Saturday, April 22, 2017

ಮೆಕ್ಕಾಲೆಯ ಮಕ್ಕಳು ಮತ್ತು ಉಜ್ಜಯಿ ಪ್ರಾಣಾಯಾಮ

ಮೆಕ್ಕಾಲೆಯ ಮಕ್ಕಳು ಮತ್ತು ಉಜ್ಜಯಿ ಪ್ರಾಣಾಯಾಮ


       ಮಹಮ್ಮದ್ ಘಜನಿ ಭಾರತದ ಸಂಪತ್ತನ್ನು ಕೊಳ್ಳೆಹೊಡೆದು, ಇಲ್ಲಿಯ ಸಂಸ್ಕೃತಿಯ ಸಂಕೇತಗಳನ್ನು ಧ್ವಂಸ ಮಾಡುತ್ತಿದ್ದಾಗ ಈ ಘಜನಿ ಗ್ಯಾಂಗಿನಲ್ಲಿದ್ದ ಅಲ್ ಬೆರೂನಿ ಎನ್ನುವ ಆಪ್ತಸಲಹೆಗಾರ, ವಿದ್ವಾಂಸ, ಘಜನಿಗೆ ಹೇಳಿದ್ದೇನೆಂದರೆ 'ನೀನು ಏನನ್ನು ಬೇಕಾದರೂ ಸರ್ವನಾಶ ಮಾಡು ಆದರೆ ಇಲ್ಲಿಯ ಕೆಲವು ಅಮೂಲ್ಯವಾದ ಗ್ರಂಥಗಳಿವೆ ಅವನ್ನು ಮಾತ್ರ ಮುಟ್ಟಬೇಡ..ನಾನು ಅವನ್ನು ಅರೇಬಿಕ್ ಭಾಷಾಂತರ ಮಾಡುವವರೆಗೂ!
    ಅಲ್ ಬೆರೂನಿ ಕೆಲವು ವರ್ಷಗಳಲ್ಲಿ ಸಂಸ್ಕೃತದ ಪಾಂಡಿತ್ಯ ಪಡೆದು ಮಾಡಿದ ಮೊಟ್ಟಮೊದಲ ಕೆಲಸವೆಂದರೆ ಪತಾಂಜಲಿ ಯೋಗಸೂತ್ರವನ್ನು ಅರೇಬಿಕ್ ಭಾಷೆಗೆ ಅಳವಡಿಸಿದ್ದು ಮತ್ತು ನಮಾಜಿನ ವಿಧಿಯಲ್ಲಿ ಕೆಲವು ಯೋಗಾಸನಗಳನ್ನು ಅಳವಡಿಸಿದ್ದು.


