಬಗ್ಗೆ ವೀಕ್ಷಿಸುವುದು. ಹಾಗೇನಾದರೂ ಕಂಡುಬಂದಲ್ಲಿ ಅವುಗಳ ಹಿಂದೆಬಿದ್ದು ಅವುಗಳನ್ನು ನಿಷ್ಕ್ರಿಯೆಗೊಳಿಸುವುದು.
ಇನ್ನೆರಡು ಏರೋಪ್ಲೇನುಗಳ ಕೆಲಸವೆಂದರೆ ರೆಡಾರುಗಳನ್ನು ಮಧ್ಯ ಮಧ್ಯ ಕೆಕ್ಕರು ಬಿಕ್ಕರು ಮಾಡಿಡುವುದು. ಇನ್ನಿಬ್ಬರು ಕೆಳಗಿನಿಂದ ಗನ್ನುಗಳ ಫೈರಿಂಗ್ ಏನಾದರೂ ಶುರುವಾದರೆ ಅವರನ್ನು ನಿಷ್ಕ್ರಿಯೆಗೊಳಿಸುವುದು. ಈ ಚಕ್ರವ್ಯೂಹದ ನಡು ಮಧ್ಯದಲ್ಲಿರುವ ಆರು F-16 ವಿಮಾನಗಳೇ ಆ ಅಣು ಕೇಂದ್ರದ ಮೇಲೆ ಬರೋಬ್ಬರಿ ತಲಾ ಎರಡೆರಡು ಟನ್ ಮಿಸೈಲುಗಳ ಸುರಿಮಳೆ ಮಾಡಬೇಕಾಗಿರುವುದು. ಯುಧ್ಧವಿಮಾನಗಳು ಯಾವಾಗಲೂ ಒಂದು ವಿನ್ಯಾಸದ ಫಾರ್ಮೇಶನ್ ಮಾಡಿಕೊಂಡು ಹಾರುತ್ತವೆ. ಈ ತಂಡ ತರಬೇತಿ ಸಮಯದಲ್ಲಿ ಒಂದು ಹೊಸ ಫಾರ್ಮೇಶನ್ನಿನ ಅವಿಶ್ಕಾರಗೊಳಿಸಿತು. ಈ ವಿನ್ನ್ಯಾಸ ರಡಾರಿನಲ್ಲಿ ನೋಡಿದವರಿಗೆ ಒಂದು ಜಂಬೊಜೆಟ್ಟಿನಂತೆ ಕಾಣುತ್ತಿತ್ತು,ಯುಧ್ಧವಿಮಾನದಂತಲ್ಲ!
ಈ ತೊಂಬತ್ತು ನಿಮಿಷಗಳ ನಿಶಬ್ದ ವಾಯುಯಾನದಲ್ಲಿ ಹೆಲ್ಮಟ್ಟುಗಳಮೇಲೆ ಬರೆದಿರುವ ಹೆಸರುಗಳನ್ನು ಓದುವಷ್ಟು ಹತ್ತಿರಿದಲ್ಲಿದ್ದರೂ ಮಾತಾಡುವ ಹಾಗಿಲ್ಲ,ಅದಕ್ಕೇ ಆಗಾಗ ಎಲ್ಲಾ ಸರಿ ಇದೆ ಎನ್ನುವಂತೆ ತಲೆಯಾಡಿಸುತ್ತಿದ್ದರು.
ಎಲ್ಲಾ ...ಸರಿಯಿತ್ತಾ?
ಕೆಲವೇ ನಿಮಿಷಗಳಲ್ಲಿ ಇರಾಕಿನ ಗಡಿಯನ್ನು ದಾಟಿ, ಬಾಗ್ದಾದ್ ಇನ್ನೇನು ಹದಿನೈದು ಮೈಲುಗಳಿದೆ ಎನ್ನುವಷ್ಟರಲ್ಲಿ ಪ್ಲಾನಿನ ಪ್ರಕಾರ ಎಲ್ಲರೂ ಚದರಿಕೊಂಡು ಒಂದೊಂದು ದಿಕ್ಕಿಗೊಬ್ಬರಂತೆ ಹಾರುತ್ತಾ ಮೇಲೇರತೊಡಗಿದರು. ಆಗ ಕಾಣಿಸಿತು ನೋಡಿ ಅಣು ಕೇಂದ್ರದ ಗೋಪುರ ! ಇಸ್ರೇಲಿಯರ ಸರ್ವನಾಶದ ಅಣುಬಾಂಬಿನ ತವರು. ಮೊದಲು ಡೈವ್ ಹೊಡೆದು ಅಣುಸ್ಥಾವರದ ನಡು ಮಧ್ಯದ ಭಾಗಕ್ಕೆ ಬಾಂಬು ಹಾಕಿದ್ದು ಕಮಾಂಡರ್ ಜೀ಼ವ್ ರಜ಼್ ,ಇನ್ನೊಮ್ಮೆ'ಅಜ್ಜಾ ಇದು ನಿನಗೆ'ಎನ್ನುತ್ತಾ. ಹತ್ತು ಸೆಕೆಂಡಿನ ಅಂತರದಲ್ಲಿ ಇನ್ನೊಂದು...ಮತ್ತೊಂದು,ಹೀಗೆ ಕೇವಲ ಎಂಬತ್ತು ಸೆಕೆಂಡಿನಲ್ಲಿ ಆ ಅಣುಸ್ಥಾವರದ ಅವಷೇಶವೂ ಉಳಿಯದಂತೆ ಈ ಭೂಪಟದಿಂದಲೇ ಶಾಶ್ವತವಾಗಿ ಅಳಿಸಿಹೋಯಿತು ಒಸಿರಾಕ್ ರಿಯಾಕ್ಟರ್.
