ಆಪರೇಷನ್ ಪರಾಕ್ರಮ -2
ಸುಮಾರು ನೂರು ವರ್ಷಗಳ ಹಿಂದೆ ಮೈಸೂರಿನ ಓರಿಯೆಂಟಲ್ ಲೈಬ್ರರಿಯಲ್ಲಿ ಶಾಮಾಶಾಸ್ತ್ರಿಗಳಿಗೆ ಒಂದು ತಾಳೆಗರಿಯ ಹೊತ್ತಿಗೆ ಸಿಗುತ್ತದೆ. ಗ್ರಂಥ ಲಿಪಿಯಲ್ಲಿದ್ದ ಈ ಕೃತಿಯನ್ನು ಮೊದಲು ಸಂಸ್ಕ್ರುತಕ್ಕೆ ನಂತರ ಇಂಗ್ಲೀಷಿಗೆ ಭಾಷಾಂತರಿಸುತ್ತಾರೆ. ಇದೇ ಪುಸ್ತಕ ಈಗ IAS,IPS, ಮ್ಯಾನೇಜ್ಮೆಂಟ್ ಮತ್ತು ಮಿಲಿಟಿರಿಯ ತರಬೇತಿ ಕೇಂದ್ರಗಳಲ್ಲಿ ಚರ್ಚೆಯ ವಿಷಯವಾಗಿದೆ. ಈ ಪುಸ್ತಕದ ಹೆಸರು "ಕೌಟಿಲ್ಯನ ಅರ್ಥಶಾಸ್ತ್ರ". ಚಾಣಕ್ಯನ ಕಾವ್ಯನಾಮ ಕೌಟಿಲ್ಯ. ಮೈಸೂರಿನಲ್ಲಿ ಹುಟ್ಟಿಬೆಳೆದ ಈ ಪುಸ್ತಕದ ಬಗ್ಗೆ ನಮಗೆಷ್ಟು ಗೊತ್ತಿದೆ?.
ಅಮೆರಿಕದ ಭೂತಪೂರ್ವ ರಕ್ಷಣಾ ಸಲಹೆಗಾರ ,ಹೆನ್ರಿ ಕಿಸಿಂಜರ್ ಇತ್ತೀಚೆಗೆ ಅವರ ಪುಸ್ತಕ 'World Order' ಬಿಡುಗಡೆ ಮಾಡುತ್ತಾರೆ. ಆ ಪುಸ್ತಕದ ತಿರುಳು... ಕೌಟಿಲ್ಯನ ಅರ್ಥಶಾಸ್ತ್ರ !
ಏನಿದೆ ಅಂತದ್ದು ಈ ಪುಸ್ತಕದಲ್ಲಿ?. ಎರಡು ಸಾವಿರ ಮುನ್ನೂರು ವರ್ಷ ಗಳ ಹಿಂದೆ ಬರೆದ ಈ ಪುಸ್ತಕದ ಬಗ್ಗೆ, ಈ ಅಮೆರಿಕದ ರಾಜಕಾರಿಣಿ 2015 ನಲ್ಲಿ ಬರೆಯುವಂತದ್ದು..? ಎಲ್ಲಾ ಇದೆ,ನಮ್ಮ ನಾಯಕರು ಈ ಪುಸ್ತಕದ ಪ್ರಕಾರ ನಡೆದು ಕೊಂಡಿದ್ದರೆ ನಮ್ಮ ನೆರೆಯಲ್ಲಿರುವ ಕಿರಿಕ್ ಪಾರ್ಟಿ ಪಾಕಿಸ್ತಾನ ಇರುತ್ತಿರಲೇಇಲ್ಲ. ಭಾರತೀಯ ಸೇನೆಯ ಬಗ್ಗೆ ಉಡಾಫೆಯ ಧೋರಣೆ ಹೊಂದಿದ್ದ ನೆಹರು ಈ ಪುಸ್ತಕವನ್ನು ಪ್ರಾಮಾಣಿಕವಾಗಿ ಓದಿದ್ದರೆ,ಅದರಲ್ಲಿ ಬರೆದಹಾಗೆ ನಡೆದು ಕೊಂಡಿದ್ದರೆ,ಈಗಿನ ಊರಿಯ ದುರಂತ ನಡೆಯುತ್ತಿರಲಿಲ್ಲ. ಏನಿದೆ ಅಂತಹ ಚಿದಂಬರ ರಹಸ್ಯ ಈ ಪುಸ್ತಕದಲ್ಲಿ? ಇದೊಂದು ಆಡಳಿತ ಮತ್ತು ಮಿಲಿಟರಿ ತಂತ್ರಗಳ ಕೈಪಿಡಿ.
