Monday, November 20, 2017

ಸೂರ್ಯನ ಪ್ರಖರತೆಗೆ ಪರವಾನಗಿಯೇ

ಸೂರ್ಯನ ಪ್ರಖರತೆಗೆ ಪರವಾನಗಿಯೇ?

ಜುಲೈ 1893 ನಲ್ಲಿ ಕೆನಡಾದ ವ್ಯಾಂಕೂವರ್ ತಲುಪಿದ ಸ್ವಾಮಿ ವಿವೇಕಾನಂದರು ರೈಲಿನಲ್ಲಿ ಚಿಕಾಗೋ ನಗರಕ್ಕೆ ಪ್ರಯಾಣ ಬೆಳಸುತ್ತಾರೆ.
World Parliament of Religions ಎನ್ನುವ ಧಾರ್ಮಿಕ ಮಹೋತ್ಸವದಲ್ಲಿ ಭಾಗವಹಿಸುವ ಉತ್ಸಾಹ ಕಣಕಣದಲ್ಲೂ ನರ್ತಿಸುತ್ತಿತ್ತು.

ಅಮೆರಿಕಾದಲ್ಲಿ New Religion Movement ನ ಆಯೋಜನೆಯಲ್ಲಿ ನಡೆಯುತ್ತಿದ್ದ ಒಂದು ವಿನೂತನ ಧಾರ್ಮಿಕ ಪ್ರಯೋಗವಿದು. ಅಮೆರಿಕದ ಅಸ್ತಿತ್ವದ 400 ವರ್ಷಗಳ ಸಂಭ್ರಮ.
ರೋಮನ್ ಕ್ಯಾಥೋಲಿಕ್ ಧರ್ಮದಿಂದ ದೂರಾಗಿ ತಮ್ಮದೇ ಆದ ಹೊಸ ಕ್ರಿಶ್ಚಿಯನ್ ಮತವನ್ನು ಸ್ಥಾಪಿಸಿದ್ದ Swedenborgian ಎನ್ನುವ 'ನೂತನ ಮತಕೂಟ" ಇದರ ನಿರ್ವಹಣೆಯನ್ನು ವಹಿಸಿಕೊಂಡಿದ್ದರು.
ವಿಶ್ವದಾದ್ಯಂತ ಹರಡಿರುವ ಎಲ್ಲಾ ಜಾತಿ, ಮತ ಮತ್ತು ಧರ್ಮದ ಸಮಾವೇಶದಲ್ಲಿ ಸುಮಾರು 7000 ಧಾರ್ಮಿಕ ಗುರುಗಳನ್ನು ಆಮಂತ್ರಿಸಲಾಗಿತ್ತು.

ವ್ಯಾಂಕೂವರಿನಿಂದ ಚಿಕಾಗೋಕ್ಕೆ ಪ್ರಯಾಣಿಸುತ್ತಿರುವಾಗ ರೈಲಿನಲ್ಲಿ ಇವರಿಗೆ ಕೇಟ್ ಸ್ಯಾನ್ಬೋರ್ನ್ ಎನ್ನುವ ಮಹಿಳೆಯ ಪರಿಚಯವಾಗುತ್ತದೆ. ಸುಮಾರು ಐವತ್ತೈದರ ಈ ಮಹಿಳೆ ಉಪನ್ಯಾಸಕಿ, ಬರಹಗಾರ್ತಿ ಮತ್ತು ಸಮಾಜ ಸೇವಕಿ.
ವಿವೇಕಾನಂದರ ವ್ಯಕ್ತಿತ್ವಕ್ಕೆ ಮಾರುಹೋಗುತ್ತಾರೆ, ಅವರ ಭಾಷಾ ಜ್ಞಾನಕ್ಕೆ ಅಚ್ಚರಿಗೊಳ್ಳುತ್ತಾರೆ, ಜ್ಞಾನದ ಅಗಾಧತೆಗೆ ಮರುಳಾಗುತ್ತಾರೆ. ಚಿಕಾಗೋದಲ್ಲಿ ಸಮಾರಂಭ ಮುಗಿದ ಮೇಲೆ ಬೋಸ್ಟನ್ ನಗರ ಸಮೀಪದ ತಮ್ಮ ತೋಟದ ಮನೆಗೆ ಬರಲು ನಿಮಂತ್ರಣ ಕೊಟ್ಟು ತಮ್ಮ ವಿಳಾಸ ಪತ್ರವನ್ನು ಕೊಡುತ್ತಾರೆ.

ಚಿಕಾಗೋ ತಲುಪಿದ ವಿವೇಕಾನಂದರಿಗೆ ಆಘಾತಗಳ ಸರಮಾಲೆ ಕಾದಿರುತ್ತದೆ. ಮೊದಲನೆಯದು ಸಮ್ಮೇಳನವನ್ನು ಸೆಪ್ಟಂಬರಿಗೆ ಮುಂದೂಡಲಾಗಿದೆ, ಅಂದರೆ ಎರಡು ತಿಂಗಳುಗಳು ಅಮೆರಿಕಾದಲ್ಲಿ ಉಳಿಯುವ ವ್ಯವಸ್ಥೆ ಮಾಡಿಕೊಳ್ಳಬೇಕು. ಆದರೆ ಅವರನ್ನು ಬೆಚ್ಚಿಬೀಳಿಸಿದೆ ವಿಷಯವೆಂದರೆ ಈ ಸಮ್ಮೇಳನದಲ್ಲಿ ಭಾಗವಹಿಸಲು ಅವರ ದೇಶದ ಪ್ರತಿಷ್ಟಿತ ಸಂಸ್ಥೆಗಳ, ವ್ಯಕ್ತಿಗಳ ಪರಿಚಯ ಮತ್ತು ಪರವಾನಗಿಯ ಪತ್ರ ಹೊಂದಿರಬೇಕು, ಇಲ್ಲದಿದ್ದರೆ ನೊಂದಣಿ ಮಾಡಿಕೊಳ್ಳುವುದಿಲ್ಲ. ಅಷ್ಟಕ್ಕೂ ನೊಂದಣಿಯ ದಿನಾಂಕವಾಗಲೇ ಮಿಗಿದು ಹೋಗಿದೆ. ಇದೆಲ್ಲಕ್ಕಿಂತ ಆಘಾತಕಾರಿ ವಿಷಯವೆಂದರೆ ಕೆಲವೇ ದಿನಗಳಿಗಾಗುವಷ್ಟು ಹಣ ಮಾತ್ರ ಉಳಿದಿತ್ತು. ಪ್ರೇಕ್ಷಕನಾಗಿ ಸಮ್ಮೇಳನದಲ್ಲಿ ಭಾಗವಹಿಸಲಾದರೂ ಎರಡು ತಿಂಗಳಿಗಾಗುವಷ್ಟು ಹಣವಂತೂ ಇರಲಿಲ್ಲ. ಚಿಕಾಗೋದಂತಹ ದುಬಾರಿ ನಗರದಲ್ಲಿರುವುದಕ್ಕಿಂತ ಬೋಸ್ಟನ್ನಿಗೆ ಹೋದರೆ ಸ್ವಲ್ಪ ಹಣ ಉಳಿಸಬಹುದೆಂಬ ಸಲಹೆಯಂತೆ ಅಲ್ಲಿಗೆ ಪ್ರಯಾಣ ಬೆಳಸಿದರು.

ಎಲ್ಲೆಡೆ ನಿರಾಸೆಯ ದಟ್ಟ ಮೋಡಗಳು. ವಿಶ್ವಮಟ್ಟದಲ್ಲಿ ವೇದ ಉಪನಿಷತ್ತುಗಳ, ಹಿಂದೂ ಧರ್ಮದ ಅಗಾಧತೆಯನ್ನು ಜಗತ್ತಿಗೆ ಪರಿಚಯಿಸುವ ಮಹದಾಸೆ ಅಸಾಧ್ಯವಾಗುತ್ತಿರುವುದು ಗೋಚರಿಸುತ್ತಿತ್ತು. ಮುಂದೇನು ಮಾಡುವುದು ಎನ್ನುವ ಆಘಾತ ದಲ್ಲಿದ್ದವರಿಗೆ ಕೇಟ್ ಸ್ಯಾನ್ಬೋರ್ನರ ನೆನಪು ಬಂತು.
ಕೆಲವೇ ಘಂಟೆಗಳಲ್ಲಿ ಅವರ "Breezy Meedows" ತೋಟದ ಮನೆಯಲ್ಲಿ ಪ್ರತ್ಯಕ್ಷರಾದರು. ಕೇಟ್ ತುಂಬಾ ಸಂತೋಷದಿಂದ ಬರಮಾಡಿಕೊಂಡರು. ಹತಾಶಗೊಂಡ ಅವರ ಮುಖ ಸೋಲಿನ ಕಥೆಯನ್ನು ಹೇಳುತ್ತಿತ್ತು. ಕಳವಳಗೊಂಡ ಕೇಟ್ ಮೊದಲು ಅವರಿಗೆ ಸ್ನಾನ, ಊಟದ ವ್ಯವಸ್ಥೆ ಮಾಡಿ, ಸ್ವಲ್ಪ ಚೇತರಿಸಿಕೊಂಡ ಮೇಲೆ ವಿವೇಕಾನಂದರಿಂದ ನಡೆದ ವಿಷಯವನ್ನು ಕೂಲಂಕುಷವಾಗಿ ತಿಳಿದುಕೊಳ್ಳುತ್ತಾರೆ. ಪರಿಚಯ ಪತ್ರವಿಲ್ಲದಿದ್ದರೆ ಸಮ್ಮೇಳನದಲ್ಲಿ ಪ್ರವೇಶವಿಲ್ಲ.

ಉಪನ್ಯಾಸಕಿಯಾದುದರಿಂದ ಹಾರ್ವರ್ಡ್ ವಿಶ್ವವಿದ್ಯಾಲಯದ ಅನೇಕ ಪ್ರೊಫೆಸರುಗಳ ಪರಿಚಯವಿರುತ್ತದೆ ಕೇಟ್ ಅವರಿಗೆ. ಅದರಲ್ಲಿ ಗ್ರೀಕ್ ಭಾಷೆ ಕಲಿಸುತ್ತಿದ್ದ ಜಾನ್ ಹೆನ್ರಿ ರೈಟ್ ಎನ್ನುವವರು ಸಂಸ್ಕೃತ ಕಲಿತವರು, ಹಾಗಾಗಿ ಭಾರತದ ಮತ್ತು ಭಾರತೀಯರ ಬಗ್ಗೆ ಒಳ್ಳೆಯ ಅಭಿಪ್ರಾಯವಿರುತ್ತದೆ, ವಿವೇಕಾನಂದರಿಗೆ ಪರಿಚಯ ಪತ್ರ ಇವರಿಂದ ಸಿಗಬಹುದು ಎಂದು ವಿವೇಕಾನಂದನಂದರಿಗೆ ಅವರನ್ನು ಪರಿಚಯ ಮಾಡಿ ಕೊಡುತ್ತಾರೆ.

ವಿವೇಕಾನಂದರನ್ನು ನೋಡುತ್ತಲೇ ಪ್ರೊಫೆಸರ್ ರೈಟ್ ಅವರ ಧೀಮಂತ ವ್ಯಕ್ತಿತ್ವಕ್ಕೆ ಮಾರು ಹೋಗುತ್ತಾರೆ. ಮೂರು ದಿನಗಳ ಕಾಲ ತಮ್ಮ ಮನೆಯಲ್ಲೇ ಉಳಿಸಿಕೊಳ್ಳುತ್ತಾರೆ. ಈ ಅವಧಿಯಲ್ಲಿ ಕೆಲವು ಉಪನ್ಯಾಸ ಸಭೆಗಳನ್ನು ಏರ್ಪಡಿಸಿ ಬೋಸ್ಟನ್ನಿನ ಗಣ್ಯವ್ಯಕ್ತಿಗಳಿಗೆ ಆಮಂತ್ರಣ ನೀಡುತ್ತಾರೆ. ವಿವೇಕಾನಂದರಿಗಿರುವ ಭಾಷಾ ಪ್ರಾವೀಣ್ಯತೆ, ಭಾಷಣದ ಶೈಲಿ ಪ್ರೇಕ್ಷಕರನ್ನು ದಿಗ್ಭ್ರಮೆಗೊಳಿಸುತ್ತದೆ.

ವಿಶ್ವ ಧರ್ಮ ಸಮ್ಮೇಳನಕ್ಕೆ ಹೋಗುವ ಆಸೆಯನ್ನು ಬಿಟ್ಟಿದ್ದ ವಿವಾಕಾನಂದರಲ್ಲಿ ಪ್ರೋತ್ಸಾಹ ತುಂಬುತ್ತಾರೆ ಪ್ರೊಫೆಸರ್ ರೈಟ್.
'ನಿಮ್ಮಂತವರಿಂದ ಪರಿಚಯದ ಪತ್ರಬೇಕೇ ಅವರಿಗೆ....
"To ask for your credentials is like asking the Sun to state it's right to shine."
ಸೂರ್ಯನ ಪ್ರಖರತೆಗೆ ಪರವಾನಗಿ ಬೇಕೇ?

ಕೂಡಲೇ ಸಮ್ಮೇಳನದ ಅಧ್ಯಕ್ಷ ಜಾನ್ ಬರ್ರೋಸ್ ರವರಿಗೆ ಪರಿಚಯ ಪತ್ರ ಬರೆದು ಕಳುಹಿಸುತ್ತಾರೆ. ಆ ಪತ್ರದಲ್ಲಿ... "ವಿವೇಕಾನಂದರೊಬ್ಬರೇ ನಮ್ಮ ಎಲ್ಲಾ ಹಾರ್ವರ್ಡ್ ಪ್ರೊಫೆಸರುಗಳಿಗೆ ಸಮ. ಇವರನ್ನು ನೀವು ಸಮಾರಂಭದಲ್ಲಿ ಪಾಲ್ಗೊಳ್ಳಲು ನಿರಾಕರಿಸಿದರೆ, ಒಬ್ಬ ಮೇಧಾವಿಯ ಪರಿಚಯದ ಲಾಭ ನಿಮಗಾರಿಗೂ ಸಿಗದು..ಅದು ನಿಮ್ಮ ದುರಾದೃಷ್ಟ " ಎಂದು ಬರೆಯುತ್ತಾರೆ.
ವಿವೇಕಾನಂದರಿಗೆ ನೀವು ಚಿಕಾಗೋಕ್ಕೆ ಹೊರಡಿ ಎಂದು ಬೀಳ್ಕೊಡುತ್ತಾರೆ.

ಇದಾದ ಹಲವಾರು ವರ್ಷಗಳ ಕಾಲ ಇಬ್ಬರೂ ಪತ್ರಗಳ ಮುಖಾಂತರ ಸಂಪರ್ಕವಿಟ್ಟುಕೊಂಡಿರುತ್ತಾರೆ. ಪತ್ರದಲ್ಲಿ ವಿವೇಕಾನಂದರು ಇವರನ್ನು " Dear Adhyapak" ಎಂದೇ ಸಂಭೋದಿಸುತ್ತಿದ್ದರು.

2 ಸೆಪ್ಟೆಂಬರ್1893...  ಬೋಸ್ಟನ್ನಿನಿಂದ ಚಿಕಾಗೋಕ್ಕೆ ಹೊರಡುತ್ತಾರೆ, ಆದರೆ ಅವಘಡಗಳ ಸರಮಾಲೆ ಇನ್ನೂ ಅವರ ಬೆನ್ನು ಬಿಟ್ಟಿರಲಿಲ್ಲ....9/11 ಇನ್ನೂ ಏಳು ದಿನಗಳ ದೂರ...

ವಿಂಗ್ ಕಮಾಂಡರ್ ಸುದರ್ಶನ
sudarshanbadangod@gmail.com

ಕಾರಣ ಮತ್ತು ಪರಿಣಾಮ

ಕಾರಣ ಮತ್ತು ಪರಿಣಾಮ

Complete works of Swamy Vivekananda ಸರಮಾಲೆ ಪುಸ್ತಕಗಳಲ್ಲಿ ಕರ್ಮಯೋಗದಲ್ಲಿ Cause and Effect ನ ಬಗ್ಗೆ ಸವಿಸ್ತಾರವಾಗಿ ಬರೆದಿದ್ದಾರೆ. Every thing happens with a reason....ನಮ್ಮ ನಮ್ಮ ಕರ್ಮಫಲಾನುಸಾರ ಜೀವನದಲ್ಲಿ ಘಟನೆಗಳು ನಡೆಯುತ್ತವೆ.
 ‎
 ‎Parliament of Religions ನಿಗದಿತ ಸಮಯದಂತೆ ಜುಲೈ 1893 ಯಲ್ಲಿ ನಡೆದಿದ್ದರೆ ಬಹುಷಃ ಪರಿಚಯ ಪತ್ರವಿಲ್ಲದೆ, ಯಾರ ಪರಿಚಯವೂ ಇಲ್ಲದೆ ಸಮ್ಮೇಳನದಲ್ಲಿ ಭಾಗವಹಿಸದೆ ಮರುಳುತ್ತಿದ್ದರೇನೋ, ಭಾಗವಹಿಸಿಧ್ಧರೂ ಸಹ ಅಂತಹ ಒಂದು ಅಧ್ಭುತವಾದ, ಸಂಮೋಹಕ ಭಾಷಣ ಕೊಡಲಾಗುತ್ತಿತ್ತೇ?. ನೆರೆದಿದ್ದ 7000 ಪ್ರತಿನಿಧಿಗಳಲ್ಲಿ , ಸಮ್ಮೇಳನದ ಅಧ್ಯಕ್ಷ ಜಾನ್ ಬರ್ರೋಸ್ ಇವರನ್ನೇ ಪ್ರತ್ಯೇಕವಾಗಿ ಕರೆದು ಶ್ಲಾಘನೆಯ ಹೊಳೆಯನ್ನೇ ಹರಿಸಿ, ನೀವು ಒಟ್ಟು ಆರು ಸಲ ಭಾಷಣ ಮಾಡಬೇಕೆಂಬ ವಿಶೇಷ ಆಮಂತ್ರಣ ನೀಡುತ್ತಿದ್ದರೇ?
 ‎ಸಮ್ಮೇಳನ ಮುಗಿದ ಮೇಲೂ ಸುಮಾರು ಮೂರೂವರೆ ವರ್ಷಗಳ ಕಾಲ ಅಮೆರಿಕಾದಲ್ಲಿ ಉಳಿಯುತ್ತಿದ್ದರೇ?  ಅಷ್ಟೊಂದು ಅಮೆರಿಕನ್ನರ ಆರಾಧ್ಯದೈವವಾಗುತ್ತಿದ್ದರೇ?
 ‎ಇದೇ ಕರ್ಮಯೋಗದ "ಕಾರಣ ಮತ್ತು ಪರಿಣಾಮ" ಇದ್ದಿರಬಹುದು.


