ಆಪರೇಶನ್ ಪರಾಕ್ರಮ-4
ಮಿಸೈಲುಗಳಲ್ಲಿ ಮೂರು ವಿಧಗಳಿವೆ. ಒಂದು ಯುಧ್ಧವಿಮಾನದಿಂದ ಇನ್ನೊಂದು ಯುಧ್ಧವಿಮಾನದ ಮೇಲೆ ಪ್ರಯೋಗಿಸುವ ಮಿಸೈಲು,Air to Air. ಇದು ಏರೋಪ್ಲೇನಿನ ಇಂಜಿನ್ನಿನ ಶಾಖವನ್ನು ಹುಡುಕಿಕೊಂಡು ಅದರ ಬುಡಕ್ಕೆ ಹೋಗಿ ಸ್ಪೋಟಿಸುತ್ತದೆ. ಇನ್ನೊಂದು Surface to Air ಮಿಸೈಲು. ಇದನ್ನು ನೆಲದ ಮೇಲಿರುವ ಮಿಸೈಲು ಲಾಂಚರ್ ಗಳಿಂದ ಶತ್ರುವಿನ ಯುಧ್ಧವಿಮಾನದ ಮೇಲೆ ಬಿಡಲಾಗುತ್ತದೆ. Surface to Surface ಮಿಸೈಲನ್ನು ನೆಲದ ಮೇಲಿಂದ ಲಾಂಚ್ ಮಾಡಿ ನೆಲದ ಮೇಲೇ ಇರುವ ಟಾರ್ಗೆಟ್ ಮೇಲೆ ಪ್ರಯೋಗಿಸಲಾಗುತ್ತದೆ. ಹೀಗೆ ನಮ್ಮ ದೇಶದ ಅತ್ಯಮೂಲ್ಯವಾದ ಆಸ್ತಿಗಳನ್ನು ಉಳಿಸಿಕೊಳ್ಳಲು ಹಲವಾರು ಪರದೆಗಳ ಸುರಕ್ಷತಾ ವರ್ತುಲವಿರುತ್ತದೆ. ಇದನ್ನೆಲ್ಲಾ ವ್ಯವಸ್ಥಿತವಾಗಿ ನಿಯಂತ್ರಿಸಲು ಒಂದು ವಾಯು ರಕ್ಷಣಾ ಕೇಂದ್ರವನ್ನು ಸ್ಥಾಪಿಸಲಾಗುತ್ತದೆ.
ಒಂದು ವಾಯುನೆಲೆಯ ಸುರಕ್ಷತೆಯ ಕಾರ್ಯಾಚರಣೆಯ ಒಂದು ಝಲಕ್....
ಗುಪ್ತಮಾಹಿತಿಯ ಪ್ರಕಾರ ಅಥವಾ ರಾಡಾರ್ಗಳಿಂದ ಸಿಕ್ಕ ಮಾಹಿತಿಯಿಂದ ಶತೃಗಳ ವಿಮಾನ ದಾಳಿಯಾಗುವ ಸಂಭವವಿದ್ದರೆ, ಕೂಡಲೇ ನಮ್ಮ ಯುಧ್ಧವಿಮಾನಗಳನ್ನು ಲಾಂಚ್ ಮಾಡಲಾಗುತ್ತದೆ. ಈ ವಿಮಾನಗಳನ್ನು Combat Air Patrol (CAP) ಎನ್ನುತ್ತಾರೆ. ಸುಮಾರು 100-150 ಕಿಮೀ ದೂರದಿಂದಲೇ ಇವುಗಳನ್ನು ನಿಷ್ಕ್ರಿಯಗೊಳಿಸುವ ಪ್ರಯತ್ನ ಶುರುವಾಗುತ್ತದೆ. ಶತ್ರುಗಳ ವಿಮಾನವೂ ಒಂಟಿಯಾಗಿ ಬರುವುದಿಲ್ಲ. ಎಂಟು ಹತ್ತು ವಿಮಾನಗಳ ದಂಡೇ ಇರಬಹುದು. ಅವೂ ಒಂದು ನಿರ್ದಿಷ್ಟ ವ್ಯೂಹವನ್ನು ರಚಿಸಿಕೊಂಡು ಬಂದಿರುತ್ತವೆ. ಇದರಂತೆ ಕೆಲವು ವಿಮಾನಗಳು ಹೀಗೆ ಅಡ್ಡಬಂದ ವಿಮಾನಗಳನ್ನು ತಡಕಾಯಿಸಿಕೊಳ್ಳುತ್ತವೆ. ಈ ಸುರಕ್ಷಾಕವಚದ ಮಧ್ಯದಲ್ಲಿರುವ ನಾಲ್ಕು-ಆರು ವಿಮಾನಗಳೇ ಬಹಳ ಮಾರಕ, ಏಕೆಂದರೆ ಅವುಗಳ ಉದ್ದೇಶ ನಮ್ಮ ವಾಯುನೆಲೆಯ ಮೇಲೆ,ಅಲ್ಲಿರುವ ವಿಮಾನಗಳ ಮೇಲೆ,ರಡಾರ್ಗಳ ಮೇಲೆ ಆಕ್ರಮಣಕ್ಕೆ ಬಂದಿರುವುದು. ನಮ್ಮ ಉದ್ದೇಶ ಅವನ್ನು ಹೊಡೆದುರುಳಿಸುವುದು.