     ಮುಂದಿನ ವರ್ಷಗಳಲ್ಲಿ ಭಾರತವನ್ನು ಕೊಳ್ಳೆಹೊಡೆಯಲು ಬಂದ ಬ್ರಿಟಿಷರಿಗೆ ಅಲ್ ಬರೂನಿಯಷ್ಟು ಹೃದಯವಂತಿಕೆ ಇರಲಿಲ್ಲ. ಅಷ್ಟೊತ್ತಿಗಾಗಲೇ ಯೂರೋಪಿನಲ್ಲಿ ಚರ್ಚುಗಳ ರಕ್ತಸಿಕ್ತ ಇತಿಹಾಸ ಶುರುವಾಗಿತ್ತು. ಭೂಮಿ ಸೂರ್ಯನ ಸುತ್ತ ಸುತ್ತುತ್ತದೆ ಎಂದಿದ್ದಕ್ಕೇ ಗೆಲಿಲಿಯೋ ಎಂಬ
ವಿಙ್ನಾನಿಯನ್ನು ಸೆರೆಮನೆಗೆ ತಳ್ಳಿ ಸಾಯಿಸಲಾಗಿತ್ತು. ಇನ್ನು ಖಗೋಳಶಾಸ್ತ್ರದ ತವರುಮನೆಯಾದ ಭಾರತದ ಅಪರಿಮಿತ ಙ್ನಾನಭಂಡಾರವನ್ನು ಸಹಿಸಿಯಾರೆಯೇ? ಇಲ್ಲಿಯ ವೇದ ಆಯುರ್ವೇದಗಳನ್ನು ಅರಗಿಸಿಕೊಳ್ಳುವರೇ? ಇಲ್ಲಿಯ ಯೋಗಸೂತ್ರವನ್ನು ಅಳವಡಿಸಿಕೊಳ್ಳುವರೇ.. NEVER.
   ಭಾರತದ ಪ್ರಖರತೆ, ಶ್ರೀಮಂತಿಕೆ ಅವರ ಕಣ್ಣುಕುಕ್ಕುತ್ತಿತ್ತು. ಇಲ್ಲಿಯ ಸಂಪತ್ತನ್ನು ಲೂಟಿ ಹೊಡೆದು ಬ್ರಿಟನ್ ರಾಣಿಯ ಬೊಕ್ಕಸ ತುಂಬುತ್ತಿದ್ದರೆ ಇನ್ನೊಂದೆಡೆ ಇಲ್ಲಿಯ ಸಂಸ್ಕೃತಿ ಮತ್ತು ಪರಂಪರೆಗಳನ್ನು ಸರ್ವನಾಶ ಮಾಡಲು ಒಬ್ಬ ಕಿರಾತಕನನ್ನು ಕಳುಹಿಸಿದರು.
   ಅವನೇ ಥಾಮಸ್ ಮೆಕ್ಕಾಲೆ...ಪ್ರಭುಧ್ಧ ಭಾರತದ ಶಿಕ್ಷಣ ಪದ್ದತಿಯನ್ನು ಸರ್ವನಾಶ ಮಾಡಿದ ಖೂಳ..
   ಇದೊಂದು ರಿಪೋರ್ಟನ್ನು ಓದಿ..ಭಾರತೀಯರ ಬಗ್ಗೆ ಏನು ಹೇಳುತ್ತಾನೆ ಮತ್ತು ಮುಂದೇನು ಮಾಡುತ್ತಾನೆ ಎಂದು...




ಕೆಳಗಿನ ಪಂಕ್ತಿಯನ್ನು ವಿಕಿಪೀಡಿಯದಿಂದ ಹೇಗಿದೆಯೋ ಹಾಗೆ ಕಾಪಿ ಪೇಸ್ಟಮಾಡಲಾಗಿದೆ...

" I have never found one among them who could deny that a single shelf of a good European library was worth the whole native literature of India."

ಇದು ಮೆಕ್ಕಾಲೆ ಹೇಳುವ ದುರಂಹಕಾರದ ಮಾತು.

ಮೆಕ್ಕಾಲೆಯ ಶಿಕ್ಷಣ ಪದ್ದತಿಯಿಂದ ಇಂಗ್ಲೀಶನ್ನು ಸಲೀಸಾಗಿ ಮಾತಾಡುವ ಗುಮಾಸ್ತರು, ಸೈನಿಕರು,ಕೆಳಮಟ್ಟದ ಅಧಿಕಾರಿಗಳು ಹುಟ್ಟಿಕೊಂಡರು. ಅವರಿಗೆ ಬೇಕಾಗಿದ್ದೂ ಅದೇ. ಆದರೆ ಅಷ್ಟಕ್ಕೆ ನಿಂತಿದ್ದರೆ ಅಭ್ಯಂತರವಿರುತ್ತಿರಲಿಲ್ಲ. ಇಂಗ್ಲೀಷನ್ನು ಬಳಸಿಕೊಂಡು ನಮ್ಮ ಸನಾತನ ಧರ್ಮದ, ಸಂಸ್ಕುತಿಯ ಅವಹೇಳನ ಮಾಡಲಾಯಿತು. ಇಂಗ್ಲೀಷ್ ಬರದ ಭಾರತೀಯರಲ್ಲಿ ಕೀಳರಿಮೆಯ ಭಾವನೆಯನ್ನು ತುಂಬಲಾಯಿತು.