 ‎ಬೋಸ್ಟನ್ನಿನಿಂದ ಕೇಟ್ , ಪ್ರೊಫೆಸರ್ ರೈಟ್ ಮತ್ತು ಅವರ ಕುಟುಂಬದವರಿಗೆ ವಿದಾಯ ಹೇಳಿ ರೈಲಿನಲ್ಲಿ ಸಮ್ಮೇಳನಕ್ಕೆಂದು ಚಿಕಾಗೋಗೆ ಹೊರಟ ವಿವೇಕಾನಂದರಿಗೆ ಇನ್ನೊಂದು ಸುತ್ತಿನ ಅವಘಡವೋ, ಸಂಚಿತ ಕರ್ಮಫಲವೋ ಅಥವಾ ಅವರನ್ನು ಪ್ರವಾದಿಗಳ ಮಟ್ಟಕ್ಕೇರಿಸುವ  ಅಗೋಚರ ಶಕ್ತಿಗಳ ಸಂಚೋ..ಗೊತ್ತಿಲ್ಲ, ಆಟವಂತೂ ಶುರುವಾಗಿತ್ತು.
 ‎
 ‎ಚಿಕಾಗೋದಲ್ಲಿ ಪ್ರೊಫೆಸರ್ ರೈಟ್ ರವರ ಸ್ನೇಹಿತರೊಬ್ಬರ ಮನೆಯಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯನ್ನು ಮಾಡಿದ್ದರು. ಅವರ ಮನೆಯ ವಿಳಾಸ ಮತ್ತು ಪರಿಚಯ ಪತ್ರವನ್ನು ಒಂದು ಲಕೋಟೆಯಲ್ಲಿ ಹಾಕಿ ಕೊಟ್ಟಿದ್ದರು, ಆದರೆ ರೈಲಿನಿಂದ ಇಳಿಯುವಾಗ ಎಲ್ಲೋ ಬಿದ್ದು ಹೋಗಿಬಿಟ್ಟಿತು. ಈಗೇನು ಮಾಡುವುದು? ದಿಕ್ಕೇ ತೋಚದಂತಾಯಿತು .
 ‎ಆ ರಾತ್ರಿಯನ್ನು ಅಲ್ಲೇ ನಿಂತಿದ್ದ ಒಂದು ರೈಲ್ವೇ ಬೋಗಿಯಲ್ಲಿ ಕಳೆದರು. ಬೆಳಗ್ಗೆ ಎದ್ದವರಿಗೆ ತಾಳಲಾರದ ಹಸಿವು, ಕೈಯಲ್ಲಿ ಬಿಡಿಗಾಸಿಲ್ಲ. ಹತಾಶರಾಗಿ ಚಿಕಾಗೋ ನಗರದ ಬೀದಿಗಳಲ್ಲಿ ಸುತ್ತಾಡುತ್ತಾ ಲೇಕ್ ಶೋರ್ ಡ್ರೈವ್ ಎಂಬಲ್ಲಿಗೆ ಬಂದರು. ಆಹಾರಕ್ಕೆ ಭಿಕ್ಷೆ ಬೇಡಲೂ ಯೋಚಿಸಿದರು, ಆದರೆ ಅವರ ದಿರಿಸಿನಿಂದಾಗಿ ಹಾದು ಹೋಗುವವರೆಲ್ಲಾ ಅನುಮಾನದಿಂದ ನೋಡುತ್ತಾ ಹೋಗುತ್ತಿದ್ದರು, ಹಾಗಾಗಿ ಇನ್ನೂ ಅವಮಾನಿತನಾಗುವುದು ಬೇಡ ಎಂದು ಅಲ್ಲೇ ಮನೆಯೊಂದರ ಮುಂದಿನ ಮರದ ನೆರಳಿನಲ್ಲಿ ಕುಸಿದು ಕುಳಿತರು, ಹಸಿವಿನಿಂದ, ಹತಾಶೆಯಿಂದ, ನಿರಾಶೆಯಿಂದ,  ಇದು ಪ್ರಾರಬ್ದ ಕರ್ಮವೇ, ಸಂಚಿತ ಕರ್ಮವೇ...ಅವರ ಅಮ್ಮನ ನೆನಪು ಬಂದು, ದುಖಃ ಒತ್ತರಿಸಿ ಬಂತು.

 ‎
 ‎ಅದೇ ಸಮಯಕ್ಕೆ ಆ ಮನೆಯ ಕಿಟಕಿಯಿಂದ ಇವರನ್ನು ನೋಡುತ್ತಾ ಕುಳಿತಿದ್ದರು ಒಬ್ಬ ಮಹಿಳೆ...
 ‎
 ‎ಮುಂದೆ ಇವರ "Dear Mother" ಎಂದು ನೂರಾರು ಪತ್ರಗಳ ಸಂಭೋದಿತೆ, ಆ ಮನೆಯನ್ನೇ ವಿವೇಕಾನಂದರ ಅಮೆರಿಕದ ಮುಖ್ಯಾಲಯವನ್ನಾಗಿ ಮಾಡಿದ ಮಾತೆ, ಮುಂದೆ ಅಮೆರಿಕಾದ ಮೂಲೆ ಮೂಲೆಗಳಲ್ಲಿ ಮಾಡಿದ ಉಪನ್ಯಾಸಕ್ಕೆ ಸಿಗುತ್ತಿದ್ದ ಸಂಭಾವನೆಗೆ ತಿಜೋರಿಯಾಗಿ, ನೊಂದ ಮನಸ್ಸಿಗೆ ಸಾಂತ್ವಾನ ಹೇಳುವ ಮೈತ್ರಿಯಾಗಿ, ತಪ್ಪು ಮಾಡಿ ಒಪ್ಪಿಕೊಂಡಾಗ ಧರಿತ್ರಿಯಾಗಿ...ವಿವೇಕಾನಂದರನ್ನು ಮಗುವಿನಂತೆ ಪೋಷಿಸಿದ ದೇವಿ ಸ್ವರೂಪಿ ಶ್ರೀಮತಿ ಎಲ್ಲೆನ್ ಹೇಲ್...
 ‎
ವಿವಾಕಾನಂದರಿಗಾಗೇ ಕಾಯುತ್ತಿದ್ದರೇನೋ ಎನ್ನುವಂತೆ ಕುಳಿತಿದ್ದರು ಕಿಟಿಕಿಯಿಂದ ನೋಡುತ್ತಾ, ಸ್ವಲ್ಪಹೊತ್ತು ನೋಡಿ ಹೊರ ಬಂದರು ವಿವೇಕಾನಂದನಂದರ ಮುಖವನ್ನೇ...ಈಗ ಬಂದೆಯಾ ಎನ್ನುವಂತೆ ನೋಡಿದರು. ಬಾ...ಒಳಗೆ ಎಂದು ಸ್ವಾಗತಿಸಿ ಕರೆದುಕೊಂಡು ಹೋದರು.

ಕರ್ಮಫಲ..ಅಮೆರಿಕಾದ ಬಾಗಿಲು ತೆರೆಯಿತು.

ವಿಂಗ್ ಕಮಾಂಡರ್ ಸುದರ್ಶನ
sudarshanbadangod@gmail.com

ಕಿವಿಗಡಚಿಕ್ಕುವ ಕರತಾಡನ

ಕಿವಿಗಡಚಿಕ್ಕುವ ಕರತಾಡನ


10 ಸೆಪ್ಟೆಂಬರ್ 1893, ಚಿಕಾಗೋದ ಡಿಯರ್ಬಾನ್ ಏವ್ ರಸ್ತೆಯ ಬಂಗಲೆಯ ಒಡತಿ ಶ್ರೀಮತಿ ಎಲ್ಲೆನ್ ಹೇಲ್ ತಮ್ಮ ಮನೆಯ ಮುಂದೆ ಕುಳಿತಿದ್ದ ವಿವೇಕಾನಂದರನ್ನು ಒಳಗೆ ಕರೆದುಕೊಂಡು ತಮ್ಮ ಪತಿ ಜಾರ್ಜ್ ಹೇಲ್ ರವರಿಗೆ ಪರಿಚಯಿಸುತ್ತಿದ್ದ ಹಾಗೇ, ಮಕ್ಕಳು ಮೇರಿ, ಹ್ಯಾರಿಯೆಟ್ ಕೂಡ ಬಂದು ವಂದಿಸುತ್ತಾರೆ.

"ಈ ಅಪಚರಿತನನ್ನು ಹೇಗೆ ಸ್ವಾಗತಿಸಿದರು ಎಂದರೆ ನಾವು ಹಿಂದೂಗಳು ನಂಬುವ ಪೂರ್ವಜನ್ಮದ ಋಣಾನುಬಂಧವಿದ್ದಿರಬಹುದೇನೋ ಎನಿಸಿತು.." ಎಂದು ಆರು ವರ್ಷಗಳ ನಂತರ ವಿವೇಕಾನಂದರು ಮೇರಿ ಹೇಲ್ ರವರಿಗೆ ಬರೆದ ಪತ್ರದಲ್ಲಿ ಭಾವುಕರಾಗಿ ಬರೆಯುತ್ತಾರೆ.

ಇವರು ಸಮ್ಮೇಳನಕ್ಕೇ ಬಂದವರಿರಬೇಕೆಂಬ ಊಹೆ ಸರಿಯೆಂದು ತಿಳಿದು ಹರ್ಷಿಸುತ್ತಾರೆ. ನಾವು ಹಿಂದೂ ತತ್ವಗಳನ್ನು ಓದಿದ್ದೇವೆ ಆದರೆ ಇದೇ ಮೊದಲ ಸಲ ಒಬ್ಬ ಹಿಂದೂ ಸ್ವಾಮಿಯನ್ನು ನೋಡುತ್ತಿರುವುದು ಎಂದು ಅಥಿತಿ ಸತ್ಕಾರದಲ್ಲಿ ತೊಡಗುತ್ತಾರೆ. ಸಮ್ಮೇಳನದಲ್ಲಿ ತಮ್ಮ ಹೆಸರು ನೊಂದಣಿಯಾಗಿಲ್ಲ ಎಂದು ವಿವೇಕಾನಂದರು ಹೇಳಿದಾಗ ಶ್ರೀಮತಿ ಹೇಲ್ ಖುದ್ದಾಗಿ ಅವರನ್ನು ಸಮ್ಮೇಳನದ ಆಡಳಿತ ವರ್ಗದವರೊಂದಿಗೆ ಪರಿಚಯಿಸಿ ಅವರ ಹೆಸರನ್ನು ನೊಂದಾಯಿಸುತ್ತಾರೆ.
ಮರುದಿನ, 11 ಸೆಪ್ಟೆಂಬರ್ ಸಮ್ಮೇಳನದ ಉಧ್ಗಾಟನೆಯ ದಿನದ ಮಧ್ಯಾಹ್ನದ  ಭಾಷಣಕಾರರಾಗಿ ಅರ್ಧ ಗಂಟೆಯ ಅವಧಿಯನ್ನು ಕೊಡಲಾಗಿದೆ ಎಂದೂ ತಿಳಿಸುತ್ತಾರೆ.
ಅಂತೂ ಇಲ್ಲಿವರೆಗೆ ಪಟ್ಟ ಕಷ್ಟವೆಲ್ಲಾ ಸಾರ್ಥಕವಾಯಿತು ಎಂದು ಸಮಾಧಾನದ ನಿಟ್ಟುಸಿರು ಬಿಡುತ್ತಾರೆ.

11 ಸೆಪ್ಟೆಂಬರ್ ಬೆಳಗ್ಗೆ ವಿವೇಕಾನಂದರನ್ನು ಹೇಲ್ ದಂಪತಿಗಳು ಚಿಕಾಗೋದ ಪ್ರಸಿದ್ಧ Art Palace Auditorium ಕಲಾ ಮಂದಿರಕ್ಕೆ ಕರದುಕೊಂಡು ಹೋಗುತ್ತಾರೆ. ಆಗಲೇ ಸುಮಾರು ಏಳುಸಾವಿರ ಧಾರ್ಮಿಕ ವ್ಯಕ್ತಿ ಗಳ ಸಮಾವೇಷ ನಡದಿರುತ್ತದೆ. ಭಾರತದಿಂದ ಬ್ರಹ್ಮೊ ಸಮಾಜದ P C ಮಜುಂದಾರನ್ನು ಬಿಟ್ಟರೆ ಒಬ್ಬರೂ ಪರಿಚಯವದರಿರುವುದಿಲ್ಲ. ಅಂತಹ ಬೃಹತ್, ವೈವಿಧ್ಯಮಯ ಸಮಾವೇಶವನ್ನು ನೋಡಿ ದಂಗಾಗಿ ಬಿಡುತ್ತಾರೆ.

ಮಧ್ಯಾಹ್ನದ ಸಮಾವೇಶ...ವಿವೇಕಾನಂದರ ಭಾಷಣದ ಸರದಿ, ಅಧ್ಯಕ್ಷ ಜಾನ್ ಬರ್ರೋಸರು ವಿವೇಕಾನಂದರನ್ನು ಸಮಾವೇಶಕ್ಕೆ ಪರಿಚಯಿಸುತ್ತಾರೆ. ಸ್ವಲ್ಪ ಮಟ್ಟದ ಅಧೀರತೆಯಿಂದಲೇ ವೇದಿಕೆಯನ್ನೇರುತ್ತಾರೆ. ನೆರೆದ ಜನಸ್ತೋಮಕ್ಕೆ ತಲೆ ಬಾಗಿಸಿ ಕೈಮುಗಿದು, ಕಣ್ಣು ಮುಚ್ಚಿಕೊಂಡು ದೇವಿ ಸರಸ್ವತಿಯನ್ನು ಸ್ಮರಿಸುತ್ತಾರೆ, ಕಣ್ಣು ತೆರೆದವರೇ..

"ಅಮೇರಿಕಾದ ಸಹೋದರಿಯರೇ..ಸಹೋದರರೇ"

ಕಂಚಿನ ಕಂಠದ ಧ್ವನಿ ಹೊರಡುತ್ತಲೇ...ಸಭೆಯಲ್ಲಿ ವಿದ್ಯುತ್ ಸಂಚಲನವಾಗುತ್ತದೆ. ಏಳುಸಾವಿರ ಜನ ಎದ್ದು ನಿಂತು ಸುಮಾರು ಎರಡು ನಿಮಿಷಗಳ ಕಾಲ ಸತತವಾಗಿ ಗಡಚಿಕ್ಕುವ ಕರತಾಡನ ಮಾಡುತ್ತಾರೆ.  ಕಿಂಚಿತ್ತು ಅಧೀರತೆಯಿಂದ ಬಂದವರಿಗೆ ಇಂತಹ ನಭೂತೋ ನಭವಿಷ್ಯತಿ.. ಸ್ವಾಗತ ಅವರನ್ನು ಅಚಂಭಿತಗೊಳಿಸಿ, ಪ್ರೋತ್ಸಾಹಿಸಿ, ಕಣ ಕಣದಲ್ಲೂ ಚೈತನ್ಯವನ್ನು ಹರಿಸುತ್ತದೆ. ಚಪ್ಪಾಳೆಯ ಸದ್ದಡಗುವುದನ್ನೇ ಕಾಯ್ದು ತಮ್ಮ ಭಾಷಣವನ್ನು ಪ್ರಾರಂಭಿಸುತ್ತಾರೆ..

ಸಮಾರಂಭಲ್ಲಿ ನೆರೆದಿದ್ದವರಲ್ಲಿ ಅತಿ ಚಿಕ್ಕವರಾದ ಮೂವತ್ತು ವರ್ಷದ ಈ ವ್ಯಕ್ತಿ ಪ್ರಪಂಚದ ಅತಿ ಪ್ರಾಚೀನ..ಸನಾತನ ಧರ್ಮದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಿದ್ದಾರೆ.