ಆಪರೇಶನ್ ಪರಾಕ್ರಮದ ರುವಾರಿಗಳೂ ಈ ಪುಸ್ತಕವನ್ನು ಓದಿದ್ದರೆ ....
13 ಡಿಸೆಂಬರ್ 2001 , ಭಾರತೀಯ ಪಾರ್ಲಿಮೆಂಟ್ ಬಿಲ್ಡಿಂಗಿನ ಆಸುಪಾಸಿನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಐವರು ಉಗ್ರರೂ ಸೇರಿದಂತೆ ಒಟ್ಟು 14 ಜನ ಸಾವಿಗೀಡಾಗುತ್ತಾರೆ. ಈ ಹಿನ್ನಲೆಯಲ್ಲಿ ಜೈಷ್-ಎ- ಮೊಹಮ್ಮದ್ ಎನ್ನುವ ಪಾಕಿಸ್ತಾನದ ನೆಲದಿಂದ ಕಾರ್ಯಾಚರಣೆ ನಡೆಸುತ್ತಿದ್ದ ಉಗ್ರ ಸಂಘಟನೆಯನ್ನು ಮತ್ತು ಇತರೆ ಉಗ್ರ ಸಂಘಟನೆಗಳನ್ನು ಪಾಕಿಸ್ತಾನದಿಂದ ಉಚ್ಚಾಟಿಸಲು ಒತ್ತಡ ಹೇರಲಾಗುತ್ತದೆ. ಅಂದಿನ ಪ್ರಧಾನಿ ವಾಜಪೇಯಿ ,ಪಾಕಿಸ್ತಾನದ ರಾಷ್ಟ್ರಾಧ್ಯಕ್ಷ ಜನರಲ್ ಮುಶರಫ್ ನಡುವಿನ ಮಾತುಕತೆ ವಿಫಲವಾಗಿ, ಎರಡೂ ಕಡೆಯಿಂದ ಸೈನ್ಯದ ಜಮಾವಣೆಯ ಕಾರ್ಯ ಶುರುವಾಗುತ್ತದೆ.
ಪರಾಕ್ರಮದ ಪ್ರದರ್ಶನ!
1971 ರ ಯುಧ್ಧದಲ್ಲಿ ಒಂದು ನಿರ್ದಿಷ್ಟವಾದ ಗುರಿ ಇತ್ತು. ಅಂದಿನ ಪೂರ್ವ ಪಾಕಿಸ್ತಾನವನ್ನು ಬಂಗ್ಲಾದೇಶವಾಗಿ ಪರಿವರ್ತಿಸಲು. ಎಡಬಗಲಿನಲ್ಲಿನ ತುರುಚಿಯನ್ನು ನಿರ್ದಿಷ್ಟವಾಗಿ ತೊಡೆದುಹಾಕಲು.
ಹೀಗೆ ,ಯುಧ್ಧಕ್ಕೆ ಒಂದು ನಿರ್ದಿಷ್ಟ ಧ್ಯೇಯವಿರಬೇಕು. ಯುಧ್ಧವೆಂದರೆ ಒಂದು ಭಾವನಾತ್ಮಕ ಮಿಡಿತವಲ್ಲ.
It's a serious business
ಕೌಟಿಲ್ಯನೇ ಹೇಳುವಂತೆ 'ಯುಧ್ಧದಲ್ಲಿ ಸೈನಿಕರ ಶಸ್ತ್ರಾಸ್ತ್ರಗಳು,ಅವರ ಜೀವಗಳು, ಯುಧ್ಧನಡೆಯುವ ಭೂಮಿಯ ಬೆಳೆಗಳು, ಇದಕ್ಕೆಲ್ಲಾ ತಗುಲುವ ವೆಚ್ಚ ಮತ್ತು ವೈರಿಯನ್ನು ಹಲವಾರು ವರ್ಷಗಳವರೆಗೂ ಅತ್ಯಂತ ಬಡತನಕ್ಕೆ ತಳ್ಳುವುದಾದರೆ ಮಾತ್ರ ಯುಧ್ಧಮಾಡಬೇಕು,ಇಲ್ಲದಿದ್ದರೆ ಶಾಂತಿಯ ಒಪ್ಪಂದ ಮಾಡಿಕೊಂಡಿರಬೇಕು'. ಎಷ್ಟು ಸತ್ಯ.
No comments:
Post a Comment