CAP ಏರೋಪ್ಲೇನುಗಳು ಇವುಗಳನ್ನಟ್ಟಿಸಿಕೊಂಡು ಮಿಸೈಲ್ ಪ್ರಹಾರ ಮಾಡಿ ನಿಶ್ಕಿಯೆಗೊಳಿಸುತ್ತವೆ ಅಥವ ಚದಿರುಸುತ್ತವೆ. ಆಕ್ರಮಕ್ಕೊಳಗಾಗಲಿರುವ ವಾಯುನೆಲೆ ಸುಮಾರು 25-30 ಕಿಮೀ ದೂರದಲ್ಲಿರುವಾಗ Surface to Air ,ಮಿಸೈಲುಗಳ ದಾಳಿ ಪ್ರಾರಂಭವಾಗುತ್ತದೆ. ಆಗ ನಮ್ಮ CAP ವಿಮಾನಗಳು ಹಿಂದೆ ಸರಿದು ಶತೃವಿನ ನಿರ್ಗಮನದ ಹಾದಿಯಲ್ಲಿ ಅವಕ್ಕೆ ಹೊಂಚು ಹಾಕಿ ಕಾಯುತ್ತಿರುತ್ತವೆ, ಅವರು ವಾಪಸಾಗುವಾಗ ಹಿಂದಿನಿಂದ ಪ್ರಹಾರ ಮಾಡುತ್ತವೆ. ಶತೃವಿನ ದಾಳಿಪಡೆ ಇನ್ನೂ ಮುಂದುವರೆದರೆ 4-5 ಕಿಮೀ ಇದ್ದಾಗ Air Defence ಗನ್ನುಗಳ ದಾಳಿ ಪ್ರಾರಂಭವಾಗುತ್ತದೆ. ಇಷ್ಟೊತ್ತಿಗೆ ಬೇರೆ ವಾಯುನೆಲೆಯ ವಿಮಾನಗಳೂ ಈ ಆಕ್ರಮಣದಲ್ಲಿ ಭಾಗವಹಿಸಿ ಇಂತಹ ದುಸ್ಸಾಹಸದ ಬಗ್ಗೆ ಇನ್ನೊಮ್ಮೆ ಯೋಚಿಸಲೂ ಬೇಡಿ....ಎನ್ನುವ ಒಂದು ಸಂದೇಶ ರವಾನೆಯಾಗುವಂತೆ ಮಾಡಿ ಕಳು ಹಿಸುತ್ತಾರೆ.
ಇದು ರಕ್ಷಣಾತ್ಮಕ ರಣತಂತ್ರ.
ಯುಧ್ಧದ ಧ್ಯೇಯಗಳಲ್ಲಿ ಒಂದು ಬಹಳ ಮಹತ್ವದ್ದು ಎಂದರೆ ಶತ್ರುವನ್ನು ಆರ್ಥಿಕವಾಗಿ ಬಗ್ಗುಬಡೆದುಬಿಡಬೇಕು, ಇನ್ನು ಇಪ್ಪತ್ತು ವರ್ಷಗಳವರೆಗೂ ತಲೆಎತ್ತಬಾರದು,ಕಿರಿಕ್ ಮಾಡದೆ ಶಾಂತಿಯಿಂದಿರಬೇಕು. ಅದಕ್ಕೆ ಅವರ ಕಾರ್ಖಾನೆಗಳು, ಸಿಟಿಗಳು,ವಾಣಿಜ್ಯ ಕೇಂದ್ರಗಳು,ಏರ್ಪೋರ್ಟುಗಳು,ಅಣುಶಕ್ತಿ ಕೇಂದ್ರಗಳು,ಹೀಗೆ ಅವರ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬನ್ನು ಮುರಿದು ಬಿಡಬೇಕು. ಸುಖಾಸುಮ್ಮನೆ ಯುಧ್ಧಕ್ಕೆ ಹೋಗಬಾರದು. ಯುಧ್ಧ ಅತ್ಯಂತ ಕೊನೆಯ ಆಯ್ಕೆಯಾಗಿರಬೇಕು. ಒಂದು ಸಲ ಯುಧ್ಧಕ್ಕೆ ಹೋಗುವ ನಿರ್ಧಾರ ತೆಗೆದುಕೊಂಡಮೇಲೆ ಶತ್ರುವಿನ ಸರ್ವನಾಶ ಮಾಡಿಬಿಡಬೇಕು. ಇದೇ ಕೌಟಿಲ್ಯನ ರಣನೀತಿ.
ಅದು ಆಕ್ರಾಮಿಕ ರಣನೀತಿ.
No comments:
Post a Comment