ಹಾಗೆ ನೋಡಿದರೆ, ಅವರ ಪ್ರಾರಂಭದ ಸಾಲಿನಲ್ಲಿ ಏನು ಅಂತಹ ವಿಷೇಶವೇನೂ ಇರಲಿಲ್ಲ.. ಅಮೆರಿಕದ ಸಹೋದರ, ಸಹೋದರಿಯರೇ..
ಈ ವಾಕ್ಯವನ್ನು ಈಗಲೂ ಅಂದರೆ ಘಟನೆ ನಡೆದ 124 ವರ್ಷಗಳ ನಂತರವೂ ನೆನಸಿಕೊಂಡರೆ ಹೆಮ್ಮೆಯಿಂದ ಎದೆ ಉಬ್ಬುವುದು ಏಕೆ ಎಂದರೆ ಅವರ ವಾಕ್ಯದ ಪ್ರಾಮಾಣಿಕತೆಯಿಂದ. ಧ್ವನಿಯಲ್ಲಿದ್ದ ಉತ್ಕಟತೆ, ಆದರತೆ ಮತ್ತು ಅಪ್ಯಾಯಮಾನತೆಯಿಂದ.

ಹಿರಿಯರು ಕಿರಿಯರೆನ್ನದೆ ಎಲ್ಲರನ್ನೂ ಹೆಸರಿಡಿದು ಕರೆಯುವ ವಾಡಿಕೆ ಇರುವ ಆ ನಾಡಿನಲ್ಲಿ ಭಾರತೀಯ ಸಂಸ್ಕಾರವನ್ನು ಪರಿಚಯಿಸಿದ್ದರು. ಅದರಲ್ಲೇ ಇರುವುದು ಕಿವಿ ಗಡಚಿಕ್ಕುವ ಕರತಾಡನದ ವಿಷೇಶತೆ.

ವಿಂಗ್ ಕಮಾಂಡರ್ ಸುದರ್ಶನ
sudarshanbadangod@gmail.com

Sunday, November 19, 2017

ದೂರದಿಂದ ಬಂದವರು

ದೂರದಿಂದ ಬಂದವರು

      ನಾವಿಲ್ಲಿಗೆ ಬಂದ ಹೊಸತರಲ್ಲಿ ನಮ್ಮನ್ನು ಹಾಗೇ ಕರೆಯುತ್ತಿದ್ದವರು...ದೂರದಿಂದ ಬಂದವರು. 

ತೀರ್ಥಹಳ್ಳಿಯ ಸಮೀಪದ ಕ್ಷೇಮಾಪುರದಿಂದ ವಿಜಯನಗರಕ್ಕೆ ಕಾಲುನಡಿಗೆಯಿಂದ ಬಂದವರಿಗೆ... ದೂರವೇ

‘ಸರಸ್ವತೀ..ಹೊರಡು ವಿಜಯನಗರಕ್ಕೆ ಹೋಗೋಣ, ಅಲ್ಲಿ ಸಂಗೀತದ ಮೂಲಕ ಶ್ರೀಹರಿಯ ಸೇವೆ ಮಾಡೋಣ ಎಂದಾಗ, ಸಂತೋಷದಿಂದ ನಾನೂ ಮಕ್ಕಳೊಂದಿಗೆ ಹೊರಟೇಬಿಟ್ಟೆ.
 ಇವರು ಶ್ರೀನಿವಾಸ ನಾಯಕರಾಗಿದ್ದಾಗ, ವಜ್ರದ ವ್ಯಾಪಾರಕ್ಕೆ ಬರುತ್ತಿದ್ದಾಗ ವಿಜಯನಗರದಲ್ಲಿ ಇವರ ಸಿರಿತನಕ್ಕೆ ತಕ್ಕಂತೆ ರಾಜಮರ್ಯಾದೆ ಸಿಗುತ್ತಿತ್ತಂತೆ. ಇವರು ನವಕೋಟಿ ನಾರಾಯಣರಾಗಿದ್ದುದೂ ಇಲ್ಲಿಂದಲೇ ತಾನೇ.

      ಕೃಷ್ಣದೇವರಾಯರ ಪಟ್ಟಾಭಿಷೇಕ ನಡೆದಾಗ ರಾಜ್ಯದ ಪರಿಸ್ಥಿತಿ ಇನ್ನೂ ಅತಂತ್ರದಲ್ಲಿತ್ತಂತೆ. ಒಳದಂಗೆ, ಉತ್ತರಕ್ಕೆ ಬಹಮನಿ ಮುಸ್ಲೀಮರ ಕಾಟ, ಖಾಲಿಯಾದ ಖಜಾನೆ, ಸಂಬಳವಿಲ್ಲದೆ ಅಧೀರರಾಗಿದ್ದ ಸೈನಿಕರು. ಪಟ್ಟಾಭಿಷೇಕ ಮಾಡಲೇ ಬೇಕಾದ ಅನಿವಾರ್ಯತೆ..ಹೊಂಚುಹಾಕುತ್ತಿದ್ದ   ಶತ್ರುಗಳಿಂದ ರಾಜ್ಯವನ್ನು ಉಳಿಸಿಕೊಳ್ಳಲು….ಎಂದೆಲ್ಲಾ ವಿಜಯನಗರದ ಪರಿಸ್ಥಿತಿಯನ್ನು ವಿವರಿಸುತ್ತಲೇ ಬಂದರು ಹಾದಿ ಉದ್ದಕ್ಕೂ.
       ಕೃಷ್ಣದೇವರ ಹೆಸರು ಹೇಳುತ್ತಲೇ ಇವರಿಗೆ ಎಲ್ಲಿಲ್ಲದ ಉತ್ಸಾಹ..
      'ಸರಸ್ವತಿ.. ಅಂತಹ ಎದೆಗಾರನನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬ' ಎಂದು ಅವರ ಸಾಹಸ, ಶೌರ್ಯಗಳ ವೃತ್ತಾಂತವನ್ನೇ ಬಿಚ್ಚಿಡುತ್ತಿದ್ದರು. 

ಕೃಷ್ಣದೇವರಾಯರ ಮೊದಲ ಆದ್ಯತೆ ಒಂದು ಒಳ್ಳೆಯ ಸೈನ್ಯಕಟ್ಟಬೇಕು, ಸೈನಿಕರ ತರಬೇತಿಗೆ, ಅರಬ್ಬೀ ದೇಶದ ಕುದುರೆಗಳನ್ನು, ದಕ್ಷಿಣದಿಂದ ಆನೆಗಳನ್ನು ತರಲು ಹಣದ ಕೊರತೆಯಿದ್ದಾಗ ನಮ್ಮವರಿಂದ ಆರ್ಥಿಕ ಸಹಾಯ ಪಡೆದರಂತೆ.ಸಹಾಯ ಉಹುಂ, ಇವರದು ಸಹಾಯಮಾಡುವ ಜಾಯಮಾನವೇ ಅಲ್ಲ..ಆಗ, ಶ್ರೀನಿವಾಸ ನಾಯಕರಾಗಿದ್ದಾಗ.., ಶುಧ್ಧ ವ್ಯವಹಾರದ ಲೆಕ್ಕಾಚಾರ.ಕೃಷ್ಣರಾಯರಿಂದಲೇ ಮುಂದೆ ವಿಜಯನಗರದ ಸಂಪತ್ತು ವೃಧ್ಧಿಸಲಿದೆ ಎನ್ನುವ ಬಲವಾದ ನಂಬಿಕೆ ಮತ್ತು ಆಗ ಬರಬಹುದಾದ ಇಮ್ಮಡಿ, ಮುಮ್ಮಡಿ ಗಾತ್ರದ ಲಾಭದ ಆಸೆ. ಅದು ಹಾಗೇ ಆಯಿತು ಕೂಡ. 'ಕುದುರೆ ಶೆಟ್ಟರು' ಎನ್ನುವ ವ್ಯಾಪಾರಿಗಳ ಗುಂಪಿಗೆ ಧಾರಾಳವಾಗಿ ಸಾಲ ಕೊಟ್ಟರಂತೆ. ಇವರು ಅರಬ್ಬೀ ದೇಶದಿಂದ ಕುದುರೆಗಳನ್ನು ತರಿಸಿ ವಿಜಯನಗರದ ಸೈನ್ಯಕ್ಕೆ ಕೊಡುತ್ತಿದ್ದರಂತೆ. ಮುಂದಿನ ಯುಧ್ಧಕ್ಕೆ ಸೈನ್ಯ ಸನ್ನಧ್ಧವಾಗಿದ್ದೇ ತಡ ಸಾಮ್ರಾಜ್ಯ ವಿಸ್ತರಣೆಯ ಪ್ರಕ್ರಿಯೆ ಶುರು. ಕೃಷ್ಣದೇವರಾಯರೇ ಮಂಚೂಣಿಯಲ್ಲಿ ನಿಂತು ವೀರಾವೇಷದಿಂದ ಕಾದಾಡಿ ಆ ಪ್ರಾಂತ್ಯದ ರಾಜರನ್ನು ಸೋಲಿಸಿ ಅಲ್ಲಿಯ ಸಂಪತ್ತನ್ನು ವಿಜಯನಗರದ ಬೊಕ್ಕಸಕ್ಕೆ ತುಂಬಿಸಿಬಿಟ್ಟಿರುತ್ತಿದ್ದರಂತೆ. ತೀರ್ಥಹಳ್ಳಿಯಿಂದ ಮುಂದಿನ ಸಲ ವಜ್ರದ ವ್ಯಾಪಾರಕ್ಕೆ ಹೋದಾಗ ಇಮ್ಮಡಿ ಗಾತ್ರದ ಧನರಾಶಿ ಇವರಿಗೆ ಖುದ್ದಾಗಿ ಕೃಷ್ಣದೇವರಾಯರೇ ಒಪ್ಪಿಸುತ್ತಿದ್ದರಂತೆ.

      ಅದೆಲ್ಲಾ ತುಂಬಾ ಹಳೆಯ ವಿಷಯ....'ನನ್ನ ಮೂಗುತಿಯ ಪ್ರಸಂಗದ' ನಂತರ ನಡೆದ ಘಟನಾವಳಿಗಳು ಜಗಜ್ಜಾಹೀರಾದ ಸಂಗತಿ. ಅದನ್ನೆಲ್ಲಾ ಇಲ್ಲೇನು ಹೇಳುವುದು? ಅದನ್ನೆಲ್ಲಾ ಬಿಚ್ಚುತ್ತಾ ಹೋದರೆ ವಿಜಯನಗರದ ವೃತ್ತಾಂತವೇ ಮರೆತು ಹೋಗುತ್ತದೇನೋ.

“ಆದದ್ದೆಲ್ಲಾ ಒಳಿತೇ ಆಯಿತು “..ಎಂದು ಎಂದು ಮೊಟ್ಟ ಮೊದಲಿಗೆ ಹಾಡಲು ಶುರು ಮಾಡಿಕೊಂಡಾಗ ನನಗೇ ಆಶ್ಚರ್ಯವಾಯಿತು...ಯಾರಾದರೂ ಈ ಹಂತಕ್ಕೆ ಬದಲಾಗುವುದು ಸಾಧ್ಯವೇ ಅಂತ.
ಇವರು ಇರುವುದೇ ಹಾಗೇ, ಏನು ಮಾಡಿದರೂ ಒಂದು ಹುಚ್ಚು,ತೀವ್ರತೆ ಮತ್ತು ಆಸ್ಥೆಯಿಂದ ಮಾಡುತ್ತಾರೆ. ವಜ್ರದ ವ್ಯಾಪಾರದಲ್ಲಿ, ಲೇವಾದೇವಿ ವ್ಯವಹಾರದಲ್ಲಿ  ಕೋಟಿ ಕೋಟಿ ಗಳಿಸಿದರು. ಆದರೆ ಇದಲ್ಲಾ ನಶ್ವರ..ಆ ಹರಿಯೇ ಎಲ್ಲಾ ಅಂದೆನಿಸಿದ ಕೂಡಲೇ ಕಿಂಚಿತ್ತೂ ಯೋಚಿಸದೆ ಎಲ್ಲವನ್ನೂ ತ್ಯಜಿಸಿ ಭಕ್ತಿಯಸಾಗರದಲ್ಲಿ ಮುಳುಗಿ ಹೋದರು.
      ಸದ್ಯ ಅಂತೂ ಇಲ್ಲಿಗೆ ಬಂದು ತಲುಪಿದೆವು. ಕೃಷ್ಣದೇವರಾಯರನ್ನು ಭೇಟಿ ಮಾಡಿದಾಗ ದೇವರಾಯರಿಗೆ ಎಲ್ಲಿಲ್ಲದ ಆಶ್ಚರ್ಯ 'ಏನು ಶ್ರೀನಿವಾಸ ನಾಯಕರೇ..ನನಗೇ ಸಾಲ ಕೊಡುವಷ್ಟು ಶ್ರೀಮಂತರಾಗಿದ್ದವರು ಎಲ್ಲವನ್ನೂ ತ್ಯಾಗಮಾಡಿ ಇದೇನು ಅವತಾರ?' ಎಂದಾಗ 'ನಿಮಗೆ ಬೇಕಾಗಿರುವುದು ರಾಜ್ಯ, ನನಗೆ ಹರಿ ಸ್ಮರಣೆಯಷ್ಟೇ ಸಾಕು..' ಎಂದುಬಿಡೋದೇ!
      ಮುಂದೆ ತಿರುಪತಿಯಿಂದ ವ್ಯಾಸತೀರ್ಥರನ್ನು ಮಹಾರಾಜರೇ ಕರೆದುಕೊಂಡು ಬಂದು 'ರಾಜಗುರು' ಪಟ್ಟವನ್ನಲಂಕರಿಸಲು ಮನವಿಮಾಡಿಕೊಂಡ ಮೇಲೆ ವ್ಯಾಸರು ಮಾಡಿದ ಮೊದಲ ಕಾರ್ಯವೆಂದರೆ ಇವರಿಗೆ 'ಪುರಂದರ ದಾಸ' ಎಂದು ದೀಕ್ಷೆ ಕೊಡಿಸಿದ್ದು.

 ನವರಾತ್ರಿಯ ಸಮಾರಂಭವನ್ನು ವಿದೇಶಗಳಲ್ಲೆಲ್ಲಾ ವರ್ಣಿಸಲಾಗಿದೆಯಂತೆ. ಅಂತಹ ಅಧ್ಭುತ ಅನುಭವದ ಮಧ್ಯದಲ್ಲೇ ಒಂದು ನವರಾತ್ರಿಯ ಸಮಾರಂಭದಂದು ನಮಗೇ ಎಂದು  'ಪುರಂದರ ಮಂಟಪ' ದ ಉಧ್ಘಾಟನೆಯಾಯಿತು. ತುಂಬಿ ಹರಿಯುತ್ತಿದ್ದ ತುಂಗಾನದಿಯ ತೀರದ ಪ್ರಶಾಂತವಾದ ವಾತಾವರಣದಲ್ಲಿ ಕಟ್ಟಿಸಿದ ಈ ವಿಶಾಲವಾದ ಮಂಟಪದಿಂದ ಎತ್ತ ನೋಡಿದರೂ ಪೃಕೃತಿಯ ವೈಭವ, ದೇವಸ್ಥಾನಗಳ ಗೋಪುರಗಳು, ಜುಳು ಜುಳು ಶಬ್ದದೊಂದಿಗೆ ಬೆರೆತು ಹೋಗುತ್ತಿದ್ದ ಹಕ್ಕಿಗಳ ಕಲರವ.
ಭಕ್ತಿ ಸಂಗೀತ ಅವಿರತವಾಗಿ ಹರಿಯಲು ಪ್ರಶಸ್ತ ಸ್ಥಳ.

ಅಂದಿನಿಂದ ಅಲ್ಲೇ ನಮ್ಮವಾಸ. ಅಲ್ಲಿಗೆ ಕನಕದಾಸರೂ ನಿಯಮಿತವಾಗಿ ಬರಲು ಪ್ರಾರಂಭಿಸಿದ ಮೇಲಂತೂ ಅದು ಭಕ್ತಿಯ ಕೇಂದ್ರವಾಯಿತು, ಹರಿಭಜನೆಯ ಬೀಡಾಯಿತು. ಕೆಲವು ಸಲ ಕೃಷ್ಣದೇವರಾಯರೂ ಇದರಲ್ಲಿ ಭಾಗವಹಿಸುತ್ತಿದ್ದರು. ದಕ್ಷಿಣದ ತುದಿಯಿಂದ ಕೃಷ್ಣ ಗೋದಾವರಿಗಳನ್ನು ದಾಟಿ ಕಳಿಂಗದ ದೇಶದ ವರೆಗೂ ಹರಡಿರುವ ಸಾಮ್ರಾಜ್ಯದ ಅಧಿಪತಿ...ಪುರಂದರ ಮಂಟಪದಲ್ಲಿ ಒಬ್ಬ ಸಾಮಾನ್ಯ ಭಕ್ತರಂತೆ ಕುಳಿತು ಇವರ ಗಾನಸುಧೆಯಲ್ಲಿ ಮಿಂದು ಹೋಗುತ್ತಿದ್ದರು.
      'ಕನ್ನಡ ರಾಜ್ಯ ರಮಾರಮಣ' ಬಿರುದು ಪಡೆದ ಅಪ್ರತಿಮ ವೀರನನ್ನೂ ಭಕ್ತಿಯ ಹೊಳೆಯಲ್ಲಿ ಮೀಯಿಸಿ ಬಿಡುತ್ತಿದ್ದವು ಪುರಂದರ ದಾಸರ ಕೀರ್ತನೆಗಳು.     

ಕಾಲಚಕ್ರ...ಉರುಳುತ್ತಾ ಮುಂದೊಂದು ದಿನ ವಿಜಯ ವಿಠ್ಠಲನ ಮೂರುತಿಯನ್ನು ಇದೇ ಮಂಟಪದಲ್ಲಿ ರಕ್ಷಿಸುವ ದುರ್ವಿದಿಯೂ ಬಂದೆರಗಿತು. ಕೃತಜ್ಞತಾ ಭಾವದಿಂದ ವಿಠ್ಠಲನ ಆರಾಧಕರಿಗೆ ಅರ್ಪಪಿಸಿದ ಈ ಮಂಟಪವೇ ವಿಠ್ಠಲ ಮೂರುತಿಗೆ ಆಸರೆಯಾಯಿತು..

