Thursday, October 27, 2016

ಆಪರೇಶನ್ ಪರಾಕ್ರಮ್-1

ಆಪರೇಶನ್ ಪರಾಕ್ರಮ್-1

        ಈ ಆದೇಶ ಬರುತ್ತಿದೆ ಅಂತ ಗೊತ್ತಿತ್ತು. ಅದಕ್ಕಾಗೇ ನಾನೂ ಕಾಯುತ್ತಿದ್ದೆ. ಆದರೆ ಎಲ್ಲಿಗೆ ಎನ್ನುವುದೇ ಒಂದು ಕೌತುಕದ ವಿಷಯವಾಗಿತ್ತು. ಫ್ಲೈಯಿಂಗ್ ಅಥವಾ ಮಿಸೈಲ್? ಈ ಎರಡೂ ಕ್ಷೇತ್ರದ ಅನುಭವದ ಹಿನ್ನಲೆ ಇದ್ದುದರಿಂದ ನನ್ನನ್ನು ಎಲ್ಲಿಗೆ ಕಳುಹಿಸಬಹುದೆಂಬ ಕುತೂಹಲವಿತ್ತು. ಫ್ಲೈಯಿಂಗ್ ಡ್ಯೂಟಿಯಂತಾದರೆ ,Avro ಎನ್ನುವ ಪ್ರಯಾಣಿಕರ ಮತ್ತು ಸರಕುಗಳ ಸಾಗಾಣಿಕೆಯ ವಿಮಾನದ ನೆಲೆಗೆ ಹೋಗಬೇಕು. ಮಿಸೈಲ್ ಎಂದಾದರೇ ಸೀದ ಗಡಿಪ್ರದೇಶದ ವಾಯುನೆಲೆಗೆ .
        ಈಗ ನಾನು ಹೇಳುತ್ತಿರುವುದು 2002 ರ ಜನವರಿಯಲ್ಲಿ ನಡೆದ "ಆಪರೇಷನ್ ಪರಾಕ್ರಮ"ದ ವಿಷಯ. ಇನ್ನೇನು ಭಾರತ ಮತ್ತು ಪಾಕಿಸ್ತಾನದ ಯುಧ್ಧ ಶುರುವಾಗೇ ಬಿಟ್ಟಿತು, ನಾಳೆ ಬೆಳಗ್ಗೇನೇ ಭಾರತೀಯ ವಾಯುಸೇನೆಯ ದಾಳಿ ಶುರು, ಎನ್ನುವ ಮಟ್ಟದವರೆಗೂ ಹೋದ ಪರಿಸ್ತಿತಿ ಉಂಟಾಗಿಬಿಟ್ಟಿತ್ತು.
        ಇತಿಹಾಸವನ್ನು ಮರೆತವರಿಗೆ ಅದರ ಪುನರಾವರ್ತನೆಯ ಶಾಪವಿರುತ್ತದಂತೆ. ಕಾಶ್ಮೀರದ ಊರಿಯಲ್ಲಿ ನಡೆದ ಭಯೋತ್ಪ್ಪಾದಕರ ದಾಳಿ, ಹದಿನೆಂಟು ಯೋಧರ ಮರಣ, ಪ್ರತಿಯೊಬ್ಬ ಭಾರತೀಯನನ್ನು ರೊಚ್ಚಿಗೆಬ್ಬಿಸಿದೆ ನಿಜ . ಈ ಸೇಡನ್ನು ತೀರಿಸಿಕೊಳ್ಳಲೇ ಬೇಕು. ಆದರೆ ಇದಕ್ಕೆ ,ಕೂಡಲೇ ಪಾಕೀಸ್ತಾನವನ್ನು ಬಗ್ಗುಬಡೆದುಬಿಡಬೇಕು ಎನ್ನುವ ಆತುರದ ನಿರ್ಧಾರ,ಅದರ ಪರಿಣಾಮ,ಅವನ್ನೆಲ್ಲಾ ಅಲ್ಪವಿರಾಮ ಕೊಟ್ಟು ಯೋಚಿಸಬೇಕು.
        ಯುಧ್ಧವೆಂದರೆ ಬಹಳ ದುಬಾರಿಯ ಸಂಗತಿ. ಸಾವಿರಾರು ಜೀವಗಳು,ಈಗಂತೂ, ಇಬ್ಬರಲ್ಲೂ ಅಣುಬಾಂಬು ಇರುವ ಹಿನ್ನಲೆಯಲ್ಲಿ ,ಸಾವಿನ ಸಂಖ್ಯೆಯನ್ನು ಲಕ್ಷಗಳಲ್ಲಿ ಎಣಿಸ ಬೇಕಾಗುತ್ತದೆ. ಅಣುಯುಧ್ಧದಲ್ಲಿ ಬರೀ ಸೈನಿಕರು ಸಾಯುವುದಿಲ್ಲ, ಮಕ್ಕಳು, ಹೆಂಗಸರು,ನಾಗರೀಕರು,ಅನಾಗರೀಕರು,ರಾಜಕಾರಿಣಿಗಳು, ಅವರ ಮಾಧ್ಯಮ ಸಲಹೆಗಾರು ಎಲ್ಲರ ಸರದಿ ಬರುತ್ತದೆ.
        ಅಸಲಿಗೆ ಆಪರೇಷನ್ ಪರಾಕ್ರಮದಲ್ಲಿ ಏನಾಯಿತು? ಅದರ ಪ್ರಕ್ರಿಯೆಯಲ್ಲಿ ಪಾಲುಗೊಂಡವನಾದ್ದರಿಂದ ಒಂದು first hand report ಕೊಡುತ್ತೇನೆ. ಸರೀನಾ? ಈ ಮಿಲಿಟ್ರಿಯ ವಿಚಾರಗಳು ಬೋರೆನಿಸುವುದಿಲ್ಲ ತಾನೆ?

No comments:

Post a Comment