ಇದರ ಜೊತೆ "ಮೆಕ್ಕಾಲಿಸಂ" ಅಥವಾ " ಮೆಕ್ಕಾಲೆಯ ಮಕ್ಕಳು " ಎನ್ನುವ ಸಂತತಿಯೇ ಹುಟ್ಟಿ ಕೊಂಡು ಬಿಟ್ಟಿತು.

1947 ರಲ್ಲಿ ಈ ಮೆಕ್ಕಾಲೆಯ ಮಕ್ಕಳನ್ನು ಇಲ್ಲಿಯೇ ಬಿಟ್ಟು ಬ್ರಿಟನ್ನಿಗೆ ಮರಳಿ ಬಿಟ್ಟರು ಆಂಗ್ಲರು! ಯಾರಿವರು..ಏನಿದು ಮೆಕ್ಕಾಲಿಸಂ...ಅದಕ್ಕೂ ವಿಕಿಪೀಡಿಯದ ಕಾಪಿ, ಪೇಸ್ಟ್ ಕೆಳಗಿದೆ.

"In Indian culture the term" Macaulay's
Children" is sometimes used to refer to people born of Indian ancestry who adopt Western culture as a lifestyle, or display attitudes influenced by colonisers ("Macaulayism")[19] – expressions used disparagingly, and with the implication of disloyalty to one's country and one's heritage."

"Macaulayism is the conscious policy of liquidating indigenous culture through the planned substitution of the alien culture of a colonizing power via the education system. The term is derived from the name of British politician Thomas Babington Macaulay (1800-1859), "

ಈ ಮೆಕ್ಕಾಲೆಯ ಮಕ್ಕಳು ಅರಂಧತಿ,ರಾಜದೀಪ್, ಬರ್ಖಾ,ಸಾಗರಿಕರ ರೂಪದಲ್ಲಿ, ಎಡಪಂತೀಯರ ಅಂಗಳದಲ್ಲಿ , ನಮ್ಮಲ್ಲೇ ನೆಲಸಿರುವ ಗೌರಜ್ಜಿಯ ಗೂಡಿನಲ್ಲಿ, ಗುಹಾರ ಗುಹೆಯಲ್ಲಿ ನೆಲೆಸಿರುತ್ತಾರೆ.

ಆದರೆ ಇತ್ತೀಚಿಗೆ ಸ್ವಲ್ಪ ಉಸಿರುಗಟ್ಟಿದಂತಾಗಿ, ಶಕ್ತಿಹೀನತೆಯಿಂದ ಬಳಲುತ್ತಿರುವ 'ಬುಧ್ಧು ಜೀವಿಗಳೇ' ಮೆಕ್ಕಾಲೆಯ ಮಕ್ಕಳು‌.


ಬ್ರಿಟಿಷರ ಆಡಳಿತದಲ್ಲಿ ರಾಜ್ಯಭಾರ ನಡೆಸುತ್ತಿದ್ದ ವೈಸರಾಯಿಗಳಲ್ಲಿ ಕೆಲವರು ಮಾತ್ರ ಭಾರತದ ಅಪರಿಮಿತ ವಿದ್ಯಾ ಸಂಪನ್ನತೆಯನ್ನು ಗೌರವಿಸುತ್ತಿದ್ದರು. ಅವರಲ್ಲಿ ಒಬ್ಬರು ವೈಸರಾಯ್ ಇರ್ವಿನ್. ಇವರ ಆಡಳಿಯದ ಸಂದರ್ಭದಲ್ಲಿ ಸ್ವಾತಂತ್ರ ಸಂಗ್ರಾಮ ತೀವ್ರತೆಯನ್ನು ಪಡೆದಿತ್ತು. ಒಂದೆಡೆ ಉಪ್ಪಿನ ಸತ್ಯಾಗ್ರಹ, ಸೈಮನ್ ಕಮಿಟಿಯ ವಿರೋದ, ಇನ್ನೊಂದೆಡೆ ವಿಶ್ವಯುಧ್ಧದ ಒತ್ತಡ. ಇದೆಲ್ಲರದ ಮಧ್ಯೆ ದಿನೇ ದಿನೇ ಬಿಗಡಾಯಿಸುತ್ತಿದ್ದ ಇರ್ವಿನ್ನರ ಆರೋಗ್ಯದ ಸ್ಥಿತಿ.