ದೂರದಿಂದ ಬಂದಿದ್ದಕ್ಕೂ ಸಾರ್ಥಕವಾಯಿತು.

ವಿಂಗ್ ಕಮಾಂಡರ್ ಸುದರ್ಶನ
sudarshanbadangod@gmail.com

ಇಸ್ರೇಲಿನಲ್ಲಿ ಮೈಸೂರಿನ ಅಶ್ವಾರೂಢರ ಅಟ್ಟಹಾಸ

ಇಸ್ರೇಲಿನಲ್ಲಿ ಮೈಸೂರಿನ ಅಶ್ವಾರೂಢರ ಅಟ್ಟಹಾಸ

1914 ರಲ್ಲಿ ಮೈಸೂರಿನ ಮಹರಾಜರಾದ ನಾಲ್ಮಡಿ ಕೃಷ್ಣರಾಜ ಒಡೆಯರ ಸೈನ್ಯದಲ್ಲಿ ಒಂದು ವಿಷೇಶ ಅಶ್ವಾರೂಢರ ದಳವಿತ್ತು.   ಸೈನ್ಯಾದಿಕಾರಿಗಳ,  ಅಶ್ವಯೋಧರೊಂದಿಗೆ 526 ಶ್ರೇಷ್ಠ ಅರಬ್ಬೀ ಕುದುರೆಗಳ ಈ ಪಡೆಗೆ ವಿಶೇಷ ಗೌರವವಿತ್ತು. ಆಗಾಗಲೇ ಫಿರಂಗಿಗಳ, ಮಷೀನುಗನ್ನುಗಳ ಆಗಮನವಾಗಿ, ಕುದುರೆಗಳ ನಾಗಾಲೋಟದ,ಮಖರಪುಟದ ಶಬ್ದದ ಕಾಲ ಮುಗಿದೇ ಬಿಡ್ತೇನೋ ಎನ್ನುವ ಸಮಯವದು. ಹೈದ್ರಾಬಾದಿನ ನಿಜಾಮರ ಮತ್ತು ರಾಜಾಸ್ಥಾನದ ರಾಜರ ಸೈನ್ಯಗಳನ್ನು ಹೊರತು ಪಡಿಸಿದರೆ ಬೇರೆಲ್ಲೆಡೂ ಆಶ್ವಾರೂಢದ ದಳವೇ ಇರಲಿಲ್ಲ.

ಮೊದಲನೆ ವಿಶ್ವಯುಧ್ಧದ ಅಲೆಯಾಗಲೇ ಎದ್ದಾಗಿತ್ತು. ಯೂರೋಪಿನ, ಆಫ್ರಿಕಾದೆಲ್ಲೆಡೆ ಸೈನ್ಯದ ಜಮಾವಣೆ ಭರದಿಂದ ಸಾಗುತ್ತಿತ್ತು. ಇದೇ ಸಮಯದಲ್ಲಿ ಬ್ರಿಟಿಷರು ಮೈಸೂರಿನ ಅಶ್ವಾರೂಢರೊಂದಿಗೆ, ಜೋಧಪುರ ಮತ್ತು ಹೈದರಾಬಾದಿನ ಅಶ್ವಾರೂಢರನ್ನು ಸೇರಿಸಿ ಮೇಜರ್ ದಲಪತ್ ಸಿಂಗ್ ಶೆಖಾವತ್ತರ ನೇತೃತ್ವದಲ್ಲಿ 33 ಹಡಗುಗಳಲ್ಲಿ ಭಾರತದ ಅಶ್ವಾರೂಢ ದಳವನ್ನು ಈಜಿಪ್ಟಿಗೆ ರವಾನಿಸಿ ಬಿಡುತ್ತಾರೆ.

ಈಜಿಪ್ಟಿನ ಸೂಯೆಜ್ ಕಾಲುವೆ ಅತ್ಯಂತ ಮಹತ್ತರ ಜಲಸಂಪರ್ಕದ ಕೊಂಡಿ. ಅದಕ್ಕೆ ನಿರಂತರ ರಕ್ಷಣೆ ನೀಡಲು ಮೈಸೂರಿನ ಆ ಅಶ್ವದಳದ ಸೇನೆಯನ್ನು ನಿಯೋಜಿಸಲಾಗಿತ್ತು. ಸುಮಾರು ಮೂರು ವರ್ಷಗಳ ಯಶಸ್ವೀ ಕಾರ್ಯ ನಿರ್ವಹಿಸಿದ ಈ ಮೈಸೂರಿನ ತಂಡಕ್ಕೆ
1918 ರ ಸೆಪ್ಟೆಂಬರಿನಲ್ಲಿ ಇನ್ನೊಂದು ಮಹತ್ತರ ಕಾರ್ಯಾಚರಣೆಯನ್ನು ವಹಿಸಲಾಗಿತ್ತು. ಅದೇ "ಹೈಫಾ" ಬಂದರನ್ನು ತುರುಕರಿಂದ ವಶಪಡಿಸಿಕೊಳ್ಳುವುದು.

ಸುಮಾರು 400 ವರ್ಷಗಳಿಂದ ತುರ್ಕಿಯ  ಒಟ್ಟೊಮನ್ ಸಾಮ್ರಾಜ್ಯದ ಆಡಳಿತದಲ್ಲಿದ್ದ ಈ ಮುಖ್ಯ ಬಂದರನ್ನು ವಶಪಡಿಸಿಕೊಳ್ಳುವುದು ಬ್ರಿಟಿಷರ ಕದನತಂತ್ರದ ಬಹು ಮುಖ್ಯವಾದ ಅಂಗವಾಗಿತ್ತು . ಹೈಫಾ ಬಂದರಿನ ಭೌಗೋಳಿಕ ಪ್ರಾಮುಖ್ಯತೆಯನ್ನರಿತಿದ್ದ ಜರ್ಮನರು ಮತ್ತು ತುರುಕರು ಅಲ್ಲಿ ರಕ್ಷಣಾಪಡೆಗಳ ಕೋಟೆಯನ್ನೇ ನಿರ್ಮಿಸಿದ್ದರು. ಒಂದು ಕಡೆ ನದಿ, ಗುಡ್ಡಗಳ ಸಾಲು ಮತ್ತು ಪಶ್ಚಿಮಕ್ಕೆ ಸಮುದ್ರ. ಬೆಟ್ಟಗಳ ಮೇಲೆ ನೆಲೆಸಿದ್ದ ತುರುಕರ  ಸೈನ್ಯ  ಮತ್ತು ಜರ್ಮನರ ಮಷೀನು ಗನ್ನುಗಳು ನಾಲ್ಕೂಕಡೆ ಶತ್ರುಗಳ ಚಲನವಲನಗಳನ್ನು ಗಮನಿಸುತ್ತಿದ್ದರು, ಹಾಗಾಗಿ ಈ ಬಂದರನ್ನು ವಶಪಡಿಸುವುದಿರಲಿ ಒಬ್ಬಬ್ಬರಾಗಿ ಪ್ರವೇಶಿಸುವದೂ ಕಷ್ಟಸಾಧ್ಯವಾಗಿತ್ತು. ಆಯಕಟ್ಟಿನ ಸ್ಥಳಗಳಲ್ಲಿ ಮಷೀನು ಗನ್ನುಗಳ ಪೋಸ್ಟ್, ಮತ್ತು ಮದ್ದು ಗುಂಡುಗಳ ಉಗ್ರಾಣಗಳನ್ನು ನಿರ್ಮಿಸಲಾಗಿತ್ತು.

ಬ್ರಿಟಿಷರು ಇನ್ನೇನು ಮಾಡುವುದು ಎಂದು ಯೋಚನೆಯಲ್ಲಿ ಮುಳುಗಿದ್ದಾಗ, ಮೇಜರ್ ದಲಪತ್ ಶೆಖಾವತ್ತರು ತಮ್ಮ ಯುಧ್ಧತಂತ್ರವನ್ನು ಜನರಲ್ ಗಳಿಗೆ ವಿವರಿಸುತ್ತಾರೆ. ಅದರಂತೆ ಅಶ್ವರೂಢರ ಒಂದು ಪಡೆ 'ಮೌಂಟ್ ಕಾರ್ಮೆಲ್ಲ್' ಒಂದು ಗುಡ್ಡವನ್ನು ಕ್ಷಿಪ್ರವಾಗಿ ಹಿಂದಿನಿಂದ ಹತ್ತಿ ಅಲ್ಲಿಯ ಮಷೀನು ಗನ್ನುಗಳನ್ನು ವಶಪಡಿಸಿ ಕೊಳ್ಳುವುದು. ಬೆಟ್ಟದ ಮೇಲಿನ ಸೈನ್ಯವನ್ನು ನಿಷ್ಕ್ರಿಯಗೊಳಿಸುವ ಸಿಗ್ನಲ್ ಸಿಗುತ್ತಿದ್ದಂತೇ ಮೈಸೂರಿನ ಅಶ್ವಾರೂಢ ಪಡೆ  ನಗರದ ಮುಖ್ಯದ್ವಾರದಿಂದ ಮಿಂಚಿನಂತೆ ನಾಗಾಲೋಟನಡೆಸಿ ಅಲ್ಲಿಯ ಸೈನಿಕರ ಮೇಲೆ ಹಲ್ಲೆ ನಡೆಸುವುದು.  ಅಶ್ವರೂಢ ಸೈನಿಕರು ಬರೀ ಭರ್ಚಿ ಮತ್ತು ಖಡ್ಗಗಳೊಂದಿಗೆ ಮಷೀನು ಗನ್ನುಗಳ ವಿರುದ್ಧದ ಸಮರ !
23 ಸೆಪ್ಟಂಬರ್ ಪೂರ್ವ ನಿಯೋಜಿತ ತಂತ್ರದಂತೆ ಅಶ್ವಾರೂಢರ ಮಿಂಚಿನ ದಾಳಿ ನಡೆದೇ ಬಿಟ್ಟಿತು. ಕುದುರೆಗಳ ನಾಗಾಲೋಟದ ಈ ದಾಳಿಯಿಂದ ಕಕ್ಕಾಬಿಕ್ಕಿಯಾಗಿ ತುರುಕರ ಮತ್ತು ಜರ್ಮನರ ಸೈನಿಕರು ಮಷೀನು ಗನ್ನುಗಳ ದಾಳಿ ನಡೆಸಿದರೂ, ನಿರಂತರವಾಗಿ ಬರುತ್ತಿದ್ದ ಕುದುರೆ ಪಡೆಗಳನ್ನು ನೋಡಿ ಓಡಲು ಶುರುಮಾಡಿದರು.
ಕೆಲವೇ ಘಂಟೆಗಳಲ್ಲಿ ಹೈಫಾ ಬಂದರು ನಗರ ಬ್ರಿಟಿಷರ ವಶವಾಯಿತು. ಮುಂದೆ 1948 ರಲ್ಲಿ ಇಸ್ರೇಲಿನ ಸ್ಥಾಪನೆಯಾದನಂತರ ಇಸ್ರೇಲಿನ ಪ್ರಮುಖ ಬಂದರು ನಗರವಾಯಿತು. ಈ ಕಾರ್ಯಾಚರಣೆಯಲ್ಲಿ ಮೇಜರ್ ದಲಪತ್ ಶೆಖಾವತ್ತರು ವೀರಮರಣವನ್ನಪ್ಪಿದರು. ಮೈಸೂರಿನ ಹಲವಾರು ಅಶ್ವಾರೋಹಿ ಸೈನಿಕರೂ ಸಹ ಹತವಾದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಇಸ್ರೇಲಿನ ಭೇಟಿಯ ಸಮಯದಲ್ಲಿ ಈ ಸ್ಮಾರಕಕ್ಕೆ ಭೇಟಿನೀಡಿ ಗೌರವ ಸಲ್ಲಿಸಿದರು.
ಇಸ್ರೇಲಿನ ಪಠ್ಯ ಪುಸ್ತಕಗಳಲ್ಲಿ ಈ ವೀರಗಾಥೆಯನ್ನು ಇಲ್ಲಿಯ ಮಕ್ಕಳಿಗೆ ಪರಿಚಯಿಸಲಾಗುತ್ತಿದೆ.

ಇಸ್ರೇಲಿನ ಸರ್ಕಾರ ಈಗ ಈ ಮೈಸೂರಿನ ಸಾಹಸೀ ಅಶ್ವಾರೂಢರ ಗೌರವಾರ್ಥವಾಗಿ ಸ್ಟ್ಯಾಂಪೊಂದನ್ನೃ ಬಿಡುಗಡೆ ಮಾಡಿದ್ದಾರೆ.

ಇಸ್ರೇಲಿನಂತಹ ವೀರರ ನಾಡಿನಲ್ಲಿ ನಮ್ಮ ನಾಡಿನ ಶೂರರೂ ಪ್ರದರ್ಶಿಸಿದ ಪರಾಕ್ರಮ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಲ್ಲವೇ?

✍....ವಿಂಗ್ ಕಮಾಂಡರ್ ಸುದರ್ಶನ
sudarshanbadangod@gmail.com

Thursday, August 17, 2017

Caste System: Where did it come from?





Caste System: Where did it come from?

The word  "Caste" was coined by Christians of Europe in seventeenth century. Spain and Portugal were very strong countries then. The most infamous
" Spanish Inquisition " was in full force. The Catholic church was involved in one of the most heinous crime perpetrated on Jews and Muslims in forcibly converting lakhs of  them to Christianity and killed thousands of them who refused to follow the church's diktat.

Many Jews and Muslims ran away to Southern American countries. The Spaniards chased them there also and along with the Aboriginals of America  whom they called "Indians" , huge number of African  Negroes whom they enslaved enroute to America,they continued their barbaric religious tirade.

Over a period of time the majority males of Jews, Muslims,  Negroes and a few Spanish people started marrying the local American women. Spanish people in order to maintain the "pure blood progeny" created a social system where they remain on top of the ethical hierarchy and the " mixed, impure breed depending on the colour of the skin were grouped differently. They called themselves as 'Chaste' and in Spanish it was 'Caste' and thus started
"Systema da Caste' . They were provided jobs as per their caste, treated socially, taxed as per their caste and the Catholic Church amassed huge amount of money from them.
The local Americans were relegated to the much lower class and  their social and religious system were rubbished.

Same thing the British did when they came to India..!!

India historically has Gothras, Kula, Jaathi and Verna embedded in the social structure. This system worked fine for the religious and social functions like wedding etc.  The relevance, depth and importance was never understood by the British and the church. They didn't want to understand, for the British came to loot  one of the richest country of that time, and the Church to spread the Christianity willingly or by use of force.

What Lord Thomas Macaulay did to the Indian education system by destroying traditional Gurukul system, Completely removing Sanskrit and Sanskrit based scriptures..to make way for English and to undermine the values of Sanathana Dharma so that the Christianity gets a free passage across the length and breadth of this country, another villain in the garb of a census Commissioner was emerging to destroy the social fabric of our country and introduce
"Caste System " in India..he was Sir Herbert Hope Risley (1851-1910) and from the fallout of such a fallacy we haven't recovered even now..not easy to do so for the poison this man administered was so potent.

Wednesday, August 9, 2017

Primary Education in Sanathana Bharath

Primary Education in Sanathana Bharath

On 10 Mar 1826 Thomas Munro, the Governor of Madras Presidency submitted a detailed Census and a survey Report to the British government.
The report was a 'breaking news' not only to the British government in India even in England it surprised the top brass.

What was in that report that revealed certain unknown facts about India to the world ?

The geographical dimensions of Madras Presidency was  from Ganjam district of Orissa and to the entire South India. The population was 1,28,50,941. There were 12,498 primary schools. This is inspite of the fact that the collector of Mangalore did not send a report due to some reasons, and many hilly areas were not covered.

As per the report on an average there was one primary school for one thousand population. Whereas England had a dismal average of primary education record. In fact Britain didn't have an education policy then.

Another interesting fact that even Indians we're not aware of was that only 24% , of students in these schools were Brahmanas, Kshatriyas and Vaishyas. Shudras constituted a Lion's share of 65%!
So that shattered the general impression that existed that the Brahmanas dominated the education field. Of course in the higher education institutions they were in majority.

Why then, the Britishers who came to India to loot and pillage,.. conducted such a nation wide survey covering Bengal, Bihar, Punjab, Bombay Presidency and Madras Presidency?

By beginning of 19th century Britishers established themselves in most part of India. They now wanted a steady, assured revenue to fill the British coffers. But they were few in numbers to collect revenue from every nook and corner of such a huge milching cow of a nation like India. Also employing British personnel was becoming an expensive proposition.
They wanted to find out how to bring in an education system to make certain locals 'literate' so they can be employed at cheaper rates to maintain accounts, help in Administration. Such English speaking people will remain loyal to them and it would be easier to keep them dividend as "English speaking class" and "others".

This survey made British wonder that how come inspite of outsiders plundering India repeatedly destroying their assets, culture and sentiments such an education system continue to exist?

Traditionally every village temple was sponsoring a Pathashala, Gurukul or Mutt. On an average 35% of the land in a village belonged to the temple. This was a revenue free land. The temple rituals, festivals, fee for the teachers were paid out of this income from the land.