ಹಿಂದಿನಿಂದ ಬಂದ ಎರಡು F-15 ವಿಮಾನಗಳು ಒಂದಿಂಚೂ ಬಿಡದೆ ಚಕಚಕನೆ ಫೋಟೊ ತೆಗೆದು ಬಿಟ್ಟವು. ಕೂಡಲೇ ಎಲ್ಲಾ ವಿಮಾನಗಳು ಬರೀ ನಾಲ್ಕು ನಿಮಿಷದಲ್ಲಿ ನಲವತ್ತು ಸಾವಿರ ಅಡಿಯನ್ನು ತಲುಪಿದವು.
ಅಲ್ಲಿಂದ ಪುನಃ ಮೂರು ಶತ್ರುದೇಶದ ಆಕಾಶವನ್ನು ಸೀಳಿಕೊಂಡು ವಾಪಸ್ ಇಸ್ರೇಲಿಗೆ!. ಸುರಕ್ಷಿತವಾಗಿ ತಲುಪಿದ ಈ ಫಾರ್ಮೇಶನ್ನ ತಂಡದ ನಾಯಕ ಮೌನವನ್ನು ಮುರಿದಿದ್ದು ಯಹೂದಿಗಳ ಪ್ರಾರ್ಥನೆಯೊಂದಿಗೆ,ಆ ಪ್ರಾರ್ಥನೇ ಮುಗಿದನಂತರವೇ ಅವರು ಪೈಲಟ್ಗಳ ಭಾಷೆಯಲ್ಲಿ ಮಾತಾಡಲು ಶುರುಮಾಡಿಕೊಂಡಿದ್ದು.
ಇಸ್ರೇಲಿನ ಪ್ರಧಾನಿ ಖುಧ್ಧಾಗಿ ಬರುತ್ತಾರೆ ಈ ಗಂಡುಗಲಿಗಳನ್ನು ಭೇಟಿಮಾಡಲು. ಅರ್ಧ ಗಂಟೆಯಲ್ಲೇ ನಡೆದ ಪ್ರೆಸ್ ಮೀಟ್ ನಲ್ಲಿ ಮಾಜಿ ಒಸಿರಾಕ್ನ ಫೋಟೋಗಳನ್ನು ಬಿಡುಗಡೆ ಮಾಡಲಾಗುತ್ತದೆ. ಇಡೀ ಪ್ರಪಂಚವೇ ಬೆಕ್ಕಸ ಬೆರಗಾಗುತ್ತವೆ. ಮಸ್ಲೀಮ್ ದೇಶಗಳು ಅವಮಾನದಿಂದ ಕುದ್ದು ಹೋಗುತ್ತವೆ.
ಅಮೆರಿಕವೂ ಮೇಲ್ನೋಟಕ್ಕೆ ವಿಶ್ವಸಂಸ್ಥೆಯಲ್ಲಿ ವಿರೋದ ವ್ಯಕ್ತಪಡಿಸುತ್ತದಾದರೂ ಒಳಗೊಳಗೆ ಇಸ್ರೇಲಿಯರಿಗೆ ದೊಡ್ಡ ಥ್ಯಾಂಕ್ಯು ಹೇಳುತ್ತದೆ.
Fortune favors the brave ಎನ್ನುವಹಾಗೆ,ಜೋರ್ಡಾನಿನ ದೊರೆ ಕಳುಹಿಸಿದ ಎಚ್ಚರಿಕೆಯ ಸಂದೇಶ ಇರಾಕನ್ನು ತಲುಪುವುದೇ ಇಲ್ಲ. ಟನ್ನುಗಟ್ಟಲೇ ಬಾಂಬು ಅಣು ಸ್ಥಾವರದ ಮೇಲೆ ಸುರಿದರೂ ಇರಾಕಿನ ನಾಗರೀಕರಿಗೆ ಕಿಂಚಿತ್ತೂ ಹಾನಿಯಾಗುವುದಿಲ್ಲ. ಎಲ್ಲದಿಕ್ಕಿಂತ ಮುಖ್ಯವಾಗಿ ಇದರ timing..ಇನ್ನು ಹತ್ತು ದಿನಗಳಲ್ಲಿ critical ಆಗಲಿದ್ದ ಈ ಅಣುಸ್ಥಾವರವನ್ನು ನಾಶಮಾಡಿದರೇ ವಿನಃ ಅಲ್ಲಿಯ ನಾಗರೀಕರಿಗೆ ಕಿಂಚಿತ್ತೂ ಹಾನಿಯಾಗದಹಾಗೆ ನೋಡಿಕೊಂಡರು.
No comments:
Post a Comment