ಅವರಿಗೆ ಆಯುರ್ವೇದ ಮತ್ತು ಯೋಗದಲ್ಲಿ ತುಂಬಾ ನಂಬಿಕೆಯಿತ್ತು. ಅವರ ಅದೃಷ್ಟ ಚೆನ್ನಾಗಿತ್ತು. ಅಂದಿನ ಕಾಲದ ಯೋಗದ ಪಿತಾಮಹಾ ಮತ್ತು ಆಯುರ್ವೇದ ಪಂಡಿತ ಎಂದೇ ಖ್ಯಾತಿ ಪಡೆದಿದ್ದ ಒಬ್ಬ ಮಹಾಪುರುಷ ಮೈಸೂರಿಂದ ಸಿಮ್ಲಾಕ್ಕೆ ಬಂದು ಅವರನ್ನು ಸಂಪೂರ್ಣ ಗುಣಮುಖರನ್ನಾಗಿ ಮಾಡಿದರು.

ಅವರೇ ತಿರುಮಲೈ ಕೃಷ್ಣಮಾಚಾರ್ಯರು.

ಚಿತ್ರದುರ್ಗ ಜಿಲ್ಲೆಯ ಮುಚುಕುಂಡಪುರ ಎನ್ನುವ ಚಿಕ್ಕಹಳ್ಳಿಯ ಒಂದು ಐಯ್ಯಂಗಾರ್ ಮನೆತನದಲ್ಲಿ ನವೆಂಬರ್ 1888 ರಲ್ಲಿ ಈ ಮಹಾಪುರುಷರ ಜನ್ಮವಾಗುತ್ತದೆ. ಇಷ್ಟೊತ್ತಿಗಾಗಲೇ ಮೆಕ್ಕಾಲೆಯ ಶಿಕ್ಷಣ ಪದ್ದತಿ ಯೋಗಭ್ಯಾಸವನ್ನು ಅವಹೇಳಿಸಿ, ಕಡೆಗಣಿಸಿ ಅಪಹಾಸ್ಯಿಸಿ ಸಮಾಜದ ಮುಖ್ಯವಾಹಿನಿಯಿಂದ ದೂರವಿಟ್ಟಿರುತ್ತದೆ. ಇವರ ಹುಟ್ಟಿನೊಂದಿಗೇ ಯೋಗಕ್ಕೆ ಪುನರ್ಜನ್ಮ ದೊರೆತಂತಾಗುತ್ತದೆ. ಮೆಕ್ಕಾಲೆಯ ಶಿಕ್ಷಣ ಪದ್ದತಿಯನ್ನು ತಿರಸ್ಕರಿಸಿ ತಮ್ಮದೇ ಆದ ಸಂಶೋದನೆಯಲ್ಲಿ ತೊಡಗಿ ಆರು ಡಾಕ್ಟರೇಟ್ ಡಿಗ್ರಿಗಳನ್ನು ಪಡೆದರೆಂದರೆ ಅದೆಂತಹ ಅಧ್ಯಯನ ಮಾಡಿರಬಹುದು!
  ಇವರು ತೆರೆಯ ಮರೆಯಲ್ಲಿ ನಡೆಸಿದ ಸಂಶೋಧನೆಗಳು, ಪ್ರಯೋಗಗಳು, ಆಸನಗಳು, ಪ್ರಾಣಾಯಾಮಗಳನ್ನು ಭಾರತಕ್ಕೆ ಮತ್ತು ಇಡೀ ವಿಶ್ವಕ್ಕೆ ಪರಿಚಯಿಸಿದವರು ಇವರ ಶಿಷ್ಯರುಗಳ ಗುಂಪು.
   ಆ ಗುಂಪಿನಲ್ಲಿದ್ದವರು ಇವರ ಬಾಮೈದುನ Dr BKS Iyengar ಮತ್ತು ಅವರ ಮಗ ದೇಸಿಕಾಚಾರ್ ಮತ್ತು ಇತರರು. ಇವರಿಂದಾಗಿ 'ಐಯ್ಯಂಗಾರ್ ಯೋಗ' ಎನ್ನುವ ಹೊಸ ಅಧ್ಯಾಯವೇ ಶುರುವಾಯಿತು.
   ಕೃಷ್ಣಮಾಚಾರ್ಯರ ಪ್ರಕಾರ ಪ್ರಾಣಾಯಾಮ ಯೋಗಕ್ಕೆ ಹೆಬ್ಬಾಗಿಲಂತೆ. ಅಲ್ಲಿಂದಲೇ ಯೋಗದ ಪ್ರಪಂಚಕ್ಕೆ ಪ್ರವೇಶಿಸುವುದು ಸರಿಯಾದ ರೀತಿ. ಹೀಗೆ ಅಷ್ಟಾಂಗ ಯೋಗದಲ್ಲಿ ಪ್ರಮುಖ ಅಂಗವಾದ ಪ್ರಾಣಾಯಾಮ ಅದರಲ್ಲೂ 'ಉಜ್ಜಯೀ ಪ್ರಾಣಾಯಾಮ.