Sending a boy on the "fifth day of the fifth month of fifth year" was widely believed to be an auspicious day in those days. Some temples even provided "Anna Prasad" to the students. Every family used to send a boy for at least three years till he learns to read, write and do basic calculation.  Subsequently learn the trade of his family tradition. Girls were normally taught at homes.

First thing that the Britishers did was to hide this report.

In England factory workers left their children in a room before entering the workplace. These rooms were called "Schools" in fact the terminology.. School originated here. Children were given some rudimentary education by a worker who wasn't fit for factory work.
There were "Grammar Schools" for the children from well to do families who had to pay a very hefty fee.

This was the education system that existed there. How could they digest the fact that India had a robust primary education system in place without any government grants or endowments.

Next thing they did was to reduce the revenue free land of temples to 5%  so that the temples barely sustained themselves. Gradually temples stopped sponsoring Gurukuls and Pathashalas.

Then came Thomas Macaulay...!
Destroyer of Sanathana Bharath's Education System.  The primary education system was dying due to lack of support and sponsorship. Britishers introduced English education system in high schools. The fee was high and only few well to do families could afford it. The literacy rate of India nosedived to never heard of limits.

In 1931 Gandhiji raised this issue in the Round table conference. He accused British government of destroying the education system. British denied Gandhiji allegations. They wanted the proof. Even Gandhiji was aware of the 1826 survey was either hidden or destroyed. It was much later discovered that it was hidden in the archive room of British Library.
Do the Macaulay's children who are now thriving in sold media, Lutyens circuits are aware of this?
✍ Wg Cdr Sudarshan
     sudarshanbadangod@gmail.com

Sunday, June 25, 2017

ಇದು ಯಾರ ಕಾಶ್ಮೀರ?






ಇದು ಋಷಿ ಕಷ್ಯಪರ ಕಾಶ್ಮೀರ...




'ಮೈರಾ' ಎನ್ನುವ ಸಂಸ್ಕೃತ ಪದದ ಅರ್ಥ ಸರೋವರ ಎಂದು.
ಮನ್ವಂತರದಲ್ಲಿ, ಸಪ್ತರ್ಷಿಗಳಲ್ಲಿ ಒಬ್ಬರಾದ ಕಶ್ಯಪರು ಬ್ರಹ್ಮನ ಮೊಮ್ಮಗ. ಇವರ ತಂದೆಯಾದ ಮಹರ್ಷಿ ಮಾರೀಚಿ ಬ್ರಹ್ಮನ ಮಾನಸ ಪುತ್ರ.   ಪ್ರಜಾಪತಿ ದಕ್ಷ ತನ್ನ ಹದಿಮೂರು ಹೆಣ್ಣುಮಕ್ಕಳನ್ನು ಕಶ್ಯಪ ಮುನಿಗೆ ಕೊಟ್ಟು ಮದುವೆ ಮಾಡಿ ಕೊಡುತ್ತಾರೆ.

ಕಶ್ಯಪ ಗೋತ್ರ ಆರಂಭವಾಗುವುದೇ ಇಲ್ಲಿಂದ. ಇವರ ಸಂತಾನದಲ್ಲಿ, ದೇವತೆಗಳು, ದೈತ್ಯರು, ದಾನವರು, ನಾಗಾಗಳು, ಮಾನವರು ಎಲ್ಲಾ ಪಂಗಡಗಳ ಜೀವಿಗಳು ಸೇರಿರುತ್ತಾರೆ.
ನೀಲಮತ ಪುರಾಣದ ಪ್ರಕಾರ ಈಗಿನ ಕಾಶ್ಮೀರವಿರುವ ಸ್ಥಳದಲ್ಲಿ 'ಸತೀಸರ'ಎನ್ನುವ ಬಹುದೊಡ್ಡ ಸರೋವರವಿತ್ತಂತೆ. ಶಿವನ ಪತ್ನಿ ಸತಿಗೆ ಅದು ತುಂಬಾ ಪ್ರಿಯವಾದ ಸರೋವರವಾಗಿದ್ದರಿಂದ ಕಶ್ಯಪರು ಈ ಸರೋವರವನ್ನು ಶಿವ ಸತಿಯರಿಗ ಬಳುವಳಿಯಾಗಿ ಕೊಟ್ಟಿದ್ದರಂತೆ. ಆದರೆ ಆ ಸರೋವರದಲ್ಲಿ ಜಲೋಧ್ಭವ ಎನ್ನುವ ರಾಕ್ಷಸ ಅಡಗಿಕೊಂಡು ಕಶ್ಯಪರ ಸಂತಾನಗಳಿಗೆ ಕಿರುಕುಳ ಕೊಡುತ್ತಿದ್ದ. ಆಗ ಕಶ್ಯಪರು ಅವರ ಮಗ 'ಅನಂತ ನಾಗ'ನ ಜೊತೆಗೂಡಿ ಒಂದು ವರಾಹ ಮುಖ (ಇಂದಿನ ಬಾರಮುಲ್ಲ) ಎನ್ನುವ ಕಣಿವೆಯನ್ನು ಕಡಿದು ಆ ಸರೋವರದ ನೀರನ್ನು ಹೊರ ಹರಿಸುತ್ತಾರೆ. ಹೀಗೆ ಹರಿದ ನೀರು ಪಶ್ಚಿಮದ ಇನ್ನೊಂದು ಕಣಿವೆಗೆ ಹರಿಯುತ್ತದೆ. ಅದನ್ನು ಕಶ್ಯಪ ಸಾಗರವೆಂದೂ(ಇಂದಿನ ಕ್ಯಾಸ್ಪಿಯನ್ ಸಮುದ್ರ)ಕರೆಯುತ್ತಾರೆ.
ನಂತರ ವಿಷ್ಣು ಆ ಜಲೋಧ್ಭವ ರಾಕ್ಷಸರ ಸಂಹಾರ ಮಾಡುತ್ತಾರೆ. 

ಹೀಗೆ ಬರಿದು ಮಾಡಿದ ಸರೋವರದ ತಪ್ಪಲಿನಲ್ಲಿ ವೇದವ್ಯಾಸಂಗಕ್ಕೆಂದೇ ವಿಷೇಶವಾಗಿ ಒಂದು ಪವಿತ್ರ ಕ್ಷೇತ್ರವನ್ನು ನಿರ್ಮಿಸುತ್ತಾರೆ...ಅದನ್ನು 'ಕಶ್ಯಪರ ಮೈರಾ'..ಕಶ್ಯಪ ಪುರ...ಕ್ರಮೇಣ "ಕಾಶ್ಮೀರ" ದ ಉಧ್ಭವವಾಗುತ್ತದೆ.

‘ನೀಲಮತಿ ಪುರಾಣ' ಮತ್ತು ಅದರ ಆಧಾರಿತ 'ರಜತರಂಗಿಣಿ' ಇವು ಕಾಶ್ಮೀರದ ಪೌರಾಣಿಕ ಮತ್ತು ಐತಿಹಾಸಕದ ದಾಖಲೆಗಳು. ಹನ್ನೆರಡನೇ ಶತಮಾನದಲ್ಲಿ 'ಕಲ್ಹಣ' ಎಂಬ ಪಂಡಿತರು ಬರೆದ ಏಳು ಗ್ರಂಥಗಳ ಸರಮಾಲೆ ವಿಶ್ವದೆಲ್ಲೆಡೆ ಬಹಳ ಕುತೂಹಲ ಮತ್ತು ಆಸ್ಥೆಯಿಂದ ಅಭ್ಯಸಿಸಲಾಗುತ್ತಿದೆ.

ಭಾರತದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ಇದರ ಬಗ್ಗೆ ಯಾರೂ ಹೆಚ್ಚು ತಲೆಕೆಡಿಕೊಳ್ಳುವುಸಿದಿಲ್ಲ...ಯಾಕೆಂದರೆ ಮಾಧ್ಯಮಗಳು ಬಿಂಬಿಸುವ ಕಾಶ್ಮೀರವೇ ಬೇರೆ ಅದರಿಂದಾಗಿ ಒಂದು ತರಹದ ಅಲರ್ಜಿ ಉಂಟಾಗಿದೆ.



ಇದು ಶಾರದಾದೇವಿಯ ಕಾಶ್ಮೀರ.

"ನಮಸ್ತೇ ಶಾರದಾದೇವಿ ಕಾಶ್ಮೀರ ಪುರವಾಸಿನಿ |
  ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾದಾನಂಚ         ದೇಹಿಮೇ |"
  ಹೀಗೆ...ಶಾರದಾದೇವಿಯನ್ನು ಸ್ತುತಿಸುವುದೇ 'ಕಾಶ್ಮೀರ ಪುರವಾಸಿನಿ' ಎಂದು.
  ಕಾಶ್ಮೀರದ ಲಿಪಿಯ ಹೆಸರೇನು ಗೊತ್ತೇ?... 'ಶಾರದ' !
  ಅಂದಿನ ಕಾಶ್ಮೀರದ ವೇದಶಾಲೆಗಳನ್ನು ಏನೆಂದು ಕರೆಯುತ್ತಿದ್ದರು?....ಶಾರದ ಪೀಠ!

ಇದೆಲ್ಲಾ ಇರಲಿಬಿಡಿ.. ಅಂದೊಮ್ಮೆ ಇಡೀ ಕಾಶ್ಮೀರವನ್ನೇ
'ಶಾರದ ದೇಶ' ಎಂದು ಕರೆಯುತ್ತಿದ್ದರು.

ಇಷ್ಟಿಲ್ಲದಿದ್ದರೆ ಶಂಕರಾಚಾರ್ಯರು ಕಾಶ್ಮೀರಕ್ಕೆ ಏಕೆ ಹೋಗುತ್ತಿದ್ದರು.
ಅಲ್ಲಿಯ ಕೃಷ್ಣಗಂಗೆ ನದಿಯ ತೀರದಲ್ಲಿರುವ ಶಾರದ ಪೀಠದ ಸೊಬಗನ್ನು ನೋಡಿ, ಅದೇ ತರಹದ ಇನ್ನೊಂದು ಶಾರದ ದೇವಸ್ಥಾನವನ್ನು ತುಂಗಭಧ್ರಾ ನದಿಯ ತೀರದ ಶೃಂಗೇರಿಯಲ್ಲಿ ಸ್ಥಾಪಿಸಲು ಪ್ರೇರಣೆ ಸಿಕ್ಕಿದ್ದು ಆ ಕಾಶ್ಮೀರದ ಶಾರದ ಪೀಠದಿಂದ.
ಶಾರದಾ ದೇವಿಯ ಶ್ರೀಗಂಧದ ಮೂಲ ವಿಗ್ರಹವನ್ನು ಕಾಶ್ಮೀರದಿಂದಲೇ ಶೃಂಗೇರಿಗೆ ತರಲಾಗಿತ್ತಂತೆ.

        ಕಾಶ್ಮೀರಕ್ಕೆ ತಮ್ಮ ಕೆಲವು ಶಿಷ್ಯರೊಂದಿಗೆ ಹೋದ ಹೊಸತರಲ್ಲಿ ಶಂಕರಾಚಾರ್ಯರು ಒಬ್ಬ ಕಾಶ್ಮೀರಿ ಪಂಡಿತರ ಅತಿಥಿಯಾಗಿದ್ದರಂತೆ. ಮೊದಲ ದಿನವೇ ಅವರ ಪಾಂಡಿತ್ಯಕ್ಕೆ ಬೆರಗಾದ ಪಂಡಿತ ದಂಪತಿಗಳು ಅವರನ್ನು ಇನ್ನಷ್ಟು ದಿನಗಳು ತಮ್ಮ ಅತಿಥಿ ಸತ್ಕಾರವನ್ನು ಸ್ವೀಕರಿಸುವಂತೆ ಮನವಿ ಮಾಡಿಕೊಂಡರಂತೆ. ಅದಕ್ಕೆ ಒಪ್ಪಿಕೊಂಡ ಶಂಕರಾಚಾರ್ಯರು ಒಂದು ಶರತ್ತು ಹಾಕುತ್ತಾರೆ, ಅದೇನೆಂದರೆ ನಮ್ಮ ಅಡುಗೆಯನ್ನು ನಾವೇ ಮಾಡಿಕೊಳ್ಳುತ್ತೇವೆ ಎಂದು. ಇದು ಪಂಡಿತ ದಂಪತಿಗಳಿಗೆ ಸ್ವಲ್ಪ ಅವಮಾನಿತವಾಗಿ ಕಂಡರೂ..ಅವರಿಷ್ಟ ಎಂದು ಅಡುಗೆಗೆ ಬೇಕಾದ ದವಸ ಧಾನ್ಯಗಳನ್ನು, ಪಾತ್ರೆ ಕಟ್ಟುಗೆಗಳನ್ನು ಕೊಟ್ಟು ವಿರಮಿಸುತ್ತಾರೆ.
ಆದರೆ ಅಡುಗೆ ಮಾಡಲು ಬೇಕಾದ ಬೆಂಕಿಯನ್ನು ಕೊಡಲು ಮರೆತು ಬಿಡುತ್ತಾರೆ. ಇನ್ನೊಮ್ಮೆ ಅವರನ್ನು  ಕರೆದು ತೊಂದರೆ ಕೊಡುವುದರ ಬದಲು ಹಾಗೇ ಹಸಿದ ಹೊಟ್ಟೆಯಲ್ಲೇ ಮಲಗಿ ಬಿಡುತ್ತಾರೆ. ಬೆಳಗ್ಗೆದ್ದು ಪಂಡಿತ ದಂಪತಿಗಳು ಬಂದು ನಮಸ್ಕರಿಸಿ ಮಾತನಾಡಿಸುವಾಗ ಅಡುಗೆಯ ಪಧಾರ್ಥಗಳೆಲ್ಲಾ ಹಾಗೇ ಇರುವುದನ್ನು ನೋಡಿ ಏಕೆಂದು ವಿಚಾರಿಸುತ್ತಾರೆ. ಆಗ ಅವರ ಶಿಷ್ಯರುಗಳು ಬೆಂಕಿ ಇಲ್ಲದ್ದರಿಂದ ಅಡುಗೆ ಮಾಡಲಾಗಲಿಲ್ಲ ಎಂದು ಹೇಳುತ್ತಾರೆ. ತಕ್ಷಣ ಆ ಗೃಹಿಣಿ ಅಲ್ಲೇ ಇದ್ದ ನೀರನ್ನು ಕಟ್ಟಿಗೆಯ ಮೇಲೆ ಚಿಮುಕಿದಾಕ್ಷಣ ಬೆಂಕಿ ಉರಿಯ ತೊಡಗುತ್ತದೆ !.

    ಈ ಪ್ರಸಂಗದಿಂದ ಶಂಕರಾಚಾರ್ಯರಿಗೆ ತಾವಿನ್ನೂ ತುಂಬಾ ಕಲಿಯುವುದಿದೆ ಈ ಶಾರದ ದೇಶದಲ್ಲಿ ಎನಿಸಿ ಹಲವುದಿನಗಳ ಕಾಲ ಅಲ್ಲೇ ನೆಲೆಸುತ್ತಾರೆ. ಅವರು ನೆಲಸಿದ ಬೆಟ್ಟ ಈಗಲೂ 'ಶಂಕರಾಚಾರ್ಯ ಬೆಟ್ಟ' ಎಂದು ಪ್ರಸಿಧ್ಧ ಪುಣ್ಯಕ್ಷೇತ್ರವೆನಿಸಿಕೊಂಡಿದೆ. ಇದು ಶ್ರೀನಗರದ ನಟ್ಟ ನಡುವೆ , ಪ್ರಸಿಧ್ಧವಾದ 'ದಲ್ 'ಸರೋವರದ ಪಕ್ಕದಲ್ಲಿದೆ.

    ಅಂದಿನ ಶಾರದಾ ಪೀಠ, ದುರದೃಷ್ಟವಶಾತ್ ಈಗ ಪಾಕೀಸ್ತಾನದ ಆಳ್ವಿಕೆಯ ಕಾಶ್ಮೀರದ ಭಾಗದಲ್ಲಿದೆ. ಅಲ್ಲಿಗೆ ಹೋಗಲು ಯಾರಿಗೂ ಅನುಮತಿ ಸಿಗುತ್ತಿಲ್ಲ. ಶಾರದಾ ದೇವಸ್ಥಾನ ಶಿಥಿಲಗೊಂಡು ದಿನೇ ದಿನೇ ಧರೆಗುರುಳುತ್ತಿದೆ.
    ಹೀಗೆ ಶಾರದಾದೇವಿಯ ಕೃಪಾಕಟಾಕ್ಷ ಅನಾದಿಕಾಲದಿಂದಲೂ ಕಾಶ್ಮೀರದ ಮೇಲಿರುವಾಗ..ಕಾಶ್ಮೀರ ಇನ್ನಾರದಾಗಲು ಸಾಧ್ಯ?


ಇದು ಸನಾತನ ಧರ್ಮದ ಬೃಹತ್ ಗ್ರಂಥಾಲಯ...ಕಾಶ್ಮೀರ.

ರಾಮಾನುಜಾಚಾರ್ಯರು ತಮ್ಮ ಗುರುಗಳಾದ ಯಮುನಾಚಾರ್ಯರಿಗೆ ಕೊಟ್ಟ ಮೂರು ಆಶ್ವಾಸನೆಗಳಲ್ಲಿ ಒಂದು...'ಬ್ರಹ್ಮ ಸೂತ್ರ' ದ ಅಧ್ಯಯನದ ಆಧಾರಿತ ವಿಶಿಷ್ಟಾದ್ವೈತವನ್ನು ಪ್ರತಿಪಾದಿಸುವ ಒಂದು ಗ್ರಂಥ ರಚನೆಯಾಗ ಬೇಕು.

ಆದರೆ ಎಲ್ಲಿದೆ ಈ ಬಾದರಾಯಣ ವಿರಚಿತ 'ಬ್ರಹ್ಮ ಸೂತ್ರ'?
ಆ ಅಖಂಡ ಗ್ರಂಥವಿದ್ದದ್ದು ಕಾಶ್ಮೀರದ ರಾಜನ ಗ್ರಂಥಾಲಯದಲ್ಲಿ ಮಾತ್ರ!

ಆಗಾಗಲೇ ರಾಮಾನುಜಾಚಾರ್ಯರಿಗೆ ಅರವತ್ತು ವರ್ಷ.
ಮೇಲುಕೋಟೆಯಿಂದ ಕಾಶ್ಮೀರದ ಪ್ರವಾಸ ಸಾಮಾನ್ಯದ ಮಾತೇ?. ಆದರೂ ಹೊರಟೇ ಬಿಡುತ್ತಾರೆ..ಗುರು ಯಮನಾಚಾರ್ಯರಿಗೆ ಕೊಟ್ಟ ವಚನವನ್ನು ಗೌರವಿಸಲು.

ಏನಿದು "ಬ್ರಹ್ಮ ಸೂತ್ರ" ಏನಿದೆ ಅದರಲ್ಲಿ?
ಇದೊಂದು 555 ಸೂತ್ರಗಳನ್ನೊಳಗೊಂಡ, ಸನಾತನ ಧರ್ಮದ ಸಾರವನ್ನು ನಾಲ್ಕು ಅಧ್ಯಾಯಗಳಲ್ಲಿ ವಿವರಿಸಿರುವ ಅಗಾಧ ಗ್ರಂಥ. ಇದರಾಧಾರಿತ ಅನೇಕ ಸಿಧ್ಧಾಂತಗಳು ಸೃಷ್ಟಿಗೊಂಡಿದ್ದವು. ಇದನ್ನು ಜನಸಾಮಾನ್ಯರಿಗೆ ಅರ್ಥವಾಗುವಹಾಗೆ ವಿಶಿಷ್ಟಾದ್ವೈತ ಸಿಧ್ಧಾಂತವನ್ನು ಪ್ರತಿಪಾದಿಸುವ ಒಂದು ಗ್ರಂಥ ರಚನೆಯನ್ನು ಮಾಡಬೇಕಿತ್ತು ರಾಮಾನುಜರಿಗೆ.

ತಮ್ಮ ಶಿಷ್ಯ ಕುರತಾಳ್ವಾರ್ (ಕುರೇಸ) ರವರ ಜೊತೆಗೂಡಿ ಹಲವಾರು ತಿಂಗಳುಗಳ ಪ್ರಯಾಣದ ನಂತರ ಕಾಶ್ಮೀರ ತಲುಪುತ್ತಾರೆ ರಾಮಾನುಜರು. ಸಕಲ ಮರ್ಯಾದೆಯೊಂದಿಗೆ ಅವರನ್ನು ಸ್ವಾಗತಿಸಲಾಗುತ್ತದೆ.
ಅವರ ಕೋರಿಕೆಯನ್ನು ಮನ್ನಿಸಿ ಅವರನ್ನು ಗ್ರಂಥಾಲಯದ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ.

ಆದರೆ ಒಂದು ಶರತ್ತು.. ಬ್ರಹ್ಮ ಸೂತ್ರವನ್ನು ಗ್ರಂಥಾಲಯದಿಂದ ಹೊರತರುವ ಹಾಗಿಲ್ಲ ಮತ್ತು ಯಾವ ತರಹದ ಟಿಪ್ಪಣಿಗಳನ್ನು ಬರೆದುಕೊಳ್ಳುವಂತಿಲ್ಲ.
ಇದಕ್ಕೆ ರಾಮಾನುಜರು ಸಮ್ಮತಿಸುತ್ತಾರೆ.

ಅವರ ಶಿಷ್ಯ ಕುರತ್ತಾಳ್ವಾರ್ ಸಾಮಾನ್ಯರಲ್ಲ!. ಅವರದು 'ಏಕ ಚಿತ್ತ ಸ್ಮೃತಿ', ಒಮ್ಮೆ ನೊಡಿದರೆ, ಓದಿದರೆ ಅವರ ಸ್ಮೃತಿಪಟಲದಲ್ಲಿ ಶಾಶ್ವತವಾಗಿರುತ್ತದೆ. ಅವರು ಜೋರಾಗಿ ಓದುತ್ತಾ ಮನನ ಮಾಡುವಾಗ ರಾಮಾನುಜರು ಧ್ಯಾನಾವಸ್ಥೆಯಲ್ಲಿ ಅರ್ಥೈಸಿಕೊಳ್ಳುತ್ತಾರೆ.

ಕಾಶ್ಮೀರದಿಂದ ಶ್ರೀರಂಗಕ್ಕೆ ಮರಳಿದ ಮೇಲೆ ಇಬ್ಬರೂ ಸೇರಿ ಒಂದು ಅಧ್ಭುತ ಗ್ರಂಥದ ರಚನೆ ಮಾಡುತ್ತಾರೆ.
ಅದೇ "ಶ್ರೀ ಭಾಷ್ಯ"

ಹಲವಾರು ವರ್ಷಗಳ ನಂತರ ರಾಮಾನುಜರು ಇನ್ನೊಮ್ಮೆ ಕಾಶ್ಮೀರಕ್ಕೆ ಮರಳುತ್ತಾರೆ. ಈ ಸಲ ದೇವಿ ಶಾರದೆಯ ಉಪಾಸನೆಗಾಗಿ. ದೇವಿ ಶಾರದೆ ಪ್ರತ್ಯಕ್ಷಳಾಗಿ ಇವರಿಗೆ ಹಯಗ್ರೀವದ ವಿಗ್ರಹವೊಂದನ್ನು ದಯಪಾಲಿಸುತ್ತಾಳೆಂಬ ಪ್ರತೀತಿ ಇದೆ.

ಮುಂದೆ ಈ "ಬ್ರಹ್ಮಸೂತ್ರ" ಮತ್ತು "ಶ್ರೀ ಭಾಷ್ಯ" ಜರ್ಮನಿ ,ಫ್ರೆಂಚ್ ಮತ್ತು ಇಂಗ್ಲೀಷ್ ಸೇರಿದಂತೆ ಹಲವಾರು ಭಾಷೆಗಳಲ್ಲಿ ಅನುವಾದಗೊಂಡು ವಿಶ್ವದೆಲ್ಲೆಡೆ ಸಂಚರಿಸುತ್ತವೆ.

ಹೀಗೆ ಸನಾತನ ಧರ್ಮಕ್ಕೆ ಸಂಬಂಧಿಸಿದ ಎಲ್ಲಾ ಗ್ರಂಥಗಳನ್ನು ತನ್ನ ಗರ್ಭದಲ್ಲಿರಿಸಿಕೊಂಡಿದ್ದ ಕಾಶ್ಮೀರ ಇನ್ಯಾರದಾಗಲು ಸಾಧ್ಯ?



ಇದು ಭಟ್ಟರ ಕಾಶ್ಮೀರ...

ನೀಲಮತ ಪುರಾಣದ ಪ್ರಕಾರ ಕಾಶ್ಮೀರಕ್ಕೆ ಸುಮಾರು 5100 ವರ್ಷದ ಇತಿಹಾಸವಿದೆ. 13 ನೇ ಶತಮಾನದವರೆಗೂ ಕಾಶ್ಮೀರದಲ್ಲಿ ಶತಪ್ರತಿಶತ ಹಿಂದು ಮತ್ತು ಬೌಧ್ಧ ಧರ್ಮಿಗಳಿದ್ದರು.

ಕೇವಲ ಏಳು ಶತಕಗಳಲ್ಲಿ ಕಾಶ್ಮೀರದ ಕಣಿವೆಯಲ್ಲಿ 97 ಪ್ರತಿಶತ ಮುಸ್ಲೀಮರು!

ಏನೇನೆಲ್ಲಾ ಆಗಿರ ಬಹುದು ಈ ಏಳು ಶತಕಗಳಲ್ಲಿ.

ಕಾಶ್ಮೀರದ ಪಂಡಿತರನ್ನು 'ಭಟ್ಟರು' ಎಂದು ಕರೆಯುತ್ತಾರೆ. ಇವರು ಶೈವ ಸಾರಸ್ವತ ಬ್ರಾಹ್ಮಣರು. ಸುಂದರ ಕಾಶ್ಮೀರದ ಶಾಂತಿ ಪ್ರಿಯ ಜನಾಂಗ. ವೇದ ಪಾರಾಯಣ, ಪೂಜೆ ಪುನಸ್ಕಾರಗಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸುಖೀಜೀವನ ನಡೆಸುತ್ತಿದ್ದ ಜನಾಂಗ. ಕಣಿವೆಯ ಜನರಲ್ಲಿ ಒಂದು ರೀತಿಯ ಭೌಗೋಳಿಕ ಏಕಾಂತತೆ ಇರುತ್ತದೆ. ಹೊರಗೆ ಏನಾಗುತ್ತಿದೆ ಎಂದು ತಿಳಿಯುವುದಿಲ್ಲ, ಹಾಗೇ ಹೊರಗಿನವರಿಗೆ ಸುಲಭವಾಗಿ ಒಗ್ಗಿಕೊಳ್ಳುವುದಿಲ್ಲ, ಹಾಗೂ ತಮ್ಮ ತಮ್ಮಲ್ಲೇ ಒಗ್ಗಟ್ಟೂ ಇರುವುದಿಲ್ಲ.

13 ನೇ ಶತಮಾನದ ಲೋಹಾರ ರಾಜವಂಶದ ರಾಜ ರಾಮಚಂದ್ರನೇ ಕೊನೆಯ ಹಿಂದೂ ರಾಜ.
ಅಷ್ಟೊತ್ತಿಗಾಗಲೇ ತುರ್ಕಿಸ್ಥಾನದ 'ದುಲ್ಚ 'ಎನ್ನುವ ದುಷ್ಟ ಕಾಶ್ಮೀರದ ಮೇಲೆ ಆಕ್ರಮಣ ಮಾಡಿ, ಕೊಳ್ಳೆ ಹೊಡೆದು, ಸುಮಾರು ಐವತ್ತು ಸಾವಿರ ಕಾಶ್ಮೀರಿಗಳನ್ನು ಗುಲಾಮನರನ್ನಾಗಿ ಸೆರೆಹಿಡಿದು ಕೊಂಡು ಹೋದ.
ಮುಂದೆ 'ರಿನ್ಚೆನ್' ಎನ್ನುವ ಬೌಧ್ಧ ಧರ್ಮದ ಸೇನಾನಿ ರಾಮಚಂದ್ರ ರಾಜನನ್ನು ಮೋಸದಿಂದ ಕೊಃದು ತಾನೇ ರಾಜನಾದ.
ಇಲ್ಲೊಂದು ಕುತೂಹಲಕಾರಿ ವಿದ್ಯಾಮಾನ ನಡೆಯುತ್ತದೆ. 'ರಿನ್ಚೆನ್' ಕಾಶ್ಮೀರದ ಪ್ರಜೆಗಳನ್ನು ಓಲೈಸಲು "ಶೈವ" ಮತಕ್ಕೆ ಮತಾಂತರಗೊಳ್ಳಲು ನಿರ್ಧರಿಸುತ್ತಾನೆ. ಇದನ್ನು ರಾಜಗುರು ದೇವಸ್ವಾಮಿಯ ಹತ್ತಿರ ವಿಚಾರಣೆ ಮಾಡುತ್ತಾನೆ. ದೇವಸ್ವಾಮಿ ಈ ವಿಷಯವನ್ನು ಕಾಶ್ಮೀರಿ ಪಂಡಿತರ ಬಳಿ ನಿಷ್ಕರ್ಶಿಸಿ, ಇದಕ್ಕೆ ಶೈವ ಮತದಲ್ಲಿ ಅವಕಾಶವಿಲ್ಲವೆಂದು ಹೇಳಿಬಿಡುತ್ತಾರೆ!
ಇದರಿಂದ ಅವಮಾನಿತನಾದ ರಿನ್ಛೆನ್ ಮುಸ್ಲೀಮ್ ಧರ್ಮಕ್ಕೆ ಮತಾಂತರಗೊಂಡು, ಜೊತೆಗೆ ಹತ್ತು ಸಾವಿರ ಪಂಡಿತರನ್ನೂ ಮುಸ್ಲೀಮರನ್ನಾಗಿ ಮತಾಂತರಗೊಳಿಸಿಬಿಡುತ್ತಾನೆ.

ಇಲ್ಲಿಂದ ಶುರುವಾಗುತ್ತದೆ ನೋಡಿ ಭಟ್ಟರ ಮತಾಂತರದ, ಮಾರಣಹೋಮದ ವೃತ್ತಾಂತ.



     ಇದು ರಿಷಿಗಳ, ಸಂತರ, ಕವಿಗಳ ಕಾಶ್ಮೀರ..
    
13 ನೇ ಶತಮಾನದಿಂದ ಆರಂಭವಾದ ಮತಾಂತರ, ಕೇವಲ ಏಳು ಶತಮಾನಗಳಲ್ಲಿ ಹಿಂದೂ ಮತ್ತು ಬೌಧ್ಧರ ಸಂಖ್ಯೆಯನ್ನು..... ಶತ ಪ್ರತಿಶತದಿಂದ ಕೇವರ ಮೂರು ಪ್ರತಿಶತಕ್ಕಿಳಿಸಿ ಬಿಟ್ಟಿತ್ತು!.
ಭಾರತದಲ್ಲಿ ಈ ತರಹದ ಕ್ಷಿಪ್ರವಾಗಿ ನಡೆದ ಮತಾಂತರದ ಉದಾಹರಣೆಗಳು ಬಹುಷಃ ಬೇರೆಲ್ಲೂ ಕಾಣಸಿಗದು.... of course ...ಗೋವಾ ಒಂದನ್ನು ಹೊರತು ಪಡಿಸಿ.

ಇಲ್ಲಿ ಒಂದು ಕುತೂಹನ ವಿದ್ಯಮಾನವೆಂದರೆ ಈ ಎರಡೂ ರಾಜ್ಯಗಳ ಮತಾಂತರದ ಮಂಥನದಲ್ಲಿ ಸಿಲುಕಿದವರು ಪ್ರಮುಖವಾಗಿ ಸಾರಸ್ವತ ಬ್ರಾಹ್ಮಣರು!

ಕಶ್ಯಪರ ಕಾಶ್ಮೀರದಲ್ಲಿ ಶೈವ ಸಾರಸ್ವತ ಬ್ರಾಹ್ಮಣರು ಮತ್ತು ವಿಶ್ವಾಮಿತ್ರರ ಗೋಮಾಂತದಲ್ಲಿ ಗೌಡ ಸಾರಸ್ವತ ಬ್ರಾಹ್ಮಣರು.

ಈ ರಕ್ತಸಿಕ್ತ ಇತಿಹಾಸದ ಅವಧಿಯಲ್ಲೂ ಕಾಶ್ಮೀರದಲ್ಲಿ ಹಲವು ಕ್ರಾಂತಿಕಾರಕ ಘಟನೆಗಳು ನಡೆಯುತ್ತವೆ, ಸೂಫಿ ಸಂತರ, ನಂದ ರಿಷಿಯಂತಹ ಮುಸ್ಲಿಂ ಸನ್ಯಾಸಿಯ ಮತ್ತು ಲಲ್ಲೇಶ್ವರಿಯಂತಹ ಸಂತ ಕವಿಗಳ ಉಧ್ಭವವಾಗುತ್ತದೆ.

ಹನ್ನೆರಡನೇ ಶತಮಾನದಲ್ಲಿ ಕರ್ನಾಟಕದಲ್ಲಿ ನಡೆದ ಅಕ್ಕಮಹಾದೇವಿಯ ವೃತ್ತಾಂತ ಹದಿನಾಲ್ಕನೇ ಶತಮಾನದಲ್ಲಿ ಕಾಶ್ಮೀರದಲ್ಲಿ ಲಲ್ಲೇಶ್ವರಿಯ ಹೆಸರಿನಲ್ಲಿ ಪುನಾರಾವರ್ತನೆಯಾಗುತ್ತದೆಯೇನೋ ಎನ್ನುವಷ್ಟು ಹೊಂದಾಣಿಕೆ.
ಇಬ್ಬರೂ ಶಿವಾರಾಧಕರು, ಇಬ್ಬರೂ ಅಪ್ರತಿಮ ಸುಂದರಿಯರು, ಇಬ್ಬರೂ ವಿವಾಹ ಬಂಧನದಿಂದ ಹೊರಬಂದು ಆಧ್ಯಾತ್ಮದ ಹಾದಿಯಲ್ಲಿ ನಡೆದವರು ಮತ್ತು ಇಬ್ಬರೂ ಅಧ್ಭುತ ಕಾವ್ಯಗಳ, ಸಾಹಿತ್ಯದ ರಚನಾಕಾರರು...ಅಕ್ಕಮಹಾದೇವಿ ವಚನನಗಳನ್ನು ರಚಿಸಿದರೆ ಲಲ್ಲೇಶ್ವರಿಯ ರಚನೆಗಳು 'ವಾಕ್' ಹೆಸರಿನಲ್ಲಿ ವಿಶ್ವವದೆಲ್ಲೆಡೆ ಹೆಸರುವಾಸಿಯಾಗಿವೆ.
ಅಕ್ಕಮಹಾದೇವಿಯನ್ನು 'ಅಕ್ಕ' ಎಂದು ಸಂಭೋದಿಸದರೆ ಲಲ್ಲೇಶ್ವರಿಯನ್ನು ಅಮ್ಮ (ಲಾಲ್ ದೇಡ್) ಎಂದು ಸಂಭೋದಿಸಲಾಗುತ್ತದೆ.