ಪತಂಜಲಿ ಯೋಗ ಸೂತ್ರದಲ್ಲಿ 196 ಸೂತ್ರಗಳಿವೆ. ಸುಮಾರು 24೦೦ ವರ್ಷಗಳ ಹಿಂದೆ ಬರೆದಿದ್ದ ಈ ಮಹಾನ್ ಕೋಶ, ಕಾಲನ ಮಹಿಮೆಯ ಏಳುಬೀಳಗಳನ್ನು ಕಂಡು ಇನ್ನೂ ಜೀವಂತವಾಗಿರುವ ಅಧ್ಭುತ ಗ್ರಂಥ.
ಮೆಕ್ಕಾಲೆಯ ಶಿಕ್ಷಣ ಪದ್ದತಿಯ ಭರಾಟೆಯಿಂದ, ಬ್ರಿಟಿಷರ ಸಂಚಿನಿಂದ, ಮಿಷನರಿಗಳ ಕುಯುಕ್ತಿಯಿಂದ ಕಡೆಗಣಿಸಲ್ಪಟ್ಟಿದ್ದ ಈ ಅಷ್ಟಾಂಗ ಯೋಗದ ಸಂಹಿತೆ ಯನ್ನು ಪುನಃ ಪ್ರಪಂಚಕ್ಕೆ ಪರಿಚಯಿಸಿದವರು, ತಿರುಮಲೈ ಕೃಷ್ಣಮಾಚಾರ್ಯರು, ಸ್ವಾಮಿ ವಿವೇಕಾನಂದರು, ಸ್ವಾಮಿ ಶಿವಾನಂದರು ಮತ್ತು ಅವರ ಶಿಷ್ಯವರ್ಗ.
ಯಾಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹರ, ಧ್ಯಾನ, ಧಾರಣ ಮತ್ತು ಸಮಾಧಿ. ಇವೇ ಅಷ್ಟಾಂಗ ಯೋಗದ ಎಂಟು ಅಂಗಗಳು.
ಕೃಷ್ಣಮಾಚಾರ್ಯರ ಪ್ರಕಾರ ಪ್ರಾಣಾಯಾಮವೇ ಯೋಗಪ್ರಪಂಚಕ್ಕೆ ಹೆಬ್ಬಾಗಿಲು. ಅದರಲ್ಲಿ ಉಜ್ಜಯಿ ಪ್ರಾಣಾಯಾಮಕ್ಕೆ ತುಂಬಾ ಮಹತ್ವ ಕೊಡುತ್ತಾರೆ.
ಏನು ಈ ಉಜ್ಜಯಿ ಪ್ರಾಣಾಯಾಮ ಎಂದರೆ?.