ಇಬ್ಬರೂ ಆಕಾಶವೇ ಹೊದಿಕೆ ಎಂದು ಕೇಶವಸ್ತ್ರಧಾರಿಗಳಾಗಿ ನಡೆದಾಡುತ್ತಿದ್ದರಂತೆ ಎನ್ನುವ ಪ್ರತೀತಿ.

ಲಲ್ಲೇಶ್ವರಿಯ ವೈಶಿಷ್ಟ್ಯವೆಂದರೆ ಅವರ ಶಿಷ್ಯವರ್ಗದಲ್ಲಿ ಮುಸ್ಲೀಮರೇ ಹೆಚ್ಚು!
'ಹಿಂದೂ ಮುಸ್ಲೀಮರೆನ್ನುವ ಭೇದ ಭಾವ ಬೇಡ
ಶಿವ ಸೂತ್ರವೇ ಎಲ್ಲದರ ಮೂಲ' ಎಂದು ಭೋಧಿಸಿ ಶಿವಾರಾಧಕರ.. ಸೂಫಿ ಸಂತರ..ಮಾತೆಯಾಗಿ ಮೆರೆದಳು  ಕಾಶ್ಮೀರದ ಲಲ್ಲೇಶ್ವರಿ.


ಕಾಶ್ಮೀರದ ಕಲ್ಹಣ..
ಕರ್ನಾಟಕದ ಬಿಲ್ಹಣ..

ಅನಾದಿಕಾಲದಿಂದಲೂ ಈ ದೇವನಾಡಿನಲ್ಲಿ ಪ್ರಚಲಿತವಾದ ದೇವಭಾಷೆ ಸಂಸ್ಕೃತ.
ಹನ್ನೊಂದನೇ ಶತಮಾನದಲ್ಲಿ 'ಕಲ್ಹಣ' ಎಂಬ ಮಹಾನ್ ಕವಿ ಕಾಶ್ಮೀರದ ಇತಿಹಾಶದ ಬಗ್ಗೆ, ಇಲ್ಲಿಯ ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಒಂದು ಬೃಹತ್ ಗ್ರಂಥವನ್ನು ಬರೆಯುತ್ತಾರೆ. ಅದೇ "ರಾಜತರಂಗಿಣಿ".

ಇದೇ ಸಮಯದಲ್ಲಿ "ಬಿಲ್ಹಣ" ಎನ್ನುವ ಬಹುಮುಖ ಪ್ರತಿಭೆಯ ಕಾಶ್ಮೀರದ ಕವಿಯೊಬ್ಬರ ರಚನೆಗಳು ಬೆಳಕಿಗೆ ಬರುತ್ತವೆ. ಆದರೆ ಅವರು ಪ್ರಖ್ಯಾತಿ ಪಡೆದಿದ್ದು ಮತ್ತು ಅವರ ರಚನೆಗಳು ಬೆಳಕು ಕಂಡಿದ್ದು ಅಂದಿನ ಕರ್ನಾಟಕದಲ್ಲಿ!

ಕಾಶ್ಮೀರದಿಂದ ಹೊರಬಂದು ವಿಧರ್ಭ, ವಂಗ, ಮಾಳವ ದೇಶಗಳನ್ನೆಲ್ಲಾ ಸುತ್ತಾಡಿ ಅಂದಿನ ಕಲ್ಯಾಣಕಟಕಕ್ಕೆ ಬಂದು ಸೇರುತ್ತಾರೆ. ಅದು ಚಾಳುಕ್ಯ ವಂಶದ ರಾಜರಾದ ಆರನೇ ವಿಕ್ರಮಾದಿತ್ಯರ ರಾಜಧಾನಿ. ವಿಕ್ರಮಾದಿತ್ಯರು ಇವರ ಸಂಸ್ಕೃತದ ಪಾರಂಗತ್ಯವನ್ನು ಮೆಚ್ಚಿ  ಅವರಿಗೆ ಆಸ್ಥಾನ ಕವಿಯ ಸ್ಥಾನವನ್ನು ಕೊಟ್ಟು ಗೌರವಿಸುತ್ತಾರೆ.
ಇಲ್ಲಿ ಅವರು "ವಿಕ್ರಮಾಂಕ ದೇವ ಚರಿತ" ವನ್ನು ಬರೆಯುತ್ತಾರೆ.

ಆದರೆ ಬಿಲ್ಹಣರ ರಸಿಕತೆಯ ಪರಿಚಯವಾಗುವುದು ಅವರ ಇನ್ನೊಂದು ಕೃತಿ.."ಚೌರ ಪಂಚಶಿಖಾ" ಎನ್ನುವ ಐವತ್ತು ಪ್ರೇಮಗೀತೆಗಳ ಕೃತಿಯಿಂದ. ಇದರ ಹಿನ್ನಲೆಯಲ್ಲಿ ಒಂದು ಸ್ವಾರಸ್ಯಕರ ಘಟನೆ ಇದೆ.

ವಿಕ್ರಮಾದಿತ್ಯರ ರಾಜ್ಯಕ್ಕೂ ಬರುವ ಮೊದಲು, ಬಿಲ್ಹಣ ಅಂದಿನ ಗುಜರಾತಿನ ವೀರಸೇನರ ಆಸ್ಥಾನದ ವಿದ್ವಾಂಸರಾಗಿರುತ್ತಾರೆ. ಈ ಯುವ ಕವಿಗೆ ರಾಜಕುಮಾರಿ ಚಂಪಾವತಿಯ ಶಿಕ್ಷಣದ ಜವಾಬ್ದಾರಿಯನ್ನು ವಹಿಸಿದ್ದರು.  ಆದರೆ ಇದಕ್ಕೆ ಕೆಲವು ನಿರ್ಭಂದನೆಗಳನ್ನು ವಹಿಸಿದ್ದರು.

ಅಪ್ರತಿಮ ಸುಂದರಿಯಾದ ರಾಜಕುಮಾರಿ ಈ ಸುಂದರ, ಪ್ರತಿಭಾನ್ವಿತ ಕವಿಯಿಂದ ಸಾಹಿತ್ಯದ, ಸಂಸ್ಕೃತದ ಶಿಕ್ಷಣದ ಸಮಯದಲ್ಲಿ ವಯೋಸಹಜವಾದ ವಾಂಛನೆಗಳು ಬರಬಾರದು ಎಂದು ರಾಜ ವೀರಸೇನ ಬಿಲ್ಹಣನ ಕಣ್ಣು ಕಟ್ಟಿ..ಇವರು ಕುರುಡರು ಎಂದು , ರಾಜಕುಮಾರಿ ಕುಷ್ಟರೋಗಿ ಎಂದು ಒಬ್ಬರಿಗೊಬ್ಬರನ್ನು ಪರಿಚಯಿಸಿ ನಡುವೆ ಒಂದು ದಪ್ಪನ ಪರದೆಯನ್ನು ಹಾಕುತ್ತಾರೆ. ಇದೇ ನಿಜವೆಂದು ನಂಬಿ ರಾಜಕುಮಾರಿಯ ವ್ಯಾಸಂಗ ನಡೆಯುತ್ತಿರುತ್ತದೆ.
ಒಮ್ಮೆ ಬೆಳದಿಂಗಳ ಚಂದ್ರನನ್ನು ವರ್ಣಿಸುತ್ತಾ ಒಂದು ಪ್ರೇಮಕವಿತೆಯನ್ನು ಹೇಳಿಕೊಡುತ್ತಾರೆ. ಆಗ ಬರುತ್ತದೆ ನೋಡಿ ರಾಜಕುಮಾರಿಗೆ ಬಿಲ್ಹಣನ ಬಗ್ಗೆ ಅನುಮಾನ...ಒಬ್ಬ ಕುರುಡನು, ಎಂದೂ ಚಂದ್ರನನ್ನು ನೋಡದವನು ಇಷ್ಟು ಸುಂದರವಾದ ವಿವರಣೆ ಕೊಡುವುದು ಹೇಗೆ ಸಾಧ್ಯ? ಕುತೂಹಲ ತಾಳಲಾರದೆ ರಾಜಕುಮಾರಿ ಪರದೆಯಿಂದ ಹೊರಗೆ ಬಂದು ಬಿಲ್ಹಣನ ಕಣ್ಣಿನ ಬಟ್ಟೆಯನ್ನು ಬಿಚ್ಚುತ್ತಾಳೆ. ಬಿಲ್ಹಣನೂ ರಾಜಕುಮಾರಿಯ ಸೌಂದರ್ಯಕ್ಕೆ ಮಾರು ಹೋಗುತ್ತಾನೆ.
ಇಬ್ಬರೂ ರೋಮಾಂಚಿತರಾಗಿ ಕ್ಷಣಾರ್ಧದಲ್ಲಿ ಪ್ರೇಮಾಂಕುರವಾಗಿ ಬಿಡುತ್ತದೆ!

ಕಾಲಾನಂತರ ವಿಷಯ ತಿಳಿದ ರಾಜ,ಕೋಪಗೊಂಡು ಬಿಲ್ಹಣನನ್ನು ಸೆರೆಮನೆಗೆ ತಳ್ಳಿಬಿಡುತ್ತಾನೆ. ಅಲ್ಲಿ ಉಧ್ಭವವಾಗುತ್ತದೆ
"ಚೌರ ಪಂಚಶಿಖಾ" ಎನ್ನುವ ಐವತ್ತು ಪ್ರೇಮ ಮತ್ತು ವಿರಹಗೀತೆಗಳ ಸಂಗ್ರಹ. ಸೆರೆಮನೆಯಲ್ಲಿ ಇನ್ನೂ ಉತ್ಕಟಕ್ಕೇರಿದ ಪ್ರೇಮಾಯಣದ ಅರಿವಾದ ರಾಜ ವಿರಸೇನ ಬಿಲ್ಹಣನನ್ನು ಸೆರೆಯಿಂದ ಬಿಡುಗಡೆ ಮಾಡಿ ಅವರಿಬ್ಬರ ಮದುವೆಗೆ ಸಮ್ಮತಿಸುತ್ತಾನೆ ಎನ್ನುವ ಪ್ರತೀತಿ.

ಅಂತೂ ಬಿಲ್ಹಣ ಮತ್ತು ಚಂಪಾವತಿಯರ ಪ್ರೇಮಗಾಥೆ ಸುಖಾಂತ್ಯವನ್ನು ಕಾಣುತ್ತದಂತೆ.
ಮುಂದೊಮ್ಮೆ ಈ ಪ್ರೇಮಗ್ರಂಥ ಹಲವಾರು ಭಾಷೆಗಳಲ್ಲಿ ಭಾಷಾಂತರಿಸಲ್ಪಟ್ಟು ದೇಶವಿದೇಶಗಳಲ್ಲಿ ಪ್ರಸಿಧ್ಧಿ ಪಡೆಯುತ್ತದೆ. 1948 ರಲ್ಲಿ ಅಂದಿನ ಮದ್ರಾಸಿನಲ್ಲಿ ಈ ಕಥೆಯಾಧಾರಿತ ಚಲನಚಿತ್ರವೊಂದೂ ಸಹ ಬಿಡುಗಡೆಯಾಗುತ್ತದೆ.
ಹತ್ತೊಂಬತ್ತನೆಯ ಶತಮಾನದಲ್ಲಿ ಜಾರ್ಜ್ ಬುಹ್ಲೆರ್ ಎನ್ನುವ ಜರ್ಮನಿಯ ಸಂಶೋದಕ ಅಲ್ಲಿ ಸಿಕ್ಕ ಅಗಾಧ ಗ್ರಂಥಗಳರಾಶಿಯನ್ನು ಅಭ್ಯಸಿಸಿ, ಸುಮಾರು 37 ಪುಸ್ತಕಗಳನ್ನು ಇಂಗ್ಲೀಷ್ ಭಾಷೆಗೆ ಭಾಷಾಂತರಿಸುತ್ತಾರೆ. ಅವುಗಳಲ್ಲಿ ಮುಖ್ಯವಾದವು ಮನು ಸೂತ್ರ, ಆರ್ಯ ಸೂತ್ರ, ಮತ್ತು ವಿಕ್ರಮಾಂಕದೇವ ಚರಿತ.


Saturday, April 22, 2017

ಮೆಕ್ಕಾಲೆಯ ಮಕ್ಕಳು ಮತ್ತು ಉಜ್ಜಯಿ ಪ್ರಾಣಾಯಾಮ

ಮೆಕ್ಕಾಲೆಯ ಮಕ್ಕಳು ಮತ್ತು ಉಜ್ಜಯಿ ಪ್ರಾಣಾಯಾಮ


       ಮಹಮ್ಮದ್ ಘಜನಿ ಭಾರತದ ಸಂಪತ್ತನ್ನು ಕೊಳ್ಳೆಹೊಡೆದು, ಇಲ್ಲಿಯ ಸಂಸ್ಕೃತಿಯ ಸಂಕೇತಗಳನ್ನು ಧ್ವಂಸ ಮಾಡುತ್ತಿದ್ದಾಗ ಈ ಘಜನಿ ಗ್ಯಾಂಗಿನಲ್ಲಿದ್ದ ಅಲ್ ಬೆರೂನಿ ಎನ್ನುವ ಆಪ್ತಸಲಹೆಗಾರ, ವಿದ್ವಾಂಸ, ಘಜನಿಗೆ ಹೇಳಿದ್ದೇನೆಂದರೆ 'ನೀನು ಏನನ್ನು ಬೇಕಾದರೂ ಸರ್ವನಾಶ ಮಾಡು ಆದರೆ ಇಲ್ಲಿಯ ಕೆಲವು ಅಮೂಲ್ಯವಾದ ಗ್ರಂಥಗಳಿವೆ ಅವನ್ನು ಮಾತ್ರ ಮುಟ್ಟಬೇಡ..ನಾನು ಅವನ್ನು ಅರೇಬಿಕ್ ಭಾಷಾಂತರ ಮಾಡುವವರೆಗೂ!
    ಅಲ್ ಬೆರೂನಿ ಕೆಲವು ವರ್ಷಗಳಲ್ಲಿ ಸಂಸ್ಕೃತದ ಪಾಂಡಿತ್ಯ ಪಡೆದು ಮಾಡಿದ ಮೊಟ್ಟಮೊದಲ ಕೆಲಸವೆಂದರೆ ಪತಾಂಜಲಿ ಯೋಗಸೂತ್ರವನ್ನು ಅರೇಬಿಕ್ ಭಾಷೆಗೆ ಅಳವಡಿಸಿದ್ದು ಮತ್ತು ನಮಾಜಿನ ವಿಧಿಯಲ್ಲಿ ಕೆಲವು ಯೋಗಾಸನಗಳನ್ನು ಅಳವಡಿಸಿದ್ದು.


     ಮುಂದಿನ ವರ್ಷಗಳಲ್ಲಿ ಭಾರತವನ್ನು ಕೊಳ್ಳೆಹೊಡೆಯಲು ಬಂದ ಬ್ರಿಟಿಷರಿಗೆ ಅಲ್ ಬರೂನಿಯಷ್ಟು ಹೃದಯವಂತಿಕೆ ಇರಲಿಲ್ಲ. ಅಷ್ಟೊತ್ತಿಗಾಗಲೇ ಯೂರೋಪಿನಲ್ಲಿ ಚರ್ಚುಗಳ ರಕ್ತಸಿಕ್ತ ಇತಿಹಾಸ ಶುರುವಾಗಿತ್ತು. ಭೂಮಿ ಸೂರ್ಯನ ಸುತ್ತ ಸುತ್ತುತ್ತದೆ ಎಂದಿದ್ದಕ್ಕೇ ಗೆಲಿಲಿಯೋ ಎಂಬ
ವಿಙ್ನಾನಿಯನ್ನು ಸೆರೆಮನೆಗೆ ತಳ್ಳಿ ಸಾಯಿಸಲಾಗಿತ್ತು. ಇನ್ನು ಖಗೋಳಶಾಸ್ತ್ರದ ತವರುಮನೆಯಾದ ಭಾರತದ ಅಪರಿಮಿತ ಙ್ನಾನಭಂಡಾರವನ್ನು ಸಹಿಸಿಯಾರೆಯೇ? ಇಲ್ಲಿಯ ವೇದ ಆಯುರ್ವೇದಗಳನ್ನು ಅರಗಿಸಿಕೊಳ್ಳುವರೇ? ಇಲ್ಲಿಯ ಯೋಗಸೂತ್ರವನ್ನು ಅಳವಡಿಸಿಕೊಳ್ಳುವರೇ.. NEVER.
   ಭಾರತದ ಪ್ರಖರತೆ, ಶ್ರೀಮಂತಿಕೆ ಅವರ ಕಣ್ಣುಕುಕ್ಕುತ್ತಿತ್ತು. ಇಲ್ಲಿಯ ಸಂಪತ್ತನ್ನು ಲೂಟಿ ಹೊಡೆದು ಬ್ರಿಟನ್ ರಾಣಿಯ ಬೊಕ್ಕಸ ತುಂಬುತ್ತಿದ್ದರೆ ಇನ್ನೊಂದೆಡೆ ಇಲ್ಲಿಯ ಸಂಸ್ಕೃತಿ ಮತ್ತು ಪರಂಪರೆಗಳನ್ನು ಸರ್ವನಾಶ ಮಾಡಲು ಒಬ್ಬ ಕಿರಾತಕನನ್ನು ಕಳುಹಿಸಿದರು.
   ಅವನೇ ಥಾಮಸ್ ಮೆಕ್ಕಾಲೆ...ಪ್ರಭುಧ್ಧ ಭಾರತದ ಶಿಕ್ಷಣ ಪದ್ದತಿಯನ್ನು ಸರ್ವನಾಶ ಮಾಡಿದ ಖೂಳ..
   ಇದೊಂದು ರಿಪೋರ್ಟನ್ನು ಓದಿ..ಭಾರತೀಯರ ಬಗ್ಗೆ ಏನು ಹೇಳುತ್ತಾನೆ ಮತ್ತು ಮುಂದೇನು ಮಾಡುತ್ತಾನೆ ಎಂದು...




ಕೆಳಗಿನ ಪಂಕ್ತಿಯನ್ನು ವಿಕಿಪೀಡಿಯದಿಂದ ಹೇಗಿದೆಯೋ ಹಾಗೆ ಕಾಪಿ ಪೇಸ್ಟಮಾಡಲಾಗಿದೆ...

" I have never found one among them who could deny that a single shelf of a good European library was worth the whole native literature of India."

ಇದು ಮೆಕ್ಕಾಲೆ ಹೇಳುವ ದುರಂಹಕಾರದ ಮಾತು.

ಮೆಕ್ಕಾಲೆಯ ಶಿಕ್ಷಣ ಪದ್ದತಿಯಿಂದ ಇಂಗ್ಲೀಶನ್ನು ಸಲೀಸಾಗಿ ಮಾತಾಡುವ ಗುಮಾಸ್ತರು, ಸೈನಿಕರು,ಕೆಳಮಟ್ಟದ ಅಧಿಕಾರಿಗಳು ಹುಟ್ಟಿಕೊಂಡರು. ಅವರಿಗೆ ಬೇಕಾಗಿದ್ದೂ ಅದೇ. ಆದರೆ ಅಷ್ಟಕ್ಕೆ ನಿಂತಿದ್ದರೆ ಅಭ್ಯಂತರವಿರುತ್ತಿರಲಿಲ್ಲ. ಇಂಗ್ಲೀಷನ್ನು ಬಳಸಿಕೊಂಡು ನಮ್ಮ ಸನಾತನ ಧರ್ಮದ, ಸಂಸ್ಕುತಿಯ ಅವಹೇಳನ ಮಾಡಲಾಯಿತು. ಇಂಗ್ಲೀಷ್ ಬರದ ಭಾರತೀಯರಲ್ಲಿ ಕೀಳರಿಮೆಯ ಭಾವನೆಯನ್ನು ತುಂಬಲಾಯಿತು.

ಇದರ ಜೊತೆ "ಮೆಕ್ಕಾಲಿಸಂ" ಅಥವಾ " ಮೆಕ್ಕಾಲೆಯ ಮಕ್ಕಳು " ಎನ್ನುವ ಸಂತತಿಯೇ ಹುಟ್ಟಿ ಕೊಂಡು ಬಿಟ್ಟಿತು.

1947 ರಲ್ಲಿ ಈ ಮೆಕ್ಕಾಲೆಯ ಮಕ್ಕಳನ್ನು ಇಲ್ಲಿಯೇ ಬಿಟ್ಟು ಬ್ರಿಟನ್ನಿಗೆ ಮರಳಿ ಬಿಟ್ಟರು ಆಂಗ್ಲರು! ಯಾರಿವರು..ಏನಿದು ಮೆಕ್ಕಾಲಿಸಂ...ಅದಕ್ಕೂ ವಿಕಿಪೀಡಿಯದ ಕಾಪಿ, ಪೇಸ್ಟ್ ಕೆಳಗಿದೆ.

"In Indian culture the term" Macaulay's
Children" is sometimes used to refer to people born of Indian ancestry who adopt Western culture as a lifestyle, or display attitudes influenced by colonisers ("Macaulayism")[19] – expressions used disparagingly, and with the implication of disloyalty to one's country and one's heritage."

"Macaulayism is the conscious policy of liquidating indigenous culture through the planned substitution of the alien culture of a colonizing power via the education system. The term is derived from the name of British politician Thomas Babington Macaulay (1800-1859), "

ಈ ಮೆಕ್ಕಾಲೆಯ ಮಕ್ಕಳು ಅರಂಧತಿ,ರಾಜದೀಪ್, ಬರ್ಖಾ,ಸಾಗರಿಕರ ರೂಪದಲ್ಲಿ, ಎಡಪಂತೀಯರ ಅಂಗಳದಲ್ಲಿ , ನಮ್ಮಲ್ಲೇ ನೆಲಸಿರುವ ಗೌರಜ್ಜಿಯ ಗೂಡಿನಲ್ಲಿ, ಗುಹಾರ ಗುಹೆಯಲ್ಲಿ ನೆಲೆಸಿರುತ್ತಾರೆ.

ಆದರೆ ಇತ್ತೀಚಿಗೆ ಸ್ವಲ್ಪ ಉಸಿರುಗಟ್ಟಿದಂತಾಗಿ, ಶಕ್ತಿಹೀನತೆಯಿಂದ ಬಳಲುತ್ತಿರುವ 'ಬುಧ್ಧು ಜೀವಿಗಳೇ' ಮೆಕ್ಕಾಲೆಯ ಮಕ್ಕಳು‌.


ಬ್ರಿಟಿಷರ ಆಡಳಿತದಲ್ಲಿ ರಾಜ್ಯಭಾರ ನಡೆಸುತ್ತಿದ್ದ ವೈಸರಾಯಿಗಳಲ್ಲಿ ಕೆಲವರು ಮಾತ್ರ ಭಾರತದ ಅಪರಿಮಿತ ವಿದ್ಯಾ ಸಂಪನ್ನತೆಯನ್ನು ಗೌರವಿಸುತ್ತಿದ್ದರು. ಅವರಲ್ಲಿ ಒಬ್ಬರು ವೈಸರಾಯ್ ಇರ್ವಿನ್. ಇವರ ಆಡಳಿಯದ ಸಂದರ್ಭದಲ್ಲಿ ಸ್ವಾತಂತ್ರ ಸಂಗ್ರಾಮ ತೀವ್ರತೆಯನ್ನು ಪಡೆದಿತ್ತು. ಒಂದೆಡೆ ಉಪ್ಪಿನ ಸತ್ಯಾಗ್ರಹ, ಸೈಮನ್ ಕಮಿಟಿಯ ವಿರೋದ, ಇನ್ನೊಂದೆಡೆ ವಿಶ್ವಯುಧ್ಧದ ಒತ್ತಡ. ಇದೆಲ್ಲರದ ಮಧ್ಯೆ ದಿನೇ ದಿನೇ ಬಿಗಡಾಯಿಸುತ್ತಿದ್ದ ಇರ್ವಿನ್ನರ ಆರೋಗ್ಯದ ಸ್ಥಿತಿ.

ಅವರಿಗೆ ಆಯುರ್ವೇದ ಮತ್ತು ಯೋಗದಲ್ಲಿ ತುಂಬಾ ನಂಬಿಕೆಯಿತ್ತು. ಅವರ ಅದೃಷ್ಟ ಚೆನ್ನಾಗಿತ್ತು. ಅಂದಿನ ಕಾಲದ ಯೋಗದ ಪಿತಾಮಹಾ ಮತ್ತು ಆಯುರ್ವೇದ ಪಂಡಿತ ಎಂದೇ ಖ್ಯಾತಿ ಪಡೆದಿದ್ದ ಒಬ್ಬ ಮಹಾಪುರುಷ ಮೈಸೂರಿಂದ ಸಿಮ್ಲಾಕ್ಕೆ ಬಂದು ಅವರನ್ನು ಸಂಪೂರ್ಣ ಗುಣಮುಖರನ್ನಾಗಿ ಮಾಡಿದರು.

ಅವರೇ ತಿರುಮಲೈ ಕೃಷ್ಣಮಾಚಾರ್ಯರು.

ಚಿತ್ರದುರ್ಗ ಜಿಲ್ಲೆಯ ಮುಚುಕುಂಡಪುರ ಎನ್ನುವ ಚಿಕ್ಕಹಳ್ಳಿಯ ಒಂದು ಐಯ್ಯಂಗಾರ್ ಮನೆತನದಲ್ಲಿ ನವೆಂಬರ್ 1888 ರಲ್ಲಿ ಈ ಮಹಾಪುರುಷರ ಜನ್ಮವಾಗುತ್ತದೆ. ಇಷ್ಟೊತ್ತಿಗಾಗಲೇ ಮೆಕ್ಕಾಲೆಯ ಶಿಕ್ಷಣ ಪದ್ದತಿ ಯೋಗಭ್ಯಾಸವನ್ನು ಅವಹೇಳಿಸಿ, ಕಡೆಗಣಿಸಿ ಅಪಹಾಸ್ಯಿಸಿ ಸಮಾಜದ ಮುಖ್ಯವಾಹಿನಿಯಿಂದ ದೂರವಿಟ್ಟಿರುತ್ತದೆ. ಇವರ ಹುಟ್ಟಿನೊಂದಿಗೇ ಯೋಗಕ್ಕೆ ಪುನರ್ಜನ್ಮ ದೊರೆತಂತಾಗುತ್ತದೆ. ಮೆಕ್ಕಾಲೆಯ ಶಿಕ್ಷಣ ಪದ್ದತಿಯನ್ನು ತಿರಸ್ಕರಿಸಿ ತಮ್ಮದೇ ಆದ ಸಂಶೋದನೆಯಲ್ಲಿ ತೊಡಗಿ ಆರು ಡಾಕ್ಟರೇಟ್ ಡಿಗ್ರಿಗಳನ್ನು ಪಡೆದರೆಂದರೆ ಅದೆಂತಹ ಅಧ್ಯಯನ ಮಾಡಿರಬಹುದು!
  ಇವರು ತೆರೆಯ ಮರೆಯಲ್ಲಿ ನಡೆಸಿದ ಸಂಶೋಧನೆಗಳು, ಪ್ರಯೋಗಗಳು, ಆಸನಗಳು, ಪ್ರಾಣಾಯಾಮಗಳನ್ನು ಭಾರತಕ್ಕೆ ಮತ್ತು ಇಡೀ ವಿಶ್ವಕ್ಕೆ ಪರಿಚಯಿಸಿದವರು ಇವರ ಶಿಷ್ಯರುಗಳ ಗುಂಪು.
   ಆ ಗುಂಪಿನಲ್ಲಿದ್ದವರು ಇವರ ಬಾಮೈದುನ Dr BKS Iyengar ಮತ್ತು ಅವರ ಮಗ ದೇಸಿಕಾಚಾರ್ ಮತ್ತು ಇತರರು. ಇವರಿಂದಾಗಿ 'ಐಯ್ಯಂಗಾರ್ ಯೋಗ' ಎನ್ನುವ ಹೊಸ ಅಧ್ಯಾಯವೇ ಶುರುವಾಯಿತು.
   ಕೃಷ್ಣಮಾಚಾರ್ಯರ ಪ್ರಕಾರ ಪ್ರಾಣಾಯಾಮ ಯೋಗಕ್ಕೆ ಹೆಬ್ಬಾಗಿಲಂತೆ. ಅಲ್ಲಿಂದಲೇ ಯೋಗದ ಪ್ರಪಂಚಕ್ಕೆ ಪ್ರವೇಶಿಸುವುದು ಸರಿಯಾದ ರೀತಿ. ಹೀಗೆ ಅಷ್ಟಾಂಗ ಯೋಗದಲ್ಲಿ ಪ್ರಮುಖ ಅಂಗವಾದ ಪ್ರಾಣಾಯಾಮ ಅದರಲ್ಲೂ 'ಉಜ್ಜಯೀ ಪ್ರಾಣಾಯಾಮ.


ಪತಂಜಲಿ ಯೋಗ ಸೂತ್ರದಲ್ಲಿ 196 ಸೂತ್ರಗಳಿವೆ. ಸುಮಾರು 24೦೦ ವರ್ಷಗಳ ಹಿಂದೆ ಬರೆದಿದ್ದ ಈ ಮಹಾನ್ ಕೋಶ, ಕಾಲನ ಮಹಿಮೆಯ ಏಳುಬೀಳಗಳನ್ನು ಕಂಡು ಇನ್ನೂ ಜೀವಂತವಾಗಿರುವ ಅಧ್ಭುತ ಗ್ರಂಥ.
ಮೆಕ್ಕಾಲೆಯ ಶಿಕ್ಷಣ ಪದ್ದತಿಯ ಭರಾಟೆಯಿಂದ, ಬ್ರಿಟಿಷರ ಸಂಚಿನಿಂದ, ಮಿಷನರಿಗಳ ಕುಯುಕ್ತಿಯಿಂದ ಕಡೆಗಣಿಸಲ್ಪಟ್ಟಿದ್ದ ಈ ಅಷ್ಟಾಂಗ ಯೋಗದ ಸಂಹಿತೆ ಯನ್ನು ಪುನಃ ಪ್ರಪಂಚಕ್ಕೆ ಪರಿಚಯಿಸಿದವರು, ತಿರುಮಲೈ ಕೃಷ್ಣಮಾಚಾರ್ಯರು, ಸ್ವಾಮಿ ವಿವೇಕಾನಂದರು, ಸ್ವಾಮಿ ಶಿವಾನಂದರು ಮತ್ತು ಅವರ ಶಿಷ್ಯವರ್ಗ.
ಯಾಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹರ, ಧ್ಯಾನ, ಧಾರಣ ಮತ್ತು ಸಮಾಧಿ. ಇವೇ ಅಷ್ಟಾಂಗ ಯೋಗದ ಎಂಟು ಅಂಗಗಳು.
ಕೃಷ್ಣಮಾಚಾರ್ಯರ ಪ್ರಕಾರ ಪ್ರಾಣಾಯಾಮವೇ ಯೋಗಪ್ರಪಂಚಕ್ಕೆ ಹೆಬ್ಬಾಗಿಲು. ಅದರಲ್ಲಿ ಉಜ್ಜಯಿ ಪ್ರಾಣಾಯಾಮಕ್ಕೆ ತುಂಬಾ ಮಹತ್ವ ಕೊಡುತ್ತಾರೆ.
ಏನು ಈ ಉಜ್ಜಯಿ ಪ್ರಾಣಾಯಾಮ ಎಂದರೆ?.
ಇದರಲ್ಲಿ ದೀರ್ಘ ಪೂರಕ ( ಉಸಿರು ಒಳಗೆ) ಮತ್ತು ರೇಚಕಗಳ(ಉಸಿರು ಹೊರಗೆ) ಜೊತೆ ಗಂಟಲಿನಿಂದ ಶಬ್ದ ಹೊರಡಬೇಕು. ಅದೂ ಕಡಲಿನ ಅಲೆಗಳ ಶಬ್ದ...!
ಇದನ್ನು ನಾನು 'ಆರ್ಟ್ ಆಫ್ ಲಿವಿಂಗ್' ಆಶ್ರಮದಲ್ಲಿ ಕಲಿತದ್ದು. ಅಲ್ಲಿಯ ಯೋಗಾಗುರುಗಳು ಮೊದಲು ಏನನ್ನಾದರು ಓದಲು ಹೇಳುತ್ತಾರೆ, ನಂತರ ಅದನ್ನೇ ಪಿಸುಗುಟ್ಟಿಕೊಂಡು ಓದಲು ಹೇಳುತ್ತಾರೆ. ಆಗ ಗಂಟಲಿನಿಂದ ಹೊರಡುವ ಶಬ್ದವನ್ನು ಗಮನಿಸಿ ಎನ್ನುತ್ತಾರೆ...ಇದೇ ಶಬ್ದ ಉಚ್ವಾಸ ಮತ್ತು ನಿಶ್ವಾಸದಲ್ಲಿ ಬರಬೇಕು. ಮತ್ತು ನಿಶ್ವಾಸವನ್ನು ಪ್ರತೀ ಸಲ ಮೂರ್ನಾಲ್ಕು ಸೆಕೆಂಡುಗಳಷ್ಟು ಹೆಚ್ಚುತ್ತಾ ಹೋಗಿಸಿ..ಪೂರಕ ತಾನಾಗಿಯೇ ಧೀರ್ಘವಾಗಿ ಹೋಗುತ್ತದೆ. ಉಸಿರಾಟ ಮತ್ತು ಶಬ್ದದ ಮೇಲಷ್ಟೇ ಧ್ಯಾನವನ್ನು ಕೇಂದ್ರೀಕರಿಸಿ. ದೇಹ ತಾನಾಗೇ ವಿಶ್ರಮಿಸುತ್ತದೆ. ಸ್ವಲ್ಪ ಸಮಯದಲ್ಲೇ ಸುಖಾನುಭವವಾಗುತ್ತದೆ. ಮನಸ್ಸು ಸ್ತಬ್ಧವಾಗುತ್ತದೆ.
ಕ್ರಮೇಣ ಅಭ್ಯಾಸ ಬಲದಿಂದ ಇದನ್ನು ಎಲ್ಲಿಬೇಕಾದರೂ, ಎಷ್ಟೊತ್ತು ಬೇಕಾದರೂ ಮಾಡಬಹುದು.
ಅಧ್ಭುತ ಸಂಚಲನದ ಅನುಭವವಾಗುತ್ತದೆ ಈ ಉಜ್ಜಯಿ ಪ್ರಾಣಾಯಾಮದಿಂದ.