ಇದರಲ್ಲಿ ದೀರ್ಘ ಪೂರಕ ( ಉಸಿರು ಒಳಗೆ) ಮತ್ತು ರೇಚಕಗಳ(ಉಸಿರು ಹೊರಗೆ) ಜೊತೆ ಗಂಟಲಿನಿಂದ ಶಬ್ದ ಹೊರಡಬೇಕು. ಅದೂ ಕಡಲಿನ ಅಲೆಗಳ ಶಬ್ದ...!
ಇದನ್ನು ನಾನು 'ಆರ್ಟ್ ಆಫ್ ಲಿವಿಂಗ್' ಆಶ್ರಮದಲ್ಲಿ ಕಲಿತದ್ದು. ಅಲ್ಲಿಯ ಯೋಗಾಗುರುಗಳು ಮೊದಲು ಏನನ್ನಾದರು ಓದಲು ಹೇಳುತ್ತಾರೆ, ನಂತರ ಅದನ್ನೇ ಪಿಸುಗುಟ್ಟಿಕೊಂಡು ಓದಲು ಹೇಳುತ್ತಾರೆ. ಆಗ ಗಂಟಲಿನಿಂದ ಹೊರಡುವ ಶಬ್ದವನ್ನು ಗಮನಿಸಿ ಎನ್ನುತ್ತಾರೆ...ಇದೇ ಶಬ್ದ ಉಚ್ವಾಸ ಮತ್ತು ನಿಶ್ವಾಸದಲ್ಲಿ ಬರಬೇಕು. ಮತ್ತು ನಿಶ್ವಾಸವನ್ನು ಪ್ರತೀ ಸಲ ಮೂರ್ನಾಲ್ಕು ಸೆಕೆಂಡುಗಳಷ್ಟು ಹೆಚ್ಚುತ್ತಾ ಹೋಗಿಸಿ..ಪೂರಕ ತಾನಾಗಿಯೇ ಧೀರ್ಘವಾಗಿ ಹೋಗುತ್ತದೆ. ಉಸಿರಾಟ ಮತ್ತು ಶಬ್ದದ ಮೇಲಷ್ಟೇ ಧ್ಯಾನವನ್ನು ಕೇಂದ್ರೀಕರಿಸಿ. ದೇಹ ತಾನಾಗೇ ವಿಶ್ರಮಿಸುತ್ತದೆ. ಸ್ವಲ್ಪ ಸಮಯದಲ್ಲೇ ಸುಖಾನುಭವವಾಗುತ್ತದೆ. ಮನಸ್ಸು ಸ್ತಬ್ಧವಾಗುತ್ತದೆ.
ಕ್ರಮೇಣ ಅಭ್ಯಾಸ ಬಲದಿಂದ ಇದನ್ನು ಎಲ್ಲಿಬೇಕಾದರೂ, ಎಷ್ಟೊತ್ತು ಬೇಕಾದರೂ ಮಾಡಬಹುದು.
ಅಧ್ಭುತ ಸಂಚಲನದ ಅನುಭವವಾಗುತ್ತದೆ ಈ ಉಜ್ಜಯಿ ಪ್ರಾಣಾಯಾಮದಿಂದ.